ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚು ಸಂಭಾವನೆ ಪಡೆದ ಕ್ರೀಡಾಪಟುಗಳು, ಕೊಹ್ಲಿಗೆ ಎಷ್ಟನೇ ಸ್ಥಾನ?

|
Google Oneindia Kannada News

ನವೆದೆಹಲಿ, ಮೇ 12: 2022ರಲ್ಲಿ ಪ್ರಸಿದ್ಧ ಕ್ರೀಡಾಪಟುಗಳಾದ ಲೆಬ್ರಾನ್‌ ಜೇಮ್ಸ್‌ , ಲಿಯೋನಲ್ ಮೆಸ್ಸಿ ಕ್ರೀಡಾಜಗಸಿ ಕ್ರೀತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳು ಎನಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಚ್ಚು ವೇತನ ಪಡೆಯುವ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಸ್ಫೊರ್ಟಿಕೊ ಡಾಟ್‌ ಕಾಮ್‌ ವರದಿಯ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳು ಕೇವಲ 10 ಕ್ರೀಡೆಯಲ್ಲಿ ಕಾಣಿಸಿಕೊಂಡವರಾಗಿದ್ದಾರೆ. ಈ 100 ಕ್ರಿಡಾಪಟುಗಳ ಸುಮಾರು 4.5 ಬಿಲಿಯನ್ ಡಾಲರ್‌(ಸುಮಾರು 35 ಸಾವಿರ ಕೊಟಿ ರೂ) ಎಂದು ಅಂದಾಜಿಸಲಾಗಿದೆ. ಇಷ್ಟು ಆದಾಯವನ್ನು ಈ ಕ್ರೀಡಾಪಟುಗಳಿಗೆ ಕಳೆದ 12 ತಿಂಗಳಲ್ಲಿ ವೇತನ, ಬಹುಮಾನ ಮೊತ್ತ ಮತ್ತು ವಿವಿಧ ಜಾಹೀರಾತು ಅನುಮೋದನೆಗಳ ಮೂಲಕ ಪಡೆದಿದ್ದಾರೆ. ಇದು ಕಳೆದ ವರ್ಷಕ್ಕಿಂತ ಶೇ 6ರಷ್ಟು ಹೆಚ್ಚಾಗಿದೆ ಎಂದು sportico.com ವರದಿಯಲ್ಲಿ ತಿಳಿಸಿದೆ.

ಬ್ಯಾಸ್ಕೆಟ್‌ ಬಾಲ್ ಆಟಗಾರನಿಗೆ ಅಗ್ರಸ್ಥಾನ
ಅತಿ ಹೆಚ್ಚು ವೇತನ ಪಡೆಯುತ್ತಿರುವ ಕ್ರೀಡಾಪಟುಗಳ ಅಗ್ರ 10ರ ಪಟ್ಟಿಯಲ್ಲಿ ಬ್ಯಾಸ್ಕೆಟ್‌ ಬಾಲ್ ಸ್ಟಾರ್ ಲೆಬ್ರಾನ್ ಜೇಮ್ಸ್‌ ಟಾಪರ್‌ ಆಗಿದ್ದಾರೆ. ಅಮೆರಿಕಾದ ಈ ಕ್ರೀಡಾಪಟು ಹೆಚ್ಚು ಸಂಭಾವನೆ ಹೊಂದಿರದಿದ್ದರೂ, ವಿವಿಧ ಬ್ರಾಂಡ್‌ಗಳಿಂದ ಭಾರಿ ಅನುಮೋದನೆಗಳನ್ನು ಪಡೆದುಕೊಂಡಿದ್ದಾರೆ. ಅವರ 2022ರ ಒಟ್ಟು ಆದಾಯ 126.9 ಮಿಲಿಯನ್ ಡಾಲರ್ ಇದೆ. ಇದರಲ್ಲಿ ವೇತನ ಮತ್ತು ಬಹುಮಾನ ಮೊತ್ತ 36.9 ಮಿಲಿಯನ್‌ ಡಾಲರ್‌ ಪ ಮತ್ತು ಬ್ರ್ಯಾಂಡ್‌ ಅನುಮೋದನೆಗಳ ಮೂಲಕ 90 ಮಿಲಿಯನ್‌ ಡಾಲರ್‌ ಪಡೆಯುತ್ತಿದ್ದಾರೆ.

Messi, kohli, Hamilton; Highest-paid athlete in different sports in 2022

ದ್ವಿತೀಯ ಸ್ಥಾನದಲ್ಲಿ ಫುಟ್‌ ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ
ಫುಟ್‌ಬಾಲ್ ದಿಗ್ಗಜ ಅರ್ಜೆಂಟೈನಾದ ಲಿಯೋನಲ್ ಮೆಸ್ಸಿ 2022ರಲ್ಲಿ 100 ಮಿಲಿಯನ್ ಡಾಲರ್‌ ಗಳಿಕೆ ಕಂಡಿರುವ 2ನೇ ಕ್ರೀಡಾಪಟು ಎನಿಸಿಕೊಮಡಿದ್ದಾರೆ. ಇವರ ಒಟ್ಟು 2022ರ ಗಳಿಗೆ 122 ಮಿಲಿಯನ್ ಡಾಲರ್ ಇದೆ. 72 ಮಿಲಿಯನ್ ಡಾಲರ್ ಸಂಭಾವನೆ ಮತ್ತು ಬಹುಮಾನ ಮೊತ್ತದಿಂದ ಬಂದರೆ , 50 ಮಿಲಿಯನ್ ಡಾಲರ್‌ ಜಾಹೀರಾತು ಅನುಮೋದನೆಗಳಿಂದ ಬಂದಿದೆ. ಇವರು ಫುಟ್‌ಬಾಲ್‌ ಕ್ರೀಡೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿರುವ ಆಟಗಾರನಾಗಿದ್ದಾರೆ. ಸಮಕಾಲೀನ ಫುಟ್‌ಬಾಲ್ ಸ್ಟಾರ್‌ಗಳಾದ ಕ್ರಿಶ್ಚಿಯಾನೋ ರೊನಾಲ್ಡೊ ಮತ್ತು ನೇಮರ್ ಜೂನಿಯರ್ ಕೂಡ ಪ್ರಸಕ್ತ ವರ್ಷದಲ್ಲಿ 100 ಮಿಲಿಯನ್ ಡಾಲರ್ ಗಡಿ ದಾಟಿದ್ದಾರೆ.

ಕ್ರಿಕೆಟ್‌ನಲ್ಲಿ ಕೊಹ್ಲಿಯೇ ಕಿಂಗ್
ಇನ್ನು ಕ್ರಿಕೆಟ್‌ ಆಟಕ್ಕೆ ಬರುವುದಾದರೆ, ಭಾರತ ತಂಡದ ಮಾಜಿ ನಾಯಕಿ ವಿರಾಟ್‌ ಕೊಹ್ಲಿ ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟಿಗನಾಗಿದ್ದಾರೆ. ಹಾಗೂ ಒಟ್ಟಾರೆ 61ನೇ ಸ್ಥಾನ ಪಡೆದುಕೊಂಡಿದ್ದಾರೆ. ರನ್‌ಮಷಿನ್ ಖ್ಯಾತಿಯ ವಿರಾಟ್‌ 2022ರಲ್ಲಿ ಒಟ್ಟು 33.9 ಮಿಲಿಯನ್ ಡಾಲರ್‌ ಆದಾಯ ಗಳಿಸಿದ್ದಾರೆ. ಆರ್‌ಸಿಬಿ ಆಟಗಾರ ವೇತನದ 2.9 ಮಿಲಿಯನ್ ಡಾಲರ್ ಹಾಗೂ ಜಾಹೀರಾತುಗಳ ರಾಯಭಾರತ್ವದ ಮೂಲಕ 31 ಮಿಲಿಯನ್ ಡಾಲರ್‌ಗಳಿಸುತ್ತಿದ್ದಾರೆ.

ಬಾಕ್ಸಿಂಗ್‌ನಲ್ಲಿ ಸಾಲ್ ಕ್ಯಾನೆಲೊ ಅಲ್ವಾರೆಜ್ ಇದ್ದು, ಅವರು 89 ಮಿಲಿಯನ್‌ ಡಾಲರ್ ಪ್ರಸಕ್ತ ವರ್ಷದಲ್ಲಿ 89 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ. ಟೆನಿಸ್‌ನಲ್ಲಿ ಸ್ವಿಟ್ವರ್ಲೆಂಡ್‌ನ ರೋಜರ್‌ ಫೆಡರರ್‌(85 ಮಿಲಿಯನ್ ಡಾಲರ್), ಗಾಲ್ಫ್‌ನಲ್ಲಿ ಟೈಗರ್‌ ವುಡ್ಸ್‌( 73.5 ಮಿಲಿಯನ್ ಡಾಲರ್), ಅಮೆರಿಕನ್ ಫುಟ್‌ಬಾಲ್(ರಗ್ನಿ) ಮ್ಯೂಥ್ಯೂ ಸ್ಟಾಫೋರ್ಡ್‌(73.3 ಮಿಲಿಯನ್ ಡಾಲರ್), ಫಾರ್ಮುಲಾ 1 ರೇಸ್‌ನಲ್ಲಿ ಲೂಯಿಸ್ ಹ್ಯಾಮಿಲ್ಟನ್‌(54 ಮಿಲಿಯನ್ ಡಾಲರ್), ಮಾರ್ಷಲ್ ಆರ್ಟ್ಸ್‌ನಲ್ಲಿ ಕಾನರ್ ಮೆಕ್‌ಗ್ರೆಗಾರ್‌(52ಮಿಲಿಯನ್ ಡಾಲರ್), ಬೇಸ್‌ ಬಾಲ್‌ನಲ್ಲಿ ಮೈಕ್‌ ಟ್ರೌಟ್‌( 49.5 ಮಿಲಿಯನ್ ಡಾಲರ್) ಮತ್ತು ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ (33.9 ಮಿಲಿಯನ್ ಡಾಲರ್‌) ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

2022ರಲ್ಲಿ ವಿವಿಧ ಕ್ರೀಡೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿರುವ ಟಾಪ್ 10 ಕ್ರಿಡಾಪಟು ಹೆಸರು ಮತ್ತು ರ್‍ಯಾಂಕ್ ವಿವರ ಇಲ್ಲಿದೆ.

Recommended Video

Virat Kohli ಅವರ ದಾಖಲೆ ಮುರಿಯುತ್ತಾರಾ Jos Buttler | Oneindia Kannada

ಬ್ಯಾಸ್ಕೆಟ್‌ ಬಾಲ್--ಲೆಬ್ರಾನ್ ಜೇಮ್ಸ್- 126.9 ಮಿಲಿಯನ್ ಡಾಲರ್ -1 ನೇ ರ್‍ಯಾಂಕ್
ಫುಟ್‌ಬಾಲ್- ಲಿಯೋನೆಲ್ ಮೆಸ್ಸಿ- 122 ಮಿಲಿಯನ್ ಡಾಲರ್-2ನೇ ರ್‍ಯಾಂಕ್
ಬಾಕ್ಸಿಂಗ್- ಕ್ಯಾನೆಲೊ ಅಲ್ವಾರೆಜ್- 89 ಮಿಲಿಯನ್‌ ಡಾಲರ್- 5ನೇ ರ್‍ಯಾಂಕ್-
ಟೆನಿಸ್- ರೋಜರ್ ಫೆಡರರ್‌- 85 ಮಿಲಿಯನ್ ಡಾಲರ್- 8ನೇ ರ್‍ಯಾಂಕ್-
ಗಾಲ್ಫ್‌ -- ಟೈಗರ್ ವುಡ್ಸ್‌- 73.5 ಮಿಲಿಯನ್ ಡಾಲರ್10ನೇರ್‍ಯಾಂಕ್
ಅಮೆರಿಕನ್ ಫುಟ್‌ಬಾಲ್-ಮ್ಯಾಥ್ಯೂ ಸ್ಟೆಫಾರ್ಡ್- 73.3 ಮಿಲಿಯನ್ ಡಾಲರ್- 11ನೇ ರ್‍ಯಾಂಕ್
ಫಾರ್ಮುಲಾ 1 ರೇಸ್‌- ಲೂಯಿಸ್ ಹ್ಯಾಮಿಲ್ಟನ್‌-54 ಮಿಲಿಯನ್ ಡಾಲರ್-19ನೇ ರ್‍ಯಾಂಕ್
ಮಾರ್ಷಲ್ ಆರ್ಟ್ಸ್‌- ಕಾನರ್ ಮೆಕ್‌ಗ್ರೆಗಾರ್ -52ಮಿಲಿಯನ್ ಡಾಲರ್-22ನೇ ರ್‍ಯಾಂಕ್
ಬೇಸ್‌ ಬಾಲ್‌- ಮೈಕ್ ಟ್ರೌಂಟ್‌- 49.5ಮಿಲಿಯನ್ ಡಾಲರ್- 24ನೇ ರ್‍ಯಾಂಕ್
ಕ್ರಿಕೆಟ್‌- ವಿರಾಟ್‌ ಕೊಹ್ಲಿ-44.9 ಮಿಲಿಯನ್ ಡಾಲರ್- 61ನೇರ್‍ಯಾಂಕ್

English summary
LeBron James and Lionel Messi sit at the top of the mountain of the world’s highest-earning athletes as they both rake in over an estimated $120million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X