ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ಮುನಿಸು: ಮುಂಬೈ ತಂಡ ಸೇರಲಿದ್ದಾರ ರವೀಂದ್ರ ಜಡೇಜಾ?

|
Google Oneindia Kannada News

ಕಳೆದ ಐಪಿಎಲ್‌ ಸೀಸನ್‌ ಮುಗಿದಾಗಿನಿಂದ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ತಿಳಿದಿರುವ ವಿಚಾರವೇ. ಸಿಎಸ್‌ಕೆ ಹಲವು ಪಂದ್ಯಗಳನ್ನು ಗೆಲ್ಲುವಲ್ಲಿ ರವೀಂದ್ರ ಜಡೇಜಾ ಅವರ ಕೊಡುಗೆ ಪ್ರಮುಖವಾದದ್ದು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಸಿಎಸ್‌ಕೆ ತಂಡದಿಂದ ಹೊರಬರಲು ರವೀಂದ್ರ ಜಡೇಜಾ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮೇ ತಿಂಗಳಲ್ಲಿ ಮುಕ್ತಾಯಗೊಂಡ ಐಪಿಎಲ್ 2022 ಪೂರ್ಣಗೊಂಡಾಗಿನಿಂದ ಜಡೇಜಾ ಚೆನ್ನೈ ಮೂಲದ ಟೀಮ್ ಮ್ಯಾನೇಜ್‌ಮೆಂಟ್‌ನೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿಗೆ ರೋಹಿತ್‌ ಶರ್ಮಾ ಮಾಡಿದ ಈ ಮೂರು ದಾಖಲೆಗಳನ್ನು ಮುರಿಯಲು ಆಗಲ್ವಾ?ವಿರಾಟ್ ಕೊಹ್ಲಿಗೆ ರೋಹಿತ್‌ ಶರ್ಮಾ ಮಾಡಿದ ಈ ಮೂರು ದಾಖಲೆಗಳನ್ನು ಮುರಿಯಲು ಆಗಲ್ವಾ?

ವರದಿಗಳ ಪ್ರಕಾರ, ರವೀಂದ್ರ ಜಡೇಜಾ ಈ ಬಾರಿ ಐಪಿಎಲ್‌ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ತೊರೆದು ಇತರೆ ತಂಡದಲ್ಲಿ ಆಡಲು ಆಲ್‌ರೌಂಡರ್ ರವೀಂದ್ರ ಜಡೇಜಾ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬರೋಬ್ಬರಿ 16 ಕೋಟಿ ರುಪಾಯಿಗಳನ್ನು ನೀಡಿ ರವೀಂದ್ರ ಜಡೇಜಾ ಅವರನ್ನು ಖರೀದಿಸಿತ್ತು. ಮಾತ್ರವಲ್ಲದೆ ಅಚ್ಚರಿಯ ಬೆಳವಣಿಗೆಯಲ್ಲಿ ಅವರನ್ನು ಚೆನ್ನೈ ತಂಡದ ನಾಯಕನನ್ನಾಗಿ ಕೂಡ ತಂಡದ ಮ್ಯಾನೇಜ್‌ಮೆಂಟ್ ಘೋಷಣೆ ಮಾಡಿತ್ತು.

 ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಪ್ರದರ್ಶನ

ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಪ್ರದರ್ಶನ

ಎಂ.ಎಸ್‌.ಧೋನಿ ನಾಯಕತ್ವ ತ್ಯಜಿಸಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಸಿಎಸ್‌ಕೆ ತಂಡಕ್ಕೆ ನಾಯಕನನ್ನಾಗಿ ಮಾಡಲಾಯಿತು. ಆದರೆ ಈ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನ ನೀಡಿತು. ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ ನಂತರವೇ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡುತ್ತಿದೆ, ರವೀಂದ್ರ ಜಡೇಜಾ ನಾಯಕತ್ವ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವ ಟೀಕೆಗಳು ವ್ಯಕ್ತವಾದವು.

ಪಂದ್ಯವಾಳಿಯ ಮಧ್ಯೆಯೇ ರವೀಂದ್ರ ಜಡೇಜಾ ನಾಯಕತ್ವ ತೊರೆದರು, ಮತ್ತೆ ಎಂ.ಎಸ್‌.ಧೋನಿ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಸಿಎಸ್‌ಕೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತು.

 ತಂಡದ ಮ್ಯಾನೇಜ್‌ಮೆಂಟ್ ಜೊತೆ ಮನಸ್ತಾಪ

ತಂಡದ ಮ್ಯಾನೇಜ್‌ಮೆಂಟ್ ಜೊತೆ ಮನಸ್ತಾಪ

ನಾಯಕತ್ವವನ್ನು ಬಿಟ್ಟುಕೊಟ್ಟ ನಂತರ ರವೀಂದ್ರ ಜಡೇಜಾ ಗಾಯದ ಕಾರಣ ನೀಡಿ ಮುಂದಿನ ಪಂದ್ಯಗಳಿಂದ ಹೊರಗುಳಿದರು. ಆಗಲೇ ತಂಡದ ಮ್ಯಾನೇಜ್‌ಮೆಂಟ್ ಮತ್ತು ರವೀಂದ್ರ ಜಡೇಜಾ ನಡುವೆ ಮನಸ್ತಾಪದ ಸುಳಿವು ಸಿಕ್ಕಿತ್ತು.

ಅದರ ನಂತರ, ಜಡೇಜಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸಿಎಸ್‌ಕೆಯ 2021 ಮತ್ತು 2022 ರ ಸೀಸನ್‌ಗಳಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ತೆಗೆದುಹಾಕಿದರು. ಆಲ್‌ರೌಂಡರ್ ಮತ್ತು ಫ್ರಾಂಚೈಸಿ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಯಿತು.

 ಧೋನಿ ಜೊತೆಗೂ ಮುನಿಸಿಕೊಂಡರಾ ಜಡೇಜಾ?

ಧೋನಿ ಜೊತೆಗೂ ಮುನಿಸಿಕೊಂಡರಾ ಜಡೇಜಾ?

ತಂಡದ ಮ್ಯಾನೇಜ್‌ಮೆಂಟ್‌ ಜೊತೆ ಮಾತ್ರವಲ್ಲಿ ಸಿಎಸ್‌ಕೆ ತಂಡದ ನಾಯಕ ಎಂ.ಎಸ್‌. ಧೋನಿ ಜೊತೆಗೂ ಮುನಿಸಿಕೊಂಡಿದ್ದಾರ ಎನ್ನುವ ಅನುಮಾನ ಶುರುವಾಗಿದೆ. ಕಳೆದ ವರ್ಷ ಮಹೇಂದ್ರ ಸಿಂಗ್ ಧೋನಿ ಅವರ ಜನ್ಮದಿನದ ಶುಭಾಶಯ ಕೋರದೆ ಜಡೇಜಾ ಸುಮ್ಮನಿದ್ದದ್ದು ಈ ಅನುಮಾನಕ್ಕೆ ಕಾರಣವಾಗಿದೆ.

ಮಾತ್ರವಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಧೋನಿಗೆ ಶುಭಾಶಯ ಕೋರುವ ವಿಡಿಯೋದಲ್ಲಿ ರವೀಂದ್ರ ಜಡೇಜಾ ಅವರನ್ನು ಮಾತ್ರ ಕೈಬಿಟ್ಟಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಅವರು ಸಿಎಸ್‌ಕೆ ತೊರೆಯುವುದು ಖಚಿತ ಎಂದೇ ಹೇಳಲಾಗುತ್ತಿದೆ.

 ಮುಂಬೈ ಇಂಡಿಯನ್ಸ್ ತಂಡಕ್ಕೆ ಜಡೇಜಾ

ಮುಂಬೈ ಇಂಡಿಯನ್ಸ್ ತಂಡಕ್ಕೆ ಜಡೇಜಾ

ಹಲವು ವರದಿಗಳ ಪ್ರಕಾರ ರವೀಂದ್ರ ಜಡೇಜಾ ಅವರೊಂದಿಗೆ ಒಂದೆರಡು ಉನ್ನತ ಫ್ರಾಂಚೈಸಿಗಳು ಸಂಪರ್ಕದಲ್ಲಿವೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಫ್ರಾಂಚೈಸಿಗಳು ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.


ಕೆಲವೊಂದು ಮೂಲಗಳ ಪ್ರಕಾರ ರವೀಂದ್ರ ಜಡೇಜಾ ಮುಂಬೈ ಇಂಡಿಯನ್ಸ್ ಬಳಗ ಸೇರಲಿದ್ದಾರೆ ಎನ್ನುತ್ತಿವೆ. ಮುಂಬೈ ಇಂಡಿಯನ್ಸ್ ತಂಡ ಕೂಡ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು ಮುಂದಿನ ಬಾರಿ ತಂಡದ ಹಲವು ಆಟಗಾರರನ್ನು ಬದಲಾಯಿಸಲು ನಿರ್ಧರಿಸಿದೆ. ಹೀಗಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಉತ್ಸುಕವಾಗಿದೆ ಎನ್ನಲಾಗಿದೆ.

Recommended Video

BJP ಅವರದ್ದು ನಕಲಿ ದೇಶಭಕ್ತಿ, ಇವರಿಗೆ ಇತಿಹಾಸವೇ ಗೊತ್ತಿಲ್ಲ: ಬಿಜೆಪಿ ಮೇಲೆ ಸಿದ್ದು ಗರಂ | *Karnataka | Oneindia

English summary
The India all-rounder is likely to quit the CSK team for the next season of the IPL league, according to reports. The batter will be listing himself at the IPL trading window and will look for offers from other teams. Talking about the issue, it all began after Jadeja was made the skipper of the CSK side for IPL 2022, and under his captaincy, the team underperformed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X