ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ತೊರೆದು ಕೊವಿಡ್ 19 ಹೋರಾಟಕ್ಕೆ ಅಶ್ವಿನ್ ಸಾಥ್

|
Google Oneindia Kannada News

ಚೆನ್ನೈ, ಏಪ್ರಿಲ್ 26: ಕೊವಿಡ್ 19 ನಡುವೆ ಎರಡನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಡೆ ಬಗ್ಗೆ ಪರ -ವಿರೋಧ ಚರ್ಚೆ ನಡೆದಿದೆ. ಈ ನಡುವೆ ಟೂರ್ನಮೆಂಟ್ ಮಧ್ಯದಲ್ಲೇ ಅನೇಕ ಆಟಗಾರರು ತಂಡ ತೊರೆಯುತ್ತಿದ್ದು, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಪಟ್ಟಿಗೆ ಹೊಸ ಸೇರ್ಪಡೆ.

ಮುಂಬೈನಲ್ಲಿ ಕಠಿಣ ಕರ್ಫ್ಯೂ ಕೋವಿಡ್ ನಿಯಮಗಳಿದ್ದರೂ ಐಪಿಎಲ್ ಆಯೋಜನೆಗೆ ಅನುಮತಿ ಹೇಗೆ ನೀಡಲಾಗಿದೆ ಎಂದು ಅನೇಕರು ಪ್ರಶ್ನಿಸಿದ್ದರು. ಐಪಿಎಲ್ ವೇಳಾಪಟ್ಟಿ, ಕ್ರೀಡಾಂಗಣ ಬದಲಾವಣೆ ಬಗ್ಗೆ ಸುದ್ದಿ ಬಂದಿತ್ತು. ಆದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕೊವಿಡ್ 19 ಮಾರ್ಗಸೂಚಿ ನಡುವೆ ಮುಂಬೈನಲ್ಲಿ ಎಂದಿನಂತೆ ಪಂದ್ಯಗಳು ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.

ಐಪಿಎಲ್ ಅಭಿಮಾನಿಗಳಿಗೆ ನೆಮ್ಮದಿಯ ಸುದ್ದಿ ಕೊಟ್ಟ ಗಂಗೂಲಿ ಐಪಿಎಲ್ ಅಭಿಮಾನಿಗಳಿಗೆ ನೆಮ್ಮದಿಯ ಸುದ್ದಿ ಕೊಟ್ಟ ಗಂಗೂಲಿ

ಈಗ ಚೆನೈ, ಮುಂಬೈ ನಂತರ ಅಹಮದಾಬಾದ್ ಸ್ಟೇಡಿಯಂನಲ್ಲಿ ಎಂದಿನಂತೆ ಐಪಿಎಲ್ ಮುಂದುವರೆಯಲಿದೆ. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ಅವರು ತಮ್ಮ ಕುಟುಂಬಸ್ಥರು ಕೊವಿಡ್ 19 ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಅವರ ಹೋರಾಟಕ್ಕೆ ನಾನು ಬೆಂಬಲ ನೀಡಬೇಕಾಗಿದೆ. ಐಪಿಎಲ್‌ನಿಂದ ನಾಳೆಯಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದೇನೆ, ಪರಿಸ್ಥಿತಿ ತಿಳಿಕೊಂಡರೆ ಮತ್ತೆ ಐಪಿಎಲ್ ಕಣಕ್ಕಿಳಿಯುತ್ತೇನೆ ಎಂದು ಟ್ವೀಟ್ ಮಾಡಿದ್ದೇನೆ.

R Ashwin Withdraws from IPL 2021 to Fight Against Covid-19

ಅಶ್ವಿನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್, ನಿಮ್ಮ ಕುಟುಂಬಸ್ಥರು ಹಾಗೂ ಇಡೀ ದೇಶದ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಆಶಿಸೋಣ ಎಂದಿದ್ದಾರೆ. ಅಶ್ವಿನ್ ಅವರ ನಿರ್ಧಾರ ಸೂಕ್ತವಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದರೆ, ಮತ್ತೆ ಕೆಲವರು ಡೆಲ್ಲಿ ತಂಡದ ಆಡುವ ಹನ್ನೊಂದರಲ್ಲಿ ಅಶ್ವಿನ್ ಸ್ಥಾನ ಪಡೆಯುವುದು ಕಷ್ಟಕರ ಸ್ಥಿತಿ ಇದೆ ಹೀಗಾಗಿ, ತಂಡ ತೊರೆಯುತ್ತಿರಬಹುದು ಎಂದಿದ್ದಾರೆ.

English summary
Delhi Capitals spinner Ravichandran Ashwin withdrew from the Indian Premier League on Sunday to support his family during the Covid-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X