ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಕಿಯೊ ಒಲಿಂಪಿಕ್ಸ್ 2020: ಲಕ್ಷಾಂತರ ವೀಕ್ಷಣೆಯನ್ನು ದಾಖಲೆ

|
Google Oneindia Kannada News

ನವದೆಹಲಿ, ಆಗಸ್ಟ್ 13: ಟೋಕಿಯೊ ಒಲಿಂಪಿಕ್ಸ್ 2020ರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳ ನಿಯೋಗವು ಒಲಿಂಪಿಕ್ಸ್‌ನಲ್ಲಿ ಭಾರತದ ಅನೇಕ ಚೊಚ್ಚಲ ದಾಖಲೆಗಳೊಂದಿಗೆ ವಿಜಯಶಾಲಿಯಾಗಿ ತವರಿಗೆ ಮರಳಿತು. ಈ ಅಭೂತಪೂರ್ವ ಸಾಧನೆಯು ನವ ಭಾರತಕ್ಕೆ ಹೊಸ ಭರವಸೆಯನ್ನು ನೀಡಿದೆ. ಭಾರತದ ಮೂಲೆ ಮೂಲೆಗೂ ತಲುಪುವ ತನ್ನ ಪ್ರಸಾರದ ಮೂಲಕ ಈ ಭರವಸೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪುವಂತೆ ಮಾಡುವಲ್ಲಿ ಪ್ರಸಾರ ಭಾರತಿ ಸಮಗ್ರ ಪಾತ್ರ ವಹಿಸಿದೆ ಎಂದು ಹೇಳಲು ಹರ್ಷವೆನಿಸುತ್ತದೆ.

ನಮ್ಮ ಚಾಂಪಿಯನ್‌ಗಳು ವಿವಿಧ ಒಲಿಂಪಿಕ್ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಹೊಸ ದಾಖಲೆಗಳನ್ನು ಮಾಡಿದಾಗ ಪ್ರಸಾರ ಭಾರತಿಯು ಟಿವಿ, ರೇಡಿಯೋ ಮತ್ತು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ತನ್ನ ಪ್ರಸಾರ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ನಮ್ಮ ಒಲಿಂಪಿಕ್ಸ್‌ ಗೆಲುವುಗಳ ಅದ್ಭುತ ಕ್ಷಣಗಳ ದೃಶ್ಯವನ್ನು ಮನೆ ಮನೆಗೆ ತಲುಪಿಸಿತು.

Video: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಮೋದಿ ಶುಭಹಾರೈಕೆVideo: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಮೋದಿ ಶುಭಹಾರೈಕೆ

ʻಡಿಡಿ ಸ್ಪೋರ್ಟ್ಸ್ʼ ಮತ್ತು ʻಆಲ್ ಇಂಡಿಯಾ ರೇಡಿಯೋ ಸ್ಪೋರ್ಟ್ಸ್ʼ ಜಾಲದ ಪ್ರಸಾರವು ಎಲ್ಲಾ ವಯೋಮಾನದವರು, ಲಿಂಗ, ವರ್ಗ ಮತ್ತು ಪ್ರದೇಶಗಳ ಭಾರತೀಯರಲ್ಲಿ ಭಾರಿ ಜನಪ್ರಿಯವಾಗಿದೆ. ಪ್ರಸಾರ ಭಾರತಿಯ ಅನೇಕ ಯೂಟ್ಯೂಬ್ ಚಾನೆಲ್‌ಗಳು ಮತ್ತು ʻನ್ಯೂಸ್ ಆನ್ ಏರ್ʼ ಆ್ಯಪ್ ಒಟ್ಟಿಗೆ ಲಕ್ಷಾಂತರ ವೀಕ್ಷಣೆಯನ್ನು ದಾಖಲಿಸುವ ಮೂಲಕ ಇದು ಸಾಬೀತಾಗಿದೆ.

Prasar Bharati’s Olympics coverage -a hit with Multi-Million Digital Viewership

ಜವಾಬ್ದಾರಿಯುತ ಸಾರ್ವಜನಿಕ ಪ್ರಸಾರ ಸಂಸ್ಥೆಯಾಗಿ ಪ್ರಸಾರ ಭಾರತಿಯು ತನ್ನ ಪ್ರಸಾರವನ್ನು ದೂರದ ಪ್ರದೇಶಗಳಲ್ಲಿರುವವರಿಗೆ ಅಥವಾ ಕಡಿಮೆ ಸೌಲಭ್ಯಗಳನ್ನು ಹೊಂದಿರುವವರಿಗೆ ಮಾತ್ರ ತಲುಪಿಸುವುದಲ್ಲದೆ ವಿಶೇಷ ಚೇತನ ನಾಗರಿಕರಿಗೂ ಅದು ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ. ಒಲಿಂಪಿಕ್ಸ್‌ ಪ್ರಸಾರಕ್ಕಾಗಿ, ಪ್ರಸಾರ ಭಾರತಿಯು 14 ಸಂಜ್ಞೆ ಭಾಷಾ ಕಲಾವಿದರನ್ನು ನೇಮಿಸಿಕೊಂಡಿತು. ಅವರು 240 ಗಂಟೆಗಳ ಒಲಿಂಪಿಕ್ಸ್ ನೇರ ಪ್ರಸಾರವನ್ನು ಸಂಕೇತ ಭಾಷೆಯಲ್ಲಿ ಪ್ರಸ್ತುತಪಡಿಸಿದರು. ನಮ್ಮ ರೇಡಿಯೋ ಪ್ರೇಕ್ಷಕರಿಗಾಗಿ, 16 ಅಖಿಲ ಭಾರತ ರೇಡಿಯೋ ವ್ಯಾಖ್ಯಾನಕಾರರು ವಿವಿಧ ಒಲಿಂಪಿಕ್ಸ್‌ ಸ್ಪರ್ಧೆಗಳಲ್ಲಿ ಕ್ಷಣ ಕ್ಷಣವೂ ಏನು ನಡೆಯುತ್ತಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ಒದಗಿಸಿದರು.

ಟೋಕಿಯೊ ಒಲಿಂಪಿಕ್ಸ್ ಸಮಗ್ರ ಸುದ್ದಿ, ಅಂಕಿ ಅಂಶ, ಪದಕ ಪಟ್ಟಿ ತಿಳಿಯಿರಿ

ಟೋಕಿಯೋ ಒಲಿಂಪಿಕ್ಸ್ 2020 ಕುರಿತಾದ ನಮ್ಮ ಡಿಜಿಟಲ್ ಪ್ರಸಾರವು ಸಮಗ್ರ ಮತ್ತು ಬಹುಮುಖಿಯಾಗಿತ್ತು. ಒಲಿಂಪಿಕ್ಸ್‌ ಕ್ರೀಡಾ ಕೂಟಗಳ ನೇರ ಪ್ರಸಾರದ ಜೊತೆಗೆ, ನಮ್ಮ ಪ್ರಸಾರವು ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳ ನೇರ ಪ್ರಸಾರವನ್ನೂ ಒಳಗೊಂಡಿತ್ತು. ಭಾರತೀಯ ಶ್ರೇಷ್ಠ ಕ್ರೀಡಾ ಗಣ್ಯರೊಂದಿಗೆ ವಿಶೇಷ ವರ್ಚುವಲ್ ಸಮಾವೇಶ, ಭಾರತೀಯ ಒಲಿಂಪಿಕ್ಸ್‌ ತಂಡದ ಸದಸ್ಯರ ಜೀವನಚರಿತ್ರೆಗಳು ಮತ್ತು ಯಶೋಗಾಥೆಗಳು, ದೇಶಾದ್ಯಂತ ಅವರ ಗೆಲುವಿನ ವಿಜಯೋತ್ಸವಗಳು ಸೇರಿದಂತೆ ಹತ್ತಾರು ವಿಷಯಗಳ ಪ್ರಸಾರವನ್ನೂ ಅದು ಒಳಗೊಂಡಿತ್ತು.

Prasar Bharati’s Olympics coverage -a hit with Multi-Million Digital Viewership

ಈ ಬಾರಿ ಒಲಿಂಪಿಕ್ಸ್ ಗೆ ಭಾರತ ಅತಿದೊಡ್ಡ ತಂಡವನ್ನು ಕಳುಹಿಸಿತ್ತು. 22 ರಾಜ್ಯಗಳ 127 ಅಥ್ಲೀಟ್ ಗಳನ್ನೊಳಗೊಂಡ 228 ಮಂದಿಯ ಬಲಿಷ್ಠ ತಂಡ ಪಾಲ್ಗೊಂಡಿದ್ದವು.

18 ಕ್ರೀಡಾ ವಿಭಾಗಗಳಲ್ಲಿ ಅಂದರೆ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಈಕ್ವೆಸ್ಟ್ರಿಯನ್, ಫೆನ್ಸಿಂಗ್, ರೋಯಿಂಗ್, ಶೂಟಿಂಗ್, ಸೈಲಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟೆನಿಸ್, ವೇಯ್ಟ್ ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಸೆಣಸುವರು. ಭಾರತೀಯ ನಿಯೋಗದಲ್ಲಿ 68 ಪುರುಷ ಹಾಗೂ 52 ಮಹಿಳಾ ಅಥ್ಲಿಟ್ ಗಳು, 58 ಅಧಿಕಾರಿಗಳು, 43 ಪರ್ಯಾಯ ಅಥ್ಲೀಟ್ ಗಳು ಮತ್ತು 8 ತುರ್ತು ಸೇವಾ ಸಿಬ್ಬಂದಿ, ಕೋಚ್ ಗಳು, ತಂಡದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳು 85 ಸಂಭವನೀಯ ಪದಕಗಳಿಗಾಗಿ ಸೆಣಸಿದ್ದರು.

ಪ್ರಸಾರಭಾರತಿ ತನ್ನ ಅವಳಿ ಜಾಲ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಹಾಗೂ ಕ್ರೀಡೆಗೆ ಮೀಸಲಾದ ಡಿಡಿ ಸ್ಪೋರ್ಟ್ಸ್ ಚಾನೆಲ್ ಮೂಲಕ ಹೆಚ್ಚಿನ ಮಾಹಿತಿ ಮತ್ತು ಸುದ್ದಿಯನ್ನು ಪ್ರಸಾರ ಮಾಡಲಿದೆ. ಕ್ರೀಡಾಕೂಟ ಆರಂಭಕ್ಕೂ ಮುನ್ನದಿಂದ ಕ್ರೀಡಾಕೂಟ ಮುಗಿದ ನಂತರದವರೆಗೆ ಪ್ರಸಾರಭಾರತಿಯ ಟಿವಿ, ರೇಡಿಯೋ ಮತ್ತು ಡಿಜಿಟಲ್ ವೇದಿಕೆಗಳು ಸೇರಿ ಎಲ್ಲ ರೂಪದಲ್ಲೂ ದೇಶಾದ್ಯಂತ ಪ್ರಸಾರ ಮಾಡಲಿದೆ.

Prasar Bharati’s Olympics coverage -a hit with Multi-Million Digital Viewership

'ಚಿಯರ್ ಫಾರ್ ಇಂಡಿಯಾ' ಅಭಿಯಾನಕ್ಕೆ ನೆರವಾಗಲು ಡಿಡಿ ಸ್ಪೋರ್ಟ್ಸ್ ಟೋಕಿಯೋ ಒಲಿಂಪಿಕ್ಸ್ 2020ಯ ಕುರಿತು ನಾಲ್ಕು ಗಂಟೆಗಳಿಗೂ ಅಧಿಕ ಕಾಲ ಕ್ರೀಡಾಕೂಟಗಳೊಂದಿಗೆ ಚರ್ಚೆ ಆಧಾರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿತ್ತು. ಈ ವಿಶೇಷ ಕಾರ್ಯಕ್ರಮ ಜುಲೈ 22 ಹಾಗೂ 23ರಂದು ಡಿಡಿ ಸ್ಪೋರ್ಟ್ಸ್ ನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನೇರ ಪ್ರಸಾರವಾಗಿತ್ತು. ಪ್ರತಿ ದಿನ ವಿಭಿನ್ನ ವಿಷಯಗಳನ್ನು ಹೊಂದಿರುವ ವಿಭಿನ್ನ ಕಾರ್ಯಕ್ರಮಗಳು ನಡೆದಿತ್ತು. ಜುಲೈ 22ರಂದು ಎರಡು ಅವಧಿಯಲ್ಲಿ ರಾತ್ರಿ 7 ಗಂಟೆಯಿಂದ 9 ಗಂಟೆವರೆಗೆ ಮತ್ತು ಜು.23ರಂದು ಮರುದಿನ ಬೆಳಿಗ್ಗೆ 9ರಿಂದ 11 ಗಂಟೆವರೆಗೆ ಮರುಪ್ರಸಾರ ಮಾಡಲಾಗಿತ್ತು.

English summary
Prasar Bharati’s Accessible & Inclusive Olympics coverage -a hit with Multi-Million Digital Viewership. Indian contingent for Tokyo Olympics 2020 returned triumphant having registered many firsts for India at the Olympics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X