ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆಡಲು ರೋಹಿತ್ ಬದಲು ಮಯಾಂಕ್

|
Google Oneindia Kannada News

ಬೆಂಗಳೂರು/ಲಂಡನ್, ಜೂನ್ 27: ಅತಿಥೇಯ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವಾಡಬೇಕಿದ್ದ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮ ಅಲಭ್ಯರಾಗಿದ್ದಾರೆ. ರೋಹಿತ್ ಶರ್ಮಾ ಕೊರೊನಾಸೋಂಕು ತಗುಲಿಸಿಕೊಂಡಿದ್ದು, ಮೈದಾನಕ್ಕೆ ಇಳಿಯುವಂತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಐದನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ ಬದಲಿಗೆ ತಂಡಕ್ಕೆ ಮತ್ತೊಬ್ಬ ಆಟಗಾರರನ್ನು ಸೇರ್ಪಡೆಗೊಳಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಾಗಿದೆ.

ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಅವರು ಸೋಮವಾರವೇ ತಮ್ಮ ಸಾಮಾಗ್ರಿಗಳನ್ನು ಪ್ಯಾಕ್ ಮಾಡಿಕೊಂಡು ಇಂಗ್ಲೆಂಡ್ ವಿಮಾನ ಏರುವಂತೆ ಸೂಚನೆ ನೀಡಲಾಗಿದೆ. ಟೀಂ ಇಂಡಿಯಾ ಸದಸ್ಯರು ಈಗಾಗಲೇ ಇಂಗ್ಲೆಂಡ್ ನಲ್ಲಿ ಅಭ್ಯಾಸ ಪಂದ್ಯವನ್ನಾಡುತ್ತಿದ್ದಾರೆ.

ಕ್ವಾರಂಟೈನ್ ನಿಯಮ ಬದಲು: ಇತ್ತೀಚಿಗೆ ಕೇಂದ್ರ ಸರ್ಕಾರ ನೀಡಿರುವ ಕೋವಿಡ್ ಪರಿಷ್ಕೃತ ನಿಯಮಗಳ ಪ್ರಕಾರ, ಮಯಾಂಕ್ ಅಗರ್ವಾಲ್ ಯಾವುದೇ ಕ್ವಾರಂಟೈನ್‌ಗೆ ಒಳಗಾಗುವ ಅಗತ್ಯವಿಲ್ಲ ಮತ್ತು ಅಗತ್ಯವಿದ್ದರೆ ತಕ್ಷಣವೇ ಆಡಲು ಲಭ್ಯವಿರುತ್ತಾರೆ. ಇದಕ್ಕೂ ಮೊದಲು, ಮೇನಲ್ಲಿ ಹೆಸರಿಸಲಾದ ಎಡ್ಜ್‌ಬಾಸ್ಟನ್ ಟೆಸ್ಟ್‌ಗಾಗಿ ಟೀಮ್ ಇಂಡಿಯಾದ ತಂಡದಿಂದ ಅಗರ್ವಾಲ್ ಹೊರಗುಳಿದಿದ್ದರು. ಆದರೆ ಕೆಎಲ್ ರಾಹುಲ್ ಅವರ ಗಾಯ ಮತ್ತು ರೋಹಿತ್ ಶರ್ಮಾ ಅವರ ಚೇತರಿಕೆಯ ಮೇಲಿನ ಅನುಮಾನಗಳು ಅವರಿಗೆ ಅವಕಾಶವನ್ನು ನೀಡಿವೆ.

Mayank Agarwal to join Team India ahead of the rescheduled 5th Test match against England


ಕಳೆದ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ ಅಗರ್ವಾಲ್ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು, ಎರಡು ಪಂದ್ಯಗಳಲ್ಲಿ 19.66 ಸರಾಸರಿಯಲ್ಲಿ ಕೇವಲ 59 ರನ್ ಗಳಿಸಿದರು. ನಂತರ, ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ನಾಯಕತ್ವ ವಹಿಸಿದ್ದರು. 14 ಪಂದ್ಯಗಳಲ್ಲಿ 196 ರನ್ ಗಳಿಸಿದ್ದರು. ಸರಾಸರಿ 16.33 ಮತ್ತು ಸ್ಟ್ರೈಕ್ ರೇಟ್ 122.5 ನಂತೆ ಸ್ಕೋರ್ ಮಾಡಿ ಕಳಪೆ ಪ್ರದರ್ಶನ ನೀಡಿದ್ದರು. ಅವರ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿತು.

ಈಗ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದು, ಜುಲೈ 1 ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಕಣಕ್ಕಿಳಿಯಲು ಮಯಾಂಕ್ ತೆರಳಬೇಕಿದೆ. ಕೋವಿಡ್ 19 ಕಾರಣದಿಂದ 2022ಕ್ಕೆ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿತ್ತು.

Recommended Video

Rohit ಅಲಭ್ಯತೆಯಲ್ಲಿ ಇಂಗ್ಲೆಂಡ್ ನಲ್ಲಿ‌ ಮಿಂಚುತ್ತಾರಾ ಮಯಾಂಕ್ ಅಗರ್ವಾಲ್ | *Cricket | OneIndia Kannada

English summary
Rohit Sharma had tested positive for COVID-19 following a Rapid Antigen Test (RAT) conducted on Saturday. According to ESPNcricinfo, Agarwal will fly out to England on Monday and link up with the rest of the Indian squad this evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X