ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್‌ವೆಲ್ತ್‌ ಗೇಮ್‌ ಮುಖ್ಯವಲ್ಲ: ಬಾಕ್ಸಿಂಗ್‌ನಲ್ಲಿ ಸೋತ ಬಳಿಕ ಲೊವ್ಲಿನಾ ಬೊರ್ಗೊಹೈನ್ ಹೇಳಿಕೆ

|
Google Oneindia Kannada News

ಭಾರತದ ಸ್ಟಾರ್ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕ್ವಾಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ. ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೊವ್ಲಿನಾ ಬೊರ್ಗೊಹೈನ್ ಸೋಲಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

2024ರ ಒಲಿಂಪಿಕ್‌ನಲ್ಲಿ ಪದಕ ಗೆಲ್ಲುವುದೇ ನನ್ನ ಗುರಿ ಎಂದು ಹೇಳಿದ್ದಾರೆ. ಕಳೆದ ವರ್ಷ ಟೋಕಿಯೊದಲ್ಲಿ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಲೊವ್ಲಿನಾ, 2024 ರ ಪ್ಯಾರಿಸ್ ಗೇಮ್ಸ್ ರೋಸ್ಟರ್‌ನಲ್ಲಿ ಇಲ್ಲದ ಲೈಟ್ ಮಿಡಲ್‌ವೇಟ್ (66 ಕೆಜಿ-70 ಕೆಜಿ) ವಿಭಾಗದಲ್ಲಿ ಸ್ಫರ್ಧೆ ಮಾಡಲಿದ್ದಾರೆ.

ಭಾರತ ಬಾಕ್ಸಿಂಗ್ ಫೆಡರೇಶನ್ ವಿರುದ್ಧ ಕಿರುಕುಳದ ಆರೋಪ ಮಾಡಿದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ಭಾರತ ಬಾಕ್ಸಿಂಗ್ ಫೆಡರೇಶನ್ ವಿರುದ್ಧ ಕಿರುಕುಳದ ಆರೋಪ ಮಾಡಿದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್

"ನನ್ನ ಮುಖ್ಯ ಗುರಿ ಪ್ಯಾರಿಸ್ ಆಗಿರುವುದರಿಂದ ಕಾಮನ್‌ವೆಲ್ತ್‌ ಗೇಮ್‌ ನನಗೆ ಅಷ್ಟು ಮುಖ್ಯವಾಗಿರಲಿಲ್ಲ ಮತ್ತು ಇದು ಒಲಿಂಪಿಕ್ ರೀತಿ ಮಹತ್ವದ ಕ್ರೀಡಾಕೂಟವಲ್ಲ. ಇದು ದೊಡ್ಡ ಹೊಸ ವಿಷಯಗಳನ್ನು ಕಲಿಯಲು ನನಗೆ ಹೆಚ್ಚು ಸಹಾಯ ಮಾಡುತ್ತಿರಲಿಲ್ಲ" ಎಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನೀಡಿರುವ ವಿಶೇಷ ಸಂದರ್ಶನದಲ್ಲಿ ಲೊವ್ಲಿನಾ ಪಿಟಿಐಗೆ ತಿಳಿಸಿದರು.

"ಕಾಮನ್‌ವೆಲ್ತ್ ಕ್ರೀಡಾಕೂಟವು ಅದರ ಬಗ್ಗೆ ನಿಸ್ಸಂದೇಹವಾಗಿ ದೊಡ್ಡ ಸ್ಥಾನವನ್ನು ಹೊಂದಿದೆ. ಆದರೆ ನನ್ನ ಗುರಿ ಪ್ಯಾರಿಸ್ ಮತ್ತು ನಾನು ಸಿದ್ಧವಾಗುವುದು ಮುಖ್ಯ ಉದ್ದೇಶವಾಗಿದೆ." ಎಂದು ಹೇಳಿದ್ದಾರೆ.

 2018ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೂ ಸೋಲು

2018ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೂ ಸೋಲು

2018 ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ತನ್ನ ಮೊದಲ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಲೊವ್ಲಿನಾ ಕ್ವಾರ್ಟರ್‌ಫೈನಲ್‌ನಲ್ಲಿ ಇದೇ ರೀತಿಯ ಸೋಲನುಭವಿಸಿದ್ದರು. ಆದರೆ 2021ರ ಒಲಿಂಪಿಕ್‌ನಲ್ಲಿ ಪದಕ ಗೆದ್ದಿದ್ದರು.
"ಪ್ರತಿ ಸೋಲು ಅಥವಾ ಗೆಲುವು ಒಂದು ಅನುಭವ. ಮತ್ತು ನಾನು ಈ ಸೋಲನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳುತ್ತಿದ್ದೇನೆ. ನಾನು ನನ್ನ ಆಟದ ಮೇಲೆ ಕೆಲಸ ಮಾಡಬೇಕಾಗಿದೆ." ಎಂದು ಹೇಳಿದ್ದಾರೆ.

 ಒಲಿಂಪಿಕ್‌ನಲ್ಲಿ ಪದಕ ಗೆಲ್ಲುವ ಛಲ

ಒಲಿಂಪಿಕ್‌ನಲ್ಲಿ ಪದಕ ಗೆಲ್ಲುವ ಛಲ

"ಅಂತಿಮ ಗುರಿ ಪ್ಯಾರಿಸ್, ಯಾವುದೇ ತೊಂದರೆಗಳಿದ್ದರೂ, ನಾನು ಅಲ್ಲಿ ಜಯಿಸಬೇಕಾಗಿದೆ. ಜೀವನವು ಅನೇಕ ಏರಿಳಿತಗಳನ್ನು ಹೊಂದಿದೆ ಆದರೆ ಸೋಲನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ." ಎಂದು ಅವರು ಹೇಳಿದ್ದಾರೆ.


ತನ್ನ ವೈಯಕ್ತಿಕ ತರಬೇತುದಾರ ಸಂಧ್ಯಾ ಗುರುಂಗ್‌ಗೆ ಗೇಮ್ಸ್ ವಿಲೇಜ್‌ಗೆ ಪ್ರವೇಶವನ್ನು ನಿರಾಕರಿಸಿದ ನಂತರ ಲೊವ್ಲಿನಾ "ಮಾನಸಿಕ ಕಿರುಕುಳ" ಎಂದು ಆರೋಪಿಸಿದ್ದರು. ತರಬೇತಿದಾರರಾದ ಸಂಧ್ಯಾ ಅವರನ್ನು ಪಂದ್ಯಕ್ಕೆ ಕೆಲವು ದಿನಗಳ ಮೊದಲು ತರಬೇತಿಗಾಗಿ ಸೇರಿಸಲಾಯಿತು.

 ವಿವಾದದಿಂದ ನಾನು ವಿಚಲಿತಳಾಗಿಲ್ಲ

ವಿವಾದದಿಂದ ನಾನು ವಿಚಲಿತಳಾಗಿಲ್ಲ

ಕಾಮನ್‌ವೆಲ್ತ್ ಗೇಮ್ ಆರಂಭಕ್ಕೂ ಮುನ್ನ ಲೊವ್ಲಿನಾ ಭಾರತೀಯ ಬಾಕ್ಸಿಂಗ್ ಫೆಡರೇಷನ್ ವಿರುದ್ಧ ಮಾನಸಿಕ ಕಿರುಕುಳ ನೀಡುವ ಆರೋಪ ಮಾಡಿದ್ದರ ಬಗ್ಗೆ ಮಾತನಾಡಿ, "ಅದು ನನ್ನ ಮೇಲೆ ಪರಿಣಾಮ ಬೀರಲಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಸಾಮಾಜಿಕ ಮಾಧ್ಯಮದಿಂದ ದೂರವಿದ್ದೆ. ನನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ತಿಳಿದಿರಲಿಲ್ಲ. ಈಗಲೂ ಸಹ, ನಾನು ಸಾಮಾಜಿಕ ಮಾಧ್ಯಮವನ್ನು ದೂರವಿಟ್ಟಿದ್ದೇನೆ." ಎಂದು ಅವರು ಹೇಳಿದ್ದಾರೆ.

"ಟೋಕಿಯೊಗೆ ಮೊದಲು ಸಾಕಷ್ಟು ಎಕ್ಸ್‌ಪೋಸರ್ ಟ್ರಿಪ್‌ಗಳು ಬರುತ್ತಿದ್ದವು. ಆದರೆ ಟೋಕಿಯೊ ನಂತರ ಅಂತಹ ಯಾವುದೇ ಎಕ್ಸ್‌ಪೋಸರ್ ಮೀಟ್‌ಗಳು ಇರಲಿಲ್ಲ ಮತ್ತು ನೇರವಾಗಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದೆವು" ಎಂದು ಹೇಳಿದ್ದಾರೆ.

 66 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆ ಮಾಡಲು ತಯಾರಿ

66 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆ ಮಾಡಲು ತಯಾರಿ

69 ಕೆಜಿ ವಿಭಾಗದಲ್ಲಿ ಒಲಿಂಪಿಕ್ ಕಂಚು ಗೆದ್ದಿರುವ ಲೊವ್ಲಿನಾ ಈಗ 75 ಕೆಜಿಯ ವಿಭಾಗಕ್ಕೆ ಹೋಗಬೇಕು ಅಥವಾ 66 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕು. "ನಾನು ಹೆಚ್ಚಾಗಿ 75 ಕೆಜಿಗೆ ಹೋಗುತ್ತೇನೆ, ಆದರೆ ನಾನು 66 ಕೆಜಿಗೆ ಇಳಿಯಬಹುದು ಎಂದು ನಿಮಗೆ ತಿಳಿದಿಲ್ಲ. ಮುಂಬರುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಮೊದಲು ನಾನು ತೂಕ ಇಳಿಸಿಕೊಳ್ಳುತ್ತೇನೆ, ಅಲ್ಲಿಂದ ನನ್ನ ಹೊಸ ತೂಕಕ್ಕೆ ಬದಲಾಯಿಸುತ್ತೇನೆ." ಎಂದು ಹೇಳಿದ್ದಾರೆ.

ಸರ್ವಾನುಮತದ ತೀರ್ಪಿನಲ್ಲಿ ನ್ಯೂಜಿಲೆಂಡ್‌ನ ಏರಿಯಾನ್ ನಿಕೋಲ್ಸನ್ ಅವರನ್ನು 5-0 ಅಂತರದಿಂದ ಸೋಲಿಸಿದ ಲೊವ್ಲಿನಾ 3-2 ರ ವಿಭಜಿತ ನಿರ್ಧಾರದಿಂದ ರೋಸ್ಸಿ ಎಕ್ಲೆಸ್ ವಿರುದ್ಧ ಸೋತು ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ನಿರ್ಗಮಿಸಿದರು.

"ನಾನು ಬಯಸಿದ ರೀತಿಯಲ್ಲಿ ನಾನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ನನಗೆ ಬೇಸರವಾಗಿದೆ. ಆದರೆ ನಾನು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ನಿಮಗೆ ಯಾವಾಗಲೂ ಏರಿಳಿತಗಳು ಇರುತ್ತವೆ. ಇಲ್ಲಿಂದ ಹಿಂತಿರುಗುವುದು ಹೆಚ್ಚು ಮುಖ್ಯವಾಗಿದೆ."

English summary
Commonwealth Games have a big stature no doubt about that. But my target is Paris and to get myself prepared is the main objective. Boxer Lovlina Borgohain Said After Shock Quarter-final Exit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X