ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ; ಸಾಗರದಲ್ಲಿ ಸಿದ್ಧವಾಯಿತು ಆರ್‌ಸಿಬಿ ಕಾರು!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 25; ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ. ಈ ಭಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರೇಜ್ ಜೋರಾಗಿದೆ. ಅಭಿಮಾನಿಯೊಬ್ಬರು ನೆಚ್ಚಿನ ತಂಡಕ್ಕಾಗಿ ತಮ್ಮ ಕಾರಿಗೆ ಹೊಸ ರೂಪ ಕೊಟ್ಟಿದ್ದಾರೆ.

ಸಾಗರದ ಸದ್ಗುರು ಸಂತೋಷ್ ಆರ್‌ಸಿಬಿ ತಂಡದ ಅಪ್ಪಟ ಅಭಿಮಾನಿ. ಇದೆ ಕಾರಣಕ್ಕೆ ತಮ್ಮ ಫಿಯಟ್ ಕಾರಿಗೆ ಹೊಸ ಲುಕ್ ಕೊಟ್ಟಿದ್ದಾರೆ. ಈಗ ಈ ಕಾರು ಸಾಗರದಲ್ಲಿ ಜನರ ಗಮನ ಸೆಳೆಯುತ್ತಿದೆ. ಜನರು ಕಾರಿನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದಾರೆ.

ಸದ್ಗುರು ಹೊಟೇಲ್ ಸಂತೋಷ್ 1980ರ ಫಿಯಟ್ ಕಾರಿಗೆ ಹೊಸ ಲುಕ್ ಕೊಟ್ಟಿದ್ದಾರೆ. "ಹಳೆಯದನ್ನೆಲ್ಲ ಉಳಿಸಿಕೊಂಡು ಹೋಗಬೇಕು. ಆ ಕಾರಣಕ್ಕೆ ಹಳೆಯ ಫಿಯಟ್ ಖರೀದಿಸಿದ್ದೇನೆ. ನಾನು ಆರ್‌ಸಿಬಿ ಅಭಿಮಾನಿ. ಆದ್ದರಿಂದ ಕಾರಿಗೆ ಆರ್‌ಸಿಬಿ ಸ್ಟಿಕ್ಕರ್ ಮಾಡಿಸಿದ್ದೇನೆ" ಎಂದು ಹೇಳಿದರು.

12,715 ಕೋಟಿ ರು ಗೆ ಎರಡು ಹೊಸ ಐಪಿಎಲ್ ತಂಡಗಳ ಖರೀದಿ12,715 ಕೋಟಿ ರು ಗೆ ಎರಡು ಹೊಸ ಐಪಿಎಲ್ ತಂಡಗಳ ಖರೀದಿ

RCB Fan Designed Car As RCB Car Video Goes Viral

ಈ ಸಲ ಕಪ್ ನಮ್ದೆ; ಕಾರಿನ ಮುಂಭಾಗದ ಬಾನೆಟ್ ಮೇಲೆ 'ಈ ಸಲ ಕಪ್ ನಮ್ದೆ' ಎಂದು ಬರೆಯಿಸಿದ್ದಾರೆ. ಬಾನೆಟ್‌ನ ಮುಂಭಾಗ ನಟ ಡಾ. ರಾಜಕುಮಾರ್ ಭಾವಚಿತ್ರವಿದೆ. ಕಾರಿನ ಮೇಲೆ ನಟರಾದ ಶಂಕರನಾಗ್, ಡಾ. ವಿಷ್ಣುವರ್ಧನ್, ಪುನೀತ್ ರಾಜಕುಮಾರ್ ಫೋಟೊಗಳಿವೆ. ಮುಂಭಾಗದಲ್ಲಿ ಡಾ. ರಾಜಕುಮಾರ್ ಅವರ ದೊಡ್ಡ ಫೋಟೊ ಇದೆ.

ತೇರುಮಲ್ಲೇಶ್ವರ ರಥೋತ್ಸವದಲ್ಲಿ ಬಾಳೆ ಹಣ್ಣು ಹಾಗೂ ಹತ್ತು ರುಪಾಯಿ ನೋಟಿನ ಮೇಲೆ 'ಜೈ ಆರ್‌ಸಿಬಿ'ತೇರುಮಲ್ಲೇಶ್ವರ ರಥೋತ್ಸವದಲ್ಲಿ ಬಾಳೆ ಹಣ್ಣು ಹಾಗೂ ಹತ್ತು ರುಪಾಯಿ ನೋಟಿನ ಮೇಲೆ 'ಜೈ ಆರ್‌ಸಿಬಿ'

ಅಚ್ಚೇ ದಿನ್; "ಇವೆಲ್ಲದರ ನಡುವೆ ಪೆಟ್ರೋಲ್ ಟ್ಯಾಂಕ್ ಮೇಲೆ ಬರೆಯಿಸಿರುವ ಪದ ಹಲವರ ಗಮನ ಸೆಳೆಯುತ್ತಿದೆ. 'ಅಚ್ಚೇ ದಿನ್' ಎಂದು ಸ್ಟಿಕ್ಕರ್ ಹಾಕಿಸಿದ್ದಾರೆ. ವಿಡಂಬನಾತ್ಮಕವಾಗಿ ಅಚ್ಚೇ ದಿನ್ ಎಂದು ಬರೆಯಿಸಿದ್ದೇನೆ. ಈ ಭಾರಿ ನಮ್ಮ ತಂಡ ಕಪ್ ಗೆಲ್ಲಬಹುದು ಎಂಬ ಕಾರಣಕ್ಕೆ ಅಚ್ಚೇ ದಿನ್ ಎಂದುಕೊಳ್ಳಬಹುದು. ಮತ್ತೊಂದು ಕಡೆ ಪೆಟ್ರೋಲ್ ರೇಟ್ ದುಬಾರಿಯಾಗಿರುವುದು ಅಚ್ಚೇ ದಿನ್ ಎಂದು ತಿಳಿದು ಕೊಳ್ಳಬಹುದು" ಎನ್ನುತ್ತಾರೆ ಸದ್ಗುರು ಸಂತೋಷ್.

ಐಪಿಎಲ್ ಅರ್ಧಕ್ಕೆ ಮೊಟಕು, ಬಿಸಿಸಿಐಗೆ 2,500 ಕೋಟಿ ರು ನಷ್ಟಐಪಿಎಲ್ ಅರ್ಧಕ್ಕೆ ಮೊಟಕು, ಬಿಸಿಸಿಐಗೆ 2,500 ಕೋಟಿ ರು ನಷ್ಟ

ಕಾರಿನ ವಿಡಿಯೋ ವರೈಲ್; ಇನ್ನು ಆರ್‌ಸಿಬಿ ಮೇಲಿನ ಅಭಿಮಾನ, ಕಾರಿಗೆ ಹೊಸ ಲುಕ್ ಕೊಟ್ಟಿರುವುದನ್ನು ಸದ್ಗುರು ಸಂತೋಷ್ ಅವರು ವಿಡಿಯೋ ರೆಕಾರ್ಡ್ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್‌ಸಿಬಿ ತಂಡದ ಪರವಾಗಿ ಇರುವ ಅಭಿಮಾನಿಗಳಿಗೆ ಜೋಶ್ ನೀಡಿದೆ.

ಕಳೆದ ಐಪಿಎಲ್ ಹೊತ್ತಿಗೆ ತಮ್ಮ ಸ್ಕೂಟರ್‌ಗೆ ಐಪಿಎಲ್ ಸ್ಟಿಕರ್ ಮಾಡಿಸಿ ಸಂತೋಷ್ ಅವರು ಸುದ್ದಿಯಾಗಿದ್ದರು. ಈಗಲೂ ಆ ಸ್ಕೂಟರ್ ಹಲವರ ಗಮನ ಸೆಳೆಯುತ್ತಿದೆ. ಈ ಭಾರಿ ಫಿಯಟ್ ಕಾರಿಗೆ ಐಪಿಎಲ್ ಲುಕ್ ಕೊಟ್ಟಿದ್ದಾರೆ. ಇದು ಕೂಡ ಈಗ ಫೋಟೋ, ಸೆಲ್ಫಿ ಪ್ರಿಯರು, ಆರ್‌ಸಿಬಿ ಅಭಿಮಾನಿಗಳನ್ನು ಸೆಳೆಯುತ್ತಿದೆ.

English summary
Santosh Saddguru big fan of the Royal Challengers Bangalore team designed his car as RCB car. Now car video went viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X