ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಹಿತ್‌ಗೆ ಕೊರೊನಾ... ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯಕ್ಕೆ ಈತನೇ ನಾಯಕ

|
Google Oneindia Kannada News

ಲಂಡನ್, ಜೂನ್ 29: ಭಾರತ ತಂಡದ ರೋಹಿತ್ ಶರ್ಮಾ ಕೋವಿಡ್‌ 19ಗೆ ತುತ್ತಾಗಿರುವುದಿರಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ ನಾಯಕನಾಗಿವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ ವರ್ಷ ಅಪೂರ್ಣಗೊಂಡಿದ್ದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೊನೆಯ ಪಂದ್ಯ ಬಾಕಿ ಉಳಿದುಕೊಂಡಿದೆ. ಇದೀಗ ಸೀಮಿತ ಓವರ್‌ಗಳ ಸರಣಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಮೊದಲಿಗೆ ಮುಂದೂಡಲ್ಪಟ್ಟಿದ್ದ ಟೆಸ್ಟ್‌ ಪಂದ್ಯವನ್ನು ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಎಡ್‌ಬಸ್ಟನ್‌ನಲ್ಲಿನ ಆಡಲಿದೆ.

ಐಪಿಎಲ್ ಶೀಘ್ರದಲ್ಲೆ ಎರಡುವರೆ ತಿಂಗಳಿಗೆ ವಿಸ್ತರಣೆ: ಜಯ್ ಶಾ ಭರವಸೆಐಪಿಎಲ್ ಶೀಘ್ರದಲ್ಲೆ ಎರಡುವರೆ ತಿಂಗಳಿಗೆ ವಿಸ್ತರಣೆ: ಜಯ್ ಶಾ ಭರವಸೆ

ಕಳೆದ ವಾರ ತಂಡದ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಸೋಂಕು ತಗುಲಿದ್ದು, ಇನ್ನೂ ಸಂಪೂರ್ಣವಾಗಿ ಚೇತಿಸಿಕೊಳ್ಳದ ಕಾರಣ ವೇಗಿ ಜಸ್ಪ್ರೀತ್ ಬುಮ್ರಾಗೆ ತಂಡದ ನಾಯಕತ್ವವನ್ನು ನೀಡಲಾಗಿದೆ. ಬುಧವಾರ ನಡೆದ ತಂಡದ ಮೀಟಿಂಗ್‌ನಲ್ಲಿ ಈ ವಿಚಾರವನ್ನು ಮ್ಯಾನೇಜ್‌ಮೆಂಟ್‌ ಬುಮ್ರಾಗೆ ತಿಳಿಸಿದೆ ಎಂದು ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.

Jasprit Bumrah To Lead Team India against England

ಬುಮ್ರಾ ಕಳೆದ ಸರಣಿಯಲ್ಲಿ 4 ಪಂದ್ಯಗಳಿಂದ 18 ವಿಕೆಟ್ ಪಡೆದು ಭಾರತದ ಗರಿಷ್ಠ ವಿಕೆಟ್‌ ಟೇಕರ್‌ ಆಗಿದ್ದರು. ಬುಮ್ರಾ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉಪನಾಯಕನಾಗಿದ್ದರು. ಈ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಇದೀಗ ಟೆಸ್ಟ್‌ ತಂಡವನ್ನು ಮುನ್ನಡೆಸುವ ಅವಕಾಶ ಒದಗಿ ಬಂದಿದೆ.

Breaking: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆಡಲು ರೋಹಿತ್ ಬದಲು ಮಯಾಂಕ್Breaking: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆಡಲು ರೋಹಿತ್ ಬದಲು ಮಯಾಂಕ್

ಇನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಟೆಸ್ಟ್ ತಂಡಕ್ಕೆ ಸೇರಿಕೊಂಡಿದ್ದಾರೆ. ಇನ್ನು ಸರಣಿಗೂ ಮುನ್ನವೇ ತಂಡದ ಅಗ್ರ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಗಾಯದಿಂದ ಹೊರಬಿದ್ದಿದ್ದಾರೆ. ಹಾಗಾಗಿ ಯುವ ಆರಂಭಿಕ ಬ್ಯಾಟರ್‌ ಶುಬ್ಮನ್‌ ಗಿಲ್‌, ಮಯಾಂಕ್‌ ಅಗರ್‌ವಾಲ್‌ ಜೊತೆಗೆ ಇನ್ನಿಂಗ್ಸ್ ಆರಂಭಿಸುವ ಅನಿವಾರ್ಯತೆ ಎದುರಾಗಿದೆ. ಪೂಜಾರ ಹಾಗೂ ಕೊಹ್ಲಿ ತಮ್ಮ 3 ಮತ್ತು 4ರಲ್ಲಿ, ಹನುಮ ವಿಹಾರಿ 5, ರಿಷಭ್ ಪಂತ್ 6ರಲ್ಲಿ ಆಡುವ ಸಾಧ್ಯತೆಯಿದೆ.

ಇನ್ನು ಸರಣಿಯಲ್ಲಿ ಭಾರತ ಈಗಾಗಲೇ 2-1ರಲ್ಲಿ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಸರಣಿಯನ್ನು ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಡ್ರಾ ಸಾಧಿಸುವ ಅನಿವಾರ್ಯತೆಯಿದೆ. ಆದರೆ ಇಂಗ್ಲೆಂಡ್ ಪ್ರಸ್ತುತ ವಿಶ್ವಟೆಸ್ಟ್‌ ಚಾಂಪಿಯನ್ ನ್ಯೂಜಿಲ್ಯಾಂಡ್‌ ವಿರುದ್ಧ 3-0ಯಲ್ಲಿ ಟೆಸ್ಟ್ ಸರಣಿ ಜಯಿಸಿರುವುದನ್ನು ನೋಡಿದರೆ ಭಾರತಕ್ಕೆ ಈ ಪಂದ್ಯವನ್ನು ಉಳಿಸಿಕೊಳ್ಳುವುದು ಖಂಡಿತ ಕಬ್ಬಿಣದ ಕಡಲೆಯಾಗಿದೆ.

English summary
Indian regular captain Rohit Sharma miss the final test of the 5 match series agaiant Engaland. pacer Jasprit Bumrah To Lead Team India against England in Only test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X