ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 30 ಜಿಲ್ಲೆಗಳ 75 ಗ್ರಾಮದಲ್ಲಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ

|
Google Oneindia Kannada News

ಬೆಂಗಳೂರು, ಆ.12: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ದೇಶಾದ್ಯಂತ ಆಗಸ್ಟ್ 13ರಂದು ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ಅನ್ನು ಆಯೋಜಿಸಿದ್ದು, ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಹಲವು ಕಡೆಗಳಲ್ಲೂ ಸ್ವಾತಂತ್ರ್ಯದ ಓಟ ಏರ್ಪಡಿಸಲಾಗಿದೆ.

ಮೈಸೂರಿನ ನೆಹರು ಯುವ ಕೇಂದ್ರ ಸಂಘಟನೆ, ಭಾರತ ಸರ್ಕಾರದ ಕ್ಷೇತ್ರ್ರ ಜನಸಂಪರ್ಕ ಕಾರ್ಯಾಲಯ ಮೈಸೂರಿನ ಜೆ.ಪಿ ನಗರದ ಎಜೆ'ಸ್ ಫೌಂಡೇಷನ್, ಮೈಸೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್ ಸಹಯೋಗದಲ್ಲಿ, ನಾಳೆ ಬೆಳಗ್ಗೆ 7.00 ಗಂಟೆಗೆ ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ರಾಜ್ಯದ 75 ಕಡೆ ಸ್ವಾತಂತ್ರ್ಯದ ಓಟ: ಇದಲ್ಲದೆ, ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೋವಿಡ್ ಶಿಷ್ಟಾಚಾರ ಪಾಲನೆಯೊಂದಿಗೆ ನಾಳೆಯಿಂದ ಅಕ್ಟೋಬರ್ 2ರವರೆಗೆ ರಾಜ್ಯದ 30 ಜಿಲ್ಲೆಗಳ 75 ತಾಣಗಳಲ್ಲಿ ಪ್ರತಿ ಗ್ರಾಮದ 75 ಯುವಜನರು 7 ಕಿಮೀ ಸ್ವಾತಂತ್ರ್ಯದ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೊದಲಿಗೆ ಕಾರವಾರ, ಯಾದಗಿರಿ, ಬಾಗಲಕೋಟೆಯಲ್ಲಿ

ಮೊದಲಿಗೆ ಕಾರವಾರ, ಯಾದಗಿರಿ, ಬಾಗಲಕೋಟೆಯಲ್ಲಿ

ನಾಳೆ (ಆಗಸ್ಟ್13) ಕಾರವಾರ, ಯಾದಗಿರಿ, ಬಾಗಲಕೋಟೆಯಲ್ಲಿ, ಆಗಸ್ಟ್ 14ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ, ಆಗಸ್ಟ್ 21ರಂದು ಬೀದರ್, ವಿಜಯಪೂರ, ಬೆಳಗಾವಿ ಮತ್ತು ಬಳ್ಳಾರಿಯಲ್ಲಿ, ಆಗಸ್ಟ್ 28ರಂದು ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಓಟವನ್ನು ನೆಹರೂ ಯುವಕೇಂದ್ರ ಸಂಘಟನೆ ಆಯೋಜಿಸಿದೆ.

ಸೆಪ್ಟೆಂಬರ್ 4ರಂದು ಚಿತ್ರದುರ್ಗ, ಧಾರವಾಡ, ದಾವಣಗೆರೆಯಲ್ಲಿ, ಸೆ.11ರಂದು ಶಿವಮೊಗ್ಗ, ಕಲ್ಬುರ್ಗಿ, ತುಮಕೂರು, ಉಡುಪಿ, ಹಾಸನದಲ್ಲಿ, ಸೆ.18ರಂದು ಗದಗ, ಹಾವೇರಿ, ಸೆ.25 ಕೋಲಾರ, ಕೊಡಗು, ಕೊಪ್ಪಳ, ಮಂಡ್ಯದಲ್ಲಿ ಹಾಗೂ ಅ.2ರಂದು ಮಂಗಳೂರು, ರಾಯಚೂರು ಮತ್ತು ಮೈಸೂರು ಜಿಲ್ಲೆಯಲ್ಲಿ ಈ ಓಟ ಆಯೋಜಿಸಲಾಗಿದೆ.

ರಾಷ್ಟ್ರವ್ಯಾಪಿ ಚಾಲನೆ

ರಾಷ್ಟ್ರವ್ಯಾಪಿ ಚಾಲನೆ

ರಾಷ್ಟ್ರವ್ಯಾಪಿ ಚಾಲನೆ: ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಆಗಸ್ಟ್ 13ರಂದು ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0ಕ್ಕೆ ಚಾಲನೆ ನೀಡಲಿದ್ದು, ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಖಾತೆ ರಾಜ್ಯ ಸಚಿವ, ಶ್ರೀ ನಿಸಿತ್ ಪ್ರಮಾಣಿಕ್ ಪಾಲ್ಗೊಳ್ಳುತ್ತಾರೆ ಎಂದು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಕಾರ್ಯದರ್ಶಿ, ಶ್ರೀಮತಿ ಉಷಾ ಶರ್ಮಾ ತಿಳಿಸಿದ್ದಾರೆ.

ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟದ ಉದ್ಘಾಟನಾ ದಿನದಂದು (ಆಗಸ್ಟ್ 13) ದೇಶಾದ್ಯಂತ ಐತಿಹಾಸಿಕ ತಾಣಗಳಲ್ಲಿ 75 ಭೌತಿಕ ಕಾರ್ಯಕ್ರಮವನ್ನೂ ನಡೆಸಲಾಗುವುದು. ತದನಂತರ, ಪ್ರತಿ ವಾರ ಕಾರ್ಯಕ್ರಮಗಳು 75 ಜಿಲ್ಲೆಗಳಲ್ಲಿ ಮತ್ತು ಪ್ರತಿ ಜಿಲ್ಲೆಯ 75 ಹಳ್ಳಿಗಳಲ್ಲಿ 2021 ರ ಅಕ್ಟೋಬರ್ 2 ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಒಟ್ಟು 744 ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಓಟ

ಒಟ್ಟು 744 ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಓಟ

ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ ಒಟ್ಟು 744 ಜಿಲ್ಲೆಗಳು, ಪ್ರತಿ ಜಿಲ್ಲೆಯ 75 ಗ್ರಾಮಗಳು ಮತ್ತು ದೇಶಾದ್ಯಂತ 30,000 ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾಗುವುದು. ಈ ಉಪಕ್ರಮದ ಮೂಲಕ, 7.50 ಕೋಟಿಗೂ ಹೆಚ್ಚು ಯುವಕರು ಮತ್ತು ನಾಗರಿಕರನ್ನು ತಲುಪಿ ಈ ಓಟದಲ್ಲಿ ಭಾಗವಹಿಸುವಂತೆ ಮಾಡಲಾಗುವುದು ಎಂದು ವಿವರಿಸಿದರು.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ತಮ್ಮ ಸಂದೇಶದಲ್ಲಿ, "ನಾವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವಾಗ, ನಾವು ಸದೃಢ ಮತ್ತು ಆರೋಗ್ಯಕರ ಭಾರತಕ್ಕಾಗಿ ಸಂಕಲ್ಪ ಮಾಡಬೇಕು ಏಕೆಂದರೆ ಸದೃಢ ಮತ್ತು ಆರೋಗ್ಯಕರ ಭಾರತದಿಂದ ಮಾತ್ರವೇ ಬಲಿಷ್ಠ ಭಾರತ ಮಾಡಲು ಸಾಧ್ಯ. ಆದ್ದರಿಂದ, ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ರಲ್ಲಿ ಭಾಗವಹಿಸಿ ಅದನ್ನು ಜನಾಂದೋಲನವನ್ನಾಗಿ ಮಾಡಿ ಎಂದು ತಾವು ಪ್ರತಿಯೊಬ್ಬರನ್ನೂ ಆಗ್ರಹಿಸುವುದಾಗಿ" ತಿಳಿಸಿದ್ದಾರೆ.

ತಮ್ಮ ಓಟವನ್ನು ನೋಂದಾಯಿಸಬಹುದು

ತಮ್ಮ ಓಟವನ್ನು ನೋಂದಾಯಿಸಬಹುದು

ಜನರು ಫಿಟ್ ಇಂಡಿಯಾ ಪೋರ್ಟಲ್ https://fitindia.gov.in ನಲ್ಲಿ ತಮ್ಮ ಓಟವನ್ನು ನೋಂದಾಯಿಸಬಹುದು ಮತ್ತು ಅಪ್ ಲೋಡ್ ಮಾಡಬಹುದು ಮತ್ತು #Run4India ಮತ್ತು #AzadikaAmritMahotsav ತಮ್ಮ ಸಾಮಾಜಿಕ ಮಾಧ್ಯಮ ಚಾನೆಲ್ ಗಳಲ್ಲಿ ಸ್ವಾತಂತ್ರ್ಯ ಓಟವನ್ನು ಉತ್ತೇಜಿಸಬಹುದು.

ಫಿಟ್ ಇಂಡಿಯಾ ಅಭಿಯಾನದ ಮೊದಲ ಆವೃತ್ತಿಯನ್ನು ಆಗಸ್ಟ್ 15ರಿಂದ ಅಕ್ಟೋಬರ್ 2, 2020 ರವರೆಗೆ ಆಯೋಜಿಸಲಾಗಿತ್ತು. ಕೇಂದ್ರ ಸಶಸ್ತ್ರ ಪಡೆಗಳು, ಎನ್.ಜಿಒಗಳು, ಖಾಸಗಿ ಸಂಸ್ಥೆಗಳು, ಶಾಲೆಗಳು, ವ್ಯಕ್ತಿಗಳು, ಯುವ ಕ್ಲಬ್ ಗಳು ಸೇರಿದಂತೆ ಕೇಂದ್ರ/ರಾಜ್ಯ ಇಲಾಖೆಗಳು ಮತ್ತು ಸಂಘಟನೆಗಳ 5 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ಸುಮಾರು 18 ಕೋಟಿ ಕಿ.ಮೀ ದೂರವನ್ನು ಕ್ರಮಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
A nationwide programme 'Fit India Freedom Run 2.0' will be held tomorrow as part of the Independence Day celebrations- Azadi ka Amrit Mahotsav - India @75.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X