ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ ಜೂಜು-ಫ್ಯಾಂಟಸಿ ಗೇಮ್ ನಡುವಿನ ವ್ಯತ್ಯಾಸ ತಿಳಿಯಲಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ, 2021 ಆನ್ಲೈನ್ ಜೂಜು, ಬೆಟ್ಟಿಂಗ್ ಮತ್ತು ಬಾಜಿಕಟ್ಟುವ ಎಲ್ಲಾ ವಿಧಗಳನ್ನು ("ಬಿಲ್") ನಿಷೇಧಿಸಲು ಗೇಮಿಂಗ್ ಮತ್ತು ಪೊಲೀಸ್ ಕಾನೂನುಗಳನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದೆ. ಸದರಿ ಮಸೂದೆಯು, ಸದುದ್ದೇಶದ ಶಾಸನವಾಗಿರುವುದರಿಂದ ಕಾನೂನುಬದ್ಧ ಆನ್ಲೈನ್ ಫ್ಯಾಂಟಸಿ ಕ್ರೀಡಾ ವ್ಯವಹಾರಗಳಿಗೆ ಗೊಂದಲ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ. ಸರ್ಕಾರದ ಕಾಳಜಿಗಳು ನ್ಯಾಯಸಮ್ಮತವಾಗಿರಬಹುದಾದರೂ, ಕಾನೂನುಬಾಹಿರ ಆನ್ಲೈನ್ ಜೂಜು, ಬೆಟ್ಟಿಂಗ್ ಮತ್ತು ಬಾಜಿಕಟ್ಟುವ ಪ್ಲಾಟ್ ಫಾರ್ಮ್ ಗಳಿಗೆ ಸರಿಸಮಾನವಾಗಿ ವ್ಯವಹರಿಸುವ ಮೂಲಕ ಕಾನೂನುಬದ್ಧ ವ್ಯವಹಾರಗಳಿಗೆ ದಂಡ ವಿಧಿಸುವುದರಿಂದ ಮಸೂದೆ ದಾರಿ ತಪ್ಪಿದಂತೆ ಕಾಣುತ್ತದೆ ಎಂದು ಆಲ್ ಇಂಡಿಯಾ ಗೇಮಿಂಗ್ ಫೇಡರೇಷನ್ (AIGF) ಅಭಿಪ್ರಾಯಪಟ್ಟಿದೆ.

ಕಾನೂನು ತಜ್ಞರು ಈ ಮಸೂದೆಯು ನ್ಯಾಯಾಲಯಗಳು ನೀಡುವ ತೀರ್ಪುಗಳ ವ್ಯಾಪ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಾಸ್ತವವಾಗಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಜುಲೈ 30, 2021 ರ ತೀರ್ಪಿನ ಮೂಲಕ ಅಂತಿಮವಾಗಿ ಆನ್ಲೈನ್ ಫ್ಯಾಂಟಸಿ ಕ್ರೀಡೆಗಳ ಕಾನೂನುಬದ್ಧತೆಯನ್ನು ಎತ್ತಿಹಿಡಿದಿದ್ದು, ಜೂಜು ಅಥವಾ ಬೆಟ್ಟಿಂಗ್ ಅಥವಾ ಬಾಜಿಕಟ್ಟುವುದಕ್ಕೆ ಸಮನಾಗಿದೆಯೇ ಎಂಬ ವಿಷಯವು ಇನ್ನು ಮುಂದೆ ಸಮಗ್ರವಾಗಿರುವುದಿಲ್ಲ.

ಆನ್‍ಲೈನ್ ಆಟಗಳ ನಿಷೇಧ, ಸಾವಿರಾರು ಉದ್ಯೋಗಗಳಿಗೆ ಅಪಾಯಆನ್‍ಲೈನ್ ಆಟಗಳ ನಿಷೇಧ, ಸಾವಿರಾರು ಉದ್ಯೋಗಗಳಿಗೆ ಅಪಾಯ

ಇದಲ್ಲದೆ, ಗೌರವಾನ್ವಿತ ಸುಪ್ರೀಂ ಕೋರ್ಟ್ ಕೂಡ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ಮತ್ತು ಬಾಂಬೆ ಹೈಕೋರ್ಟ್ ಗಳ ತೀರ್ಪುಗಳನ್ನು ಪುನರುಚ್ಚರಿಸಿತು, ಇವೆಲ್ಲವೂ ಭಾರತದ ಸಂವಿಧಾನದ ಅರ್ಟಿಕಲ್ 19 (1) (ಜಿ) ಮತ್ತು ಕಲಂ 14 ರ ಅಡಿಯಲ್ಲಿ ರಕ್ಷಣೆಗೆ ಅರ್ಹವಾದ ಕಾನೂನುಬದ್ಧ ವ್ಯವಹಾರಗಳೆಂದು ಫ್ಯಾಂಟಸಿ ಕ್ರೀಡೆಗಳ ಊರ್ಜಿತತ್ವ ಎತ್ತಿಹಿಡಿದವು. ರಾಜಸ್ಥಾನ ಹೈಕೋರ್ಟ್ ಒಂದು ಹೆಜ್ಜೆ ಮುಂದೆ ಹೋಗಿ ಜುಲೈ 22, 2021 ರ ತೀರ್ಪು ಈ ಕೆಳಗಿನಂತೆ ಅಭಿಪ್ರಾಯಪಟ್ಟಿದೆ.

Skill-based gaming cannot be compared with gambling: All India Gaming Federation

ಆನ್ಲೈನ್ ಫ್ಯಾಂಟಸಿ ಕ್ರೀಡೆಗಳು ಅದ್ವೀತಿಯವಾಗಿದೆ ಅಂದರೆ ಅಧಿಕೃತವಾಗಿ ಮಂಜೂರಾದ ನೈಜ-ಲೈವ್ ಕ್ರೀಡಾಕೂಟಗಳ ಆಧಾರದ ಮೇಲೆ ಡಿಜಿಟಲ್ ಕ್ರೀಡಾ ಒಪ್ಪಂದ ವೇದಿಕೆಗಳ ಒಂದು ಅನನ್ಯ ಮತ್ತು ಸ್ವತಂತ್ರ ಕಾನೂನು ವರ್ಗವಾಗಿದೆ. ಮಸೂದೆಯು ಅಸಮಾನತೆಗಳನ್ನು ಸಮಾನವಾಗಿ ಪರಿಗಣಿಸುವ ಉದ್ದೇಶವನ್ನು ಹೊಂದಿದೆ, 'ಗೇಮಿಂಗ್' ನ ಅತಿಯಾದ ಮತ್ತು ಅಸ್ಪಷ್ಟ ವ್ಯಾಖ್ಯಾನದ ಮೂಲಕ ಇದು ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗಿದೆ. ಫ್ಯಾಂಟಸಿ ಕ್ರೀಡೆಗಳ ವಿಶಿಷ್ಟ ಸ್ವಭಾವವನ್ನು ಗಮನಿಸಿದರೆ, ತನ್ನ ವ್ಯಾಪಾರ ಚಟುವಟಿಕೆಗಳಿಗೆ ಒದಗಿಸಲಾದ ನ್ಯಾಯಾಂಗ ಮತ್ತು ಸಾಂವಿಧಾನಿಕ ರಕ್ಷಣೆಗಳನ್ನು ಗೌರವಿಸಲು ಮತ್ತು ಹೊಂದಿಕೊಳ್ಳಲು ಸರ್ಕಾರವನ್ನು AIGFಸದಸ್ಯರು ಒತ್ತಾಯಿಸುತ್ತಾರೆ.

ಆನ್‌ಲೈನ್ ಜೂಜು ನಿಷೇಧ ತಿದ್ದುಪಡಿ ಮಸೂದೆ ಮಂಡನೆ ಮಾಡಿದ ಹೋಮ್ ಮಿನಿಸ್ಟರ್ ಆನ್‌ಲೈನ್ ಜೂಜು ನಿಷೇಧ ತಿದ್ದುಪಡಿ ಮಸೂದೆ ಮಂಡನೆ ಮಾಡಿದ ಹೋಮ್ ಮಿನಿಸ್ಟರ್

ಆನ್ಲೈನ್ ಫ್ಯಾಂಟಸಿ ಕ್ರೀಡೆಗಳ ಕುರಿತು AIGF ಆಯೋಗದ ವರದಿಯ ಪ್ರಕಾರ, ಈ ವಲಯವು ಮುಂದಿನ ಕೆಲವು ವರ್ಷಗಳಲ್ಲಿ 12,000 ಕ್ಕಿಂತ ಹೆಚ್ಚಿನ ಹೆಚ್ಚುವರಿ ನುರಿತ ಎಂಜಿನಿಯರಿಂಗ್ ಉದ್ಯೋಗಗಳನ್ನು ಸೃಷ್ಟಿಸುವ ಸಾಮಥ್ರ್ಯವನ್ನು ಹೊಂದಿದೆ, ರೂ. 10,000 ಕೋಟಿಗೂ ಅಧಿಕ ಎಫ್ಡಿಐಗಳನ್ನು ಆಕರ್ಷಿಸುತ್ತದೆ ಮತ್ತು ರೂ. 13,500 ಕೋಟಿಗೂ ಹೆಚ್ಚು ತೆರಿಗೆಗಳನ್ನು ಸರ್ಕಾರಕ್ಕೆ ಕೊಡುಗೆ ನೀಡುತ್ತದೆ. AIGF ಮತ್ತು ಅದರ ಸದಸ್ಯರು ನಿಶ್ಚಿತತೆಯು ಕಾನೂನಿನ ನಿಯಮಕ್ಕೆ ಅವಿಭಾಜ್ಯವಾಗಿದೆ ಎಂದು ದೃಢವಾಗಿ ನಂಬುತ್ತಾರೆ ಮತ್ತು ಆದ್ದರಿಂದ ಮಸೂದೆಯು ವ್ಯವಹಾರಗಳ, ಹೂಡಿಕೆದಾರರ ಸಮುದಾಯಕ್ಕೆ ಹಾಗೂ ಉದ್ಯಮದ ಕ್ರಮಬದ್ಧ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗ್ರಾಹಕರಿಗೆ ಖಚಿತತೆ ಮತ್ತು ಸ್ಪಷ್ಟತೆಯನ್ನು ಒದಗಿಸಬೇಕಾಗಿದೆ.

Skill-based gaming cannot be compared with gambling: All India Gaming Federation

AIGF ಸದಸ್ಯರು ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯಕ್ಕೆ ಪ್ರಾಯೋಜಕತ್ವ, ಹೂಡಿಕೆ ಮತ್ತು ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಮಹತ್ವದ ಸೇವೆಯನ್ನು ಮಾಡುತ್ತಿದ್ದಾರೆ. ಪ್ರತಿಯೊಂದು ಪ್ರಮುಖ ಕ್ರೀಡಾ ಪಂದ್ಯಾವಳಿ, ಲೀಗ್, ಅಂತರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ನಮ್ಮ ಸದಸ್ಯ ಕಂಪನಿಗಳೊಂದಿಗೆ ಹೂಡಿಕೆ ಮತ್ತು ಪಾಲುದಾರಿಕೆಯನ್ನು ಹೊಂದಿವೆ. ಕರ್ನಾಟಕ ಸರ್ಕಾರದ ಇಂತಹ ಗೊಂದಲಕಾರಿ ಸಂಕೇತಗಳು ರಾಜ್ಯದ ಕ್ರೀಡೆಗಳ ಅಭಿವೃದ್ಧಿಗೆ ಅಡ್ಡಿಯಾಗಬಹುದು.

ಇಂದು, ಭಾರತವು ಬಳಕೆದಾರರ ಬಳಗದಿಂದ ಫ್ಯಾಂಟಸಿ ಕ್ರೀಡೆಗಳಿಗೆ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿದೆ ಮತ್ತು ಈ ಉದ್ಯಮಗಳನ್ನು ನಿರ್ಮಿಸಿದ ಭಾರತೀಯ ಉದ್ಯಮಿಗಳು ಗೌರವಾನ್ವಿತ ಪ್ರಧಾನ ಮಂತ್ರಿಯವರ ಆತ್ಮ ನಿರ್ಭರ ಭಾರತ್ ಅಂದರೆ ಭಾರತದಲ್ಲಿ, ಭಾರತಕ್ಕಾಗಿ, ಭಾರತೀಯರಿಂದ ನಿರ್ಮಿಸಲ್ಪಟ್ಟ ತಂತ್ರಜ್ಞಾನದ ದೃಷ್ಟಿಕೋನವನ್ನು ಪ್ರತಿಬಿಂಬಿಸುವುದು. ಈ ಮಸೂದೆಯ ಅನಪೇಕ್ಷಿತ ಫಲಾನುಭವಿಗಳು ಭಾರತೀಯ ಬಳಕೆದಾರರಿಗೆ ಗಂಭೀರ ಅಪಾಯವನ್ನುಂಟುಮಾಡುವ ಗ್ರೇ ಮಾರುಕಟ್ಟೆ ವೇದಿಕೆಗಳು ಮತ್ತು ಕಡಲಾಚೆಯ ಆನ್ಲೈನ್ ಜೂಜು/ಬೆಟ್ಟಿಂಗ್ ಕಂಪನಿಗಳು ಎಂದು ರಾಜ್ಯ ಸರ್ಕಾರವು ಗುರುತಿಸುವುದು ಅತ್ಯಗತ್ಯ.

ಪಿ.ಕೆ ಮಿಶ್ರ, ಅಧ್ಯಕ್ಷರು, ಆಟಗಾರರ ಸಂಘ- ಎ.ಐ. ಜಿ. ಎಫ್ (ಮಾಜಿ-ಐಎಎಸ್)

"ಆನ್‌ಲೈನ್ ಕೌಶಲ್ಯ ಆಧಾರಿತ ಗೇಮಿಂಗ್ ಕ್ಷೇತ್ರವು ಸುಪ್ರೀಂ ಕೋರ್ಟ್‌ನ ತೀರ್ಪಿನ - ಭಾರತೀಯ ಸಂವಿಧಾನದ ಪರಿಚ್ಛೇದ 19 (1) (ಜಿ) ಪ್ರಕಾರ ಮತ್ತು ಕರ್ನಾಟಕ ಹೈಕೋರ್ಟ್ನ ವಿವಿಧ ತೀರ್ಪುಗಳ ಅಡಿಯಲ್ಲಿ ಪಡೆದ ಬೆಂಬಲವನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವು ಕೈಗೊಳ್ಳಲು ಇಚ್ಚಿಸಿರುವ ಕ್ರಮವಾದ ಕರ್ನಾಟಕ ಪೋಲಿಸ್ (ತಿದ್ದುಪಡಿ) ಅನುಸರಣೆ ಕಾಯ್ದೆ, 2021 ಅನ್ನು ಮಂಡಿಸುವುದರಿಂದ ರಾಜ್ಯದಲ್ಲಿ ನೆಲೆಸಿರುವ ದೊಡ್ಡ ವೃತ್ತಿಪರ ಆಟಗಾರರ ಸಮುದಾಯಕ್ಕೆ ನಿಜವಾದ ಹಿನ್ನಡೆಯಾಗುತ್ತದೆ. 2018 ಏಷ್ಯನ್ ಗೇಮ್ಸ್ ಮತ್ತು ಪೋಕರ್‌ನ ವಿಶ್ವ ಸರಣಿಯಂತಹ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಈ ಆಟಗಾರರು ತಮ್ಮ ಜೀವನೋಪಾಯದ ಮಾರ್ಗವಾಗಿ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಕ್ಷೇತ್ರವನ್ನು ನೋಡುತ್ತಾರೆ, ಇದರ ಮೇಲೆ ಈಗಾಗಲೇ ಕೋವಿಡ್ -19 ಸಾಂಕ್ರಾಮಿಕ ರೋಗವು ತೀವ್ರ ಪರಿಣಾಮವನ್ನು ಬೀರಿದೆ . ರಾಜ್ಯವು ಈ ವಿಷಯವನ್ನು ಪರಿಶೀಲಿಸಿ, ಜೂಜು ಮತ್ತು ಕೌಶಲ್ಯ ಆಧಾರಿತ ಗೇಮಿಂಗ್ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಅರಿತು ಹಾಗೂ ಅದನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ."

ಆದ್ದರಿಂದ, AIGF ನ ಸದಸ್ಯರ ಪರವಾಗಿ, ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಫ್ಯಾಂಟಸಿ ಕ್ರೀಡಾ ಕ್ಷೇತ್ರದ ನಿರಂತರತೆ ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಮಸೂದೆಯಲ್ಲಿನ ಯಾವುದೇ ಅಸ್ಪಷ್ಟತೆ ಅಥವಾ ಅನಿಶ್ಚಿತತೆಯನ್ನು ತೆಗೆದುಹಾಕುವಂತೆ ನಾವು ವಿನಂತಿಸುತ್ತೇವೆ.(AIGF ಅಧಿಕೃತ ಪ್ರಕಟಣೆ)

English summary
Official statement from All India Gaming Federation: Skill-based gaming cannot be compared with gambling, and banning is not a solution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X