ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸ್ಪೋರ್ಟ್ಸ್ ಅಪ್ಲಿಕೇಶನ್ 'WhatsInTheGame'ಗೆ ಚಾಲನೆ

|
Google Oneindia Kannada News

ಬೆಂಗಳೂರು, ಜುಲೈ 28: ಹೊಚ್ಚ ಹೊಸ ಕ್ರೀಡಾ ಮಾಧ್ಯಮ ಮತ್ತು ಟೆಕ್ ಸ್ಟಾರ್ಟ್-ಅಪ್ 'WhatsInTheGame' ಗೆ ಅದ್ಧೂರಿ ಚಾಲನೆ ದೊರೆತಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ಡೌನ್ಲೋಡ್ ಮಾಡಲು ಈ ಅಪ್ಲಿಕೇಶನ್ ಲಭ್ಯವಿದೆ.

ಖ್ಯಾತ ಶಟ್ಲರ್ ಪಿ. ಸಾಯಿ ಪ್ರಣೀತ್ ಅವರ ಸಹಯೋಗದಲ್ಲಿ ಸಂಸ್ಥಾಪಕ ಅನಿಲ್ ಕುಮಾರ್ ಮಮಿದಾಳ, ಇಜೆಬಿ ಪ್ರಮೀಳಾ ಅವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ವಾಟ್ಸ್ ಇನ್ ದ ಗೇಮ್ ('WhatsInTheGame') ವೆಬ್ 3.0 ಮಾಧ್ಯಮವಾಗಿದ್ದು, ಮೆಟಾವರ್ಸ್ ಸ್ಪೋಟ್ರ್ಸ್ ಅಪ್ಲಿಕೇಶನ್ 60 ಅಥವಾ ಅದಕ್ಕೂ ಕಡಿಮೆ ಪದಗಳಲ್ಲಿ ಕಿರು ಸುದ್ದಿಯನ್ನು ನೀಡುವ ಆಪ್‌ ಆಗಿದೆ.

ಕ್ರೀಡಾಪಟುಗಳಿಗಾಗಿ ಆನ್‌ಲೈನ್ ಪೋರ್ಟಲ್ ಆರಂಭಿಸಿದ ಕ್ರೀಡಾ ಸಚಿವಾಲಯಕ್ರೀಡಾಪಟುಗಳಿಗಾಗಿ ಆನ್‌ಲೈನ್ ಪೋರ್ಟಲ್ ಆರಂಭಿಸಿದ ಕ್ರೀಡಾ ಸಚಿವಾಲಯ

ಇದು ಪಂದ್ಯಾವಳಿಗಳ ವೇಳಾಪಟ್ಟಿಗಳು ಮತ್ತು ಎಲ್ಲ ಜಾಗತಿಕ ಕ್ರೀಡೆಗಳ ಫಲಿತಾಂಶ, ಅಂಕಪಟ್ಟಿ ಸಹಿತ ಎಲ್ಲ ಕ್ರೀಡಾ ಸುದ್ದಿಗಳನ್ನು ನೀಡುತ್ತದೆ. ಸ್ಟಾರ್ಟ್-ಅಪ್ ಬಿಡುಗಡೆ ಸಮಾರಂಭದಲ್ಲಿ ತೆಲಂಗಾಣದ ಕೈಗಾರಿಕೆಗಳು, ವಾಣಿಜ್ಯ ಮತ್ತು ಐಟಿ ಖಾತೆ ಸಚಿವ ಕೆ.ಟಿ. ರಾಮರಾವ್, ಭಾರತೀಯ ಬ್ಯಾಡ್ಮಿಂಟನ್ ತಂಡದ ಪ್ರಧಾನ ಕೋಚ್ ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಪುಲ್ಲೇಲ ಗೋಪಿಚಂದ್, ತೆಲಂಗಾಣದ ಸೆರಿಲಿಂಗಂಪಲ್ಲಿ ಕ್ಷೇತ್ರದ ಶಾಸಕರಾಗಿರುವ ಅರೆಕಪುಡಿ ಗಾಂಧಿ, ತೆಲಂಗಾಣ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯ, ಮತ್ತು ಐಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್ ಮುಖ್ಯ ಅತಿಥಿಗಳಾಗಿದ್ದರು.

Launch of new Sports App WhatsInTheGame

ಸಚಿವ ಕೆ.ಟಿ. ರಾಮರಾವ್ ಮಾತನಾಡಿ, ಸ್ಟಾರ್ಟ್ ಅಪ್ ಉದ್ಯಮಗಳಲ್ಲಿ ಹೈದರಾಬಾದ್ ಈಗ ವಿಜೃಂಭಿಸುತ್ತಿದೆ. ಪ್ರತಿಭಾವಂತರ ತಂಡದ ಈ ಪ್ರಯತ್ನ ಶ್ಲಾಘನೀಯವಾಗಿದೆ. ಈ ವೆಬ್‍ಸೈಟ್ ಅನಾವರಣದ ಜತೆಗೆ ಮುತ್ತಿನ ನಗರಿಯ ಖ್ಯಾತಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ ಎಂದು ಹೇಳಿದರು.

ಸಂಸ್ಥಾಪಕ ಅನಿಲ್ ಕುಮಾರ್ ಮಮಿದಾಳ ಮಾತನಾಡಿ, ನಮ್ಮ ಕನಸೊಂದು ನನಸಾಗಿರುವ ಅದ್ಭುತ ದಿನವಿದು. ಇದನ್ನು ಇನ್ನೂ ದೊಡ್ಡದಾಗಿ ಬೆಳೆಸಲು ಮತ್ತು ನಮ್ಮಂತೆಯೇ ಕ್ರೀಡೆಯನ್ನು ಪ್ರೀತಿಸುವ ಜನರಿಗೆ ಬೇಕಾದ ಎಲ್ಲ ವಿಷಯಗಳೂ ಲಭ್ಯವಾಗುವಂತೆ ಮಾಡಲು ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ. ಕ್ರೀಡಾಪ್ರೇಮಿಗಳಿಗೆ ಈ ಅಪ್ಲಿಕೇಶನ್ ಸಂಪೂರ್ಣ ಹೊಸ ಆಯಾಮದೊಂದಿಗೆ ಲಭ್ಯವಿದೆ. ಈಗಾಗಲೇ ನಾವು ಮೆಟಾವರ್ಸ್ ಮತ್ತು ವೆಬ್ 3.0 ತಂತ್ರಜ್ಞಾನಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಲು ತುಂಬಾ ಹೆಮ್ಮೆಪಡುತ್ತೇನೆ ಎಂದರು.

Launch of new Sports App WhatsInTheGame

ಸಂಸ್ಥೆಯ ಪಾಲುದಾರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರರಾದ ಸಾಯಿ ಪ್ರಣೀತ್ ಬಿ. ಮಾತನಾಡಿ, ಕ್ರೀಡಾಪಟು ಮತ್ತು ಕ್ರೀಡಾ ಪ್ರೇಮಿಯಾಗಿ ಈ ಪಯಣದ ಭಾಗವಾಗಿದ್ದೇನೆ, ಚಂದ್ರನ ಮೇಲಿರುವಂತೆ ನನಗೆ ಭಾಸವಾಗುತ್ತಿದೆ. ಯಾವುದೇ ವಯೋಮಾನ, ಲಿಂಗ, ಆಟದ ಹಂತದಲ್ಲಿರುವ ಕ್ರೀಡಾಪಟುಗಳು ತಮ್ಮ ಆಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಿದ್ದು, ಅವರಿಗೆ ಸಹಾಯ ಮಾಡುವ ವಿಭಿನ್ನ ವೈಶಿಷ್ಟ್ಯಗಳನ್ನು ಸೇರಿಸಲು ನಾವು ಯೋಜಿಸಿದ್ದೇವೆ ಎಂದು ನುಡಿದರು.

English summary
Brand new sports media and tech start-up 'WhatsInTheGame' is off to a flying start. This app is available for download on Android and iOS devices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X