ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಂಪತ್ಯದಲ್ಲಿ ಬಿರುಕು: ವದಂತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್

|
Google Oneindia Kannada News

ನವದೆಹಲಿ, ಆಗಸ್ಟ್ 19: ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ನಡುವೆ ಮನಸ್ತಾಪ ಶುರುವಾಗಿದೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿತ್ತು. ಇಬ್ಬರ ಇತ್ತೀಚಿನ ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದವು. ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಪ್ರಿಯ ಜೋಡಿಯಾಗಿದ್ದರು.

ಧನಶ್ರೀ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ತನ್ನ ಹೆಸರಿನಿಂದ 'ಚಹಲ್' ಅನ್ನು ತೆಗೆದುಹಾಕಿದ್ದಾರೆ ಮತ್ತು ದಂಪತಿಗಳ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಬಗ್ಗೆ ಅಭಿಮಾನಿಗಳು ತೀವ್ರವಾಗಿ ಚರ್ಚೆ ಮಾಡುತ್ತಿದ್ದಾರೆ. ಇದಲ್ಲದೆ, ಯುಜ್ವೇಂದ್ರ ಚಾಹಲ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ, ಅಲ್ಲಿ ಅವರು "ಹೊಸ ಜೀವನವನ್ನು" ಪ್ರಾರಂಭಿಸುವ ಬಗ್ಗೆ ಪೋಸ್ಟ್ ಮಾಡಿದ್ದು, ಚರ್ಚೆ ಹೆಚ್ಚಾಗಲು ಕಾರಣವಾಯಿತು.

ಸೂರ್ಯಕುಮಾರ್ ಹೊಸ ಕಾರು 2 ಕೋಟಿ; ಇನ್ನೂ ದುಬಾರಿ ಕಾರು ಹೊಂದಿರುವ ಕ್ರಿಕೆಟಿಗರಿವರುಸೂರ್ಯಕುಮಾರ್ ಹೊಸ ಕಾರು 2 ಕೋಟಿ; ಇನ್ನೂ ದುಬಾರಿ ಕಾರು ಹೊಂದಿರುವ ಕ್ರಿಕೆಟಿಗರಿವರು

ಯಾವಾಗ ಸಾಮಾಜಿಕ ಮಾಧ್ಯಮದಲ್ಲಿ ಯುಜ್ವೇಂದ್ರ ಚಹಾಲ್ ವೈವಾಹಿಕ ಸಂಬಂಧದ ಬಗ್ಗೆ ಚರ್ಚೆಗಳು ಹೆಚ್ಚಾದವೋ, ಯುಜ್ವೇಂದ್ರ ಚಹಾಲ್ ಕೊನೆಗೂ ಮೌನ ಮುರಿದರು. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಅವರು, ವದಂತಿಗಳನ್ನು ನಂಬದಂತೆ ಅಭಿಮಾನಿಗಳಿಗೆ ಮನವಿ ಮಾಡಿದರು.

 ವದಂತಿಗಳನ್ನು ನಂಬದಂತೆ ಚಹಾಲ್ ಮನವಿ

ವದಂತಿಗಳನ್ನು ನಂಬದಂತೆ ಚಹಾಲ್ ಮನವಿ

ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೇಳಿಕೆ ಪೋಸ್ಟ್ ಮಾಡಿರುವ ಯುಜ್ವೇಂದ್ರ ಚಹಾಲ್, "ನಮ್ಮ ಸಂಬಂಧಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಎಂದು ನಿಮ್ಮೆಲ್ಲರಿಗೂ ವಿನಮ್ರ ವಿನಂತಿ. ದಯವಿಟ್ಟು, ಇದನ್ನು ಕೊನೆಗೊಳಿಸಿ. ಎಲ್ಲರಿಗೂ ಪ್ರೀತಿ ಮತ್ತು ಬೆಳಕು ಸಿಗಲಿ" ಎಂದು ಬರೆದುಕೊಂಡಿದ್ದಾರೆ.

ಚಹಾಲ್ ಧನಶ್ರೀ ಅವರನ್ನು ಡಿಸೆಂಬರ್ 2020 ರಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು ಮತ್ತು ದಂಪತಿಗಳು ಪ್ರಮುಖ ಸಾಮಾಜಿಕ ಮಾಧ್ಯಮಗಳಲ್ಲಿ ಒಟ್ಟಾಗಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು.

ಶಿಸ್ತುಬದ್ದ ಆಹಾರ, ಪ್ರತಿ ದಿನ ವ್ಯಾಯಾಮ : ಫಿಟ್‌ನೆಸ್‌ ಗುಟ್ಟು ಹೇಳಿದ ವಿರಾಟ್ ಕೊಹ್ಲಿಶಿಸ್ತುಬದ್ದ ಆಹಾರ, ಪ್ರತಿ ದಿನ ವ್ಯಾಯಾಮ : ಫಿಟ್‌ನೆಸ್‌ ಗುಟ್ಟು ಹೇಳಿದ ವಿರಾಟ್ ಕೊಹ್ಲಿ

 ಅನುಮಾನಕ್ಕೆ ಕಾರಣ ಚಹಾಲ್ ಇನ್‌ಸ್ಟಾಗ್ರಾಂ ಪೋಸ್ಟ್

ಅನುಮಾನಕ್ಕೆ ಕಾರಣ ಚಹಾಲ್ ಇನ್‌ಸ್ಟಾಗ್ರಾಂ ಪೋಸ್ಟ್

ಭಾರತದ ಪ್ರಮುಖ ಚಹಾಲ್ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪೋಸ್ಟ್ ಒಂದು ಅನುಮಾನ ಮೂಡಲು ಕಾರಣವಾಯಿತು. ಹೊಸ ಜೀವನ ಶುರುವಾಗುತ್ತಿದೆ (New Life Loading) ಎಂದು ಬರೆದ ಫೊಟೋವೊಂದನ್ನು ಹಂಚಿಕೊಂಡಿದ್ದರು. ಸದ್ಯ ಯುಜ್ವೇಂದ್ರ ಚಹಾಲ್ ಏಷ್ಯಾಕಪ್‌ಗೆ ಆಡಲು ಸಿದ್ಧತೆಯಲ್ಲಿದ್ದಾರೆ.

ಯಾವ ಅರ್ಥದಲ್ಲಿ ಚಹಾಲ್ ಈ ಪೋಸ್ಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ಚಹಾಲ್ ಪತ್ನಿ ಧನಶ್ರೀ ವರ್ಮಾ ಕೂಡ ತಮ್ಮ ಹೆಸರಿನ ಜೊತೆ ಇದ್ದ 'ಚಹಲ್' ಪದವನ್ನು ತೆಗೆದುಹಾಕಿರುವುದು ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.

 ರೀಲ್ಸ್ ಮಾಡಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ ಜೋಡಿ

ರೀಲ್ಸ್ ಮಾಡಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ ಜೋಡಿ

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ಜೋಡಿ ಪರಸ್ಪರರ ಇನ್‌ಸ್ಟಾಗಮ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲಿ ಚಹಾಲ್ ತನ್ನ ಹೆಂಡತಿಯೊಂದಿಗೆ ಹೆಜ್ಜೆ ಹಾಕುತ್ತಿರುವುದು ನೋಡಬಹುದಾಗಿದೆ. ಚಹಲ್ ರಾಷ್ಟ್ರೀಯ ತಂಡಕ್ಕಾಗಿ ಮತ್ತು ಐಪಿಎಲ್ ಆಡುವಾಗ ಕೂಡ ಧನಶ್ರೀ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ವರ್ಷದ ಆರಂಭದಲ್ಲಿ, ಧನಶ್ರೀ ಐಪಿಎಲ್‌ನಾದ್ಯಂತ ತನ್ನ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು ಮತ್ತು ರಾಜಸ್ಥಾನ್ ರಾಯಲ್ಸ್‌ನ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಜೊತೆಗೆ ರೀಲ್‌ಗಳನ್ನು ಹಂಚಿಕೊಂಡಿದ್ದರು.

 ವದಂತಿಗಳ ಹಲವು ಮೀಮ್ ವೈರಲ್

ವದಂತಿಗಳ ಹಲವು ಮೀಮ್ ವೈರಲ್

ಯುಜುವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ಗುರುವಾರ ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡ್ ಆಗಿದ್ದು, ಅವರ ವಿಚ್ಛೇದನದ ವರದಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಧನಶ್ರೀ ಮತ್ತು ಚಹಾಲ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಅಭಿಮಾನಿಗಳು ನಂಬಿದ್ದಾರೆ.

ಒಂದೆಡೆ ಈ ಜೋಡಿಯ ಅಭಿಮಾನಿಗಳು ಶಾಕ್ ಮತ್ತು ಆತಂಕದಲ್ಲಿದ್ದರೆ, ಇನ್ನೊಂದೆಡೆ ನೆಟಿಜನ್‌ಗಳು ಟ್ವಿಟ್ಟರ್‌ನಲ್ಲಿ ಮೀಮ್‌ಗಳನ್ನು ಹಂಚಿಕೊಂಡರು. ಕೆಲವರು ಧನಶ್ರೀ ಪರ ಬೆಂಬಲಕ್ಕೆ ನಿಂತರೆ, ಇನ್ನು ಕೆಲವರು ಇಬ್ಬರು ದೂರವಾಗಲು ಧನಶ್ರೀ ಅವರೇ ಕಾರಣ ಎಂದು ದೂರಿದರು.

English summary
After debate erupt on Social Media, Yuzvendra Chahal has Finally opened up about rift with his wife Dhanashree Verma. He Wrote, "A humble request to you all to not believe in any sort of rumours pertaining to our relationship. Kindly, put an end to it. Love and light to everyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X