ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮಹಿಳಾ ಕ್ರಿಕೆಟ್‌ನ ದಂತಕಥೆ ಮಿಥಾಲಿ ರಾಜ್ ನಿವೃತ್ತಿ

|
Google Oneindia Kannada News

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಟ್ವಿಟರ್ ಅಧಿಕೃತ ಖಾತೆಯಲ್ಲಿ ನಿವೃತ್ತಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.

"ಇಷ್ಟು ವರ್ಷಗಳಿಂದ ಪ್ರೀತಿ ಮತ್ತು ಬೆಂಬಲ ನೀಡಿದಕ್ಕೆ ಧನ್ಯವಾದಗಳು! ನಿಮ್ಮ ಆಶೀರ್ವಾದ ಮತ್ತು ಬೆಂಬಲದೊಂದಿಗೆ ನನ್ನ 2ನೇ ಇನ್ನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದೇನೆ" ಎಂದು ಮಿಥಾಲಿ ಟ್ವೀಟ್ ಮಾಡಿದ್ದಾರೆ.

ಥ್ರೋಬಾಲ್‌: ಅಂತಾರಾಷ್ಟ್ರೀಯ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಹಳ್ಳಿ ಪ್ರತಿಭೆಗಳಿಗೆ ಬೇಕಿದೆ ನೆರವುಥ್ರೋಬಾಲ್‌: ಅಂತಾರಾಷ್ಟ್ರೀಯ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಹಳ್ಳಿ ಪ್ರತಿಭೆಗಳಿಗೆ ಬೇಕಿದೆ ನೆರವು

ತಮ್ಮ ನಿವೃತ್ತಿಯ ಕುರಿತು ಪತ್ರವನ್ನು ಬರೆದಿರುವ ಮಿಥಾಲಿ, "ನನ್ನ ಆಟದ ವೃತ್ತಿಜೀವನಕ್ಕೆ ತೆರೆ ಎಳೆಯಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ತಂಡವು ಕೆಲವು ಪ್ರತಿಭಾವಂತ ಯುವ ಆಟಗಾರರ ಸಮರ್ಥ ಕೈಯಲ್ಲಿದೆ ಮತ್ತು ಭಾರತೀಯ ಕ್ರಿಕೆಟ್‌ನ ಭವಿಷ್ಯವು ಉಜ್ವಲವಾಗಿದೆ" ಎಂದಿದ್ದಾರೆ.

Mithali Raj Announces Retirement From All Formats of International Cricket

ಮಿಥಾಲಿ ನಾಯಕತ್ವದಲ್ಲಿ ಭಾರತ ತಂಡ 2017 ರ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಫೈನಲ್‌ ಪ್ರವೇಶಿಸಿತ್ತು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿ ರನ್ನರ್ ಅಪ್ ಸ್ಥಾನ ಪಡೆದಿತ್ತು. 2005 ರಲ್ಲಿ ಐಸಿಸಿ ಮಹಿಳಾ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಾಗಲೂ ಮಿಥಾಲಿ ತಂಡದ ನಾಯಕಿಯಾಗಿದ್ದರು.

2022 ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು, ಅಲ್ಲಿ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.

1999ರಲ್ಲಿ ತಮ್ಮ 16ನೇ ವಯಸ್ಸಿನಲ್ಲೇ ಐರ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟರು. ಮಿಥಾಲಿ 23 ವರ್ಷಗಳ ಕ್ರಿಕೆಟ್ ಆಟದ ಸುದೀರ್ಘ ಪ್ರಯಣಕ್ಕೆ ಈಗ ಅಂತ್ಯವಾಡಿದ್ದಾರೆ. 39 ವರ್ಷ ವಯಸ್ಸಿನ ಮಿಥಾಲಿ ಭಾರತೀಯ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ.

ಬ್ಯಾಡ್ಮಿಂಟನ್‌: ನಿವೃತ್ತಿ ಘೋಷಿಸಿದ CWG ಕಂಚು ಪದಕ ವಿಜೇತ ಗುರುಸಾಯಿದತ್ಬ್ಯಾಡ್ಮಿಂಟನ್‌: ನಿವೃತ್ತಿ ಘೋಷಿಸಿದ CWG ಕಂಚು ಪದಕ ವಿಜೇತ ಗುರುಸಾಯಿದತ್

ಮಿಥಾಲಿ ತನ್ನ ವೃತ್ತಿಜೀವನದಲ್ಲಿ 232 ಏಕದಿನ, 89 ಟಿ20 ಮತ್ತು 12 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50.68 ಸರಾಸರಿಯಲ್ಲಿ 7805 ರನ್‌ ಗಳಿಸಿದ್ದಾರೆ, ಇದರಲ್ಲಿ 7 ಶತಕ ಮತ್ತು 64 ಅರ್ಧಶತಕ ಸೇರಿವೆ. ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 7805 ರನ್‌ ಬಾರಿಸಿರುವ ಏಕೈಕ ಆಟಗಾರ್ತಿ ಮಿಥಾಲಿರಾಜ್. ಐಸಿಸಿ ರ್‍ಯಾಂಕಿಂಗ್‌ನಲ್ಲಿ ಮಿಥಾಲಿ ಪ್ರಸ್ತುತ 7 ನೇ ಸ್ಥಾನದಲ್ಲಿದ್ದಾರೆ.

Mithali Raj Announces Retirement From All Formats of International Cricket

Recommended Video

Zooನಲ್ಲಿದ್ದ Orangutanಗೆ ಕೋಪ ಬಂದಾಗ ಏನಾಯ್ತು ನೋಡಿ | OneIndia Kannada

89 ಟಿ20 ಮಾದರಿ ಪಂದ್ಯಗಳನ್ನಾಡಿರುವ ಮಿಥಾಲಿ 17 ಅರ್ಧ ಶತಕಗಳು ಸೇರಿ 2,364 ರನ್‌ ಗಳಿಸಿದ್ದಾರೆ. 12 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 699 ರನ್ ಗಳಿಸಿದ್ದಾರೆ. 2002ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ಮಿಥಾಲಿ ರಾಜ್ 214 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಮಹಿಳಾ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ದ್ವಿಶತಕ ಸಿಡಿಸಿರುವ ದಾಖಲೆ ಮಿಥಾಲಿ ರಾಜ್ ಹೆಸರಿನಲ್ಲಿದೆ.

(ಒನ್ಇಂಡಿಯಾ ಸುದ್ದಿ)

English summary
Mithali Raj Announced Retirement From All Formats of International Cricket. Details Inside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X