ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪಿಲ್ ದೇವ್ ಬಳಿಕ ಭಾರತ ಟೆಸ್ಟ್ ತಂಡಕ್ಕೆ ನಾಯಕನಾದ 2ನೇ ವೇಗಿ ಬುಮ್ರಾ

|
Google Oneindia Kannada News

ಎಡ್ಜ್​ಬಾಸ್ಟನ್ ,ಜೂನ್ 30: ಇಂಗ್ಲೆಂಡ್​ ವಿರುದ್ಧ ಶುಕ್ರವಾರದಿಂದ ಆರಂಭಗೊಳ್ಳಲಿರುವ 5ನೇ ಹಾಗೂ ಟೆಸ್ಟ್​​ ಪಂದ್ಯದಲ್ಲಿ ಖಾಯಂ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ವೇಗಿ ​ ಜಸ್ಪ್ರೀತ್​ ಬುಮ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಗುರುವಾರ ಭಾರತೀಯ ಕ್ರಿಕೆಟ್ ಮಂಡಳಿ ಟ್ವಿಟರ್‌ನಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಈ ಪಂದ್ಯಕ್ಕೆ ಉಪನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್​ ರಿಷಬ್​ ಪಂಥ್‌​ರನ್ನು ನೇಮಕ ಮಾಡಲಾಗಿದೆ. ಕಳೆದ ವಾರ ರೋಹಿತ್ ಶರ್ಮಾ ಕೋವಿಡ್​ 19 ಸೋಂಕಿಗೆ ತುತ್ತಾಗಿದ್ದು, ಸಂಪೂರ್ಣ ಗುಣಮುಖರಾಗದ ಕಾರಣ ಅವರು ವಿಶ್ರಾಂತಿಯಲ್ಲಿರಲಿದ್ದಾರೆ.

 ದಕ್ಷಿಣ ಆಫ್ರಿಕಾ ತಂಡಕ್ಕೆ 6 ವರ್ಷಗಳ ನಂತರ ಮರಳಿದ ರಿಲೀ ರೋಸೋ ದಕ್ಷಿಣ ಆಫ್ರಿಕಾ ತಂಡಕ್ಕೆ 6 ವರ್ಷಗಳ ನಂತರ ಮರಳಿದ ರಿಲೀ ರೋಸೋ

35 ವರ್ಷಗಳ ನಂತರ ವೇಗದ ಬೌಲರ್‌ಗೆ ನಾಯಕತ್ವ; ಜಸ್ಪ್ರೀತ್ ಬುಮ್ರಾ ನಾಯಕನಾಗಿ ಆಯ್ಕೆಯಾಗುವ ಮೂಲಕ 35 ವರ್ಷಗಳ ಬಳಿಕ ಭಾರತದ ನಾಯಕನಾದ ವೇಗದ ಬೌಲರ್ ಎಂಬ ಹಿರಿಮೆ ಪಾತ್ರರಾಗಿದ್ದಾರೆ. ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ತಂದುಕೊಟ್ಟ ನಾಯಕ ಕಪಿಲ್​ ದೇವ್​ ಈ ಹಿಂದೆ ಕೊನೆಯ ಬಾರಿ ಭಾರತ ತಂಡವನ್ನು ಮುನ್ನಡೆಸಿದ್ದ ವೇಗದ ಬೌಲರ್ ಆಗಿದ್ದರು.

Jasprith Bumrah Becomes 2nd fast Bowler to lead Team India in after Kapil Dev

ಎರಡು ತಂಡಗಳಿಗೂ ಹೊಸ ನಾಯಕರು; ಕಳೆದ ವರ್ಷ ಕೋವಿಡ್‌ 19 ಕಾರಣ 5 ಪಂದ್ಯಗಳ ಸರಣಿ ಇನ್ನು ಒಂದು ಪಂದ್ಯ ಇದ್ದಂತೆಯೇ ಮುಂದೂಡಲ್ಪಟ್ಟಿತ್ತು. ಆಗ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರೆ, ಇಂಗ್ಲೆಂಡ್ ತಂಡವನ್ನು ಜೋ ರೂಟ್‌ ಮುನ್ನಡೆಸಿದ್ದರು. ಇದೀಗ ಇಂಗ್ಲೆಂಡ್ ತಂಡಕ್ಕೆ ಬೆನ್‌ ಸ್ಟೋಕ್ಸ್ ಮತ್ತು ಭಾರತ ತಂಡವನ್ನು ಬುಮ್ರಾ ಮುನ್ನಡೆಸಲಿದ್ದಾರೆ.

ಐಪಿಎಲ್ ಶೀಘ್ರದಲ್ಲೆ ಎರಡುವರೆ ತಿಂಗಳಿಗೆ ವಿಸ್ತರಣೆ: ಜಯ್ ಶಾ ಭರವಸೆಐಪಿಎಲ್ ಶೀಘ್ರದಲ್ಲೆ ಎರಡುವರೆ ತಿಂಗಳಿಗೆ ವಿಸ್ತರಣೆ: ಜಯ್ ಶಾ ಭರವಸೆ

ಇನ್ನೂ ಭಾರತ ತಂಡ ಈಗಾಗಲೇ 2-1ರಲ್ಲಿ ಮುನ್ನಡೆ ಪಡೆದುಕೊಂಡಿದೆ. ಸರಣಿಯ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ, 2ನೇ ಟೆಸ್ಟ್ ಪಂದ್ಯವನ್ನು ಭಾರತ ಗೆಲುವು ಸಾಧಿಸಿ ಮುನ್ನಡೆ ಪಡೆದುಕೊಂಡಿತ್ತು. 3ನೇ ಪಂದ್ಯದಲ್ಲಿ ಇಂಗ್ಲೆಡ್‌ ಇನ್ನಿಂಗ್ಸ್ ಮತ್ತು 76 ರನ್‌ಗಳಿಂದ ಗೆದ್ದು 1-1ರಲ್ಲಿ ಸಮಬಲ ಸಾಧಿಸಿತ್ತು. ಆದರೆ ಲಂಡನ್‌ನಲ್ಲಿ ನಡೆದಿದ್ದ 4ನೇ ಪಂದ್ಯದಲ್ಲಿ 157 ರನ್‌ಗಳ ಭರ್ಜರಿ ಜಯ ಸಾಧಿಸಿ ಭಾರತ 2-1ರಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು.

Jasprith Bumrah Becomes 2nd fast Bowler to lead Team India in after Kapil Dev

ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ಉಪನಾಯಕ) (WK), ಕೆ.ಎಸ್.ಭರತ್ (WK), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್

ಇಂಗ್ಲೆಂಡ್ ತಂಡ: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಜ್ಯಾಕ್ ಲೀಚ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

English summary
Jasprit Bumrah Becomes 2nd fast Bowler to lead Team India in test match against England. After Kapil Dev no fast bowler lead to team India in longest farmat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X