ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀಮಿಯರ್ ಲೀಗ್‌ಗಿಂತಲೂ ದುಬಾರಿಯಾಯ್ತು IPL... NFL ಒಂದೇ ಬಾಕಿ

|
Google Oneindia Kannada News

ಮುಂಬೈ, ಜೂನ್ 14: ಇಂಡಿಯನ್ ಪ್ರೀಮಿಯರ್ ಲೀಗ್ ವರ್ಷದಿಂದ ವರ್ಷಕ್ಕೆ ತನ್ನ ಹೆಚ್ಚು ಪ್ರಸಿದ್ಧವಾಗಿತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನೇರಪ್ರಸಾರಕ್ಕಾಗಿ ನಡೆಯುತ್ತಿರುವ ಇ-ಹರಾಜಿನಲ್ಲಿ ಬಿಸಿಸಿಐ ಬಂಪರ್ ಪಡೆದುಕೊಂಡಿದೆ. 2023-207ರವರೆಗೆ 5 ಆವೃತ್ತಿಗಳ ನೇರಪ್ರಸಾರದ ಹಕ್ಕು ಬರೋಬ್ಬರಿ 44, 075 ಕೋಟಿ ರೂ. ಪಡೆದುಕೊಂಡಿದೆ.

ಕಳೆದ ಐದು ವರ್ಷಗಳ ಟಿವಿ ಪ್ರಸಾರದ ಹಕ್ಕನ್ನು ಪಡೆದುಕೊಂಡಿದ್ದ ಸ್ಟಾರ್ ಇಂಡಿಯಾ 23, 575 ಕೋಟಿ ರೂ. ನೀಡಿ ಭಾರತದ ಟಿವಿ ರೈಟ್ಸ್‌ಗಳನ್ನು ಖರೀದಿಸಿದೆ. ಇತ್ತ ರಿಲಯನ್ಸ್ ಒಡೆತನದ ವಯಾಕಾಮ್‌ 18 ಡಿಜಿಟಲ್‌ ಹಕ್ಕುಗಳನ್ನು 20,500 ಕೋಟಿ ನೀಡಿ ಖರೀದಿಸಿದೆ. ಡಿಜಿಟಲ್ ಹಕ್ಕುಗಳಿಗಾಗಿ ಡಿಸ್ನಿ ಹಾಟ್‌ ಸ್ಟಾರ್‌ ಮತ್ತು ಸೋನಿ ಪೈಪೋಟಿ ನಡೆಸಿದವಾದರೂ ವಯಾಕಾಮ್‌ 18 ಅಧಿಕ ಮೊತ್ತ ನೀಡಿ ಖರೀದಿಸುವಲ್ಲಿ ಯಶಸ್ವಿಯಾದವು.

ಐಪಿಎಲ್ ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ; ಒಂದು ಪಂದ್ಯಕ್ಕೆ ಮುಟ್ಟಿತು ನೂರು ಕೋಟಿ ಬೆಲೆಐಪಿಎಲ್ ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ; ಒಂದು ಪಂದ್ಯಕ್ಕೆ ಮುಟ್ಟಿತು ನೂರು ಕೋಟಿ ಬೆಲೆ

ಸದ್ಯಕ್ಕೆ ಸೋಮವಾರ ಇ-ಹರಾಜಿನ 4 ಪ್ಯಾಕೇಜ್‌ಗಳಲ್ಲಿ ಎ ಮತ್ತು ಬಿ ಪ್ಯಾಕೇಜ್(ಟಿವಿ ಮತ್ತು ಡಿಜಿಟಲ್) ಬಿಕರಿಯಾಗಿವೆ. ಇದೀಗ ಮಂಗಳವಾರ ಸಿ ಮತ್ತು ಡಿ ವಿಭಾಗದ ಇ-ಹರಾಜು ನಡೆಯಲಿದ್ದು , ಬಿಸಿಸಿಐಗೆ ಮತ್ತಷ್ಟು ಹಣ ಹರಿದುಬರಲಿದೆ.

ಕಳೆದ ವರ್ಷಕ್ಕಿಂತ ಡಬಲ್‌ ರೇಟ್

ಕಳೆದ ವರ್ಷಕ್ಕಿಂತ ಡಬಲ್‌ ರೇಟ್

ಡಿಜಿಟಲ್ ಮತ್ತು ಟಿವಿ ನೇರಪ್ರಸಾದ ಮಾಡುವುದರಿಂದ ಬಿಸಿಸಿಐ ಪಂದ್ಯಕ್ಕೆ 107.5 ಕೋಟಿ ಪಡೆಯಲಿದೆ. ಟಿವಿ ರೈಟ್ಸ್ ಪಡೆದಿರುವ ಸ್ಟಾರ್‌ ಇಂಡಿಯಾ 57.5 ಕೋಟಿ ಹಾಗೂ ಡಿಜಿಟಲ್ ರೈಟ್ಸ್ ಪಡೆದಿರುವ ವಯಾಕಾಮ್ 18 ಪಂದ್ಯವೊಂದಕ್ಕೆ 50ನ ಕೋಟಿ ರೂ. ನೀಡಬೇಕಿದೆ. ಈ ಹಿಂದೆ ಸ್ಟಾರ್ ಇಂಡಿಯಾ ಡಿಜಿಟಲ್ ಮತ್ತು ಟಿವಿ ಎರಡೂ ಸೇರಿ 55 ಕೋಟಿ ರೂ ನೀಡುತ್ತಿತ್ತು.

44,075 ಕೋಟಿ ರೂ.ಗೆ ಐಪಿಎಲ್ ಟಿವಿ ಮತ್ತು ಡಿಜಿಟಲ್ ಪ್ರಸಾರದ ನೇರಪ್ರಸಾರದ ಹಕ್ಕು ಮಾರಾಟ44,075 ಕೋಟಿ ರೂ.ಗೆ ಐಪಿಎಲ್ ಟಿವಿ ಮತ್ತು ಡಿಜಿಟಲ್ ಪ್ರಸಾರದ ನೇರಪ್ರಸಾರದ ಹಕ್ಕು ಮಾರಾಟ

ಪ್ರಸಿದ್ಧ ಇಪಿಎಲ್ ಫುಟ್‌ಬಾಲ್ ಲೀಗ್ ಹಿಂದಿಕ್ಕಿದ ಐಪಿಎಲ್

ಪ್ರಸಿದ್ಧ ಇಪಿಎಲ್ ಫುಟ್‌ಬಾಲ್ ಲೀಗ್ ಹಿಂದಿಕ್ಕಿದ ಐಪಿಎಲ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರತಿ ಪಂದ್ಯದ ಮೌಲ್ಯಮಾಪನದಲ್ಲಿ ಇಂಗ್ಲೆಂಡ್‌ ಪ್ರೀಮಿಯರ್ ಲೀಗ್ (ಇಪಿಎಲ್) ಹಿಂದಿಕ್ಕಿದೆ. ವರದಿಗಳ ಪ್ರಕಾರ, ಐಪಿಎಲ್‌ನ ಮಾಧ್ಯಮ ಹಕ್ಕುಗಳ ಇ-ಹರಾಜಿನ ದಿನದ 2 ದಿನಗಳ ನಂತರ ನಗದು ಸಮೃದ್ಧ ಲೀಗ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಡಿಜಿಟಲ್ ಮತ್ತು ಟಿವಿ ನೇರಪ್ರಸಾರದ ಹಕ್ಕು ಮಾರಾಟದಿಂದಲೇ ಬಿಸಿಸಿಐ ಪಂದ್ಯಕ್ಕೆ 107.5 ಕೋಟಿ ರೂ ಪಡೆಯಲಿದೆ. ಈ ಮೂಲಕ ವಿಶ್ವ ಪ್ರಸಿದ್ಧ ಇಂಗ್ಲೆಂಡ್ ಪ್ರೀಮಿಯರ್ ಲೀಗ್ ಪಂದ್ಯಕ್ಕಿಂತಲೂ ಹೆಚ್ಚು ಪಡೆಯಲಿದೆ. ಇಪಿಎಲ್‌ ನಲ್ಲಿ ಒಂದು ಪಂದ್ಯದ ನೇರಪ್ರಸಾರದ ಹಕ್ಕು 11 ಮಿಲಿಯನ್ ಡಾಲರ್(85.8 ಕೋಟಿ ರೂ) ಇದೆ. ವಿಶ್ವದಲ್ಲಿ ಐಪಿಎಲ್‌ 2ನೇ ದುಬಾರಿ ಲೀಗ್ ಆಗಿದೆ, ಅಮೆರಿಕಾದ ಎನ್‌ಎಫ್ಎಲ್(ನ್ಯಾಷನಲ್ ಫುಟ್‌ಬಾಲ್ ಲೀಗ್) ಪಂದ್ಯವೊಂದರ ನೇರಪ್ರಸಾರಕ್ಕೆ 133 ಕೋಟಿ ರೂ. ಪಡೆಯುತ್ತಿದೆ.

ವಿಶ್ವದ ದುಬಾರಿ ಲೀಗ್ ಆಗುವತ್ತಾ ಐಪಿಎಲ್

ವಿಶ್ವದ ದುಬಾರಿ ಲೀಗ್ ಆಗುವತ್ತಾ ಐಪಿಎಲ್

ಡಿಜಿಟಲ್ ಮತ್ತು ಟಿವಿ ರೈಟ್ಸ್‌ನಿಂದಲೇ ಈಗಾಗಲೆ ಐಪಿಎಲ್ ಪಂದ್ಯಕ್ಕೆ 107.5 ಕೋಟಿ ರೂ ಪಡೆಯಲಿದೆ. 3ನೇ ದಿನದ ಇ-ಹರಾಜಿನಲ್ಲಿ ಸಿ ಮತ್ತು ಡಿ ಪ್ಯಾಕೇಜ್‌ ಹರಾಜು ನಡೆಯಲಿದೆ. ಇವುಗಳಲ್ಲೂ ಕೂಡ ಬಿಸಿಸಿಐ ಸಾವಿರಾರು ಕೋಟಿ ಗಳಿಸಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಪಂದ್ಯಕ್ಕೆ ಈ ಎರಡು ಪ್ಯಾಕೇಜ್‌ಗಳಿಂದ 21.5 ಕೋಟಿ ಪಡೆದರೆ ಐಪಿಎಲ್ ವಿಶ್ವದ ಅತ್ಯಂತ ದುಬಾರಿ ಲೀಗ್ ಎನಿಸಿಕೊಳ್ಳಲಿದೆ. ಸಿ ಪ್ಯಾಕೇಜ್‌ನಲ್ಲಿ ಕೇವಲ 18 ಪ್ರಮುಖ ಪಂದ್ಯಗಳ ರೈಟ್ಸ್ ಮಾತ್ರ ಇರಲಿದ್ದು, ಇದರ ಮೂಲ ಬೆಲೆ 11 ಕೋಟಿ ರೂ ಇದೆ. ಡಿ ಪ್ಯಾಕೇಜ್‌ನಲ್ಲಿ ಭಾರತದ ಹೊರತುಪಡಿಸಿ ವಿಶ್ವದಲ್ಲಿ ನೇರ ಪ್ರಸಾರದ ಹಕ್ಕು ಸೇರಿದ್ದು, ಪಂದ್ಯವೊಂದರ ಮೂಲ ಬೆಲೆ 3 ಕೋಟಿ ರೂ ಇದೆ.

ಕೊನೆಯ 2 ವರ್ಷಗಳಲ್ಲಿ ಪಂದ್ಯಗಳ ಸಂಖ್ಯೆಯಲ್ಲಿ ಏರಿಕೆ

ಕೊನೆಯ 2 ವರ್ಷಗಳಲ್ಲಿ ಪಂದ್ಯಗಳ ಸಂಖ್ಯೆಯಲ್ಲಿ ಏರಿಕೆ

ಪ್ರಸ್ತುತ 10 ತಂಡಗಳಿರುವ ಐಪಿಎಲ್‌ನಲ್ಲಿ ಒಟ್ಟು 74 ಪಂದ್ಯಗಳು ನಡೆಯುತ್ತಿವೆ. ಇದೇ ಸೈಕಲ್ ಮುಂದಿನ ಮೂರು ವರ್ಷಗಳಿಗೆ ಇರಲಿದೆ. ಆದರೆ ಒಪ್ಪಂದದ ಕೊನೆಯ 2 ವರ್ಷಗಳಲ್ಲಿ ಪಂದ್ಯಗಳ ಸಂಖ್ಯೆ 94ಕ್ಕೆ ಏರಿಕೆ ಯಾಗಲಿದೆ ಎಂದು ತಿಳಿದುಬಂದಿದೆ. ಅಂದರೆ 2026-27ರ ಆವೃತ್ತಿಗಳಲ್ಲಿ ಲೀಗ್‌ ಹಂತದಲ್ಲಿ ಪ್ರತಿ ತಂಡವೂ ಉಳಿದ 9 ತಂಡಗಳೊಂದಿಗೆ 2 ಪಂದ್ಯಗಳನ್ನಾಡುವ ಸಾಧ್ಯತೆಯಿದೆ. ಪ್ರಸ್ತುತ ಒಂದು ತಂಡ 5 ತಂಡಗಳೊಂದಿಗೆ 2 ಪಂದ್ಯ ಮತ್ತು ಉಳಿದ 4 ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನಾಡುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
IPL media rights A and B package sold to RS 44,075 crore. As per match value IPL is second place after NFL. IPL Already beat world top leags like NBA,EPL befor day 3 auction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X