ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟಕ್ಕಿಂತ ಹಾಡಿಗೆ ಭಯಪಟ್ಟ ಇಂಗ್ಲೆಂಡ್ ಕ್ರಿಕೆಟಿಗರು; ಓಲೀ ರಾಬಿನ್ಸನ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿ

|
Google Oneindia Kannada News

ಲಂಡನ್, ಸೆ. 11: ಇತ್ತೀಚೆಗೆ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ವಿಧಿವಶರಾಗಿದ್ದು, ಪ್ರಿನ್ಸ್ ಚಾರ್ಸ್ ಮೂರನೇ ಚಾರ್ಲ್ಸ್ ಆಗಿ ಬ್ರಿಟನ್‌ನ ನೂತನ ಅರಸರಾಗಿದ್ದು ಬಹುತೇಕರಿಗೆ ಗೊತ್ತಾಗಿರಬಹುದು. ಈ ವೇಳೆ, ಬ್ರಿಟನ್‌ನ ರಾಷ್ಟ್ರಗೀತೆಯನ್ನು ಹೊಸ ಅರಸರಿಗೆ ಅನ್ವಯವಾಗುವ ರೀತಿಯಲ್ಲಿ ಬದಲಾಯಿಸಲಾಗಿದೆ. ಈ ಹೊಸ ರಾಷ್ಟ್ರಗೀತೆಯನ್ನು ಹಾಡಲು ಇಂಗ್ಲೆಂಡ್ ಕ್ರಿಕೆಟಿಗರು ಹೆದರಿದ್ದಾರಂತೆ. ಹಾಗಂತ ಇಂಗ್ಲೆಂಡ್ ಬೌಲರ್ ಓಲೀ ರಾಬಿನ್ಸನ್ ಹೇಳಿದ್ದಾರೆ.

ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಶನಿವಾರ ಆರಂಭಗೊಂಡ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಇಂಗ್ಲೆಂಡ್ ಮತ್ತು ಸೌತ್ ಅಫ್ರಿಕಾದ ರಾಷ್ಟ್ರಗೀತೆಯನ್ನು ಆರಂಭದಲ್ಲಿ ಹಾಡಿಸಲಾಯಿತು. ಈ ವೇಳೆ ಇಂಗ್ಲೆಂಡ್ ಕ್ರಿಕೆಟಿಗರು ಹೊಸ ರಾಷ್ಟ್ರಗೀತೆಯನ್ನು ಹಾಡಲು ಭಯ ಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಓಲೀ ರಾಬಿನ್ಸನ್, ನನಗೆ ಬೌಲಿಂಗ್‌ಗಿಂತ ರಾಷ್ಟ್ರಗೀತೆ ಬಗ್ಗೆಯೇ ಚಿಂತೆಯಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಎ vs ನ್ಯೂಜಿಲೆಂಡ್ ಎ ಟೆಸ್ಟ್‌: ಹುಬ್ಬಳ್ಳಿ ಫ್ಯಾನ್ಸ್‌ಗೆ ಮತ್ತೆ ನಿರಾಸೆ ಮೂಡಿಸಿದ ಮಳೆರಾಯಭಾರತ ಎ vs ನ್ಯೂಜಿಲೆಂಡ್ ಎ ಟೆಸ್ಟ್‌: ಹುಬ್ಬಳ್ಳಿ ಫ್ಯಾನ್ಸ್‌ಗೆ ಮತ್ತೆ ನಿರಾಸೆ ಮೂಡಿಸಿದ ಮಳೆರಾಯ

"ನಾವು ಏನು ಹಾಡಬೇಕು ಎಂದು ಪದೇ ಪದೇ ನೆನಪಿಸಿಕೊಳ್ಳುತ್ತಿದ್ದೆವು. ಅಂಗಳಕ್ಕೆ ಹೋಗುವಾಗ ನಮಗೆಲ್ಲಾ ಆತಂಕ ತುಂಬಿಕೊಂಡಿತ್ತು. ನಾವೆಲ್ಲಿ ತಪ್ಪು ಹೇಳಿಬಿಡುತ್ತೇವೆ ಎಂದು ಗಾಬರಿಯಾಗುತ್ತಿತ್ತು..." ಎಂದು ಓಲೀ ರಾಬಿನ್ಸನ್ ವಿವರಿಸಿದ್ದಾರೆ.

Revealed, Why England Cricketers Worried Over Singing Their New National Anthem

"ಈ ಟೂರ್ನಿಯಲ್ಲಿ ನಾವು ಆಡಲು ಅವಕಾಶ ಸಿಕ್ಕಿದ್ದೇ ವಿಶೇಷ. ಈ ವಿಶೇಷ ಕ್ಷಣದಲ್ಲಿ ಭಾಗಿಯಾಗಿದ್ದು ನಮಗೊಂದು ಗೌರವ" ಎಂದಿದ್ದಾರೆ.

ವಿಡಿಯೋ: ಕ್ರೀಡಾಂಗಣದಲ್ಲಿ ಮಾರಾಮಾರಿ- ಪಾಕಿಸ್ತಾನಿ ಬೆಂಬಲಿಗರನ್ನು ಥಳಿಸಿದ ಅಫ್ಘಾನ್ ಅಭಿಮಾನಿಗಳುವಿಡಿಯೋ: ಕ್ರೀಡಾಂಗಣದಲ್ಲಿ ಮಾರಾಮಾರಿ- ಪಾಕಿಸ್ತಾನಿ ಬೆಂಬಲಿಗರನ್ನು ಥಳಿಸಿದ ಅಫ್ಘಾನ್ ಅಭಿಮಾನಿಗಳು

ಸಾಮಾನ್ಯವಾಗಿ ಫುಟ್ಬಾಲ್ ಮತ್ತು ರಗ್‌ಬೀ ಪಂದ್ಯಗಳಲ್ಲಿ ರಾಷ್ಟ್ರೀಯ ಗೀತೆ ಆಡಿಸಲಾಗುತ್ತದೆ. ಕ್ರಿಕೆಟ್ ಪಂದ್ಯಗಳಲ್ಲಿ ಇದು ಅಪರೂಪ. ಬ್ರಿಟನ್ ರಾಣಿ ನಿಧನರಾಗಿ ಹೊಸ ಅರಸು ಪಟ್ಟಕ್ಕೇರಿದ ಹಿನ್ನೆಲೆಯಲ್ಲಿ ನ್ಯಾಷನಲ್ ಆಂಥೆಮ್ ಹಾಡಿಸಲಾಯಿತು. ಶನಿವಾರ ಆಟಕ್ಕೆ ಮುನ್ನ ಗಾಯಕಿ ಸೊಪ್ರಾನೋ ಲೌರಾ ರೈಟ್ ಅವರು ಎರಡೂ ದೇಶಗಳ ರಾಷ್ಟ್ರೀಯ ಗೀತೆಯನ್ನು ಹಾಡಿದರು.

ಇಂಗ್ಲೆಂಡ್‌ನಲ್ಲಿ ರಾಣಿ ಎಲಿಜಬೆತ್ 70 ವರ್ಷ ಅರಸಿಯಾಗಿದ್ದರು. ಆಗ "ಗಾಡ್ ಸೇವ್ ದಿ ಕ್ವೀನ್" ಎಂಬ ಹಾಡು ರಾಷ್ಟ್ರಗೀತೆಯಾಗಿತ್ತು. ಈಗ ಮೂರನೇ ಚಾರ್ಲ್ಸ್ ಪಟ್ಟಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಹಾಡಿನ ಸಾಹಿತ್ಯದಲ್ಲಿ ತುಸು ಬದಲಾವಣೆ ಮಾಡಿ "ಗಾಡ್ ಸೇವ್ ದಿ ಕಿಂಗ್" ಎಂದು ಹೊಸ ಹಾಡು ರೂಪಿಸಲಾಗಿದೆ.

Revealed, Why England Cricketers Worried Over Singing Their New National Anthem

ಇಂಗ್ಲೆಂಡ್-ಸೌತ್ ಆಫ್ರಿಕಾ ಪಂದ್ಯ

ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಗುರುವಾರ ಆರಂಭವಾಗಬೇಕಿತ್ತು. ಮಳೆಯಿಂದಾಗಿ ಮೊದಲ ದಿನ ಸಂಪೂರ್ಣ ಮಳೆಗೆ ಆಹುತಿಯಾಯಿತು. ರಾಣಿ ಎಲಿಜಬೆತ್ ತೀರಿಕೊಂಡ ಹಿನ್ನೆಲೆಯಲ್ಲಿ ಎರಡನೇ ದಿನದಾಟ ಸ್ಥಗಿತಗೊಂಡಿತು. ಶನಿವಾರ ಮೂರನೇ ದಿನದಂದು ಪಂದ್ಯ ಆರಂಭವಾಯಿತು.

ಸೌತ್ ಆಫ್ರಿಕಾ ನಿನ್ನೆ ಶನಿವಾರ ಮೊದಲ ಇನ್ನಿಂಗ್ಸ್‌ನಲ್ಲಿ 118 ರನ್‌ಗೆ ಆಲೌಟ್ ಆಯಿತು. ಓಲೀ ರಾಬಿನ್ಸನ್ 49 ರನ್‌ಗೆ 5 ವಿಕೆಟ್ ಪಡೆದರೆ, ಸ್ಟುವರ್ಟ್ ಬ್ರಾಡ್ 4 ವಿಕೆಟ್ ಸಂಪಾದಿಸಿದರು.

ಇದಕ್ಕೆ ಪ್ರತಿಯಾಗಿ ಆತಿಥೇಯ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸಲ್ಲಿ 158 ರನ್‌ಗೆ ಆಲೌಟ್ ಆಗಿದೆ. ಓಲೀ ಪೋಪ್ 67 ರನ್ ಗಳಿಸಿದರು. ಇವರು ಬಿಟ್ಟರೆ ಬೇರಾರೂ ಅರ್ಧಶತಕ ಗಡಿ ಮುಟ್ಟಲಿಲ್ಲ. ಸೌತ್ ಆಫ್ರಿಕಾದ ಮಾರ್ಕೊ ಜನ್ಸೆನ್ 5 ಮತ್ತು ಕಗಿಸೋ ರಬಡ 4 ವಿಕೆಟ್ ಸಂಪಾದಿಸಿದರು.

ಸರಣಿಯಲ್ಲಿ ನಿರ್ಣಾಯಕ ಪಂದ್ಯ

ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 1-1ರಿಂದ ಸಮಬಲ ಸಾಧಿಸಿವೆ. ಮೂರನೇ ಪಂದ್ಯ ನಿರ್ಣಾಯಕವಾಗಿದೆ. ಆದರೆ, ಎರಡು ದಿನ ಸ್ಥಗಿತಗೊಂಡು ಕೇವಲ 3 ದಿನದಾಟ ಮಾತ್ರ ಉಳಿದಿದೆ. ಸೋಮವಾರ ಕೊನೆಯ ದಿನವಾಗಿದೆ. ಪಂದ್ಯ ಫಲಿತಾಂಶ ಕಾಣುವ ಸಾಧ್ಯತೆ ಇಲ್ಲದಿಲ್ಲ.

ಟೆಸ್ಟ್ ಸರಣಿಗೆ ಮುನ್ನ ನಡೆದ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ಸಮಬಲ ಸಾಧಿಸಿದವು. ಟಿ20 ಸರಣಿಯನ್ನು ಸೌತ್ ಅಫ್ರಿಕಾ 2-1ರಿಂದ ಗೆದ್ದಿತು. ಐರ್ಲೆಂಡ್ ವಿರುದ್ಧದ ಟಿ20 ಸರಣಿಯನ್ನೂ ಸೌತ್ ಆಫ್ರಿಕಾ ಗೆದ್ದಿತು.

(ಒನ್ಇಂಡಿಯಾ ಸುದ್ದಿ)

English summary
England bowler Ollie Robinson has said that he and his team mates were more worried of singing national anthem than playing match against South Africa in london.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X