ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 7 ರಿಂದ ಕೆಆರ್‌ಎಸ್‌ ಹಿನ್ನೀರಿನಲ್ಲಿ ರಾಷ್ಟ್ರ ಮಟ್ಟದ ಸೈಲಿಂಗ್ ಚಾಂಪಿಯನ್‌ಶಿಪ್‌

|
Google Oneindia Kannada News

ಮಂಡ್ಯ, ಆಗಸ್ಟ್ 3: ಆಗಸ್ಟ್ 7 ರಿಂದ ಆಗಸ್ಟ್ 13 ರವರೆಗೆ ರಾಷ್ಟ್ರ ಮಟ್ಟದ ಮಲ್ಟಿ ಕ್ಲಾಸ್ ಯೂತ್ ಸೈಲಿಂಗ್ ಮತ್ತು ಕೈಟ್ ಬೋರ್ಡ್ ಚಾಂಪಿಯನ್‌ಶಿಪ್‌ ಆಯೋಜಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಕೆಆರ್‌ಎಸ್‌ ಹಿನ್ನೀರಿನಲ್ಲಿ ಆಗಸ್ಟ್ 07 ರಿಂದ 13 ರವರೆಗೆ ಸೈಲಿಂಗ್ ಚಾಂಪಿಯನ್‌ಶಿಪ್ ಆಯೋಜಿಸಲಾಗುತ್ತಿದೆ. ಮಂಡ್ಯ ಜಿಲ್ಲಾಡಳಿತದ ಸಹಕಾರದೊಂದಿಗೆ, ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ (MEG) ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ (GETHNAA) ಸಹಭಾಗಿತ್ವದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಈ ಸ್ಪರ್ಧೆ ನಡೆಯಲಿದೆ. ದೇಶದ ಮೂಲೆ ಮೂಲೆಗಳಿಂದ 200 ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.

ಕಾಮನ್‌ವೆಲ್ತ್‌ 2022: ಜುಡೋದಲ್ಲಿ ಸುಶೀಲಾ ದೇವಿಗೆ ಬೆಳ್ಳಿ, ವಿಜಯ್‌ಗೆ ಕಂಚಿನ ಪದಕಕಾಮನ್‌ವೆಲ್ತ್‌ 2022: ಜುಡೋದಲ್ಲಿ ಸುಶೀಲಾ ದೇವಿಗೆ ಬೆಳ್ಳಿ, ವಿಜಯ್‌ಗೆ ಕಂಚಿನ ಪದಕ

ತಮ್ಮ ಪ್ರತಿಭೆಯನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರ್ಪಡಿಸಲು ಯುವ ಸೈಲರ್ಸ್‌ಗಳಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ ಎಂದರು. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಕ್ಲೈಂಬಿಂಗ್, ಕಯಾಕಿಂಗ್, ಕೆನೋಯಿಂಗ್ ಮತ್ತು ಸೈಲಿಂಗ್ ಸೇರಿದಂತೆ ಹಲವು ಸಾಹಸಮಯ ಕ್ರೀಡೆಗಳನ್ನು ಆಯೋಜನೆ ಮಾಡಿದೆ ಮಾಡಿದೆ ಎಂದರು.

 ಸ್ಪರ್ಧೆಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ

ಸ್ಪರ್ಧೆಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ

ಜನರಲ್ ತಿಮ್ಮಯ್ಯ ಅಕಾಡೆಮಿ ಮೂಲಕ ಇದುವರೆಗೂ ಸಾವಿರಾರು ಗ್ರಾಮೀಣ ಯುವ ಜನತೆಗೆ ಸಾಹಸ ಕ್ರೀಡೆಗಳ ಪರಿಚಯ ಹಾಗೂ ತರಬೇತಿ ನೀಡಲಾಗಿದೆ. ಕೆಆರ್‌ಎಸ್‌ ಹಿನ್ನೀರಿನಲ್ಲಿ ಸೈಲಿಂಗ್ ಚಾಂಪಿಯನ್‌ಶಿಪ್ ಆಯೋಜಿಸಿರುವುದರಿಂದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಸಚಿವ ಡಾ. ನಾರಾಯಣ ಗೌಡ ಹೇಳಿದರು.

ದೇಶದ ವಿವಿಧ ಮೂಲದಿಂದ ಕ್ರೀಡಾಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಸರ್ಕಾರದಿಂದ ಸಂಪೂರ್ಣ ಸಹಕಾರ ಇದೆ ಎಂದರು.

ಕಾರ್ಯಕ್ರಮ ರಾಷ್ಟ್ರಮಟ್ಟದಲ್ಲಿ ಗೌರವವನ್ನು ತರುತ್ತದೆ. ಇದರ ಜೊತೆಗೆ ಭಾಗವಹಿಸಿದಂತಹ ಕ್ರೀಡಾಪಟುಗಳಿಗೆ ಉದ್ಯೋಗ ಸಿಗುವ ಅವಕಾಶವಿದೆ. ಸೈಲಿಂಗ್ ಚಾಂಪಿಯನ್‌ಶಿಪ್‌ ಕಾರ್ಯಕ್ರಮ ಯಶಸ್ವಿಯಾಗಲಿ ಹಾರೈಸಿದರು.

ಕಾಮನ್ ವೆಲ್ತ್ ಗೇಮ್ಸ್ : ಕಂಚು ಗೆದ್ದಉಡುಪಿಯ ಗುರುರಾಜ ಮನೆಯಲ್ಲಿ ಸಂಭ್ರಮಕಾಮನ್ ವೆಲ್ತ್ ಗೇಮ್ಸ್ : ಕಂಚು ಗೆದ್ದಉಡುಪಿಯ ಗುರುರಾಜ ಮನೆಯಲ್ಲಿ ಸಂಭ್ರಮ

 ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಪ್ರೋತ್ಸಾಹ

ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಪ್ರೋತ್ಸಾಹ

ಇದೆ ವೇಳೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಕಾರ್ಯಕ್ರಮ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನದಲ್ಲಿ ಆರ್ಮಿ ಟ್ರೈನಿಂಗ್ ಸೆಂಟರ್ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಇದೊಂದು ಉತ್ತಮವಾದ ವೇದಿಕೆಯಾಗಿದೆ ಎಂದರು.

ಕೆಆರ್‌ಎಸ್‌ ಹಿನ್ನೀರಿನಲ್ಲಿ ರಾಷ್ಟ್ರಮಟ್ಟದ ಸೈಲಿಂಗ್ ಚಾಂಪಿಯನ್‌ಶಿಪ್ ಆಯೋಜನೆ ಮಾಡಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.

 ಸೈಲಿಂಗ್ ಕ್ರೀಡೆಯ ಬಗ್ಗೆ ಮಾಹಿತಿ

ಸೈಲಿಂಗ್ ಕ್ರೀಡೆಯ ಬಗ್ಗೆ ಮಾಹಿತಿ

ಸೈಲಿಂಗ್‌ ಒಂದು ವಿಶಿಷ್ಟ ಕ್ರೀಡೆ, ಗಾಳಿಯ ಶಕ್ತಿಯನ್ನು ಬಳಸಿಕೊಂಡು ದೋಣಿಯನ್ನು ಚಾಲನೆ ಮಾಡುವ ಕ್ರೀಡೆ. ನೆದರ್ ಲ್ಯಾಂಡ್ಸ್‌ನ ಹಾಲೆಂಡ್‌ನಲ್ಲಿ ಈ ಕ್ರೀಡೆ ಮೊದಲು ಆರಂಭವಾಯಿತು. 16ನೇ ಶತಮಾಣದ ಮಧ್ಯಭಾಗದಲ್ಲಿ 2ನೇ ಕಿಂಗ್‌ ಚಾರ್ಲ್ಸ್‌ ಇಂಗ್ಲೆಂಡ್ ದೇಶಕ್ಕೆ ಈ ಕ್ರೀಡೆಯನ್ನು ಪರಿಚಯಿಸಿದನು.

ಅಲ್ಲಿಂದ ಮುಂದೆ ಬ್ರಿಟೀಷರ ಮುಖಾಂತರ ಸೈಲಿಂಗ್‌ ಪ್ರಪಂಚದ ಇತರೆ ರಾಷ್ಟ್ರಗಳಿಗೆ ಪರಿಚಯವಾಯಿತು. ಮನೋರಂಜನೆ, ಸಾಮಾಜಿಕ ಚಟುವಟಿಕೆಯಾಗಿ ಸೈಲಿಂಗ್ ಕ್ರೀಡೆಯನ್ನು ಆಯೋಜಿಸಲಾಗುತ್ತದೆ.

1851ರಿಂದ ವಿಶ್ವದ ಅತ್ಯುತ್ತಮ ನಾವಿಕರಿಗೆ ತಮ್ಮ ಕೌಶಲ್ಯ ಪ್ರದರ್ಶನಕ್ಕೆ ದೊಡ್ಡ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. 1851 ರಿಂದ 1983ರವರೆಗೆ ಅಮೆರಿಕಾ ಈ ಸ್ಪರ್ಧೆಯಲ್ಲಿ ಸತತವಾಗಿ ಕಪ್ ಗೆದ್ದುಕೊಂಡಿತು. ನಂತರ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಸ್ವಿಟ್ಜರ್ಲೆಂಡ್ ಕಪ್‌ ಗೆದ್ದಿವೆ.

ಇತ್ತೀಚಿನ ದಿನಗಳಲ್ಲಿ, ವಿಶ್ವದ ಅತ್ಯುತ್ತಮ ಸೈಲರ್ ಗಳನ್ನು ಒಳಗೊಂಡಂತೆ ಅನೇಕ ಸ್ಪರ್ಧೆಗಳನ್ನು ವಿಶ್ವಾದ್ಯಂತ ನಡೆಸಲಾಗುತ್ತದೆ. ಆದರೆ ಒಲಿಂಪಿಕ್ಸ್, ಮಗ್ ರೇಸ್ ಮತ್ತು ಕೌಸ್ ವೀಕ್ ಪ್ರತಿಷ್ಠೆಯ ಸ್ಪರ್ಧೆಗಳಾಗಿವೆ.

 ಸ್ಪರ್ಧೆಗಾಗಿ ಅನೇಕ ರೀತಿಯ ದೋಣಿಗಳ ಬಳಕೆ

ಸ್ಪರ್ಧೆಗಾಗಿ ಅನೇಕ ರೀತಿಯ ದೋಣಿಗಳ ಬಳಕೆ

ನೌಕಾಯಾನಕ್ಕಾಗಿ ದೊಡ್ಡ ವಿಹಾರ ನೌಕೆಗಳಿಂದ ಹಿಡಿದು ಸಣ್ಣ ಹಾಯಿದೋಣಿಗಳವರೆಗೆ ಅನೇಕ ರೀತಿಯ ದೋಣಿಗಳನ್ನು ಬಳಸಲಾಗುತ್ತದೆ.

ಫ್ಲೀಟ್ ರೇಸಿಂಗ್, ಟೀಮ್ ರೇಸಿಂಗ್ ಮತ್ತು ಮ್ಯಾಚ್ ರೇಸಿಂಗ್ ಎನ್ನುವ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಫ್ಲೀಟ್‌ ರೇಸಿಂಗ್‌ನಲ್ಲಿ ಕನಿಷ್ಟ ನಾಲ್ಕು ದೋಣಿಗಳು ಭಾಗವಹಿಸುತ್ತವೆ ಗರಿಷ್ಠ ನೂರಾರು ದೋಣಿಗಳು ಕೂಡ ಭಾಗವಹಿಸಬಹುದು. ವೇಗವಾಗಿ ಗುರಿ ಮುಟ್ಟುವ ದೋಣಿ ಸ್ಪರ್ಧೆಯಲ್ಲಿ ಜಯ ಗಳಿಸುತ್ತದೆ.

ಮ್ಯಾಚ್‌ ರೇಸಿಂಗ್‌ನಲ್ಲಿ ಎರಡು ಎರಡು ದೋಣಿಗಳು ಪರಸ್ಪರ ಸ್ಪರ್ಧಿಸುವುದನ್ನು ಒಳಗೊಂಡಿರುತ್ತದೆ. ಟೀಮ್ ರೇಸಿಂಗ್ ಎರಡು ತಂಡಗಳನ್ನು ಒಳಗೊಂಡಿರುತ್ತದೆ, ಪ್ರತಿ ತಂಡ ತಲಾ ಮೂರು ದೋಣಿಗಳನ್ನು ಹೊಂದಿರುತ್ತದೆ. ಹೆಚ್ಚಾಗಿ ಈ ಆಟಗಳನ್ನು ಸಮುದ್ರದಲ್ಲಿ ಆಯೋಜನೆ ಮಾಡಲಾಗುತ್ತದೆ.

English summary
The national-level sailing championship is to be held at Krishna Raja Sagar dam (KRS dam) From August 7 to August 13. Minister of Sericulture, Youth empowerment and sports C. Narayanagowda Informed about Event in Press Meet, Around 200 sailors are participating in the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X