ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆನಿಸ್ ತಾರೆ ಜೋಕೋವಿಕ್‌ಗೆ 'ನೋ ಎಂಟ್ರಿ' ಬೋರ್ಡ್ ತೋರಿಸಿದ ಆಸ್ಟ್ರೇಲಿಯಾ

|
Google Oneindia Kannada News

ಮೆಲ್ಬೋರ್ನ್‌, ಜನವರಿ 06: ಜನಪ್ರಿಯ ಟೆನಿಸ್ ತಾರೆ ಸೆರ್ಬಿಯಾದ ನೋವಾಕ್ ಜೋಕೋವಿಕ್ ಅವರು ಆಸ್ಟ್ರೇಲಿಯಾದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗಿಲ್ಲ. ವಿಮಾನ ನಿಲ್ದಾಣದಲ್ಲೇ 'ನೋ ಎಂಟ್ರಿ' ಬೋರ್ಡ್ ತೋರಿಸಿದ ಘಟನೆ ನಡೆದಿದೆ. ಮೆಲ್ಬೋರ್ನ್‌ನ ವಿಮಾನ ನಿಲ್ದಾಣದಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ಸಿಲುಕಿದ ನಂತರ ಜೋಕೋವಿಕ್‌ಗೆ ಗುರುವಾರದಂದು ಆಸ್ಟ್ರೇಲಿಯಾಕ್ಕೆ ಪ್ರವೇಶ ನಿರಾಕರಿಸಲಾಗಿದೆ.

ಆಸ್ಟ್ರೇಲಿಯಾದ ಆರೋಗ್ಯ ಸಚಿವ ಗ್ರೆಗ್ ಹಂಟ್ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ,"ಇದು ಕಠಿಣ ಕ್ರಮ ಎನಿಸಬಹುದು, ಆದರೆ ಇದು ನ್ಯಾಯೋಚಿತವಾಗಿದೆ." ಎಂದಿದ್ದಾರೆ.

ಈ ನಿರ್ಧಾರದ ವಿರುದ್ಧ ಟೆನಿಸ್ ಆಟಗಾರ ಫೆಡರಲ್ ತಡೆಯಾಜ್ಞೆ(injunction)ಯನ್ನು ಕೋರಲಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಹೇಳಿದೆ.

ಇದಕ್ಕೂ ಮೊದಲು, ಜೊಕೊವಿಕ್ ಅವರ ತಂದೆ, ಸ್ರನ್(Srdjan) ಜೋಕೋವಿಕ್‌, B92 ಇಂಟರ್ನೆಟ್ ಪೋರ್ಟಲ್‌ ಜೊತೆ ಮಾತನಾಡಿ: "ನೊವಾಕ್ ಪ್ರಸ್ತುತ ತಮ್ಮ ಹೋಟೆಲ್ ಕೋಣೆಯಲ್ಲಿ ಪ್ರತ್ಯೇಕವಾಗಿದ್ದಾರೆ. ಯಾರೂ ಪ್ರವೇಶಿಸಲು ಸಾಧ್ಯವಿಲ್ಲ. ಕೋಣೆಯ ಮುಂದೆ ಇಬ್ಬರು ಪೊಲೀಸರು ಗಸ್ತು ತಿರುಗುತ್ತಿದ್ದಾರೆ." ಎಂದಿದ್ದಾರೆ.

Novak Djokovic denied entry to Australia, seeks injunction

ಜೋಕೋವಿಕ್‌ಗೆ 'ನೋ ಎಂಟ್ರಿ' ಏಕೆ?

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್ ಜನವರಿ 17 ರಿಂದ ಜನವರಿ 30 ರವರೆಗೆ ನಡೆಯಲು ನಿರ್ಧರಿಸಲಾಗಿದೆ. ಸಂಪೂರ್ಣವಾಗಿ ಲಸಿಕೆ ಪಡೆದ ಆಟಗಾರರು ಅಥವಾ ಅಧಿಕೃತ ವೈದ್ಯಕೀಯ ವಿನಾಯಿತಿ ಹೊಂದಿರುವವರಿಗೆ ಮಾತ್ರ ಈ ಪಂದ್ಯಾವಳಿಯಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಸಂಘಟಕರು ಷರತ್ತು ವಿಧಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಟ್ಟುನಿಟ್ಟಾದ ಕೋವಿಡ್-ಸಂಬಂಧಿತ ಪ್ರವೇಶ ನಿಯಮಗಳನ್ನು ಜಾರಿಗೊಳಿಸಲಾಗಿದೆ. ದೇಶಕ್ಕೆ ಭೇಟಿ ನೀಡಲು ಬಯಸುವವರು ವೈರಸ್ ವಿರುದ್ಧ ಮಾನ್ಯತೆ ಪಡೆದ ಲಸಿಕೆ(ಫುಲ್ ಡೋಸ್)ಯನ್ನು ಹೊಂದಿರಬೇಕು ಎಂದು ಷರತ್ತು ವಿಧಿಸಿದೆ.

ಟೆನಿಸ್ ಆಸ್ಟ್ರೇಲಿಯಾದ ಮುಖ್ಯಸ್ಥ ಕ್ರೇಗ್ ಟೈಲೆ ಅವರ ಪ್ರಕಾರ, ಅಸಾಧಾರಣ ಸಂದರ್ಭಗಳಲ್ಲಿ ಕೆಲವು ವ್ಯಕ್ತಿಗಳು ದೇಶವನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ, ಉದಾಹರಣೆಗೆ ಕಳೆದ ಆರು ತಿಂಗಳಲ್ಲಿ ವೈರಸ್‌ನಿಂದ ಚೇತರಿಸಿಕೊಂಡವರು ಅಥವಾ ತೀವ್ರವಾದ ವೈದ್ಯಕೀಯ ಸ್ಥಿತಿಯನ್ನು ಹೊಂದಿದ್ದು, ಲಸಿಕೆ ಪಡೆಯಲು ಸಾಧ್ಯವಾಗದೆ ಇರುವವರು ಮುಂತಾದವರಿಗೆ ವಿನಾಯತಿ ನೀಡಲಾಗಿದೆ.

ಜೋಕೋವಿಕ್ ಅವರು ವೈದ್ಯಕೀಯ ಕಾರಣಗಳಿಗಾಗಿ ಲಸಿಕೆಯನ್ನು ಪಡೆದುಕೊಂಡಿಲ್ಲ ಎಂಬುದಕ್ಕೆ "ಸ್ವೀಕಾರಾರ್ಹ ಪುರಾವೆಗಳನ್ನು ಒದಗಿಸಬೇಕಾಗಿದೆ" ಎಂದು ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

"ಆ ಪುರಾವೆಗಳು ಸಾಕಷ್ಟಿಲ್ಲದಿದ್ದರೆ, ಆತ ಬೇರೆಯವರಿಗಿಂತ ಭಿನ್ನವಾಗಿ ಪರಿಗಣಿಸಲ್ಪಡುವುದಿಲ್ಲ ಮತ್ತು ಆತ ಮುಂದಿನ ವಿಮಾನದ ಮೂಲಕ ತನ್ನ ಮನೆಗೆ ಹೋಗುತ್ತಾನೆ" ಎಂದು ಮಾರಿಸನ್ ಹೇಳಿದರು.

26 ಜನರು ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಕೆಲವರು ಯಶಸ್ವಿಯಾಗಿದ್ದಾರೆ ಎಂದು ಟೈಲಿ ಹೇಳಿದರು.

ಲಸಿಕೆ ಸಂದೇಹ

ಬಹಿರಂಗ ಲಸಿಕೆ ಸಂದೇಹವುಳ್ಳ ಜೋಕೋವಿಕ್ ಅವರು ಈ ಬಗ್ಗೆ ಇತ್ತೀಚೆಗೆ ಮಾತನಾಡಿ, ಲಸಿಕೆ ಪಡೆಯದಿರುವ ಪ್ರತ್ಯೇಕ ವರ್ಗಕ್ಕೆ ತಾನು ಸೇರಿದ್ದಾರೆ ಎಂದು ಹೇಳಿಕೊಂಡಿದ್ದರು, "ವಿನಾಯಿತಿ ಅನುಮತಿ" ಹೊಂದಲಿದ್ದು, ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು.

ಈ ಮೊದಲು ಜೊಕೊವಿಕ್‌ಗೆ ವಿನಾಯಿತಿ ನೀಡಿ ಮೆಲ್ಬೋರ್ನ್‌ನಲ್ಲಿ ಪ್ರವೇಶಕ್ಕೆ ಅನುಮತಿ ನೀಡಲು ಮುಂದಾಗಿದ್ದ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಾಂಕ್ರಾಮಿಕ ರೋಗದ ಕಳೆದ ಎರಡು ವರ್ಷಗಳಲ್ಲಿ ವಿಶ್ವದಲ್ಲಿ ಅನೇಕ ಕಡೆ ಲಾಕ್‌ಡೌನ್ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಮತ್ತು ನಿರ್ದಿಷ್ಟವಾಗಿ ಮೆಲ್ಬೋರ್ನ್‌ನಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ.

ಪ್ರವೇಶ ನಿರಾಕರಣೆಯೊಂದಿಗೆ, ಜೊಕೊವಿಕ್ ಅವರ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

20ಕ್ಕೂ ಅಧಿಕ ಪ್ರಮುಖ ಟೂರ್ನಮೆಂಟ್ ಗೆದ್ದಿರುವ ಜೋಕೋವಿಕ್ ಪರ ಸೆರ್ಬಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅವರು ಸ್ವಲ್ಪ ತಡವಾಗಿಯಾದರೂ ದನಿಯೆತ್ತಿದ್ದರು. "ನೊವಾಕ್ ಜೋಕೋವಿಕ್ ಅವರ ಕಿರುಕುಳವನ್ನು ತಕ್ಷಣವೇ ಅಂತ್ಯಗೊಳಿಸಲು ಸೆರ್ಬಿಯಾ ಎಲ್ಲ ರೀತಿ ಯತ್ನಿಸುತ್ತಿದೆ" ಎಂದು ವುಸಿಕ್ ಹೇಳಿದ್ದರು.

Rules are rules ಎಂದ ಮಾರಿಸನ್

ಗುರುವಾರ ನಿರ್ಧಾರವನ್ನು ಘೋಷಿಸಿದ ನಂತರ, ಪ್ರಧಾನ ಮಂತ್ರಿ ಮಾರಿಸನ್ ಟ್ವೀಟ್ ಮಾಡಿ "rules are rules, ವಿಶೇಷವಾಗಿ ನಮ್ಮ ಗಡಿ ಭದ್ರತೆ ವಿಷಯ ಬಂದಾಗ ರಾಜಿ ಮಾತಿಲ್ಲ"

Recommended Video

Rishab Pantಗೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳಾರತಿ | Oneindia Kannada

"ನೊವಾಕ್ ಜೋಕೋವಿಕ್‌ಗೆ ಯಾವುದೇ ವಿಶೇಷ ನಿಯಮಗಳು ಇರಬಾರದು. ಯಾವುದೂ ಇಲ್ಲ" ಎಂದು ಮಾರಿಸನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.(Reuters, AFP, dpa)

English summary
Australia's health minister said the Serbian tennis star's visa had been "canceled" over failure to meet COVID entry requirements. Unvaccinated Djokovic sought an exemption to play in the Australian Open.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X