ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಬರ್ಗ್ ಡಯಾಗ್ನಾಸ್ಟಿಕ್ಸ್‌ಗೆ ಧೋನಿ ಬ್ರ್ಯಾಂಡ್ ಅಂಬಾಸಿಡರ್

|
Google Oneindia Kannada News

ಬೆಂಗಳೂರು, ಆಗಸ್ಟ್ 17: ಭಾರತದ ನಾಲ್ಕನೇ ದೊಡ್ಡ ಡಯಾಗ್ನಾಸ್ಟಿಕ್ ಲ್ಯಾಬ್ ಚೇನ್ ಆಗಿರುವ ನ್ಯೂಬರ್ಗ್ ಡಯಾಗ್ನಾಸ್ಟಿಕ್ಸ್ ಇಂದು ಖ್ಯಾತ ಕ್ರಿಕೆಟ್ ತಾರೆ ಎಂಎಸ್ ಧೋನಿ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಪ್ರಕಾರ ಧೋನಿ ಅವರು ನ್ಯೂಬರ್ಗ್‍ನ ಆರೋಗ್ಯ ಮತ್ತು ಯೋಗಕ್ಷೇಮ ಅಭಿಯಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಈ ಅಭಿಯಾನದ ಪ್ರಮುಖ ಉದ್ದೇಶ ಪ್ರತಿಯೊಬ್ಬ ನಾಗರಿಕರೂ ಅತ್ಯುತ್ತಮ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗುವ ಆರೋಗ್ಯ ರಕ್ಷಣೆ ಸೇವೆಯನ್ನು ಪಡೆಯುವುದರ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ನ್ಯೂಬರ್ಗ್ ಡಯಾಗ್ನಾಸ್ಟಿಕ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಜಿಎಸ್‍ಕೆ ವೇಲು ಅವರು ಮಾತನಾಡಿ, ''ಎಂಎಸ್ ಧೋನಿ ನಮ್ಮ ಬೆಳವಣಿಗೆಯ ಮನಸ್ಥಿತಿಗೆ ಪೂರಕವಾಗಿದೆ. ಇದು ನಮ್ಮ ಬೆಳವಣಿಗೆಯ ವರ್ಷಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ ಮತ್ತು ಫಿಟ್ ಆಗಿದೆ. ನಾವು ಧೋನಿ ಅವರೊಂದಿಗಿನ ಸಹಭಾಗಿತ್ವದಲ್ಲಿ ಮುನ್ನಡೆಯಲು ಉತ್ಸುಕರಾಗಿದ್ದೇವೆ ಮತ್ತು ಅವರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ಈ ಸಹಭಾಗಿತ್ವದ ಮೂಲಕ ಧೋನಿ ಅವರು ನಮ್ಮ ಬ್ರ್ಯಾಂಡ್‍ನ ಜಾಗತಿಕ ರಾಯಭಾರಿಯಾಗಿರಲಿದ್ದಾರೆ. ನಾವು ದೇಶಾದ್ಯಂತ ನಮ್ಮ ಹೆಚ್ಚಿನ ಸಂಖ್ಯೆಯ ಡಯಾಗ್ನಾಸ್ಟಿಕ್ ಸೇವೆಗಳನ್ನು ತೆಗೆದುಕೊಳ್ಳಲು ಉತ್ಸುಕರಾಗಿದ್ದೇವೆ ಮತ್ತು ಪ್ರತಿ ನಾಗರಿಕನನ್ನು ಉತ್ತಮ ಹಾಗೂ ಆರೋಗ್ಯ ರಕ್ಷಣೆಯೊಂದಿಗೆ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ಈ ಅಭಿಯಾನದ ಮೂಲಕ ತಿಳಿಸುತ್ತೇವೆ. ಇದಲ್ಲದೇ, ಉತ್ತಮ ಆರೋಗ್ಯ ಕಾಪಾಡುವುದು ಮತ್ತು ಫಿಟ್ನೆಸ್ ಅನ್ನು ಪಡೆದುಕೊಳ್ಳುವ ವಿಚಾರದಲ್ಲಿ ಧೋನಿ ಅವರ ಬದ್ಧತೆಯನ್ನು ಮೆಚ್ಚುವಂತಹದ್ದು. ಇದೇ ಗುರಿಯನ್ನು ಇಟ್ಟುಕೊಂಡಿರುವ ನಮ್ಮ ಧ್ಯೇಯದೊಂದಿಗೆ ಧೋನಿಯವರ ಬದ್ಧತೆಯು ಅನುರಣಿಸುತ್ತದೆ ಹಾಗೂ ಜನರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವಂತೆ ಮಾಡುತ್ತದೆ. ಧೋನಿಯವರ ಬೆಂಬಲವು ನಮ್ಮ ಬದ್ಧತೆ ಮತ್ತು ಸೇವೆಗಳ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ಮಾಡಲು ನಮಗೆ ಸಹಾಯ ಮಾಡುತ್ತದೆ'' ಎಂದು ಹೇಳಿದರು.

Neuberg Diagnostics partners with MS Dhoni

ಭಾರತ ಕ್ರಿಕೆಟ್ ತಂಡದ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ನಾಯಕ ಎಂಎಸ್ ಧೋನಿ ಅವರು ಮಾತನಾಡಿ, ''ಭಾರತದಾದ್ಯಂತ ಕೈಗೆಟುಕುವ ದರದಲ್ಲಿ ಆರೋಗ್ಯ ರಕ್ಷಣೆ ಸೇವೆಗಳನ್ನು ನೀಡಲು ನ್ಯೂಬರ್ಗ್ ತಂಡವು ಬದ್ಧವಾಗಿದೆ. ಅವರ ಈ ಬದ್ಧತೆ ನನಗೆ ಇಷ್ಟವಾಯಿತು ಮತ್ತು ಇಂತಹ ತಂಡದೊಂದಿಗೆ ಮತ್ತು ಕೈಗೆಟುಕು ದರದಲ್ಲಿ ಉತ್ತಮ ಆರೋಗ್ಯ ರಕ್ಷಣೆ ಸೇವೆಗಳನ್ನು ಒದಗಿಸುತ್ತಿರುವ ಅವರ ಹಲವಾರು ಕಾರ್ಯಕ್ರಮಗಳಲ್ಲಿ ಸಹಭಾಗಿತ್ವ ಹೊಂದಲು ನನಗೆ ಹೆಮ್ಮೆ ಎನಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಇರುವ ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಅಭಿಯಾನವನ್ನು ಕೈಗೊಂಡಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ಅತ್ಯಂತ ಮುಖ್ಯವಾಗಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ'' ಎಂದು ತಿಳಿಸಿದರು.

ಇತ್ತೀಚಿನ ವರ್ಷಗಳಿಂದ ಕಂಪನಿ ಪ್ರಗತಿಯತ್ತ ಹೆಜ್ಜೆ ಹಾಕಿದೆ. ಆರಂಭವಾದ ನಾಲ್ಕು ವರ್ಷಗಳಲ್ಲಿ ಮೂರು ಖಂಡಗಳಲ್ಲಿ ಅಸ್ತಿತ್ವವನ್ನು ಸ್ಥಾಪಿಸಿರುವ 2021 ನೇ ಹಣಕಾಸು ಸಾಲಿನಲ್ಲಿ 800 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ. ಈ ಪ್ರಮಾಣವನ್ನು 2022 ನೇ ಹಣಕಾಸು ಸಾಲಿನಲ್ಲಿ 1000 ಕೋಟಿ ರೂಪಾಯಿಗೆ ಹೆಚ್ಚಳ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಅಲ್ಲದೇ, 200 ಹೊಸ ಲ್ಯಾಬ್ ಮತ್ತು 3000 ಕ್ಕೂ ಹೆಚ್ಚು ಕಲೆಕ್ಷನ್ ಸೆಂಟರ್‍ಗಳನ್ನು ವಿಶ್ವದಾದ್ಯಂತ ಆರಂಭ ಮಾಡುವ ಯೋಜನೆಯನ್ನು ರೂಪಿಸಿದೆ.

Neuberg Diagnostics partners with MS Dhoni

ಎಂಎಸ್ ಧೋನಿ ಅವರೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಂಪನಿಯು ಯುಎಇ, ದಕ್ಷಿಣ ಆಫ್ರಿಕಾ ಮತ್ತು ಯುಎಸ್‍ಎಗಳಲ್ಲಿ ತನ್ನ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಪಡಿಸಿಕೊಳ್ಳಲು ಸಾಧ್ಯವಾಗಲಿದೆ.

English summary
Neuberg Diagnostics, India’s fourth-largest diagnostic lab chain, today announced that it has partnered with ace cricketer, MS Dhoni, for creating awareness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X