ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿಯಿಂದ ಐಪಿಎಲ್ 2021 ರದ್ದು: ಬಿಸಿಸಿಐ

|
Google Oneindia Kannada News

ನವದೆಹಲಿ, ಮೇ 4: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಉಳಿದ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಹೇಳಿದ್ದಾರೆ.

Recommended Video

IPL 2021 ಮತ್ತೆ ಆರಂಭ ಆಗೋದು ಯಾವಾಗ ಗೊತ್ತಾ?? | Oneindia Kannada

ಮೂರು ಫ್ರಾಂಚೈಸಿಯ ನಾಲ್ಕು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈ ನಡುವೆ ಐಪಿಎಲ್ ರದ್ದುಕೋರಿ ಬಾಂಬೆ ಹೈಕೋರ್ಟ್, ದೆಹಲಿ ಹೈಕೋರ್ಟ್ ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ. ಆಟಗಾರರ ಬಯೋ ಬಬಲ್, ಕೊವಿಡ್ ಸುರಕ್ಷತೆಗೆ ಬಳಸಿರುವ ಸಂಪನ್ಮೂಲಗಳನ್ನು ಹಿಂಪಡೆದು ಜನ ಸಾಮಾನ್ಯರಿಗೆ ಒದಗಿಸುವುದು ಸೂಕ್ತ ಎಂದು ಪಿಐಎಲ್ ನಲ್ಲಿ ಕೋರಲಾಗಿದೆ.

ಐಪಿಎಲ್ ತೊರೆದು ಕೊವಿಡ್ 19 ಹೋರಾಟಕ್ಕೆ ಅಶ್ವಿನ್ ಸಾಥ್

ಮೊದಲ ಹಂತದಲ್ಲಿ ಮುಂಬೈ, ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳು ನಡೆಸಲಾಗಿತ್ತು. ನಂತರ ದೆಹಲಿ, ಅಹಮದಾಬಾದ್ ಕ್ರೀಡಾಂಗಣಗಳಲ್ಲಿ ನಿಗದಿಯಾಗಿತ್ತು.

ಕೋಲ್ಕತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಅವರಿಗೆ ಮೊದಲಿಗೆ ಸೋಂಕು ಕಾಣಿಸಿಕೊಂಡಿದೆ. ನಂತರ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿಗೂ ಕೋವಿಡ್ ಪಾಸಿಟಿವ್ ಬಂದಿತ್ತು.

ಭಾರತ ನನ್ನ 2ನೇ ತವರು, ಬಿಟ್ ಕಾಯಿನ್ ದಾನ ಮಾಡಿದ ಬ್ರೆಟ್ ಲೀಭಾರತ ನನ್ನ 2ನೇ ತವರು, ಬಿಟ್ ಕಾಯಿನ್ ದಾನ ಮಾಡಿದ ಬ್ರೆಟ್ ಲೀ

ಇದಾದ ಬಳಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಮಿತ್ ಮಿಶ್ರಾ, ಸನ್ ರೈಸರ್ಸ್ ಹೈದರಾಬಾದಿನ ವೃದ್ಧಿಮಾನ್ ಸಹಾ ಅವರಿಗೂ ಸೋಂಕು ತಗುಲಿಸಿಕೊಂಡಿರುವುದು ಪತ್ತೆಯಾಗಿದೆ. ಹೀಗಾಗಿ ಬಯೋ ಬಬಲ್ ಸುರಕ್ಷತೆ ಮೀರಿ ಸೋಂಕು ಕಾಣಿಸಿಕೊಂಡಿದ್ದರಿಂದ ಮೇ 3ರಂದು ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮುಂದೂಡಲಾಗಿತ್ತು.

IPL suspended for this season: Vice-President BCCI Rajeev Shukla

ಮೇ 4ರಂದು ಕ್ರಿಕೆಟರ್ಸ್ ಅಲ್ಲದೆ ಸಹಾಯಕ ಸಿಬ್ಬಂದಿ, ಕ್ರೀಡಾಂಗಣದ ಸಿಬ್ಬಂದಿಗಳಿಗೂ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಪಂದ್ಯಾವಳಿಗಳನ್ನು ರದ್ದುಗೊಳಿಸಲಾಗಿದೆ.

ಆದರೆ, ಪರಿಸ್ಥಿತಿ ತಿಳಿಗೊಂಡರೆ ಮುಂಬೈಗೆ ಉಳಿದ ಪಂದ್ಯಾವಳಿಗಳನ್ನು ಶಿಫ್ಟ್ ಮಾಡಲು ಬಿಸಿಸಿಐ ಸಜ್ಜಾಗಿದೆ. ಜೊತೆಗೆ ಯುಎಇಯಲ್ಲಿ ಮತ್ತೊಮ್ಮೆ ಐಪಿಎಲ್ ನಡೆಸುವ ಸಾಧ್ಯತೆ ಬಗ್ಗೆ ಕೂಡಾ ಚರ್ಚಿಸಲಾಗುತ್ತಿದೆ. ಆದರೆ, ಕೋವಿಡ್ ಭೀತಿಯಿಂದ ಕೆಲ ಫ್ರಾಂಚೈಸಿಗಳು ಮೈದಾನಕ್ಕಿಳಿಯಲು ಹಿಂದೇಟು ಹಾಕಿರುವ ಕಾರಣ ಬಿಸಿಸಿಐ ಗೊಂದಲದಲ್ಲಿದೆ.

ದುರದೃಷ್ಟವಶಾತ್ ಕೆಲವು ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಸೋಂಕು ತಗುಲಿದೆ. ಮಾರ್ಗಸೂಚಿಯಂತೆ ಐಸೋಲೇಷನ್‌ನಲ್ಲಿರಿಸಲಾಗಿದೆ ಹಾಗೂ ಸೂಕ್ತ ನಿಗಾ ವಹಿಸಲಾಗಿದೆ. ಮೈದಾನದ ಸಿಬ್ಬಂದಿಗಳಿಗೂ ನಿಯಮ ಅನ್ವಯವಾಗಿದ್ದು, ಸೂಕ್ತ ಕ್ರಮ ಜರುಗಿಸಲಾಗಿದೆ. ಕ್ರಿಕೆಟರ್ಸ್, ಕೋಚ್, ಸಹಾಯಕ ಸಿಬ್ಬಂದಿ, ಅಂಪೈರ್, ಕಾಮೆಂಟೆಟರ್ಸ್ ಸೇರಿದಂತೆ ಎಲ್ಲರೂ ನಿಯಮಕ್ಕನುಸಾರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ವಕ್ತಾರರು ಈ ಹಿಂದೆ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Indian Premier League season 14 has been suspended for this season: Vice-President BCCI Rajeev Shukla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X