ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಬೆಟ್ಟಿಂಗ್: ದೇಶದ ಹಲವೆಡೆ ಸಿಬಿಐ ತಂಡದಿಂದ ದಾಳಿ

|
Google Oneindia Kannada News

ನವದೆಹಲಿ, ಮೇ 15: ಪಾಕಿಸ್ತಾನಿ ಪ್ರಜೆಯೊಬ್ಬ ಒಳಗೊಂಡ ಐಪಿಎಲ್ ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ(ಸಿಬಿಐ) ನಾಲ್ಕು ಪ್ರಮುಖ ನಗರಗಳಲ್ಲಿ ಶೋಧ ಕಾರ್ಯ ನಡೆಸಿ ಮೂವರನ್ನು ಬಂಧಿಸಿದೆ.

ಪಾಕಿಸ್ತಾನದಿಂದ ಬಂದಂತಹ ಮಾಹಿತಿಯನ್ನು ಆಧರಿಸಿ ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಹಲವು ಆರೋಪಿಗಳನ್ನು ಶನಿವಾರ ಬಂಧಿಸಿ, ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಈ ಪಕ್ರರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದು, ಇದಕ್ಕಾಗಿ ನವದೆಹಲಿ, ರಾಜಸ್ಥಾನ್, ಹೈದರಾಬಾದ್‌ ಮತ್ತು ಜೈಪುರ್‌ ನಗರಗಳಲ್ಲಿ ಹಲವು ಕಡೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ಹೊಸಪಡಿಸಿಕೊಂಡಿರುವುದಾಗಿ ಸಿಬಿಐ ಮಾಹಿತಿ ನೀಡಿದೆ.

ಐಪಿಎಲ್ ಬೆಟ್ಟಿಂಗ್ ನೆಟ್‌ವರ್ಕ್ ಪಾಕ್‌ನಿಂದ ಇನ್‌ಪುಟ್‌ಗಳನ್ನು ತೆಗೆದುಕೊಂಡಿದೆ: ಸಿಬಿಐಐಪಿಎಲ್ ಬೆಟ್ಟಿಂಗ್ ನೆಟ್‌ವರ್ಕ್ ಪಾಕ್‌ನಿಂದ ಇನ್‌ಪುಟ್‌ಗಳನ್ನು ತೆಗೆದುಕೊಂಡಿದೆ: ಸಿಬಿಐ

ಮೂವರ ಮೇಲೆ ಎಫ್‌ಐಆರ್‌
ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ದೆಹಲಿಯ ರೋಹಿಣಿ ಪ್ರಾಂತ್ಯದ ನಿವಾಸಿ ದಿಲೀಪ್ ಕುಮಾರ್, ಹೈದರಾಬಾದ್‌ನ ಗುರ್ರಮ್ ಸತೀಮ್ ಮತ್ತು ಗುರ್ರಮ್ ವಾಸು ಎಂಬುವವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

Pakistani linked IPL betting racket; CBI conducts raids across four cities

ಪಾಕಿಸ್ತಾನಿ ಪ್ರಜೆಯ ನಿರ್ದೇಶನದ ಮೇರೆಗೆ ಬೆಟ್ಟಿಂಗ್
ಈ ಮೂವರು 2019ರ ಆವೃತ್ತಿಯಲ್ಲಿ ಪಾಕಿಸ್ತಾನಿ ಪ್ರಜೆಯ ನಿರ್ದೇಶನದ ಮೇರೆಗೆ ಹಲವು ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸಿದ್ದಾರೆ. ಬಂಧಿಸಲ್ಪಟ್ಟಿರುವ ಮೂವರು ಪಾಕಿಸ್ತಾನದ ಪ್ರಜೆ ವಾಕಸ್ ಮಲಿಕ್ ಎಂಬಾತನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಈ ಗುಂಪು ಸಾರ್ವಜನಿಕರಿಗೆ ಸಾಕಷ್ಟು ಹಣವನ್ನು ವಂಚಿಸಿದೆ. ಈ ದಂಧೆ 2010ರಿಂದಲೂ ನಡೆದುಕೊಂಡು ಬಂದಿದೆ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ.

Pakistani linked IPL betting racket; CBI conducts raids across four cities

ನಕಲಿ ದಾಖಲಾತಿಗಳನ್ನು ಬಳಸಿ ಬ್ಯಾಂಕ್‌ನಲ್ಲಿ ಅಕೌಂಟ್ ಓಪನ್
ಆರೋಪಿಗಳು ತಮ್ಮ ಬೆಟ್ಟಿಂಗ್ ದಂಂದೆಯಲ್ಲಿ ಗಳಿಸಿದ ಹಣವನ್ನು ಪಡೆಯಲು ಮತ್ತು ವರ್ಗಾಯಿಸಲು ಅಪರಿಚಿತ ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ನಕಲಿ ದಾಖಲೆಗಳನ್ನು ನೀಡಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು. ಈ ಖಾತೆಗಳನ್ನು ಖಾತೆಗಳನ್ನು ಪರಿಶೀಲಿಸಿದಾಗ ವಿಭಿನ್ನ ಜನ್ಮ ದಿನಾಂಕಗಳು ಸೇರಿದಂತೆ ನಕಲಿ ವಿವರಗಳು ಕಂಡು ಬಂದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಕುಮಾರ್ ಎಂಬಾತನ ಖಾತೆಯೊಂದರಲ್ಲಿ 45 ಲಕ್ಷಕ್ಕೂ ಅಧಿಕ ಮೊತ್ತದ ವಹಿವಾಟು ನಡೆದಿರುವುದು ಕಂಡುಬಂದಿದೆ.

English summary
The Central Bureau of Investigation conducted raids in Delhi, Jaipur, Hyderabad and another city regarding IPL betting racket involving Pakistan link.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X