ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೋರ್ಟ್ಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ, ತಮ್ಮ ಕರಾಳ ಅನುಭವ ಬಿಚ್ಚಿಟ್ಟ ದ್ಯುತಿ

|
Google Oneindia Kannada News

ಭುವನೇಶ್ವರ, ಜುಲೈ 5 : ಭಾರತದ ತಂಡದ ಸ್ಟಾರ್ ಓಟಗಾರ್ತಿ ದ್ಯುತಿ ಚಾಂದ್ ಇತ್ತೀಚೆಗೆ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಸೀನಿಯರ್ಸ್‌ಗಳ ರ‍್ಯಾಗಿಂಗ್​ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ್ದು, ತಮಗೂ ಆರಂಭದಲ್ಲಿ ಸೀನಿಯರ್‌ಗಳು ಕಿರುಕುಳ ನೀಡಿದ್ದರೆಂದು ಬಹಿರಂಗಪಡಿಸಿದ್ದಾರೆ.

ಭುವನೇಶ್ವರದ ಮಹಿಳಾ ಕ್ರೀಡಾ ವಸತಿನಿಲಯದಲ್ಲಿ(ಬಿಜೆಬಿ) 18 ವರ್ಷದ ಯುವತಿಯೊಬ್ಬಳು ರ‍್ಯಾಗಿಂಗ್‌ಗೆ ಬೇಸತ್ತು ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಳು. ಸ್ಥಳದಲ್ಲಿ ಪೊಲೀಸರಿಗೆ ಆತ್ಮಹತ್ಯೆ ಪತ್ರ ದೊರೆತಿದ್ದು, ಅದರಲ್ಲಿ ಮೂವರು ಸೀನಿಯರ್ಸ್​ ತನಗೆ ರ‍್ಯಾಗಿಂಗ್​ ಮಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದರು ಎಂದು ಬರೆದುಕೊಂಡಿದ್ದಳು. ಈ ಘಟನೆ ಕುರಿತು ತಮ್ಮ ಫೇಸ್‌ಬುಕ್‌ ಪೋಸ್ಟ್ ಮಾಡಿದ್ದು, ತಮ್ಮ ಆರಂಭದ ದಿನಗಳಲ್ಲಿ ಹಿರಿಯ ವಿದ್ಯಾರ್ಥಿನಿಯರಿಂದ ತಾವೂ ಇಂತಹ ಹಲವು ಅಪಮಾನ ಎದುರಿಸಿರುವುದಾಗಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಭಾರತ ಪ್ರವಾಸ; ಯಾರಾಗಲಿದ್ದಾರೆ ಟೆಸ್ಟ್ ಚಾಂಪಿಯನ್ಸ್‌? ಯಾರು?ಆಸ್ಟ್ರೇಲಿಯಾದ ಭಾರತ ಪ್ರವಾಸ; ಯಾರಾಗಲಿದ್ದಾರೆ ಟೆಸ್ಟ್ ಚಾಂಪಿಯನ್ಸ್‌? ಯಾರು?

"ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಸೀನಿಯರ್ಸ್ ನನ್ನನ್ನು ಅವರ ಬಾಡಿ ಮಸಾಜ್​ ಮಾಡಲು ಮತ್ತು ಬಟ್ಟೆಗಳನ್ನು ತೊಳೆಯಲು ಒತ್ತಾಯಿಸುತ್ತಿದ್ದರು, ಮಾಡದಿದ್ದರೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು " ಎಂದು ಚಾಂದ್ ಬರೆದುಕೊಂಡಿದ್ದಾರೆ.

Seniors used to force me to massage and wash clothes: Dutee Chand

ಇಷ್ಟೇ ಅಲ್ಲದೆ ಅವರು ನನ್ನ ಬಡತನದ ಬಗ್ಗೆ ಹೀಯಾಳಿಸುತ್ತಿದ್ದರು, ಅವರ ವಿರುದ್ಧ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ. ಅದಕ್ಕೂ ನನ್ನನ್ನೇ, ನಿಂದಿಸಲಾಗುತ್ತಿತ್ತು. ಇದು ನನ್ನನ್ನು ಮಾನಸಿಕವಾಗಿ ತುಂಬಾ ಖಿನ್ನತೆಯನ್ನುಂಟು ಮಾಡಿತ್ತು ಎಂದು ಒಲಿಂಪಿಯನ್ ಸ್ಪ್ರಿಂಟರ್‌​ ತಿಳಿಸಿದ್ದಾರೆ.

ರಾಹುಲ್ ದ್ರಾವಿಡ್‌ಗೆ ಹೇಳಿಮಾಡಿಸಿದ ಕೆಲಸ ಇದು: ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿರಾಹುಲ್ ದ್ರಾವಿಡ್‌ಗೆ ಹೇಳಿಮಾಡಿಸಿದ ಕೆಲಸ ಇದು: ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ

ಇಂತಹ ಘಟನೆಗಳು ಮನಸಿನ ಮೇಲೆ ಪರಿಣಾಮ ಬೀರುತ್ತಿತ್ತು, ಇದರಿಂದ ಇವರ ಕಾಟ ತಡೆದುಕೊಂಡು ಹಾಸ್ಟಲ್‌ನಲ್ಲೇ ಉಳಿದುಕೊಂಡರೂ ಕ್ರೀಡೆ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತಿತ್ತು. ಇನ್ನೂ ಕೆಲವರು ಇದನ್ನೆಲ್ಲಾ ಸಹಿಸಲಾಗದೇ ತಮ್ಮ ಗುರಿಯನ್ನು ಕೈಬಿಟ್ಟು ಮನೆಗೆ ಹಿಂತಿರುಗುತ್ತಿದ್ದರು ಎಂದು ವಿವರಿಸಿದ್ದಾರೆ.

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

English summary
Seniors used to force me to massage their bodies and wash their clothes at the sports hostel, said Indian ace sprinter Dutee Chand after a girl committed suicide in sports hostel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X