ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ, ಟಿ20 ವಿಶ್ವಕಪ್ ಗೆಲ್ಲಲು ಪಾಕ್ ತಂಡಕ್ಕೆ ಭರ್ಜರಿ ಆಮಿಷ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24: ಟಿ20 ವಿಶ್ವಕಪ್ ಟೂರ್ನಮೆಂಟ್ ಬಿಸಿ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮೊದಲ ದಿನ ಡಲ್ ಹೊಡೆದರೂ, ಎರಡನೇ ದಿನದ ಸೂಪರ್ 12 ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕಾಳಗಕ್ಕೆ ಕ್ರಿಕೆಟ್ ಪ್ರೇಮಿಗಳು ಕಾದಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಆಟಗಾರರಿಗೆ ಭರ್ಜರಿ ಕೊಡುಗೆಗಳನ್ನು ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಘೋಷಿಸಿದೆ.

ಅಕ್ಟೋಬರ್ 23ರಿಂದ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಿವೆ. ಸದ್ಯ ಆರಂಭವಾಗಿರುವ ಸೂಪರ್ 12 ಹಂತದ ಅಂತಿಮ ಪಂದ್ಯ ನವೆಂಬರ್ 8ರಂದು ನಡೆಯಲಿದ್ದು, 2 ಸೆಮಿಫೈನಲ್ ಪಂದ್ಯಗಳು ನವೆಂಬರ್‌ 10 ಮತ್ತು ನವೆಂಬರ್‌ 11ರಂದು ನಡೆಯಲಿವೆ. ಹಾಗೂ ಟೂರ್ನಿಯ ಪ್ರಮುಖ ಘಟ್ಟವಾದ ಫೈನಲ್ ಪಂದ್ಯವು ನವೆಂಬರ್‌ 14ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಪ್ರತಿಷ್ಠಿತ ಟೂರ್ನಿಗೆ ಅಧಿಕೃತ ತೆರೆಬೀಳಲಿದೆ.

ಐಸಿಸಿ ಆಯೋಜನೆಯ ಪಂದ್ಯಾವಳಿಗಳಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಇಲ್ಲಿ ತನಕ ಗೆದ್ದಿಲ್ಲ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇದುವರೆಗೂ ಒಟ್ಟು 7 ಏಕದಿನ ವಿಶ್ವಕಪ್ ಪಂದ್ಯಗಳು ನಡೆದಿದ್ದು ಎಲ್ಲಾ ಪಂದ್ಯಗಳಲ್ಲಿಯೂ ಭಾರತ ತಂಡ ಜಯ ಸಾಧಿಸಿದೆ. ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇದುವರೆಗೂ ಒಟ್ಟು ಟಿ 20 ವಿಶ್ವಕಪ್ ಮಾದರಿಯಲ್ಲಿ 5 ಪಂದ್ಯಗಳು ನಡೆದಿದ್ದು ಭಾರತ ತಂಡ 4 ಪಂದ್ಯಗಳಲ್ಲಿ ಜಯ ಗಳಿಸಿದೆ ಹಾಗೂ ಒಂದು ಪಂದ್ಯ ಟೈ ಆಗಿದೆ. ಆದರೆ ಪಾಕಿಸ್ತಾನ ಮಾತ್ರ ಯಾವುದೇ ಪಂದ್ಯದಲ್ಲಿಯೂ ಕೂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ.

Offers galore For Babar Azam-Led Pakistan Team if They Beat India, Win T20 World Cup

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಈ ಪಂದ್ಯದ ಕುರಿತು ಕೆಲ ದಿನಗಳ ಹಿಂದೆಯೇ ಪ್ರತಿಕ್ರಿಯೆಯನ್ನು ನೀಡಿದ್ದ ಪಾಕ್ ತಂಡದ ನಾಯಕ ಬಾಬರ್ ಅಜಮ್, ''ಯು ಎ ಇ ಕ್ರೀಡಾಂಗಣಗಳಲ್ಲಿ ಪಾಕಿಸ್ತಾನ ತಂಡದ ಆಟಗಾರರಿಗೆ ಅನೇಕ ಪಂದ್ಯಗಳನ್ನು ಆಡಿ ಅನುಭವವಿರುವ ಕಾರಣ ಈ ಬಾರಿ ತಮ್ಮ ತಂಡ ಉತ್ತಮ ಪ್ರದರ್ಶನವನ್ನು ನೀಡಲಿದೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

"ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ನಾನು ಇತರ ಮತ್ತೊಂದು ಪಂದ್ಯದಂತೆಯೇ ನೋಡಲು ಬಯಸುತ್ತೇನೆ. ಈ ಪಂದ್ಯದ ಮೇಲೆ ಕಷ್ಟು ನಿರೀಕ್ಷೆಗಳು ಇದೆ ಎಂಬುದು ನನಗೆ ಅರಿವಿದೆ. ಅದೇ ಕಾರಣದಿಂದಾಗಿ ಈ ಪಂದ್ಯದ ಟಿಕೆಟ್‌ಗಳಿಗೆ ಸಾಕಷ್ಟು ಬೇಡಿಕೆಯಿದೆ," ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Offers galore For Babar Azam-Led Pakistan Team if They Beat India, Win T20 World Cup

ಪಂದ್ಯಕ್ಕೆ ಸಿಗುವ ಸಂಭಾವನೆ ಡಬ್ಬಲ್
ಬಾಬರ್ ಅಜಮ್ ಹಾಗೂ ತಂಡ ಭಾನುವಾರದ ಪಂದ್ಯ ಗೆದ್ದರೆ ಈಗ ಸಿಗಲಿರುವ ಪಂದ್ಯದ ಸಂಭಾವನೆಯನ್ನು ಶೇ 50ರಷ್ಟು ಹೆಚ್ಚಿಸಲಾಗುವುದು ಎಂದು ಪಿಸಿಬಿ ಆಫರ್ ನೀಡಿದೆಯಂತೆ. ಸುಮಾರು170,000 ಲಕ್ಷ ರು ಹೆಚ್ಚಿನ ಮೊತ್ತದ ಆಮಿಷ ಒಡ್ದಲಾಗಿದೆ ಎಂದು ಕ್ರಿಕೆಟ್ ಪಾಕಿಸ್ತಾನ ವೆಬ್ ತಾಣ ಹೇಳಿದೆ.

ಸದ್ಯ ಈ ಪಂದ್ಯಕ್ಕೆ ಪಾಕಿಸ್ತಾನ ಆಟಗಾರರಿಗೆ 3,38,250 ರು ಮೊತ್ತ ನಿಗದಿಯಾಗಿದೆ. ಪಂದ್ಯ ಗೆದ್ದರೆ ಕನಿಷ್ಠ 5,00, 000 ರು ಸಿಗಲಿದೆ. ಈ ಆಫರ್ ಭಾರತ ವಿರುದ್ಧದ ಪಂದ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ಟಾಪ್ ಟಿ20 ತಂಡ ಎನಿಸಿರುವ ಇಂಗ್ಲೆಂಡ್ ವಿರುದ್ಧ ಗೆದ್ದರೂ ಇದೇ ಮೌಲ್ಯದ ಮೊತ್ತ ಪಾಕ್ ಆಟಗಾರರ ಜೇಬು ಸೇರಲಿದೆ.

ಒಂದು ವೇಳೆ 2021ರ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಬಾಬರ್ ಅಜಮ್ ತಂಡ ಯಶಸ್ವಿಯಾದರೆ 300% ಸಂಭಾವನೆ ಮೊತ್ತ ಏರಿಸುವ ಭರವಸೆ ನೀಡಲಾಗಿದೆ. ಕನಿಷ್ಠ 10,00,000 ರು ಪ್ರತಿ ಆಟಗಾರರಿಗೆ ಸಂದಾಯವಾಗಲಿದೆ. ಅಂದ ಹಾಗೆ, ಈ ಬಾರಿ ಟಿ20 ವಿಶ್ವ ಕಪ್ ಎತ್ತುವ ತಂಡಕ್ಕೆ ಐಸಿಸಿ 1.6 ಮಿಲಿಯನ್ ಡಾಲರ್ ಮೊತ್ತದ ಬಹುಮಾನ ನಿಗದಿ ಮಾಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೈಖೇಲ್ ಕನ್ನಡದ ಟಿ20 ವಿಶ್ವಕಪ್ ವಿಶೇಷ ಪುಟಕ್ಕೆ ಭೇಟಿ ಕೊಡಿ

English summary
Offers galore For Babar Azam-Led Pakistan Team if They Beat India, Win T20 World Cup 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X