ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ಬದಲಿಸಿಕೊಂಡ ರಷ್ಯನ್ ತಾರೆಗೆ ವಿಂಬಲ್ಡನ್‌ನಲ್ಲಿ ಆಡುವ ಅವಕಾಶ

|
Google Oneindia Kannada News

ಲಂಡನ್, ಜೂನ್ 21: ಉಕ್ರೇನ್ ಮೇಲೆ ರಷ್ಯಾ ದಾಳಿಯ ನಂತರ ಹಲವಾರು ಕ್ರೀಡಾ ಒಕ್ಕೂಟಗಳು ರಷ್ಯಾ ಮತ್ತು ಬೆಲಾರಸ್‌ ರಾಷ್ಟ್ರದ ಕ್ರೀಡಾಪಟಿಗಳಿಗೆ ನಿಷೇಧ ಹೇರಿದೆ. ಆಲ್‌ ಇಂಗ್ಲೆಂಡ್ ಕ್ಲಬ್‌ ಕೂಡ ಏಪ್ರಿಲ್‌ನಲ್ಲಿ ಎರಡೂ ರಾಷ್ಟ್ರಗಳ ಟೆನಿಸ್ ಆಟಗಾರರನ್ನು ವಿಂಬಲ್ಡನ್‌ನಲ್ಲಿ ಆಡುವುದಕ್ಕೆ ಅನುಮತಿಸುವುದಿಲ್ಲ ಎಂದು ಘೋಷಿಸಿದೆ.

ರಷ್ಯನ್ ಟೆನಿಸ್ ಸ್ಟಾರ್ ನಟೆಲಾ ಝಲಮಿಡ್ಜ್‌ ಪ್ರತಿಷ್ಠಿತಿ ವಿಂಬಲ್ಡನ್ ಟೂರ್ನಮೆಂಟ್‌ನಲ್ಲಿ ಆಡುವ ಅವಕಾಶವನ್ನು ತಪ್ಪಿಸಿಕೊಳ್ಳದಿರುವುದಕ್ಕೆ ತನ್ನ ರಾಷ್ಟ್ರೀಯತೆಯನ್ನೇ ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇಷ್ಟು ವರ್ಷಗಳ ಕಾಲ ರಷ್ಯಾ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದ ನಟೆಲಾ, ಈ ಬಾರಿ ವಿಂಬಲ್ಡನ್‌ ನಲ್ಲಿ ಜಾರ್ಜಿಯಾ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ. ಆದರೆ ಝಲಮಿಡ್ಜ್‌ ಅವರ ನಡೆಗೆ ಸಾಮಾಜಿಕ ಜಾಲಾತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇಂಧನಕ್ಕಾಗಿ ಸಾಲು ನಿಂತವರಿಗೆ ಟೀ ಮತ್ತು ಬನ್ ವಿತರಿಸಿದ ಶ್ರೀಲಂಕಾ ಮಾಜಿ ಕ್ರಿಕೆಟಿಗಇಂಧನಕ್ಕಾಗಿ ಸಾಲು ನಿಂತವರಿಗೆ ಟೀ ಮತ್ತು ಬನ್ ವಿತರಿಸಿದ ಶ್ರೀಲಂಕಾ ಮಾಜಿ ಕ್ರಿಕೆಟಿಗ

2015ರಲ್ಲಿWTA ಪ್ರಮುಖ ಟೂರ್ನಿಗೆ ಪದಾರ್ಪಣೆ ಮಾಡಿದ 29 ವರ್ಷದ ನಟಾಲಾ ಝಲಮಿಡ್ಜ್‌ ವಿಶ್ವ ಡಬಲ್ಸ್ ವಿಭಾಗದಲ್ಲಿ 44 ನೇ ಶ್ರೇಯಾಂಕದಲ್ಲಿದ್ದಾರೆ. ಜೂನ್ 27 ರಂದು ಟೂರ್ನಮೆಂಟ್ ಆರಂಭವಾಗಲಿರುವಾಗ ಸೆರ್ಬಿಯಾದ ಅಲೆಕ್ಸಾಂಡ್ರಾ ಕ್ರುನಿಕ್ ಅವರೊಂದಿಗೆ ಮಹಿಳೆಯರ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

Russian Tennis Players Natela Zalamidze Change her Nationality to Avoid Wimbledon Ban

ರಷ್ಯಾ ಮೂಲದ ನಟೆಲಾ ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಅವರು ಹಲವಾರು ಉತ್ಪನ್ನಗಳಿಗೆ ರಾಯಭಾರಿಯಾಗಿದ್ದಾರೆ. 2021ರಲ್ಲಿ ನಟೆಲಾ ಮೊದಲ ಬಾರಿಗೆ ಟೆನಿಸ್‌ನಲ್ಲಿ ಯಶಸ್ಸು ಸಾಧಿಸಿದ್ದರು. ಆ ವರ್ಷ ಕಾಜ ಜುವಾನ್ ಮತ್ತು ಕಮಿಲ್ಲಾ ರಖಿಮೋವಾ ಜೊತೆಗೂಡಿ ಕ್ಲಜ್ ನಪೋಕಾ ಮತ್ತು ದಿ ಲಿಂಜ್ ಓಪನ್‌ ಟೂರ್ನಮೆಂಟ್‌ಗಳನ್ನು ಗೆದ್ದಿದ್ದರು.

ವಿಶ್ವಕಪ್‌ಗೆ ರಿಷಬ್ ಪಂತ್ ಆಯ್ಕೆ: ಸ್ಪಷ್ಟನೆ ನೀಡಿದ ರಾಹುಲ್ ದ್ರಾವಿಡ್ವಿಶ್ವಕಪ್‌ಗೆ ರಿಷಬ್ ಪಂತ್ ಆಯ್ಕೆ: ಸ್ಪಷ್ಟನೆ ನೀಡಿದ ರಾಹುಲ್ ದ್ರಾವಿಡ್

ನಟೆಲಾ 2 ಡಬಲ್ಸ್‌ ಡಬ್ಲ್ಯುಟಿಎ ಟೂರ್‌, 2 ಡಬ್ಲ್ಯುಟಿಎ 125 ಡಬಲ್ಸ್‌ ಟೈಟಲ್‌ ಗೆದ್ದಿದ್ದರು. ಒಟ್ಟಾರೆ ವೃತ್ತಿ ಜೀವನದಲ್ಲಿ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ 10 ಸಿಂಗಲ್ಸ್‌ ಮತ್ತು 29 ಡಬಲ್ಸ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ವಿಂಬಲ್ಡನ್‌ ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿ ವಿಶ್ವದ ಟಾಪ್‌ ಆಟಗಾರನಾಗಿರುವ ರಷ್ಯಾದ ಡೇನಿಯಲ್ ಮೆಡ್ವೆಡೆವ್ , ಮಹಿಳೆಯ ವಿಭಾಗದಲ್ಲಿ 2 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ವಿಕ್ಟೋರಿಯಾ ಅಜೆರಂಕಾ ಸಹಿತಾ ಎಲ್ಲಾ ಆಟಗಾರರಿಗೂ ನಿಷೇಧ ಹೇರಿದೆ.

ಯುಎಸ್‌ ಓಪನ್‌ಗೆ ಅವಕಾಶ; ರಷ್ಯಾ ಮತ್ತು ಬಲಾರಸ್‌ ಆಟಗಾರರಿಗೆ ವಿಂಬಲ್ಡನ್‌ ಮಾತ್ರ ನಿಷೇಧ ಹೇರಿದೆ. ಮುಂಬರುವ ಯುಎಸ್‌ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ನಲ್ಲಿ ಎರಡು ರಾಷ್ಟ್ರದ ಆಟಗಾರರಿಗೆ ರಾಷ್ಟ್ರಧ್ವಜಗಳನ್ನು ಬಳಸದೆ ಟೂರ್ನಮೆಂಟ್‌ನಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡಿದೆ.

Recommended Video

ಯೋಗ ಮತ್ತು ಧರ್ಮದ ಬಗ್ಗೆ ಸ್ಯಾಂಡಲ್ವುಡ್ ನಟಿ ಅಧಿತಿ ಪ್ರಭುದೇವ ಹೇಳಿದ್ದೇನು | Oneindia Kannada

English summary
Russian tennis player Natela Dzalamidze change her nationality to avoided Wimbledon ban. she represent this time Georgia contry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X