• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿರುಷ್ಕಾ ಜೊತೆಗಿನ ಚಿತ್ರ ಹಂಚಿಕೊಂಡ ಕಾಸರಗೋಡಿನ ಅಜರುದ್ದೀನ್

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಲು ಆಯ್ಕೆಯಾಗಿರುವ ಯುವ ಪ್ರತಿಭೆಗಳಿಗೆ ತಮ್ಮ ರೋಲ್‌ಮಾಡೆಲ್‌ಗಳನ್ನು ಹತ್ತಿರದಿಂದ ನೋಡಿ ಅವರ ಜೊತೆ ಆಡುವುದೇ ದೊಡ್ಡ ಸಂತಸದ ವಿಷಯ. ಇಂಥದ್ದೊಂದು ಸಂತಸದ ಕ್ಷಣವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಯುವ ಪ್ರತಿಭೆ ಮೊಹಮ್ಮದ್ ಅಜರುದ್ದೀನ್ ಕೂಡಾ ಅನುಭವಿಸಿದ್ದಾರೆ.

ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮ ಅವರನ್ನು ಬಯೋ ಬಬ್ಬಲ್ ಸಂದರ್ಭದಲ್ಲಿ ಭೇಟಿ ಮಾಡಿದ ಕಾಸರಗೋಡು ಜಿಲ್ಲೆಯ ಪ್ರತಿಭೆ ಮೊಹಮ್ಮದ್ ಅಜರುದ್ದೀನ್ ಅವರು ಫೋಟೊ ಹಂಚಿಕೊಂಡಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಜರುದ್ದೀನ್ ಅವರನ್ನು ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ಆಯ್ಕೆ ಮಾಡಿಕೊಂಡಿದೆ. ಐಪಿಎಲ್ ಮೊದಲ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಲಗೈ ಬ್ಯಾಟ್ಸ್ ಮನ್ ಅಜರುದ್ದೀನ್ ಅವರು ಕೇರಳ ಪರ ಆಡಿ 54 ಎಸೆತಗಳಲ್ಲಿ 137 ರನ್ ಚೆಚ್ಚಿದ್ದಲ್ಲದೆ, 16 ಓವರ್ ಗಳಲ್ಲಿ ಕೇರಳ 197 ರನ್ ಚೇಸ್ ಮಾಡಲು ನೆರವಾಗಿದ್ದರು.

ತಂದೆ ಕನಸು ನನಸು ಮಾಡಿದ ಚೇತನ್ತಂದೆ ಕನಸು ನನಸು ಮಾಡಿದ ಚೇತನ್

ಇದರಿಂದ ಐಪಿಎಲ್ ಹರಾಜಿನಲ್ಲಿ 20 ಲಕ್ಷ ಮೂಲ ಬೆಲೆಗೆ ಬೆಂಗಳೂರು ತಂಡ ಸೇರಿದ್ದರು. 22 ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 959 ರನ್, ಲಿಸ್ಟ್‌ 'ಎ' ಪಂದ್ಯಗಳಲ್ಲಿ 445 ರನ್, 24 ಟಿ20 ಪಂದ್ಯಗಳಲ್ಲಿ 451 ಬಾರಿಸಿದ್ದಾರೆ. ಟಿ20 ಪಂದ್ಯಗಳಲ್ಲಿ 137* ರನ್ ಅಜರ್ ಅವರ ವೈಯಕ್ತಿಕ ಅತ್ಯಧಿಕ ರನ್ ಆಗಿದೆ.

ಮುಂಬೈನಲ್ಲಿ ಬಯೋ ಬಬ್ಬಲ್‌ನಲ್ಲಿರುವ ಅನುಷ್ಕಾ ಶರ್ಮ ಹಾಗೂ ಪುತ್ರಿ ವಮಿಕಾ ಜೊತೆಗಿದ್ದ ನಾಯಕ ಕೊಹ್ಲಿ ಅವರನ್ನು ಕಾಣಲು ಬಂದ ಅಜರುದ್ದೀನ್, ದಂಪತಿಯ ಸರಳತೆ ಹಾಗೂ ಆತ್ಮೀಯತೆಯನ್ನು ಮೆಚ್ಚಿ, ಇವರನ್ನು ಭೇಟಿ ಮಾಡಿ, ಸಕತ್ ಖುಷಿಯಾಗಿದೆ ಎಂದಿದ್ದಾರೆ.

10 ಬಿಲಿಯನ್ ನಿಮಿಷಗಳ ವೀಕ್ಷಣೆ ಪಡೆದ ಐಪಿಎಲ್ ಮೊದಲ ಪಂದ್ಯ10 ಬಿಲಿಯನ್ ನಿಮಿಷಗಳ ವೀಕ್ಷಣೆ ಪಡೆದ ಐಪಿಎಲ್ ಮೊದಲ ಪಂದ್ಯ

ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ನಂತರ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಸೋಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಜರುದ್ದೀನ್ ಕಣಕ್ಕಿಳಿದು ಮಿಂಚುವ ಅವಕಾಶಕ್ಕಾಗಿ ಕಾದಿದ್ದಾರೆ.

English summary
Royal Challengers Bangalore (RCB) batsman Mohammed Azharuddeen on Thursday took to social media to share a picture with RCB skipper Virat Kohli and his wife Anushka Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X