ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿವೃತ್ತಿಯಾದ್ರೂ ನಿಂತಿಲ್ಲ ಧೋನಿ ಕ್ರೇಜ್..ಮಿಸ್ಟರ್ ಕೂಲ್‌ 41 ಜನ್ಮದಿನಕ್ಕೆ 41 ಅಡಿ ಕಟೌಟ್‌

|
Google Oneindia Kannada News

ವಿಜಯವಾಡ, ಜುಲೈ 6: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ 2 ವರ್ಷಗಳೇ ಉರುಳಿವೆ. ಆದರೆ ಅವರಿಗಿರುವ ಅಭಿಮಾನ, ಕ್ರೇಜ್‌ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇಂದಿಗೂ ಅವರ ಆಡುವ ದಿನಗಳಲ್ಲಿ ಇದ್ದಂತೆಯೇ ಇದೆ ಎನ್ನುವುದಕ್ಕೆ ವಿಜಯವಾಡದಲ್ಲಿ ಅಭಿಮಾನಿಯೊಬ್ಬ ಧೋನಿ ಹುಟ್ಟುಹಬ್ಬಕ್ಕೂ ಮೊದಲೇ ನಿರ್ಮಿಸಿರುವ ಈ ಕಟೌಟ್ ಸಾಕ್ಷಿಯಾಗಿದೆ.

ಜುಲೈ 7 ರಂದು ಮಹೇಂದ್ರ ಸಿಂಗ್ ಧೋನಿ 41ನೇ ವಸಂತಕ್ಕೆ ಕಾಲಿಡಲಿದ್ದಾರೆ. ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಾಳೆ ವಿಶೇಷ ದಿನ. ವಿಜಯವಾಡದಲ್ಲಿ ಧೋನಿಯ ಅಪ್ಪಟ ಅಭಿಮಾನಿಯೊಬ್ಬ 41 ಅಡಿ ಕಟೌಟ್‌ ನಿರ್ಮಿಸಿ ಧೋನಿಯ ಜನ್ಮದಿನವನ್ನು ಮತ್ತಷ್ಟು ವಿಶೇಷವಾಗಿಸಿದ್ದಾರೆ. ಈ ಕಟೌಟ್‌ನಲ್ಲಿ ಧೋನಿ 2011ರ ವಿಶ್ವಕಪ್‌ ಫೈನಲ್‌ನಲ್ಲಿ ಹೆಲಿಕಾಪ್ಟರ್‌ ಶಾಟ್‌ ಮೂಲಕ ಫಿನಿಶ್ ಮಾಡಿದ ಫೋಟೋವನ್ನು ಕಟೌಟ್ ಮಾಡಿ ನಿಲ್ಲಿಸಲಾಗಿದೆ.

ವೆಸ್ಟ್ ಇಂಡೀಸ್ ಪ್ರವಾಸ ಟೀಂ ಇಂಡಿಯಾ ಪ್ರಕಟ, ಧವನ್ ನಾಯಕವೆಸ್ಟ್ ಇಂಡೀಸ್ ಪ್ರವಾಸ ಟೀಂ ಇಂಡಿಯಾ ಪ್ರಕಟ, ಧವನ್ ನಾಯಕ

ಎಂಎಸ್‌ ಧೋನಿ 2019ರ ವಿಶ್ವಕಪ್‌ ಸೆಮಿಫೈನಲ್ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರಲಿಲ್ಲ. 2020 ಆಗಷ್ಟ್‌ 15ರಂದು ನಿವೃತ್ತಿ ಘೋಷಿಸಿದ್ದರು. ಆದರೆ ಮಿಸ್ಟರ್ ಕೂಲ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಲೇ ಬರುತ್ತಿದ್ದಾರೆ. ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಆಡುವ ಸಾಧ್ಯತೆಯಿದೆ.

MS Dhonis 41st Birthday: A Fan from Vijayawada Made 41st feet cutout for Indian ex captain

2022ರ ಆವೃತ್ತಿಯಲ್ಲಿ ನಾಯಕತ್ವ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ತ್ಯಜಿಸಿ, ರವೀಂದ್ರ ಜಡೇಜಾಗೆ ನಾಯಕತ್ವ ಬಿಟ್ಟುಕೊಟ್ಟಿದ್ದರು. ಆದರೆ ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ಭಾರಿ ವೈಫಲ್ಯ ಅನುಭವಿಸಿದ್ದರಿಂದ ಮತ್ತೆ ಧೋನಿಗೆ ಸಿಎಸ್‌ಕೆ ತಂಡದ ನಾಯಕತ್ವ ವಹಿಸಲಾಗಿತ್ತು. ಆದರೂ ಸಿಎಸ್‌ಕೆ 9ನೇ ಸ್ಥಾನ ಪಡೆದುಕೊಂಡಿತ್ತು.

ಫುಟ್ಬಾಲ್ ಕೋಚ್ ಲೈಂಗಿಕ ಕಿರುಕುಳ ಪ್ರಕರಣ; ಆಘಾತದಲ್ಲಿ ಭಾರತೀಯ ಆಟಗಾರ್ತಿಯರುಫುಟ್ಬಾಲ್ ಕೋಚ್ ಲೈಂಗಿಕ ಕಿರುಕುಳ ಪ್ರಕರಣ; ಆಘಾತದಲ್ಲಿ ಭಾರತೀಯ ಆಟಗಾರ್ತಿಯರು

ಭಾರತ ತಂಡದ ಪರ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 90 ಟೆಸ್ಟ್‌ ಪಂದ್ಯಗಳನ್ನಾಡಿದ್ದು 6 ಶತಕ, 33 ಅರ್ಧಶತಕ ಸಹಿತ 4876 ರನ್‌ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 350 ಪಂದ್ಯಗಳನ್ನಾಡಿದ್ದು, 10 ಶತಕ ಮತ್ತು 73 ಅರ್ಧಶತಕಗಳ ಸಹಿತ 10773 ರನ್‌ ಮತ್ತು 98 ಪಂದ್ಯಗಳಲ್ಲಿ 1617 ರನ್‌ ಗಳಿಸಿದ್ದಾರೆ.

ಇನ್ನು ಧೋನಿ ಭಾರತ ತಂಡದ ಯಶಸ್ವಿ ನಾಯಕರಲ್ಲಿ ಅಗ್ರಗಣ್ಯರಾಗಿದ್ದಾರೆ. ಐಸಿಸಿ ಆಯೋಜಿಸುವ ಟಿ20, ಏಕದಿನ ಹಾಗೂ ಚಾಂಪಿಯನ್‌ ಟ್ರೋಫಿ ಗೆದ್ದಿರುವ ವಿಶ್ವದ ಏಕೈಕ ನಾಯಕನಾಗಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್‌ ಟ್ರೋಫಿ ಗೆದ್ದಿದೆ.

English summary
July 7th Team India former captain MS Dhoni turns 41 tomorrow. A Fan of Vijayawada Made 41st feet cutout of Team CSK captain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X