ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿನಾಡಲ್ಲಿ ಮನಮೋಹಕ ಜಿಪ್ಸಿ ರ‍್ಯಾಲಿ, ಜನ ಫುಲ್ ಖುಷ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 12: ಕಾಫಿನಾಡು ಚಿಕ್ಕಮಗಳೂರಲ್ಲಿ ಆಗಾಗ ಬೈಕ್, ಕಾರು, ಜೀಪ್‌ಗಳ ರೇಸ್‌ ನಡೆಯುತ್ತಿರುತ್ತವೆ. ಜಿಲ್ಲೆಯ ಎನ್. ಆರ್. ಪುರದಲ್ಲಿ ನಾನಾ ರೀತಿಯ ಜೀಪ್‌ಗಳು ಅಖಾಡಕ್ಕಿಳಿದ್ದವು.

ಒಂದಕ್ಕಿಂತ ಒಂದು ನಾನಾ ನೀನಾ ಅಂತ ಸೆಡ್ಡು ಹೊಡೆದು ನಿಂತಿದ್ದವು. ಹಾವು ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ತಗ್ಗು-ದಿಬ್ಬುಗಳನ್ನು ಲೆಕ್ಕಿಸದೇ ಹೊಂಡ-ಗುಂಡಿಗಳಲ್ಲಿ ಜೀಪ್ ಓಡುವ ಪರಿ ಕಂಡು ಜನ ಸಂತಸಪಟ್ಟರು.

ಭಾರತೀಯ ಕ್ರಿಕೆಟ್ ದಂತಕತೆ ಮಿಥಾಲಿ ರಾಜ್‌ ಕ್ರಿಕೆಟ್ ಪಯಣ, ಸಾಧನೆ ಭಾರತೀಯ ಕ್ರಿಕೆಟ್ ದಂತಕತೆ ಮಿಥಾಲಿ ರಾಜ್‌ ಕ್ರಿಕೆಟ್ ಪಯಣ, ಸಾಧನೆ

ವಿವಿಧ ಕಾರಣಗಳಿಂದ ಎರಡು ಮೂರು ವರ್ಷಗಳಿಂದ ನಿಂತಿದ್ದ ಮಡ್ ಕಾರ್ ರ‍್ಯಾಲಿ ಜಿಲ್ಲೆಯ ಎನ್. ಆರ್. ಪುರದಲ್ಲಿ ಕೃತಕ ನಿರ್ಮಾಣದ ಟ್ರ್ಯಾಕ್‍ನಲ್ಲಿ ನಡೆಯಿತು. ಎನ್. ಆರ್. ಪುರದ ಅಡ್ವೆಂಚರ್ಸ್ ಸ್ಪೋರ್ಟ್ಸ್‌ ಕ್ಲಬ್ ವತಿಯಿಂದ ಆಯೋಜನೆಗೊಂಡಿದ್ದ ಈ ಜಿಪ್ಸಿ ರ‍್ಯಾಲಿಯಲ್ಲಿ 100ಕ್ಕೂ ಹೆಚ್ಚು ಜೀಪ್‍ಗಳು ಪಾಲ್ಗೊಂಡಿದ್ದವು. ಕೇರಳ, ತಮಿಳುನಾಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯ ಸ್ಪರ್ಧಾಳುಗಳು ಭಾಗವಹಿಸಿದ್ದರು.

ಬಡತನದಲ್ಲಿ ಅರಳಿದ ಹೂವು: ಚಿನ್ನದ ಪದಕಕ್ಕೆ ಮುತ್ತಿಟ್ಟ ದಾವಣಗೆರೆಯ ಉಮೇಶ್ ಬಡತನದಲ್ಲಿ ಅರಳಿದ ಹೂವು: ಚಿನ್ನದ ಪದಕಕ್ಕೆ ಮುತ್ತಿಟ್ಟ ದಾವಣಗೆರೆಯ ಉಮೇಶ್

5 ಹಳ್ಳಿಗಳ ಸುತ್ತ ರ‍್ಯಾಲಿ

5 ಹಳ್ಳಿಗಳ ಸುತ್ತ ರ‍್ಯಾಲಿ

ಹೊರ ರಾಜ್ಯ, ಜಿಲ್ಲೆಯ ರೈಡರ್‌ಗಳ ಜೊತೆ ಸ್ಥಳಿಯರು ಕೂಡ ಅಖಾಡಕ್ಕಿಳಿದಿದ್ದರು. 15 ಕಿ.ಮೀ. ವ್ಯಾಪ್ತಿಯ ಈ ರ‍್ಯಾಲಿಯೂ ಸುಮಾರು ಐದು ಹಳ್ಳಿಗಳ ಸುತ್ತಲೂ ನಡೆದಿದ್ದು, ಆಯೋಜಕರು ಅಲ್ಲಲ್ಲೇ ಮನಮೋಹಕವಾದ ಟ್ರಾಕ್ ನಿರ್ಮಿಸಿದ್ದರು. ಒಂದೊಂದು ಜೀಪ್‍ಗಳು ಬಂದಾಗಲೂ ನೆರೆದಿದ್ದ ಜನ ಕೂಗಾಡಿ ಡ್ರೈವರ್‌ಗಳಿಗೆ ಹುರಿದುಂಬಿಸುತ್ತಿದ್ದರು. ಸಂಪೂರ್ಣವಾಗಿ ಅಡಿಯಾಳದ ಕೆಸರಿನಲ್ಲಿ ಆಯೋಜನೆಗೊಂಡಿದ್ದ ಈ ಮಡ್ ಟ್ರ್ಯಾಕ್ ರ‍್ಯಾಲಿ ನೋಡುಗರಿಗೆ ಹಾಗೂ ಡ್ರೈವರ್‌ಗಳಿಗೆ ಸಖತ್ ಥ್ರಿಲ್ ನೀಡಿತು..

ಮಡ್‌ ಟ್ಯ್ರಾಕ್‌ನಲ್ಲಿ ಗುರಿ ತಲುಪಲು ಹರಸಾಹಸ

ಮಡ್‌ ಟ್ಯ್ರಾಕ್‌ನಲ್ಲಿ ಗುರಿ ತಲುಪಲು ಹರಸಾಹಸ

ಕೆಲವು ಜಾಗಗಳಲ್ಲಿ ಜೀಪ್ ಕೂಡ ಓಡೋದಕ್ಕೆ ಹರಸಾಹಸಪಟ್ಟವು. ಜೀಪಿನ ಚಕ್ರಗಳು ಮಣ್ಣಿನಲ್ಲಿ ಸಿಲುಕಿ ಮುಂದೆ ಹೋಗಲಾಗದಂತೆ ಅಲ್ಲೆ ಜಾಮ್ ಆಗಿದ್ದವು. ಟ್ರ್ಯಾಕ್ಟರ್‌ಗೆ ಕಟ್ಟಿ ಅವುಗಳನ್ನ ಎಳೆಸಲಾಯಿತು. ಈ ಟ್ರ್ಯಾಕ್‍ಗಳನ್ನು ಅದೇ ರೀತಿಯಲ್ಲಿ ನಿರ್ಮಿಸಲಾಗಿತ್ತು. ಈ ಮಡ್ ಟ್ರ್ಯಾಕ್ ರ‍್ಯಾಲಿಯಲ್ಲಿ ಮಹೀಂದ್ರಾ 4x4, ಬೊಲೆರೋ, ಜಿಪ್ಸಿ, ಪಜೆರೋ, ಮಿತ್ಸುಬಾ ಸೇರಿದಂತೆ ವಿವಿಧ ಜೀಪ್‍ಗಳು ಪಾಲ್ಗೊಂಡಿದ್ದವು.

ಕೆಲವೆಡೆ ನೀರಿನ ಒಳಗೆ ಜೀಪ್‍ಗಳು ಓಡುವಂತಿತ್ತು. ಅಲ್ಲೂ ಕೂಡ ಜೀಪ್‍ಗಳು ನೀರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದವು. ಕೆಲವು ಜೀಪ್‍ಗಳು ವೇಗವಾಗಿ ಹೋಗುವಾಗ ಅಕ್ಕಪಕ್ಕದಲ್ಲಿ ನೋಡುತ್ತಾ ನಿಂತಿದ್ದ ರ‍್ಯಾಲಿ ಪ್ರಿಯರ ಮೇಲೆ ಕೆಸರು ಮಣ್ಣು ಹಾಗೂ ನೀರು ಚಿಮ್ಮುತ್ತಿತ್ತು. ಕೆಲವು ಅನುಭವಿ ಡ್ರೈವರ್‌ಗಳು ಸಲೀಸಾಗಿ ಜೀಪ್‍ಗಳನ್ನು ಡ್ರೈವ್ ಮಾಡಿದರೆ. ಕೆಲವು ಹೊಸ ಡ್ರೈವರ್‌ಗಳು ಹರಸಾಹಸಪಟ್ಟು ಹೋರಾಡಿ ಗಡಿ ದಾಟಿ ಗುರಿ ಮುಟ್ಟಿದರು.

ಶಾಸಕ ಟಿ. ಡಿ. ರಾಜೇಗೌಡ ಭಾಗಿ

ಶಾಸಕ ಟಿ. ಡಿ. ರಾಜೇಗೌಡ ಭಾಗಿ

ಈ ರ‍್ಯಾಲಿಯಲ್ಲಿ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಕೂಡ ಸ್ಪರ್ಧಾಳುಗಳಾಗಿ ನೋಡುಗರ ಗಮನ ಸೆಳೆಯುವುದರ ಜೊತೆ ಹೊಸ ತಲೆಮಾರಿನ ಡ್ರೈವರ್‌ಗಳ ಜೊತೆ ಅಖಾಡಕ್ಕಿಳಿದಿದ್ದರು. "ಆಧುನಿಕ ಕಾಲದಲ್ಲಿ ಇಂತಹ ಕ್ರೀಡೆಗಳು ಆಗಾಗ ನಡೆಯುತ್ತಿದ್ದರೆ ಯುವಜನತೆಯಲ್ಲಿ ಒಗ್ಗಟ್ಟಿನ ಮನೋಭಾವ ಬೆಳೆಯುತ್ತದೆ. ನಾನು ಹುಡುಗನಿದ್ದಾಗ ಓಡಿಸುತ್ತಿದ್ದೆ, ಈಗ ಸ್ವಲ್ಪ ಕಷ್ಟ. ಆದರೂ, ಕಾಫಿತೋಟದಲ್ಲಿ ಜೀಪ್ ಓಡಿಸಿ ಅಭ್ಯಾಸ ಇರುವುದರಿಂದ ಸಲೀಸಾಗಿ ಓಡಿಸಿದೆ" ಎಂದರು. ಮೂರು ವರ್ಷಗಳ ಬಳಿಕ ನಡೆದ ರ‍್ಯಾಲಿಯನ್ನು ನೋಡಲು ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಒಂದೊಂದು ಜೀಪ್ ಓಡುವಾಗಲು ಜನ ಕೂಗಾಗಿ, ಶಿಳ್ಳೆ ಹೊಡೆದು ಡ್ರೈವರ್‌ಗಳಿಗೆ ಹುರಿದುಂಬಿಸಿದರು.

ರೋಚಕವಾಗಿದ್ದ ಸ್ಪರ್ಧೆ

ರೋಚಕವಾಗಿದ್ದ ಸ್ಪರ್ಧೆ

ಪ್ರಕೃತಿ ಮಡಿಲ ಮಧ್ಯೆ ನಡೆದ ಈ ರೋಮಾಂಚನ ಸ್ಪರ್ಧೆಯನ್ನು ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುತ್ತಾ ರೋಂಯ್, ರೋಂಯ್ ಅಂತ ಹೊರಟ ಜೀಪ್ ರೈಡರ್ ಗಳು ಕೂಡ ಸಖತ್ ಮನರಂಜನೆ ನೀಢಿದರು. ಪ್ರೇಕ್ಷಕರ ಮನೋರಂಜನೆಗೆಂದೇ ಆಯೋಜಿಸಿದ್ದ ಟ್ರ್ಯಾಕ್ ಹಾಗೂ ರೇಸ್‌ನಲ್ಲಿ ಹೊರರಾಜ್ಯದ ರೈಡರ್‌ಗಳ ಜೊತೆ ರಾಜ್ಯದ ಸ್ಪರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. ನೆರೆದಿದ್ದ ಸಾವಿರಾರು ಜನ ಇಂತಹ ರ‍್ಯಾಲಿಗಳು ನಿರಂತರವಾಗಿರಲೆಂದು ಆಶಿಸಿದರು.

English summary
Mud car race held in N. R. Pura, Chikkamagaluru district. Variety of jeeps participate in the competition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X