ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ತೆಂಡೂಲ್ಕರ್ ಮನೆತನದ ಮೂಲ ಉಡುಪಿಯ ಅತ್ರಾಡಿ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಡಿಸೆಂಬರ್ 30; ದಶಕಗಳ ಹಿಂದೆ ಕರಾವಳಿಯಲ್ಲಿ ದೊಡ್ಡ ವದಂತಿಯೊಂದು ಹಬ್ಬಿತ್ತು. ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಪೂರ್ವಿಕರು, ಉಡುಪಿ ಭಾಗದಲ್ಲಿ ವಾಸಿಸುತ್ತಿದ್ದರು ಎಂದು. ಈಗ ಅದೇ ಸುದ್ದಿ ಹೊಸ ರೂಪದಲ್ಲಿ ಮತ್ತೆ ಬೆಳಕಿಗೆ ಬಂದಿದೆ. ಅದು ನಾಗಾರಾಧನೆ ಸಂಬಂಧದೊಂದಿಗೆ.

ಕರಾವಳಿಯಲ್ಲಿ ನಾಗಾರಧನೆಗೆ ವಿಶೇಷ ಮಹತ್ವ. ದೂರ ದೂರವಾದ ಅದೆಷ್ಟೋ ಸಂಬಂಧಗಳು ನಾಗರಾಧನೆಯ ಕಾರಣದಿಂದ ಮತ್ತೆ ಒಂದಾದ ಉದಾಹರಣೆ ಕಾಣ ಸಿಗುತ್ತದೆ. ಹೀಗೆ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮೂಲ ಉಡುಪಿಯ ಅತ್ರಾಡಿ, ಇವರಿಗೆ ಸಂಬಂಧಿಸಿದ ನಾಗಬನ ಕೂಡ ಇಲ್ಲಿದೆ ಎನ್ನುವ ಸುದ್ದಿ ದೊಡ್ಡದಾಗಿ ಹಬ್ಬುತ್ತಿದೆ.

 ''ತೆಂಡೂಲ್ಕರ್, ಕೊಹ್ಲಿಗಿಂತ ಧೋನಿ ಜನಪ್ರಿಯ'' ನೀವೇನಂತೀರಾ? ''ತೆಂಡೂಲ್ಕರ್, ಕೊಹ್ಲಿಗಿಂತ ಧೋನಿ ಜನಪ್ರಿಯ'' ನೀವೇನಂತೀರಾ?

ಹೀಗಂತ ವದಂತಿ ದಶಕಗಳ ಹಿಂದಿನಿಂದಲೂ ಇತ್ತು. ಸಚಿನ್ ಪೂರ್ವಿಕರು ಕರಾವಳಿಯಲ್ಲಿ ವಾಸಿಸಿ, ಕಾಲನಂತರದಲ್ಲಿ ಮಹಾರಾಷ್ಟ್ರ ಕಡೆಗೆ ವಲಸೆ ಹೋದರು. ಅದೇ ಮನೆಯ ಕುಡಿ ಈ ಕ್ರಿಕೆಟ್ ವೀರ ತೆಂಡೂಲ್ಕರ್ ಅಂತ. ತೆಂಡೂಲ್ಕರ್ ಎನ್ನುವ ಸರ್ ನೇಮ್ ಹಾಕಿಕೊಳ್ಳುವ ಸಾಕಷ್ಟು ಮಂದಿ, ಉಡುಪಿ ಜಿಲ್ಲೆಯ ಕೆಲಭಾಗಗಳಲ್ಲಿ ಈಗಲೂ ಇದ್ದಾರೆ.

ಸಚಿನ್ ತೆಂಡೂಲ್ಕರ್ ಭದ್ರತೆ ಹಿಂಪಡೆದ ಠಾಕ್ರೆ, ಮಗನಿಗೆ ಭದ್ರತೆ ಹೆಚ್ಚಳಸಚಿನ್ ತೆಂಡೂಲ್ಕರ್ ಭದ್ರತೆ ಹಿಂಪಡೆದ ಠಾಕ್ರೆ, ಮಗನಿಗೆ ಭದ್ರತೆ ಹೆಚ್ಚಳ

ಹಾಗಾಗಿ ಎಲ್ಲೋ ಒಂದು ಕಡೆ ಈ ಮಿಸ್ಸಿಂಗ್ ಲಿಂಕ್ ಈಗ ಮತ್ತೆ ಕನೆಕ್ಟ್ ಆಗುತ್ತಿದೆ. ತೆಂಡೂಲ್ಕರ್ ಸಂಬಂಧಿಕರು ಎಂದು ಹೇಳಿಕೊಳ್ಳುವ ವ್ಯಕ್ತಿ ಉಡುಪಿಯಲ್ಲಿ ಪತ್ತೆಯಾಗಿದ್ದಾರೆ. ಅವರೇ ಉಡುಪಿ ಅತ್ರಾಡಿಯ ಅಪ್ಪು ಪ್ರಭು. ಹತ್ತು ವರ್ಷಗಳ ಹಿಂದೆ ತೆಂಡೂಲ್ಕರ್ ಕರಾವಳಿ ಮೂಲದವರು ಎಂದು ವದಂತಿ ಹಬ್ಬಿದಾಗ ಎಲ್ಲಾ ವದಂತಿಗಳು ಇವರ ಮನೆಗೆ ಬಂದು ಕೊನೆಗೊಂಡಿತ್ತು. ಈಗ ಮತ್ತೊಮ್ಮೆ ಆ ಊಹಾಪೋಹಕ್ಕೆ ಜೀವ ಬಂದಂತಾಗಿದೆ.

 ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಉರುಳು ಸೇವೆ ಮಾಡುವ ಭಕ್ತರು! ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಉರುಳು ಸೇವೆ ಮಾಡುವ ಭಕ್ತರು!

ಪೂರ್ವಿಕರ ಯಾವುದೇ ಮನೆ ಇಲ್ಲ

ಪೂರ್ವಿಕರ ಯಾವುದೇ ಮನೆ ಇಲ್ಲ

ಅತ್ರಾಡಿಯ ಅಪ್ಪು ಪ್ರಭುಗಳು ಹೇಳುವಂತೆ ಅವರ ತಂದೆ ವಿಠ್ಠಲ ಪ್ರಭು ಒಟ್ಟು 5 ಮಂದಿ ಸಹೋದರರಂತೆ. ಲಕ್ಷ್ಮಣ ಪ್ರಭು, ರಾಮಪ್ರಭು, ಕೃಷ್ಣಪ್ರಭು, ಅನಂತ ಪ್ರಭು ಎಂಬ ಹೆಸರಿನ ಈ ಐವರು ಸಹೋದರರು, ಅತ್ರಾಡಿ ಸಮೀಪದಲ್ಲಿ ಹುಟ್ಟಿದವರಂತೆ. ಸದ್ಯ ಪೂರ್ವಿಕರ ಯಾವುದೇ ಮನೆ ಇಲ್ಲಿ ಇಲ್ಲ. ಈ ಸಹೋದರರ ಪೈಕಿ ಲಕ್ಷ್ಮಣ ಪ್ರಭು ದೊಡ್ಡವರು. ನಂತರ ರಾಮ ಮತ್ತು ಕೃಷ್ಣ ಎಂಬ ಇಬ್ಬರು ಅವಳಿ ಸಹೋದರರು ಇದ್ದರಂತೆ. ಇದರ ಪೈಕಿ ಯಾರೋ ಒಬ್ಬರು ಮಹಾರಾಷ್ಟ್ರ ಕಡೆಗೆ ವಲಸೆ ಹೋಗಿದ್ದರಂತೆ. ವಲಸೆ ಹೋದವರ ಮೊಮ್ಮಗನೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅನ್ನೋದು ಅಪ್ಪು ಪ್ರಭುಗಳ ಬಲವಾದ ನಂಬಿಕೆ.

ಅತ್ರಾಡಿ ಸಮೀಪದಲ್ಲೇ ನೆಲೆಸಿದ್ದರು

ಅತ್ರಾಡಿ ಸಮೀಪದಲ್ಲೇ ನೆಲೆಸಿದ್ದರು

ದಶಕಗಳ ಹಿಂದೆಯೂ ಹಿರಿಯರು ಈ ವಿಚಾರ ಅಪ್ಪು ಪ್ರಭುಗಳಿಗೆ ತಿಳಿಸಿದ್ದರೂ ಅವರಿಗ ಬದುಕಿಲ್ಲ, ಹಾಗಾಗಿ ಹೆಚ್ಚಿನ ಸತ್ಯಾಸತ್ಯತೆ ತಿಳಿಯಲು ಇವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಈ ವಿಚಾರವನ್ನು ಎಲ್ಲೂ ಯಾರೊಂದಿಗೂ ಹೆಚ್ಚು ಹೇಳಿಕೊಳ್ಳದ ಅಪ್ಪು ಪ್ರಭುಗಳು ತಟಸ್ಥರಾಗಿದ್ದಾರೆ.

"ಸಚಿನ್ ತೆಂಡೂಲ್ಕರ್ ಪೂರ್ವಜರು ಅತ್ರಾಡಿಯ ಸಮೀಪದಲ್ಲೇ ನೆಲೆಸಿದ್ದರು. ಭೂ ಒಡೆತನದ ವಿಚಾರದಲ್ಲಿ ತಗಾದೆ ಎದ್ದು, ಅತ್ರಾಡಿಯಿಂದ ಬೆಳಗಾವಿಯ ಕಡೆ ವಲಸೆ ಹೋಗಿದ್ದರು. ಆನಂತರ ಅವರು ಅಲ್ಲಿಂದ ಮುಂಬೈ ಕಡೆಗೆ ಹೋಗಿ ನೆಲೆಸಿದ್ದರು. ಈ ಕುಟುಂಬಕ್ಕೆ ಸೇರಿದ ನಾಗಬನವನ್ನು ನಿರ್ಮಿಸಿದ್ದು ಸಚಿನ್ ತೆಂಡೂಲ್ಕರ್ ಅವರ ಅಜ್ಜ. ಈ ವಿಚಾರವನ್ನು ತಂದೆ ಸಾಕಷ್ಟು ಬಾರಿ ಹೇಳಿದ್ದರು" ಅಂತಾ ಅಪ್ಪು ಪ್ರಭು ಹೇಳಿದ್ದಾರೆ.

ಯಾರ ಬಳಿಯೂ ಹೇಳಿಕೊಂಡಿಲ್ಲ

ಯಾರ ಬಳಿಯೂ ಹೇಳಿಕೊಂಡಿಲ್ಲ

ಇನ್ನೂ ಸಚಿನ್ ಹೆಸರು ಹೇಳಿ ಲಾಭ ಮಾಡುವ ಉದ್ದೇಶ ಅಪ್ಪು ಪ್ರಭುಗಳಿಗೆ ಇಲ್ಲ. ಅವರಾಗಿಯೇ ಯಾರ ಬಳಿಯೂ ತಾನು ತೆಂಡೂಲ್ಕರ್ ಸಂಬಂಧಿ ಎಂದು ಹೇಳಿಕೊಂಡಿಲ್ಲ. ಹಳೆ ವದಂತಿಯ ಬಗ್ಗೆ ಯಾರೋ ಬಂದು ಇವರಲ್ಲಿ ವಿಚಾರಿಸಿದಾಗ, ಪ್ರಭುಗಳು ಇಷ್ಟೆಲ್ಲಾ ಕಥೆ ವಿವರಿಸಿದ್ದಾರೆ.

ಸಚಿನ್ ಅವರ ಪೂರ್ವಜರು ಮತ್ತು ಕುಟುಂಬಸ್ಥರು ಆರಾಧಿಸುತ್ತಿರುವ ನಾಗಬನ ಇರೋದು ಅತ್ರಾಡಿಯಲ್ಲಿ ಎಂಬುವುದು ಸದ್ಯ ಚರ್ಚೆಯನ್ನುಂಟು ಮಾಡಿದೆ. ಇಂದಲ್ಲಾ ನಾಳೆ ಸಚಿನ್ ತೆಂಡೂಲ್ಕರ್ ಕುಟುಂಬಸ್ಥರು ತಮ್ಮ ನಾಗ ಮೂಲವನ್ನು ಹುಡುಕಿ ಬರಬಹುದು ಅನ್ನೋದು ಅಪ್ಪು ಪ್ರಭು ಅಭಿಪ್ರಾಯ ವಾಗಿದೆ.

ಕೆಲವರ್ಷಗಳ ಹಿಂದೆ ಸಚಿನ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಸರ್ಪ ಸಂಸ್ಕಾರವನ್ನು ನಡೆಸಿ ಹೋಗಿದ್ದರು. ನಾಗಮೂಲಗಳು ಸಿಗದೇ ಹೋದಾಗ ಕುಕ್ಕೆ ಸುಬ್ರಹ್ಮಣ್ಯ ನೇ ಎಲ್ಲದಕ್ಕೂ ಮೂಲ ಎಂದು ಶರಣಾಗೋದು‌ ಪದ್ದತಿ. ತೆಂಡೂಲ್ಕರ್ ಕುಕ್ಕೆಗೆ ಬಂದಾಗ ಮತ್ತು ಇಲ್ಲಿ ಸರ್ಪ ಸಂಸ್ಕಾರ ನಡೆಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.

ಕರಾವಳಿ ಭಾಗದ ವೃತ್ತಾಂತಗಳು

ಕರಾವಳಿ ಭಾಗದ ವೃತ್ತಾಂತಗಳು

ಆಗಲೇ ಸಚಿನ್ ತೆಂಡೂಲ್ಕರ್ ಕೂಡ ಇಲ್ಲಿಂದಲೇ ವಲಸೆ ಹೋದವರು ಇರಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಈ ರೀತಿ ಮರಳಿ ಮೂಲ ಅರಸುವ ಅನೇಕ ವೃತ್ತಾಂತಗಳು, ಕರಾವಳಿ ಭಾಗದಲ್ಲಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಸಚಿನ್ ತೆಂಡೂಲ್ಕರ್ ಕರಾವಳಿ ಮೂಲವನ್ನು ಪೂರ್ಣ ತಳ್ಳಿಹಾಕಲು ಸಾಧ್ಯವಿಲ್ಲ.

ಒಟ್ಟಿನ್ನಲ್ಲಿ ದಶಕಗಳ ಹಿಂದೆ ಕ್ರಿಕೆಟಿಗ ರವಿಶಾಸ್ತ್ರಿ ನಾಗ ಮೂಲವನ್ನು ಅರಸುತ್ತಾ ಕಾರ್ಕಳದ ಕರ್ವಾಲಿಗೆ ಬಂದಿದ್ದರು. ಸಂತಾನದ ಅಪೇಕ್ಷೆಯಾಗಿ ಬಂದಿದ್ದ ರವಿಶಾಸ್ತ್ರಿಗೆ 16 ವರ್ಷಗಳ ಬಳಿಕ ಸಂತಾನ ಪ್ರಾಪ್ತಿಯಾಯಿತು. ಇದು ಮೂಲನಾಗನ ಪವಾಡ ಅಂತ ರವಿಶಾಸ್ತ್ರಿ ಈಗಲೂ ನಂಬುತ್ತಾರೆ. ಹೀಗೆ ಸಚಿನ್ ಅವರ ಪೂರ್ವಜರು ಹಾಗೂ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ನಾಗಬನ ಅತ್ರಾಡಿಯಲ್ಲಿ ಇತ್ತ? ಎನ್ನುವುದು ಸದ್ಯ ಕೌತುಕಕ್ಕೆ ಕಾರಣವಾಗಿದಂತು ಸತ್ಯ.

Recommended Video

ಸೌತ್ ಆಫ್ರಿಕಾವನ್ನು ಬಗ್ಗುಬಡಿದಿದ್ದು ಹೇಗೆ ಅಂತಾ ಹೇಳಿದ ವಿರಾಟ್ | Oneindia Kannada

English summary
Ex-Indian cricketer Sachin Tendulkar family basically from Athradi, Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X