ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಮ್ರಾನ್‌ ಮಲಿಕ್ ಭೇಟಿಯಾಗಿ ಶುಭಾರೈಸಿದ ಲೆ. ಗವರ್ನರ್‌, ಸರಕಾರಿ ಕೆಲಸದ ಆಫರ್

|
Google Oneindia Kannada News

ಜಮ್ಮು ಮತ್ತು ಕಾಶ್ಮೀರ ಮೇ 26: 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಕರಾರುವಾಕ್ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿರುವ ವೇಗಿ ಉಮ್ರಾನ್ ಮಲಿಕ್‌ರನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೀಜ್ ಸಿನ್ಹಾ ಭೇಟಿ ಮಾಡಿ ಯುವ ಕ್ರಿಕೆಟಿಗನಿಗೆ ತರಬೇತಿ ಸೇರಿದಂತೆ ಅಗತ್ಯವಾದ ನೆರವನ್ನು ಸರಕಾರ ನೀಡುವುದಾಗಿ ತಿಳಿಸಿದ್ದಾರೆ.

ಪ್ರಸ್ತುತ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ 22 ವಿಕೆಟ್ ಪಡೆಯುವ ಮೂಲಕ ಉಮ್ರಾನ್ ಮಲಿಕ್ ಗರಿಷ್ಠ ವಿಕೆಟ್ ಪಡೆದ 2ನೇ ವೇಗದ ಬೌಲರ್ ಎನಿಸಿಕೊಂಡಿದ್ದರು. ಉಮ್ರಾನ್‌ ಈ ಪ್ರದರ್ಶನವೇ ಆತನನ್ನು ಟೀಮ್ ಇಂಡಿಯಾಗೆ ಆಯ್ಕೆಯಾಗುವಂತೆ ಮಾಡಿದೆ. ಮುಂಬರುವ ದಕ್ಷಿಣ ಅಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಮಲಿಕ್ ನಿಲಿ ಜರ್ಸಿ ತೊಟ್ಟು ಕಣಕ್ಕಿಳಿದಿಯಲಿದ್ದಾರೆ.

ಇಡಿ ದಾಳಿ ಮೂಲಕ ಸೇಡಿನ ರಾಜಕಾರಣ: ಶಿವಸೇನಾಇಡಿ ದಾಳಿ ಮೂಲಕ ಸೇಡಿನ ರಾಜಕಾರಣ: ಶಿವಸೇನಾ

ಬುಧವಾರ ಮನೋಜ್ ಸಿನ್ಹಾ ಸ್ವತಃ ಉಮ್ರಾನ್ ಮಲಿಕ್ ಮನೆಗೆ ಭೇಟಿ ನೀಡಿ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಕ್ಕೆ ಮಲಿಕ್ ಮತ್ತು ಆತನ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಉಮ್ರಾನ್ ಮಲಿಕ್‌ ತರಬೇತಿಗೆ ಅಗತ್ಯವಾದ ಎಲ್ಲಾ ಸೌಲಭ್ಯವನ್ನು ಒದಗಿಸಿಕೊಡಲಿದೆ ಎಂದು ತಿಳಿಸಿದ್ದಾರೆ.

ಸ್ಪೋರ್ಟ್ಸ್ ಕೋಟಾದಲ್ಲಿ ಕೆಲಸ

ಸ್ಪೋರ್ಟ್ಸ್ ಕೋಟಾದಲ್ಲಿ ಕೆಲಸ

ಉಮ್ರಾನ್ ಭಾರತ ತಂಡಕ್ಕೆ ಸೇರ್ಪಡೆಯಾಗುವುದರೊಂದಿಗೆ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅವರ ತರಬೇತಿಯನ್ನು ನೋಡಿಕೊಳ್ಳುತ್ತದೆ ಮತ್ತು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಈಗಾಗಲೇ ಕ್ರೀಡಾ ಪಾಲಿಸಿಯಲ್ಲಿ ಮಲಿಕ್ ಬಯಸಿದಾಗ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.

ಕೇದಾರನಾಥ ಯಾತ್ರೆ; ಮೂವರು ಯಾತ್ರಾರ್ಥಿಗಳ ಸಾವುಕೇದಾರನಾಥ ಯಾತ್ರೆ; ಮೂವರು ಯಾತ್ರಾರ್ಥಿಗಳ ಸಾವು

ಯುವಕರಿಗೆ ಸ್ಪೂರ್ತಿ

ಉಮ್ರಾನ್ ಮಲಿಕ್ ಭಾರತ ಕ್ರಿಕೆಟ್‌ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆತನ ಈ ಗಮನಾರ್ಹ ಸಾಧನೆಯು ಇಡೀ ಜಮ್ಮು ಮತ್ತು ಕಾಶ್ಮೀರಕ್ಕೆ ಹೆಮ್ಮೆಯ ಕ್ಷಣವಾಗಿದೆ . ಇದು ಕೇಂದ್ರಾಡಳಿತ ಪ್ರದೇಶದ ಅನೇಕ ಯುವಕರನ್ನು ಮಲಿಕ್‌ ದಾರಿಯನ್ನು ಅನುಸರಿಸಲು ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶಕ್ಕೆ ಪ್ರಶಸ್ತಿಗಳನ್ನು ತರಲು ಪ್ರೇರೇಪಿಸುತ್ತದೆ " ಎಂದು ಸಿನ್ಹಾ ತಿಳಿಸಿದ್ದಾರೆ.

ಭಾರತ ತಂಡದಲ್ಲಿ ಸ್ಥಾನ

ಭಾರತ ತಂಡದಲ್ಲಿ ಸ್ಥಾನ

ಕಳೆದ ಆವೃತ್ತಿಯಲ್ಲಿ ಕೇವಲ ವೇಗದ ಬೌಲಿಂಗ್‌ನಿಂದ ಗುರುತಿಸಿಕೊಂಡಿದ್ದ ಉಮ್ರಾನ್ ಮಲಿಕ್ ಮೊದಲ ಒಂದೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಆದರೆ ನಂತರ ತಮ್ಮ ವೇಗದ ಬೌಲಿಂಗ್‌ ಜೊತೆಗೆ ಲೈನ್ ಅಂಡ್ ಲೆಂತ್ ಕಾಪಾಡಿಕೊಂಡು ತಂಡಕ್ಕೆ ವಿಕೆಟ್‌ಗಳನ್ನು ಪಯುವಲ್ಲಿ ಸಫಲರಾದರು. ಇವರ ಪ್ರದರ್ಶನವನ್ನು ನೋಡಿದ ಹಲವು ಮಾಜಿ ಕ್ರಿಕೆಟಿಗರು, ರಾಜಕಾರಣಿಗಳು ಕೂಡ ಆದಷ್ಟು ಬೇಗ ಆತನನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಮನವಿ ಮಾಡಿದ್ದರು. ಮಲಿಕ್ ಒಟ್ಟು 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಲಿದ್ದಾರೆ.

14 ಪಂದ್ಯಗಳಲ್ಲೂ ಈತನದೇ ವೇಗದ ಎಸೆತ

14 ಪಂದ್ಯಗಳಲ್ಲೂ ಈತನದೇ ವೇಗದ ಎಸೆತ

IPL 2022ರಲ್ಲಿ ಪಂದ್ಯದಲ್ಲಿ ವೇಗದ ಎಸೆತ ಮಾಡಿದ ಬೌಲರ್‌ಗೆ ಒಂದು ಲಕ್ಷ ಬಹುಮಾನ ನೀಡಲಾಗುತ್ತದೆ. ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ಆಡಿದ ಒಟ್ಟು 14 ಪಂದ್ಯಗಳಲ್ಲೂ ಉಮ್ರಾನ್ ಮಲಿಕ್ "ಪಂದ್ಯದ ವೇಗದ ಎಸೆತ' ದ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 22 ವರ್ಷ ವಯಸ್ಸಿನ ವೇಗಿ ಈ ಮೂಲಕ ಒಟ್ಟು 14 ಲಕ್ಷ ರೂ ನಗದು ಬಹುಮಾನವನ್ನು ಗೆದ್ದಿದ್ದಾರೆ. ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗಂಟೆಗೆ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇದು ಐಪಿಎಲ್ ಇತಿಹಾಸದ ಗರಿಷ್ಠ ವೇಗವಾಗಿದೆ.

2022ರ ಮೆಗಾ ಹರಾಜಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್‌ ನಾಯಕ ಕೇನ್ ವಿಲಿಯಮ್ಸನ್ ರನ್ನು 14 ಕೋಟಿ ರೂ ಮತ್ತು ಉಮ್ರಾನ ಮಲಿಕ್ ಹಾಗೂ ಅಬ್ದುಲ್ ಸಮದ್‌ರನ್ನು ತಲಾ 4 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿತ್ತು.

English summary
Jammu and Kashmir Lieutenant Governor Manoj Sinha met Indian Cricketer Umran Malik and his family and congratulated him on getting selected for Team India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X