ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ ಲೀಗ್‌: ಫ್ರಾಂಚೈಸಿ ಖರೀದಿ ಮಾಡಿದ ರಿಲಯನ್ಸ್

|
Google Oneindia Kannada News

ಮುಂಬೈ, ಜುಲೈ 20: ಮುಂಬೈ ಇಂಡಿಯನ್ಸ್‌ ಬ್ರ್ಯಾಂಡ್ ಅನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಇಟ್ಟಿದೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಒಂದು ಫ್ರಾಂಚೈಸಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡಿದೆ. ಅಷ್ಟೇ ಅಲ್ಲ, ಯುಎಇ ಮೂಲದ ಅಂತಾರಾಷ್ಟ್ರೀಯ ಲೀಗ್‌ ಟಿ-20 ತಂಡವನ್ನು ಖರೀದಿಸುವ ಸನಿಹದಲ್ಲಿದೆ.

ಭಾರತದಲ್ಲಿ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿ ಮಾಡುವುದು, ಫುಟ್‌ಬಾಲ್‌ ಲೀಗ್‌ ನಡೆಸುವುದು, ಕ್ರೀಡೆಯ ಪ್ರಾಯೋಜಕತ್ವ, ಕನ್ಸಲ್ಟನ್ಸಿ ಹಾಗೂ ಅಥ್ಲೀಟ್ ಪ್ರತಿಭಾ ನಿರ್ವಹಣೆ ಮತ್ತು ಉದ್ಯಮದ ಉತ್ತಮ ಅಭ್ಯಾಸಗಳನ್ನು ಅಳವಡಿಸುವುದೂ ಸೇರಿದಂತೆ ಕ್ರೀಡಾ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ ಮಹತ್ವದ ಪಾತ್ರ ವಹಿಸುತ್ತದೆ. ರಿಲಯನ್ಸ್ ಫೌಂಡೇಶನ್‌ ಸ್ಪೋರ್ಟ್ಸ್‌ ಎಂಬ ಆರ್‌ಐಎಲ್‌ನ ಸಿಎಸ್‌ಆರ್‌ ವಿಭಾಗವು ಭಾರತದ ಒಲಿಂಪಿಕ್‌ ಚಳವಳಿಯನ್ನು ಮುನ್ನಡೆಸುತ್ತಿದೆ. ದೇಶದ ವಿವಿಧೆಡೆಯ ಅಥ್ಲೀಟ್‌ಗಳು ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್‌ ಆಗಲಿ ಇದು ಅವಕಾಶ ಒದಗಿಸುತ್ತಿದೆ ಮತ್ತು ಜಾಗತಿಕ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಲು ಪ್ರಯತ್ನಿಸುತ್ತಿವೆ. ಈ ವರ್ಷದ ಆರಂಭದಲ್ಲಿ, 40 ವರ್ಷಗಳ ನಂತರದಲ್ಲಿ 2023 ರಲ್ಲಿ ಮುಂಬೈನಲ್ಲಿ ಇಂಟರ್‌ನ್ಯಾಷನಲ್‌ ಒಲಿಂಪಿಕ್‌ ಕಮಿಟಿ ಸೆಷನ್‌ ಅನ್ನು ನಡೆಸಲು ಯಶಸ್ವಿಯಾಗಿ ಪ್ರಯತ್ನ ನಡೆಸಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕಿ ನೀತಾ ಅಂಬಾನಿ ಮಾತನಾಡಿ ''ರಿಲಯನ್ಸ್‌ ಕುಟುಂಬಕ್ಕೆ ಹೊಸ ಟಿ20 ತಂಡವನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ಮುಂಬೈ ಇಂಡಿಯನ್ಸ್‌ ಬ್ರ್ಯಾಂಡ್ ಅನ್ನು ದಕ್ಷಿಣ ಆಫ್ರಿಕಾಗೆ ತೆಗೆದುಕೊಂಡು ಹೋಗಲು ನಾವು ಬಯಸಿದ್ದೇವೆ. ಭಾರತದಷ್ಟೇ ದಕ್ಷಿಣ ಆಪ್ರಿಕಾ ಕೂಡ ಕ್ರಿಕೆಟ್ಟನ್ನು ಪ್ರೀತಿಸುತ್ತದೆ! ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಕ್ರೀಡಾ ಪರಿಸರವಿದೆ. ಈ ಸಹಭಾಗಿತ್ವ ಶಕ್ತಿ ಮತ್ತು ಸಹಭಾಗಿತ್ವವನ್ನು ನಾವು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ'' ಎಂದಿದ್ದಾರೆ.

South Africa’s T20 league: Reliance Industries, now owns a team based at Newlands in Cape Town

ರಿಲಯನ್ಸ್‌ ಜಿಯೋದ ಚೇರ್ಮನ್‌ ಆಕಾಶ್ ಅಂಬಾನಿ, ''ನಮ್ಮ ದಕ್ಷಿಣ ಆಫ್ರಿಕಾ ಫ್ರಾಂಚೈಸಿಯಿಂದಾಗಿ ಮೂರು ದೇಶಗಳಲ್ಲಿ ಮೂರು ಟಿ20 ಟೀಮ್‌ಗಳಿವೆ. ಕ್ರಿಕೆಟ್‌ನಲ್ಲಿ ನಮ್ಮ ಪರಿಣಿತಿ ಮತ್ತು ಆಳವಾದ ಜ್ಞಾನವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ಇದು ತಂಡವನ್ನು ನಿರ್ಮಾಣ ಮಾಡಲು ಮತ್ತು ಅಭಿಮಾನಿಗಳಿಗೆ ಉತ್ತಮ ಕ್ರಿಕೆಟ್ ಅನುಭವವನ್ನು ಇದು ಒದಗಿಸಲಿದೆ.''

ಕ್ರಿಕೆಟ್ ಸೌತ್‌ ಆಫ್ರಿಕಾ ಆರು ತಂಡಗಳನ್ನು ಒಳಗೊಂಡ ಟಿ20 ಆಯೋಜನೆ ಮಾಡುವುದಾಗಿ ಘೋಷಿಸಿದೆ. ಮೊದಲ ಟೂರ್ನಮೆಂಟ್ 2023 ಜನವರಿಯಲ್ಲಿ ನಡೆಯಲಿದೆ. ಟೂರ್ನಮೆಂಟ್‌ನಲ್ಲಿ ಆರು ತಂಡಗಳು ಇರಲಿವೆ. ರೌಂಡ್ ರಾಬಿನ್ ಹಂತದಲ್ಲಿ ಪರಸ್ಪರ ಎರಡು ಬಾರಿ ಆಟ ಆಡಲಿವೆ. ನಂತರ ಅಗ್ರ ಮೂರು ತಂಡಗಳು ಪ್ಲೇಆಫ್‌ಗೆ ಹೋಗಲಿವೆ. ಮೂರರಿಂದ ನಾಲ್ಕು ವಾರಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.

South Africa’s T20 league: Reliance Industries, now owns a team based at Newlands in Cape Town

ವಿಶ್ವಾದ್ಯಂತ 29 ಘಟಕಗಳಿಂದ ಬಿಡ್‌ಗಳನ್ನು ಆಕರ್ಷಿಸಿದ ಮುಕ್ತ ಪ್ರಕ್ರಿಯೆ ನಡೆದಿದೆ ಎಂದು CSA ಹೇಳಿದೆ. ಮುಂಬೈ ಇಂಡಿಯನ್ಸ್‌ನ ಮಾಲೀಕರಾದ ರಿಲಯನ್ಸ್ ಇಂಡಸ್ಟ್ರೀಸ್ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಮೂಲದ ತಂಡವನ್ನು ಹೊಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ತಂಡದ ಹಕ್ಕುಗಳನ್ನು ಗೆದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕರು ಸೆಂಚುರಿಯನ್‌ನಲ್ಲಿ ತಂಡವನ್ನು ಹೊಂದಿದ್ದು, ಡರ್ಬನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ Gqeberha (ಹಿಂದಿನ ಪೋರ್ಟ್ ಎಲಿಜಬೆತ್) ಮತ್ತು ರಾಜಸ್ಥಾನ್ ರಾಯಲ್ಸ್ ಪಾರ್ಲ್‌ನಲ್ಲಿ ತಂಡವನ್ನು ಹೊಂದಿರುತ್ತಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

English summary
Reliance Industries, owners of Mumbai Indians, will own a team based at Newlands in Cape Town, in Cricket South Africa’s T20 league.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X