ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಹೊಸ ಎಂಐ ಟಿ20 ಫ್ರಾಂಚೈಸಿ ಘೋಷಿಸಿದ ರಿಲಯನ್ಸ್‌

|
Google Oneindia Kannada News

ಮುಂಬೈ, ಆಗಸ್ಟ್ 10: ಮುಂಬೈ ಇಂಡಿಯನ್ಸ್‌ ಕ್ರಿಕೆಟ್ ತಂಡದ ಮಾಲೀಕತ್ವ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಎರಡು ಹೊಸ ಫ್ರಾಂಚೈಸಿಗಳ ಹೆಸರುಗಳು ಮತ್ತು ಬ್ರ್ಯಾಂಡ್ ಅನಾವರಣ ಮಾಡಿದೆ. ಯುಎಇ ಇಂಟರ್‌ನ್ಯಾಷನಲ್ ಲೀಗ್ ಟಿ20 ಯಲ್ಲಿ ಎಂಐ ಎಮಿರೇಟ್ಸ್‌ ಮತ್ತು ಕ್ರಿಕೆಟ್ ಸೌಥ್ ಆಫ್ರಿಕಾ ಟಿ20 ಲೀಗ್‌ನಲ್ಲಿ ಎಂಐ ಕೇಪ್‌ ಟೌನ್‌ ಹೆಸರುಗಳನ್ನು ಅನಾವರಣಗೊಳಿಸಲಾಗಿದೆ.

ಈ ಹೊಸ ತಂಡಗಳು ಕೂಡಾ ಎಂಐನಂತೆ ನೀಲಿ ಮತ್ತು ಸ್ವರ್ಣ ಬಣ್ಣವನ್ನು ಹೊಂದಿರಲಿವೆ. ಈ ಹೆಸರುಗಳು ಅವು ಪ್ರತಿನಿಧಿಸುವ ಸ್ಥಳಗಳನ್ನೂ ಹೊಂದಿವೆ. ಎಂಐ ಎಮಿರೇಟ್ಸ್‌ ಅನ್ನು ಮೈ ಎಮಿರೇಟ್ಸ್‌ (MY Emirates)ಎಂದೂ ಎಂಐ ಕೇಪ್‌ ಟೌನ್‌ ಅನ್ನು ಮೈ ಕೇಪ್‌ ಟೌನ್(MY Cape Town) ಎಂದು ಕರೆಯಲಾಗುತ್ತದೆ.

ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ ಲೀಗ್‌: ಫ್ರಾಂಚೈಸಿ ಖರೀದಿ ಮಾಡಿದ ರಿಲಯನ್ಸ್ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ ಲೀಗ್‌: ಫ್ರಾಂಚೈಸಿ ಖರೀದಿ ಮಾಡಿದ ರಿಲಯನ್ಸ್

ಈ ಬಗ್ಗೆ ಮಾತನಾಡಿದ ರಿಲಯನ್ಸ್‌ ಇಂಡಸ್ಟ್ರೀಸ್‌ನ ನಿರ್ದೇಶಕಿ ನೀತಾ ಎಂ ಅಂಬಾನಿ ''ಒನ್ ಫ್ಯಾಮಿಲಿಯ ಹೊಸ ಸೇರ್ಪಡೆಗಳಾದ ಮೈ ಎಮಿರೇಟ್ಸ್‌ ಮತ್ತು ಮೈ ಕೇಪ್‌ಟೌನ್ ಅನ್ನು ಸ್ವಾಗತಿಸಲು ನನಗೆ ಹೆಮ್ಮೆಯಾಗುತ್ತಿದೆ. ನಮಗೆ ಎಂಐ ಎಂಬುದು ಬರಿ ಕ್ರಿಕೆಟ್‌ ಅಲ್ಲ. ಇದು ಕನಸು ಕಾಣಲು, ನಿರ್ಭೀತವಾಗಿರಲು ಮತ್ತು ಧನಾತ್ಮಕ ವರ್ತನೆಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಮೈ ಎಮಿರೇಟ್ಸ್‌ ಮತ್ತು ಮೈ ಕೇಪ್‌ ಟೌನ್‌ ಕೂಡ ಇದೇ ಧ್ಯೇಯವನ್ನು ಹೊಂದಿರುತ್ತವೆ ಎಂದು ನನಗೆ ಖಚಿತವಿದೆ'' ಎಂದು ಹೇಳಿದರು.

Mumbai Indians goes global; names of franchises in UAE, SA T20 Leagues unveiled

ಎಂಐ ಎಮಿರೇಟ್ಸ್ ಮತ್ತು ಎಂಐ ಕೇಪ್‌ಟೌನ್‌ನ ಹೆಸರನ್ನು ಅನಾವರಣಗೊಳಿಸುವುದರ ಜೊತೆಗೆ ಫಿಲಂ ಅನ್ನೂ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿ ಮಾಡುವುದು, ಫುಟ್‌ಬಾಲ್‌ ಲೀಗ್‌ ನಡೆಸುವುದು, ಕ್ರೀಡೆಯ ಪ್ರಾಯೋಜಕತ್ವ, ಕನ್ಸಲ್ಟನ್ಸಿ ಹಾಗೂ ಅಥ್ಲೀಟ್ ಪ್ರತಿಭಾ ನಿರ್ವಹಣೆ ಮತ್ತು ಉದ್ಯಮದ ಉತ್ತಮ ಅಭ್ಯಾಸಗಳನ್ನು ಅಳವಡಿಸುವುದೂ ಸೇರಿದಂತೆ ಕ್ರೀಡಾ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ ಮಹತ್ವದ ಪಾತ್ರ ವಹಿಸುತ್ತದೆ.

ದೇಶದ ವಿವಿಧೆಡೆಯ ಅಥ್ಲೀಟ್‌ಗಳು ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್‌ ಆಗಲಿ ಇದು ಅವಕಾಶ ಒದಗಿಸುತ್ತಿದೆ ಮತ್ತು ಜಾಗತಿಕ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಲು ಪ್ರಯತ್ನಿಸುತ್ತಿವೆ. ಈ ವರ್ಷದ ಆರಂಭದಲ್ಲಿ, 40 ವರ್ಷಗಳ ನಂತರದಲ್ಲಿ 2023 ರಲ್ಲಿ ಮುಂಬೈನಲ್ಲಿ ಇಂಟರ್‌ನ್ಯಾಷನಲ್‌ ಒಲಿಂಪಿಕ್‌ ಕಮಿಟಿ ಸೆಷನ್‌ ಅನ್ನು ನಡೆಸಲು ಯಶಸ್ವಿಯಾಗಿ ಪ್ರಯತ್ನ ನಡೆಸಿದೆ.

ಕ್ರಿಕೆಟ್ ಸೌತ್‌ ಆಫ್ರಿಕಾ ಆರು ತಂಡಗಳನ್ನು ಒಳಗೊಂಡ ಟಿ20 ಆಯೋಜನೆ ಮಾಡುವುದಾಗಿ ಘೋಷಿಸಿದೆ. ಮೊದಲ ಟೂರ್ನಮೆಂಟ್ 2023 ಜನವರಿಯಲ್ಲಿ ನಡೆಯಲಿದೆ. ಟೂರ್ನಮೆಂಟ್‌ನಲ್ಲಿ ಆರು ತಂಡಗಳು ಇರಲಿವೆ. ರೌಂಡ್ ರಾಬಿನ್ ಹಂತದಲ್ಲಿ ಪರಸ್ಪರ ಎರಡು ಬಾರಿ ಆಟ ಆಡಲಿವೆ. ನಂತರ ಅಗ್ರ ಮೂರು ತಂಡಗಳು ಪ್ಲೇಆಫ್‌ಗೆ ಹೋಗಲಿವೆ. ಮೂರರಿಂದ ನಾಲ್ಕು ವಾರಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.

Mumbai Indians goes global; names of franchises in UAE, SA T20 Leagues unveiled

ವಿಶ್ವಾದ್ಯಂತ 29 ಘಟಕಗಳಿಂದ ಬಿಡ್‌ಗಳನ್ನು ಆಕರ್ಷಿಸಿದ ಮುಕ್ತ ಪ್ರಕ್ರಿಯೆ ನಡೆದಿದೆ ಎಂದು CSA ಹೇಳಿದೆ. ಮುಂಬೈ ಇಂಡಿಯನ್ಸ್‌ನ ಮಾಲೀಕರಾದ ರಿಲಯನ್ಸ್ ಇಂಡಸ್ಟ್ರೀಸ್ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಮೂಲದ ತಂಡವನ್ನು ಹೊಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ತಂಡದ ಹಕ್ಕುಗಳನ್ನು ಗೆದ್ದಿದೆ.

ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕರು ಸೆಂಚುರಿಯನ್‌ನಲ್ಲಿ ತಂಡವನ್ನು ಹೊಂದಿದ್ದು, ಡರ್ಬನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ Gqeberha (ಹಿಂದಿನ ಪೋರ್ಟ್ ಎಲಿಜಬೆತ್) ಮತ್ತು ರಾಜಸ್ಥಾನ್ ರಾಯಲ್ಸ್ ಪಾರ್ಲ್‌ನಲ್ಲಿ ತಂಡವನ್ನು ಹೊಂದಿರುತ್ತಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

English summary
Reliance Industries, the owner of five-time IPL champions Mumbai Indians on Wednesday introduced ‘MI Emirates’ and ‘MI Cape Town’ the name and brand identity of the two new franchises joining the Mumbai Indians #OneFamily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X