ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಯಕ್ರಮದ ಅತಿಥಿ ದ್ರಾವಿಡ್‌, ಕೊನೆ ಸಾಲಲ್ಲಿ ಕುಳಿತಾಗ, ನೆಟಿಜನ್ಸ್ ಪ್ರತಿಕ್ರಿಯೆ ಹೇಗಿತ್ತು?

|
Google Oneindia Kannada News

ಬೆಂಗಳೂರು, ಮೇ 12: ದಿ ವಾಲ್‌ ಖ್ಯಾತಿಯ ರಾಹುಲ್ ದ್ರಾವಿಡ್‌ ಅವರನ್ನು ಕ್ರಿಕೆಟ್‌ ಫೀಲ್ಡ್‌ನಲ್ಲಿ ಹೇಗಿರುತ್ತಾರೆ ಎಂಬುದನ್ನು ನೀವು ಈಗಾಗಲೇ ಕಂಡಿದ್ದೀರಾ, ಜಾಹೀರಾತೊಂದರಲ್ಲಿ ಇಂದಿರಾ ನಗರದ ಗೂಂಡಾ ಆಗಿ ಕಾಣಿಸಿಕೊಂಡಿದ್ದನ್ನೂ ನೀವೂ ನೋಡಿರಬಹುದು. ಆದರೆ ಇದೀಗ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ತಮ್ಮ ವಿನಮ್ರ ನಡತೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

ಬೆಂಗಳೂರಿನಲ್ಲಿ ಕ್ರಿಕೆಟ್ ದಂತಕತೆ ಜಿ ಆರ್‌ ವಿಶ್ವನಾಥ್‌ ಅವರ ಕುರಿತ ಪುಸ್ತಕ ಬಿಡುಗಡೆ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಕನ್ನಡಿಗ ಹಾಗೂ ಭಾರತ ಕ್ರಿಕೆಟ್ ತಂಡದ ಮುಖ್ಯಕೋಚ್‌ ದ್ರಾವಿಡ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಅವರ ಶಾಂತ ಸ್ವಭಾವ ಮತ್ತು ಸರಳ ವ್ಯಕ್ತತ್ವದ ಕುರಿತು ಕಾಶಿ ಎಂಬ ಹೆಸರುಳ್ಳ ಟ್ವಿಟ್ಟಿಗರೊಬ್ಬರು ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದ್ದು, ಇದು ಸಾಮಾಜಿಕ ಜಾಲಾತಾಣದಲ್ಲಿ ಗಮನ ಸೆಳೆಯುತ್ತಿದೆ.

ದ್ರಾವಿಡ್‌ ಅವರು ಮಾಜಿ ಕ್ರಿಕೆಟಿಗ ಜಿಆರ್ ವಿಶ್ವನಾಥ್‌ ರಿಸ್ಟ್ ಅಶ್ಯೂರ್ಡ್‌ (Wrist Assured)ಪುಸ್ತಕದ ಕುರಿತು ಮಾತನಾಡಲು ಹಾಜರಿದ್ದ ಬೆಂಗಳೂರಿನ ಪುಸ್ತಕ ಮಳಿಗೆಯೊಂದರಲ್ಲಿ ದ್ರಾವಿಡ್ ಕಾಣಿಸಿಕೊಂಡರು.ಈ ಇವೆಂಟ್ ವೇಳೆ ದ್ರಾವಿಡ್‌ ಮಾಸ್ಕ್‌ ಧರಿಸಿ ಏಕಾಂಗಿಯಾಗಿ ಆಗಮಿಸಿ, ಕೊನೆಯ ಸೀಟ್‌ನಲ್ಲಿ ಕುಳಿತುಕೊಂಡಿದ್ದರು. ಇದನ್ನು ಗಮಿನಿಸಿದ ಕಾಶಿ ಎಂಬುವವರು ಅಲ್ಲಿನ ಸನ್ನಿವೇಶವನ್ನು ಟ್ವಿಟರ್‌ನಲ್ಲಿ ಸರಣಿ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

Rahul Dravid sits calmly in the last seat during book event in Bengaluru won heart netizen

ಕೊನೆಯ ಸಾಲಿನಲ್ಲಿ ಕುಳಿತ ದ್ರಾವಿಡ್
"ಅವರು(ದ್ರಾವಿಡ್) ಮಾಸ್ಕ್‌ ಧರಿಸಿಕೊಂಡು ಏಕಾಂಗಿಯಾಗಿ ನಡೆದುಕೊಂಡು ಬಂದರು. ರಾಮ್‌ ಗುಹಾ ಅವರು ಸ್ವಾಗತಿಸಿದಾಗ ನನಗೆ ಮತ್ತು ಸಮೀರ್‌ ಅವರಿಗೆ ಅದು ರಾಹುಲ್‌ ದ್ರಾವಿಡ್‌ ಎಂದು ಅರಿತುಕೊಂಡೆವು. ಕಾರ್ಯಕ್ರಮಕ್ಕೆ ಸ್ವಾಗತಿಸುವವರೆಗೆ ಯಾವುದೇ ಮುಜುಗರವಿಲ್ಲದೆ ದ್ರಾವಿಡ್ ಕೊನೆಯ ಸಾಲಿನಲ್ಲಿ ಸಂತೋಷದಿಂದ ಕುಳಿತುಕೊಂಡಿದ್ದರು. ವಿಶೇಷವೆಂದರೆ ಅವರ ಪಕ್ಕ ಕುಳಿತಿದ್ದ ಯುವತಿಗೂ ಕೂಡ ತಾನೂ ದೇಶದ ಒಬ್ಬ ಲೆಜೆಂಡರಿ ಕ್ರಿಕೆಟಿಗನ ಜೊತೆ ಕುಳಿತಿದ್ದೇನೆ ಎಂದು ತಿಳಿದಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.

ಕಾರ್ಯಕ್ರಮದ ಕೊನೆಯಲ್ಲಿ ಜಿಆರ್‌ವಿ ಅವರ ಮನವಿ ಮೇರೆಗೆ ಇಷ್ಟವಿಲ್ಲದೆ ಬಂದು ಮೊದಲ ಸಾಲಿನಲ್ಲಿ ಕುಳಿತರು. ದ್ರಾವಿಡ್‌ ಎಂದು ತಿಳಿದೊಡನೆ ಸಾಕಷ್ಟು ಮಂದಿ ಅವರ ಬಳಿ ಬರಲು ಶುರುಮಾಡಿದರು. ಈ ಕಾರಣ ಅವರು ಸರಿಯಾಗಿ ನಿಲ್ಲಲು ಕೂಡ ಸಾಧ್ಯವಾಗಲಿಲ್ಲ. ಅಲ್ಲಿ ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳಿಗೆ ಅವರು ಸಹಿ ಮಾಡಿದರು. ಕೊನೆಗೆ ಸರಿಯಾಗಿ ಹಸ್ತಾಕ್ಷರ ನೀಡಲು ಸಾಧ್ಯವಾಗದಿದ್ದರೆ ಕ್ಷಮೆ ಕೇಳುವು ಮೂಲಕ ದೊಡ್ಡತನ ತೋರಿದರು ಎಂದು ಮತ್ತೊಂದು ಟ್ವೀಟ್‌ನಲ್ಲಿ ಕಾಶಿ ತಿಳಿಸಿದ್ದಾರೆ.

''ಇಷ್ಟೇ ಅಲ್ಲದೆ ಕೊನೆಯಲ್ಲಿ ಅಲ್ಲಿದ್ದ ಜನರಿಗೆ ತಮ್ಮ ಬಗ್ಗೆ ಮಾತನಾಡಬೇಡಿ, ಇದು ಜಿಆರ್‌ವಿ ಅವರ ಕಾರ್ಯಕ್ರಮ, ನೀವೆಲ್ಲರೂ ಅವರ ಜೊತೆ ಮಾತನಾಡಿ. ಇದು ಅವರ ಕಾರ್ಯಕ್ರಮ. ಭಾರತ ತಂಡವನ್ನು ಮುನ್ನಡೆಸಿದ ವ್ಯಕ್ತಿ ತಾವೆಷ್ಟು ವಿನಮ್ರ ಮತ್ತು ಎಷ್ಟು ಸರಳ ವ್ಯಕ್ತಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದರು,'' ಎಂದು ಕಾಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Rahul Dravid sits calmly in the last seat during book event in Bengaluru won heart netizen

ಈ ಟ್ವೀಟ್‌ ವೈರಲ್ ಆಗುತ್ತಿದ್ದಂತೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಕೂಡ ದ್ರಾವಿಡ್‌ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Recommended Video

Virat Kohli ಅವರ ವಿಶೇಷ ಸಂದರ್ಶನ ಮಾಡಿದ Danish Sait | Oneindia Kannada

2021ರ ವಿಶ್ವಕಪ್‌ ನಂತರ ರವಿಶಾಸ್ತ್ರಿ ಭಾರತ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ಕೆಳಗಿಳಿದ ನಂತರ ರಾಹುಲ್ ದ್ರಾವಿಡ್‌ ಆ ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ದಕ್ಷಿಣ ಅಫ್ರಿಕಾ ಪ್ರವಾಸದಲ್ಲಿ ಸರಣಿಯನ್ನು ಕಳೆದುಕೊಂಡೂ, ತವರಿನ ಎಲ್ಲಾ ಸರಣಿಗಳನ್ನು ಗೆದ್ದಿರುವ ಉತ್ಸಾಹದಲ್ಲಿದೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ ನಡೆಯುತ್ತಿರುವುದರಿಂದ ದ್ರಾವಿಡ್ ವಿಶ್ರಾಂತಿಯಲ್ಲಿದ್ದಾರೆ. ಐಪಿಎಲ್ ಮುಗಿಯುತ್ತಿದ್ದಂತೆ ದಕ್ಷಿಣ ಆಫ್ರಿಕಾದ ವಿರುದ್ಧ ಟಿ20 ಸರಣಿ, ಇಂಗ್ಲೆಂಡ್ ಪ್ರವಾಸ, ನಂತರ ವಿಂಡೀಸ್ ಪ್ರವಾಸ ಹಾಗೂ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ದ್ರಾವಿಡ್‌ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ.

English summary
Rahul Dravid was spotted at an event in a Bengaluru bookstore. During the event, he arrived at the venue alone with wearing a mask and quietly sat in the back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X