ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 2022ರ ಮೊದಲ ಸೂಪರ್ 500 ಪ್ರಶಸ್ತಿ ಗೆದ್ದ ಪಿವಿ ಸಿಂಧು

|
Google Oneindia Kannada News

ಸಿಂಗಪುರ, ಜುಲೈ 17: ಭಾರತದ ಬಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಇಂದು ಸಿಂಗಪುರ ಓಪನ್ ಗೆಲ್ಲುವ ಮೂಲಕ 2022ರ ಮೊದಲ ಸೂಪರ್ 500 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಇಂದು ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿಯನ್ನು ಸೋಲಿಸಿದರು. ಪಿವಿ ಸಿಂಧು 21-19, 11-21, 21-15ರಲ್ಲಿ ಚೀನಾ ವಾಂಗ್ ಝಿ ಯಿರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಸಿಂಗಪುರ ಓಪನ್ ಗೆಲ್ಲುವುದಕ್ಕೂ ಮುನ್ನ ಪಿವಿ ಸಿಂಧು ಅವರು 2022ರಲ್ಲಿ ಎರಡು ಸೂಪರ್ 300 ಪ್ರಶಸ್ತಿ ಗೆದ್ದುಕೊಂಡಿದ್ದರು. ಸೈಯದ್ ಮೋದಿ ಇಂಟರ್ ನ್ಯಾಷನಲ್ ಹಾಗೂ ಸ್ವಿಸ್ ಓಪನ್ ನಲ್ಲಿ ಗೆಲುವು ಸಾಧಿಸಿದ್ದರು.

ಸೆಮಿಫೈನಲ್ ಪಂದ್ಯದಲ್ಲಿ 21-15, 21-7 ರ ನೇರ ಸೆಟ್ ಗಳಲ್ಲಿ ಕೇವಲ 32 ನಿಮಿಷಗಳಲ್ಲಿ ಪಂದ್ಯ ಗೆದ್ದುಕೊಂಡಿದ್ದ ಸಿಂಧು, ಫೈನಲ್ ಪಂದ್ಯದಲ್ಲಿ ಒಂದು ಸೆಟ್ ಬಿಟ್ಟುಕೊಟ್ಟರೂ ಮೂರನೇ ಸೆಟ್ ಗೆಲ್ಲುವ ಮೂಲಕ ಚೀನಾದ ಆಟಗಾರ್ತಿಯನ್ನು ಸೋಲಿಸಿದರು.

PV Sindhu wins Singapore Open her maiden Super 500 title

ಫೈನಲ್ ಪಂದ್ಯ ಹೇಗಿತ್ತು?
ಆರಂಭಿಕ ಸೆಟ್ ಗೆಲ್ಲಲು ಕೇವಲ 12 ನಿಮಿಷಗಳನ್ನು ತೆಗೆದುಕೊಂಡರೆ, ಎರಡನೇ ಗೇಮ್‌ನಲ್ಲಿ ವಾಂಗ್ ಝಿ ಅವರು ಸಮಬಲ ಸಾಧಿಸಿ ಉತ್ತಮ ಹೋರಾಟ ತೋರಿದರು. ನಿರ್ಣಾಯಕ ಸೆಟ್‌ನಲ್ಲಿ ಐದು ಪಾಯಿಂಟ್‌ಗಳ ಮುನ್ನಡೆ ಗಳಿಸಿದ್ದಲ್ಲದೆ, ಅಂತಿಮವಾಗಿ 21-15ರಲ್ಲಿ ಚೀನಾ ವಾಂಗ್ ಝಿ ಯಿರನ್ನು ಮಣಿಸಿದರು.

ಸಿಂಗಪುರ ಓಪನ್ ಗೆದ್ದ ಪಿವಿ ಸಿಂಧು ಗೆಲುವಿನ ಓಟವನ್ನು ಅಭಿಮಾನಿಗಳು ಮುಕ್ತ ಕಂಠದಿಂದ ಹೊಗಳಿದ್ದಾರೆ. ಆದರೆ, ಕೆಲವರು, ಈ ಟೂರ್ನಮೆಂಟ್ ನಲ್ಲಿ ಅಗ್ರಗಣ್ಯ ಬಾಡ್ಮಿಂಟನ್ ಆಟಗಾರ್ತಿಯರು ಪಾಲ್ಗೊಂಡಿರಲಿಲ್ಲ, ಹೀಗಾಗಿ ಸಿಂಧು ಗೆಲುವಿನ ಹಾದಿ ಸುಗಮವಾಗಿತ್ತು ಎಂದಿದ್ದಾರೆ. ಆದರೆ, ಸಿಂಧು ಅವರ ಕೋಚ್ ಪಾರ್ಕ್ ಟೇ-ಸಾಂಗ್ ಸಿಂಧಿ ಜೊತೆಗೆ ಚಿತ್ರ ಹಂಚಿಕೊಂಡು ದೀರ್ಘ ಟಿಪ್ಪಣಿಯನ್ನು ಪೋಸ್ಟ್ ಮಾಡಿ, ಜನರ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೋಚ್ ಪ್ರತಿಕ್ರಿಯೆ, "ಈ ಸ್ಪರ್ಧೆಯು ತುಂಬಾ ಸುಲಭವಾಗಿದೆ ಏಕೆಂದರೆ ಅಗ್ರ ರ‍್ಯಾಂಕರ್‌ಗಳು ಭಾಗವಹಿಸಲಿಲ್ಲ. ಯಾರು ಭಾಗವಹಿಸುತ್ತಾರೆ, ಯಾರು ಗೆಲ್ಲುವುದಿಲ್ಲ, ಯಾರು ಚಾಂಪಿಯನ್‌ಶಿಪ್ ಗೆದ್ದಿದ್ದಾರೆ ಎಂಬುದು ಮುಖ್ಯ, ಆಕೆ ಎಲ್ಲರಿಗಿಂತಲೂ ಹೆಚ್ಚು ತರಬೇತಿ ಪಡೆದಳು ಮತ್ತು ಉತ್ತಮವಾಗಿ ಆಡಿ ಗೆಲುವು ಸಾಧಿಸಿದ್ದಾಳೆ, ಸಿಂಗಪುರ ಓಪನ್ 2022ರ ಚಾಂಪಿಯನ್"

ಜುಲೈ 28 ರಿಂದ ಆಗಸ್ಟ್ 8 2022 ರವರೆಗೆ ನಡೆಯುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಪಿವಿ ಸಿಂಧು ಕಾಣಿಸಿಕೊಳ್ಳಲಿದ್ದು, ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

English summary
Olympic medallist PV Sindhu wins wins her maiden Super 500 title of 2022. In Singapore Open Finals Sindhu beat China's Wang Zhi Yi with 21-9 11-21 21-15 .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X