ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊವಾಕ್ ಜೋಕೋವಿಚ್ ಏಳನೇ ಬಾರಿ ವಿಂಬಲ್ಡನ್ ಚಾಂಪಿಯನ್

|
Google Oneindia Kannada News

ಲಂಡನ್, ಜುಲೈ 10: ಟೆನಿಸ್‌ನ ಅತಿ ಪ್ರತಿಷ್ಠಿತ ಕಪ್ ಎನಿಸಿದ ವಿಂಬಲ್ಡನ್‌ನಲ್ಲಿ ನೊವಾಕ್ ಜೊಕೋವಿಚ್ ಮತ್ತೊಮ್ಮೆ ಸಾಮ್ರಾಟರೆನಿಸಿದ್ದಾರೆ. ಭಾನುವಾರ ನಡೆದ ವಿಂಬಲ್ಡನ್ ಕಪ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ನೊವಾಕ್ ಜೋಕೋವಿಚ್ 4-6, 6-3, 6-4, 7-6 (7-3) ಸೆಟ್‌ಗಳಿಂದ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್‌ರನ್ನು ಸೋಲಿಸಿದರು.

ಸರ್ಬಿಯಾ ದೇಶದ ವಿಶ್ವ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೋಕೋವಿಚ್ ಅವರಿಗೆ ಇದು ಏಳನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ. ಒಟ್ಟಾರೆ 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಅವರು ಜಯಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ ಕ್ರೀಡಾಕೂಟ: ಪದಕದ ಬೇಟೆಗೆ ಸಜ್ಜಾದ ಭಾರತೀಯ ಅಥ್ಲಿಟ್‌ಗಳುಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ ಕ್ರೀಡಾಕೂಟ: ಪದಕದ ಬೇಟೆಗೆ ಸಜ್ಜಾದ ಭಾರತೀಯ ಅಥ್ಲಿಟ್‌ಗಳು

ಮೊದಲ ಸೆಟ್ ಸೋತರೂ ನಂತರ ಜೋಕೋವಿಚ್ ಸತತ ಮೂರು ಸೆಟ್‌ಗಳನ್ನು ಗೆದ್ದರು. ನಾಲ್ಕನೇ ಸೆಟ್ ರೋಚಕವಾಗಿತ್ತು. ನಿಕ್ ಕಿರ್ಗಿಯೋಸ್ ಪ್ರತಿಯಂದು ಪಾಯಿಂಟ್‌ಗೂ ಜೋಕೋವಿಚ್ ಬೆವರಿಳಿಯುಂತೆ ಮಾಡಿದರು.

ಜೊಕೋವಿಚ್ ಹೊಗಳಿಕೆ

ಜೊಕೋವಿಚ್ ಹೊಗಳಿಕೆ

ಪಂದ್ಯದ ಬಳಿಕ ಟಿವಿ ವಾಹಿನಿ ಜೊತೆ ಮಾತನಾಡಿದ ಅವರು, ನಿಕ್ ಕಿರ್ಗಿಯೋಸ್ ಅವರ ಹೋರಾಟವನ್ನು ಮೆಚ್ಚಿಕೊಂಡರು. "ನಿಕ್ ನೀವು ಮತ್ತೆ ಬರುತ್ತೀರಿ. ವಿಂಬಲ್ಡನ್ ಅಷ್ಟೇ ಅಲ್ಲ ಅನೇಕ ಫೈನಲ್‌ಗಳಿಗೆ ಬರುತ್ತೀರಿ. ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ನೀವೂ ಒಬ್ಬರೆಂಬುದನ್ನು ತೋರಿಸಿಕೊಟ್ಟಿದ್ದೀರಿ. ನೀವು ನಿಜಕ್ಕೂ ಅದ್ಭುತ ಪ್ರತಿಭೆ. ನಿಮ್ಮ ಬಗ್ಗೆ ಇಷ್ಟೊಂದು ಒಳ್ಳೆಯ ಸಂಗತಿಗಳನ್ನು ನಾನು ಹೇಳುತ್ತೇನೆಂದು ಯಾವತ್ತೂ ಭಾವಿಸಿರಲಿಲ್ಲ..." ಎಂದು ನೋವಾಕ್ ಜೋಕೋವಿಚ್ ಹೇಳಿದರು.

ಜೋಕೋವಿಚ್ ದೇವರೆಂದ ನಿಕ್

ಜೋಕೋವಿಚ್ ದೇವರೆಂದ ನಿಕ್

ಫೈನಲ್‌ನಲ್ಲಿ ಸೋತ ನಿಕ್ ಕಿರ್ಗಿಯೋಸ್, ತಮ್ಮ ಎದುರಾಳಿಯನ್ನು ದೇವರಿಗೆ ಹೋಲಿಸಿದರು.

"ಅವರದ್ದು ದೇವರ ಅಂಶ. ನಾನು ಚೆನ್ನಾಗಿ ಆಡಿದೆ. ನೊವಾಕ್ ಅದೆಷ್ಟು ಬಾರಿ ಗೆದ್ದಿದ್ದಾರೋ ಗೊತ್ತಿಲ್ಲ. ನಮ್ಮ ತಂಡದ ಪ್ರದರ್ಶನ ತುಂಬಾ ಚೆನ್ನಾಗಿದೆ. ನನಗೆ ಬಹಳ ಖುಷಿಯಾಗಿದೆ. ನನ್ನ ವೃತ್ತಿಯಲ್ಲಿ ಇದು ಅತ್ಯುತ್ತಮ ಫಲಿತಾಂಶ. ನಾನು ವಾಪಸ್ ಬಂದರೂ ಬರಬಹುದು, ಬರದೇ ಹೋಗಲೂಬಹುದು" ಎಂದು ಆಸ್ಟ್ರೇಲಿಯನ್ ಆಟಗಾರ ಹೇಳಿದರು.

ಇತರ ಫಲಿತಾಂಶ

ಇತರ ಫಲಿತಾಂಶ

ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಕಜಕಸ್ತಾನದ ರಯಾಬಿನಾ ಗೆದ್ದರು. ಶನಿವಾರ ನಡೆದ ಫೈನಲ್‌ನಲ್ಲಿ ಟನಿಶಿಯಾದ ಜಬೂರ್ ವಿರುದ್ಧ 3-6, 6-2, 6-2ರಿಂದ ಸೋಲಿಸಿದರು. 17ನೇ ಶ್ರೇಯಾಂಕದ ರಯಾಬಕಿನಾ ಅವರಿಗೆ ಇದು ಚೊಚ್ಚಲ ಗ್ರ್ಯಾನ್ ಸ್ಲಾಂ ಪ್ರಶಸ್ತಿಯಾಗಿದೆ.

ದಾಖಲೆಯ ಸಮೀಪ ಜೋಕೋವಿಚ್

ದಾಖಲೆಯ ಸಮೀಪ ಜೋಕೋವಿಚ್

ಸ್ವಿಟ್ಜರ್‌ಲ್ಯಾಂಡ್ ದೇಶದ ರೋಜರ್ ಫೆಡರರ್, ಸ್ಪೇನ್ ದೇಶದ ರಫೇಲ್ ನಡಾಲ್ ಮತ್ತು ಸರ್ಬಿಯಾ ದೇಶದ ನೊವಾಕ್ ಜೋಕೋವಿಚ್ ಈ ಮೂವರೂ ಕೂಡ ಸಾರ್ವಕಾಲಿಕ ಟೆನಿಸ್ ಶ್ರೇಷ್ಠರಾರು ಎಂದು ತೋರಿಸಲು ಪೈಪೋಟಿಗೆ ಬಿದ್ದಿದ್ದಾರೆ. ಒಂದೇ ತಲೆಮಾರಿನಲ್ಲಿ ಮೂವರು ಆಟಗಾರರು ಸರಿಸಮಾನವಾಗಿ ಪ್ರಾಬಲ್ಯ ತೋರಿದ್ದು ಟೆನಿಸ್ ಇತಿಹಾಸದಲ್ಲಿ ಇದೇ ಮೊದಲು.

ಏಷ್ಯಾಕಪ್: ಭಾರತ ವಿರುದ್ಧ ಪಾಕಿಸ್ತಾನ ಟಿ20 ಪಂದ್ಯ ಯಾವಾಗ?ಏಷ್ಯಾಕಪ್: ಭಾರತ ವಿರುದ್ಧ ಪಾಕಿಸ್ತಾನ ಟಿ20 ಪಂದ್ಯ ಯಾವಾಗ?

ಜೋಕೋವಿಚ್ ಅವರಿಗೆ ಇದು 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಯಾಗಿದೆ. ರಫೇಲ್ ನಡಾಲ್ 22 ಗ್ರ್ಯಾನ್ ಸ್ಲಾಂ ಗೆದ್ದಿದ್ದಾರೆ. ರೋಜರ್ ಫೆಡರರ್ 20 ಪ್ರಶಸ್ತಿ ಗೆದ್ದಿದ್ದಾರೆ. ಫೆಡರರ್ ಎಂಟು ಬಾರಿ ವಿಂಬಲ್ಡನ್ ಗೆದ್ದಿದ್ದಾರೆ. ಇದು ದಾಖಲೆಯೇ. ರಫೇಲ್ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಸೋಲಿಲ್ಲದ ಸರದಾರನಂತೆ. ಫೆಡರರ್ 40 ವರ್ಷವಾಗಿದ್ದು ಗಾಯದ ಸಮಸ್ಯೆಗಳಿಂದ ಬಾಧಿತರಾಗಿದ್ದಾರೆ. ಅವರಿಂದ ಇನ್ನಷ್ಟು ಗ್ರ್ಯಾನ್ ಸ್ಲಾಂ ಹರಿದುಬರುವುದು ಅನುಮಾನ.

ಈಗ ಅತಿಹೆಚ್ಚು ಗ್ರ್ಯಾನ್ ಸ್ಲಾಂ ಗೆಲ್ಲುವ ಪೈಪೋಟಿ ಇರುವುದು ಬಹುತೇಕ ರಫೇಲ್ ನಡಾಲ್ ಮತ್ತು ನೋವಾಕ್ ಜೋಕೋವಿಚ್ ಮಧ್ಯೆ ಮಾತ್ರ. ಇಬ್ಬರೂ 35-36 ವರ್ಷ ವಯೋಮಾನದವರೇ. ಇನ್ನಷ್ಟು ವರ್ಷ ಕಾಲ ಅವರಿಬ್ಬರಿಂದ ಗ್ರ್ಯಾನ್ ಸ್ಲಾಂ ಬೇಟೆಗೆ ಪೈಪೋಟಿ ನಡೆಯುವುದು ನಿರೀಕ್ಷಿತವೇ.

(ಒನ್ಇಂಡಿಯಾ ಸುದ್ದಿ)

English summary
Novak Djokovic defeated Australia's Nick Kyrgios to win Wimbeldon for 7th time. This is 21st Grand slam title overall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X