ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಆಡದಂತೆ ತುಂಬಾ ಜನ ಸಲಹೆ ನೀಡಿದ್ದರು: ಜಾನಿ ಬೈರ್ ಸ್ಟೋವ್

|
Google Oneindia Kannada News

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅದ್ಭುತ ಜಯ ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಜಯಗಳಿಸುವ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಟೆಸ್ಟ್‌ನ ಅಂತಿಮ ದಿನದಂದು 299 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, ಜಾನಿ ಬೈರ್‌ಸ್ಟೋವ್ (92 ಎಸೆತಗಳಲ್ಲಿ136 ರನ್) ಅವರು ಅಮೋಘ ಆಟವಾಡಿದರು. ಬೆನ್ ಸ್ಟೋಕ್ಸ್ ಕೇವಲ 70 ಎಸೆತಗಳಲ್ಲಿ 75 ರನ್ ಗಳಿಸಿ ಆತಿಥೇಯ ತಂಡವು ಐದು ವಿಕೆಟ್‌ಗಳೊಂದಿಗೆ ಗುರಿಯನ್ನು ಬೆನ್ನಟ್ಟಿತು.

299 ರನ್ ಗುರು ಬೆನ್ನಟ್ಟಿದ ಇಂಗ್ಲೆಂಡ್ ನಾಲ್ಕು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು ಮತ್ತು ಒಂದು ಹಂತದಲ್ಲಿ 93/4 ರನ್ ಗಳಿಸಿ ಸೋಲುವ ಭೀತಿ ಎದುರಿಸತ್ತು. ಆದರೆ, ಬೈರ್‌ಸ್ಟೋವ್ ಬಿರುಸಿನ ಹೊಡೆತಕ್ಕೆ ಮುಂದಾದರು, ಟೆಸ್ಟ್ ಕ್ರಿಕೆಟ್‌ನಲ್ಲಿ ರಕ್ಷಣಾತ್ಮಕ ಆಟವಾಡದೆ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಬೈರ್‌ ಸ್ಟೋವ್ ಇಂಗ್ಲೆಂಡ್ ತಂಡವನ್ನು ಗೆಲುವಿನತ್ತ ಮುನ್ನೆಡಿಸಿದರು.

ಐಪಿಎಲ್ ಮಾಧ್ಯಮ ಹಕ್ಕು ಸ್ಟಾರ್, ವಯಾಕಾಮ್ 18, ಟೈಮ್ಸ್ ಇಂಟರ್‌ನಟ್‌ ಪಾಲು: 48,390 ಕೋಟಿ ರೂ.ಗೆ ಮಾರಾಟಐಪಿಎಲ್ ಮಾಧ್ಯಮ ಹಕ್ಕು ಸ್ಟಾರ್, ವಯಾಕಾಮ್ 18, ಟೈಮ್ಸ್ ಇಂಟರ್‌ನಟ್‌ ಪಾಲು: 48,390 ಕೋಟಿ ರೂ.ಗೆ ಮಾರಾಟ

92 ಎಸೆತಗಳನ್ನು ಎದುರಿಸಿದ ಬೈರ್‌ಸ್ಟೋವ್ 136 ರನ್ ಗಳಿಸಿದರು, ಇದರಲ್ಲಿ 14 ಫೋರ್ ಮತ್ತು 6 ಭರ್ಜರಿ ಸಿಕ್ಸರ್ ಸೇರಿವೆ. ಅವರು ಔಟ್‌ ಆಗುವ ವೇಳೆಗೆ 20 ಓವರ್‌ ಗಳಿಗೆ 27 ರನ್ ಗಳಿಸಬೇಕಾಗಿತ್ತು, ನಂತರ ಬೆನ್‌ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ಗುರಿ ಮುಟ್ಟಿಸಿದರು.

ಐಪಿಎಲ್ ಆಡದಂತೆ ಹಲವರ ಸಲಹೆ

ಐಪಿಎಲ್ ಆಡದಂತೆ ಹಲವರ ಸಲಹೆ

ಪಂದ್ಯದ ಗೆಲುವಿನ ನಂತರ ಮಾತನಾಡಿರುವ ಜಾನಿ ಬೈರ್ ಸ್ಟೋವ್ ತಮಗೆ ಐಪಿಎಲ್ ಆಡದಂತೆ ಹೇಳಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಐಪಿಎಲ್ ಆಡುವ ಸಲುವಾಗಿ ಕೌಂಟಿ ಚಾಂಪಿಯನ್‌ ಶಿಪ್ ಕೈಬಿಟ್ಟ ನಿರ್ಧಾರ ಕೈಗೊಂಡಿದ್ದೇಕೆ ಎಂದು ಉತ್ತರ ನೀಡಿದ್ದಾರೆ.

"ನಾನು ಐಪಿಎಲ್‌ ಆಡಬಾರದು ಅದರ ಬದಲಾಗಿ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಆಡಬೇಕು ಎಂದು ಬಹಳಷ್ಟು ಜನರು ಹೇಳುತ್ತಿದ್ದರು" ಎಂದು ಬೈರ್ ಸ್ಟೋವ್ ಹೇಳಿದ್ದಾರೆ. ಟಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಸಿಡಿಸಲು ಐಪಿಎಲ್‌ನಲ್ಲಿ ಆಡಿದ ಅನುಭವವೇ ಕಾರಣ ಎಂದು ಹೇಳಿದ್ದಾರೆ.

ಪ್ರೀಮಿಯರ್ ಲೀಗ್‌ಗಿಂತಲೂ ದುಬಾರಿಯಾಯ್ತು IPL... NFL ಒಂದೇ ಬಾಕಿಪ್ರೀಮಿಯರ್ ಲೀಗ್‌ಗಿಂತಲೂ ದುಬಾರಿಯಾಯ್ತು IPL... NFL ಒಂದೇ ಬಾಕಿ

ಶ್ರೇಷ್ಠ ಆಟಗಾರರ ಜೊತೆ ಆಡಿದ್ದೇನೆ

ಶ್ರೇಷ್ಠ ಆಟಗಾರರ ಜೊತೆ ಆಡಿದ್ದೇನೆ

ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಬೈರ್ ಸ್ಟೋವ್, ಐಪಿಎಲ್‌ನಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ಜೊತೆ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ. ನಮ್ಮ ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯಮಾಡುತ್ತದೆ, ಆಟದ ಹೊಸ ವಿಧಾನಗಳನ್ನು ಕಲಿಯುವ ಮತ್ತು ಬದಲಾಯಿಸಲು ಐಪಿಎಲ್ ಟೂರ್ನಿ ಸಹಾಯ ಮಾಡುತ್ತದೆ ಎಂದಿದ್ದಾರೆ. ಎಲ್ಲಾ ಟೂರ್ನಿಗಳಿಗಾಗಿ ನಮ್ಮ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳಲಾಗದು, ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ಕೆಲವು ಅತ್ಯುತ್ತಮ ಟೂರ್ನಿಗಳಲ್ಲಿ ಆಡಲು ನಾನು ಅದೃಷ್ಟ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಒತ್ತಡದ ಸನ್ನಿವೇಶದಲ್ಲಿ ಆಡುವುದು ಇಷ್ಟ

ಒತ್ತಡದ ಸನ್ನಿವೇಶದಲ್ಲಿ ಆಡುವುದು ಇಷ್ಟ

ಒತ್ತಡದಲ್ಲಿ ಆಡುವುದನ್ನು ಇಷ್ಟಪಡುತ್ತೇನೆ ಎಂದು ಹೇಳಿರುವ ಬೈರ್ ಸ್ಟೋವ್, ಒತ್ತಡದ ಸಂದರ್ಭದಲ್ಲಿ ಅತ್ಯತ್ತಮವಾಗಿ ಬ್ಯಾಟ್ ಮಾಡುವುದನ್ನು ಕಲಿಯಲು ಐಪಿಎಲ್ ಸಾಕಷ್ಟು ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ಇತರೆ ಪಂದ್ಯಗಳಲ್ಲೂ ಒತ್ತಡವನ್ನು ನಿಭಾಯಿಸುವುದನ್ನು ಕಲಿತಿದ್ದೇನೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ತಾನು ಉತ್ತಮ ಪ್ರದರ್ಶನ ನೀಡಲು ಇದೇ ಕಾರಣ ಎಂದು ಹೇಳಿದ್ದಾರೆ.

ತಂಡದ ಪ್ರದರ್ಶನಕ್ಕೆ ಸಂತಸ

ತಂಡದ ಪ್ರದರ್ಶನಕ್ಕೆ ಸಂತಸ

"ಒತ್ತಡದ ಸಂದರ್ಭಗಳಲ್ಲಿ, ನೀವು ಹೆಚ್ಚು ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಆಗ ನೀವು ಈ ಹಿಂದೆ ಅನುಭವಿಸಿದ ಅದೇ ರೀತಿಯ ಒತ್ತಡದ ಸನ್ನಿವೇಶಗಳು, ಅದು ಐಪಿಎಲ್‌ನಲ್ಲಿರಲಿ, ಏಕದಿನ ಕ್ರಿಕೆಟ್ ಆಗಿರಲಿ, ಅಥವಾ ಟೆಸ್ಟ್ ಕ್ರಿಕೆಟ್ ಆಗಿರಲಿ, ನೀವು ನಿಭಾಯಿಸಲು ಸಹಾಯ ಮಾಡುತ್ತದೆ. ಕೊನೆಯದಾಗಿ ಆಟದ ಫಲಿತಾಂಶ ಏನೇ ಆದರೂ ನಾವು ನಮ್ಮ ಪ್ರದರ್ಶನ ನೀಡಬೇಕು. ಕಳೆದ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವಾಗಿ ಉತ್ತಮ ಪ್ರದರ್ಶನ ನೀಡಿದೆ, ಮುಂದಿನ ಪಂದ್ಯದಲ್ಲೂ ಒಂದು ತಂಡವಾಗಿ ಪ್ರದರ್ಶನ ನೀಡುವ ವಿಶ್ವಾಸವಿದೆ" ಎಂದು ಹೇಳಿಕೊಂಡಿದ್ದಾರೆ.

ಐಪಿಎಲ್‌ನ 2022ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ 11 ಪಂದ್ಯಗಳನ್ನಾಡಿರುವ ಜಾನಿ ಬೈರ್ ಸ್ಟೋವ್ 144.57 ಸ್ಟ್ರೈಕ್ ರೇಟ್‌ನಲ್ಲಿ 253 ರನ್ ಗಳಿಸಿದ್ದಾರೆ.

English summary
Bairstow spoke about his decision to skip the County Championships for the 2022 Indian Premier League. He Said IPL Helps him to play like such conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X