ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

44,075 ಕೋಟಿ ರೂ.ಗೆ ಐಪಿಎಲ್ ಟಿವಿ ಮತ್ತು ಡಿಜಿಟಲ್ ಪ್ರಸಾರದ ನೇರಪ್ರಸಾರದ ಹಕ್ಕು ಮಾರಾಟ

|
Google Oneindia Kannada News

ಮುಂಬೈ, ಜೂನ್ 13: ವಿಶ್ವದ ಶ್ರೀಮಂತ ಟಿ20 ಲೀಗ್‌ ಐಪಿಎಲ್‌ನ ಟಿವಿ ನೇರ ಪ್ರಸಾರ ಮತ್ತು ಡಿಜಿಟಲ್‌ ಪ್ರಸಾರ ಹಕ್ಕು ಬರೋಬ್ಬರಿ 44,075 ಕೋಟಿ ರೂ. ಗಳಿಗೆ ಮಾರಾಟವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಇನ್ನೂ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಎಎನ್‌ಐ ವರದಿಯ ಪ್ರಕಾರ ಎ ವರ್ಗದ ಟಿವಿ ಪ್ರಸಾರ ಹಕ್ಕು 23,575 ಕೋಟಿ ರೂ. ಗಳಿಗೆ ಮಾರಾಟವಾಗಿದೆ. ಬಿ ವರ್ಗದ ಡಿಜಿಟಲ್ ಪ್ರಸಾರದ ಹಕ್ಕು 20,500 ರೂಗಳಿಗೆ ಮಾರಾಟವಾಗಿದೆ. ಐಪಿಎಲ್‌ನ ಪ್ರತಿ ಪಂದ್ಯ ಪ್ರಸಾರ ಮಾಡುವುದುಕ್ಕೆ 57.5 ಕೋಟಿ ರೂ ಹಾಗು ಡಿಜಿಟಲ್ ಪ್ರಸಾರಕ್ಕೆ 50 ಕೋಟಿರೂ ನೀಡಬೇಕಿದೆ.

ಐಪಿಎಲ್ ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ; ಒಂದು ಪಂದ್ಯಕ್ಕೆ ಮುಟ್ಟಿತು ನೂರು ಕೋಟಿ ಬೆಲೆಐಪಿಎಲ್ ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ; ಒಂದು ಪಂದ್ಯಕ್ಕೆ ಮುಟ್ಟಿತು ನೂರು ಕೋಟಿ ಬೆಲೆ

ಒಟ್ಟಾರೆ ಒಂದು ಪಂದ್ಯದ ಪ್ರಸಾರದ ಹಕ್ಕು 107.5 ಕೋಟಿ ರೂ ಆಗಿದೆ. ಇದು ಕಳೆದ ಅವಧಿಯಲ್ಲಿ ಸ್ಟಾರ್‌ ಇಂಡಿಯಾ ನೀಡಿದ್ದ ಮೊತ್ತದ ಡಬಲ್ ಆಗಿದೆ. ಮೂಲಗಳ ಪ್ರಕಾರ 5 ವರ್ಷಗಳ ಈ ಸಮಯದಲ್ಲಿ ನಡೆಯಲಿರುವ 410 ಪಂದ್ಯಗಳಿಗೆ ಈ ಒಪ್ಪಂದ ಜಾರಿಯಲ್ಲಿರಲಿದೆ.

ಈ ಬಾರಿ ಬಿಸಿಸಿಐ ಡಿಜಿಟಲ್ ಮತ್ತು ಟಿವಿ ಒಳಗೊಂಡ ನೇರ ಪ್ರಸಾರದ ಹಕ್ಕುಗಳನ್ನು ಬೇರೆ ಬೇರೆಯಾಗಿ ಹರಾಜು ಮಾಡಿದೆ. ಸ್ಟಾರ್‌ ಇಂಡಿಯಾ 2017ರಿಂದ 2022ರವರೆಗೆ 16,347 ಕೋಟಿ ರೂಪಾಯಿಗಳಿಗೆ ಐಪಿಎಲ್ ಡಿಜಿಟಲ್ ಮತ್ತು ಟಿವಿ ಪ್ರಸಾರದ ಹಕ್ಕನ್ನು ಖರೀದಿಸಿತ್ತು. ಪ್ರತಿ ಪಂದ್ಯಕ್ಕೆ 55 ಕೋಟಿ ರೂ ಪಾವತಿಸಬೇಕಿತ್ತು.

ಐಪಿಎಲ್ ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ; ಒಂದು ಪಂದ್ಯಕ್ಕೆ ಮುಟ್ಟಿತು ನೂರು ಕೋಟಿ ಬೆಲೆಐಪಿಎಲ್ ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ; ಒಂದು ಪಂದ್ಯಕ್ಕೆ ಮುಟ್ಟಿತು ನೂರು ಕೋಟಿ ಬೆಲೆ

2008ರಲ್ಲಿ ಸೋನಿ ಪಿಚ್ಚರ್ಸ್‌ ನೆಟ್‌ವರ್ಕ್‌ 10 ವರ್ಷಗಳ ಪ್ರಸಾರದ ಹಕ್ಕನ್ನು 8200 ಕೋಟಿ ರೂ. ನೀಡಿ ಖರೀದಿಸಿತ್ತು. 2015ರಲ್ಲಿ ಮೂರು ವರ್ಷಗಳ ಅವಧಿಗೆ ಐಪಿಎಲ್‌ನ ಜಾಗತಿಕ ಡಿಜಿಟಲ್ ಹಕ್ಕುಗಳನ್ನು ನೋವಿ ಡಿಜಿಟಲ್‌ಗೆ 2015 ರಲ್ಲಿ 302.2 ಕೋಟಿಗೆ ನೀಡಲಾತ್ತು.

ಪಂದ್ಯಗಳ ಸಂಖ್ಯೆಗಳಲ್ಲಿ ಏರಿಕೆ

ಪಂದ್ಯಗಳ ಸಂಖ್ಯೆಗಳಲ್ಲಿ ಏರಿಕೆ

ಪ್ರಸ್ತುತ 10 ತಂಡಗಳಿರುವ ಐಪಿಎಲ್‌ನಲ್ಲಿ ಒಟ್ಟು 74 ಪಂದ್ಯಗಳು ನಡೆಯುತ್ತಿವೆ. ಇದೇ ಸೈಕಲ್ ಮುಂದಿನ ಮೂರು ವರ್ಷಗಳಿಗೆ ಇರಲಿದೆ. ಆದರೆ ಒಪ್ಪಂದದ ಕೊನೆಯ 2 ವರ್ಷಗಳಲ್ಲಿ ಪಂದ್ಯಗಳ ಸಂಖ್ಯೆ 94ಕ್ಕೆ ಏರಿಕೆ ಯಾಗಲಿದೆ ಎಂದು ತಿಳಿದುಬಂದಿದೆ. ಅಂದರೆ 2026-27ರ ಆವೃತ್ತಿಗಳಲ್ಲಿ ಲೀಗ್‌ ಹಂತದಲ್ಲಿ ಪ್ರತಿ ತಂಡವೂ ಉಳಿದ 9 ತಂಡಗಳೊಂದಿಗೆ 2 ಪಂದ್ಯಗಳನ್ನಾಡುವ ಸಾಧ್ಯತೆಯಿದೆ. ಪ್ರಸ್ತುತ ಒಂದು ತಂಡ 5 ತಂಡಗಳೊಂದಿಗೆ 2 ಪಂದ್ಯ ಮತ್ತು ಉಳಿದ 4 ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನಾಡಲಾಗುತ್ತಿದೆ.

ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಣೆ

ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಣೆ

ವರಿದಿಯ ಪ್ರಕಾರ ಐಪಿಎಲ್ ನೇರಪ್ರಸಾರವನ್ನು ಎ, ಬಿ, ಸಿ, ಡಿ ಎಂದು ವಿಭಾಗಿಸಲಾಗಿದೆ. ಎ ಪ್ಯಾಕೇಜ್‌ನಲ್ಲಿ ಎಲ್ಲಾ ಪಂದ್ಯಗಳನ್ನು ಟಿವಿಯಲ್ಲಿ ಭಾರತದಾದ್ಯಂತ ನೇರ ಪ್ರಸಾರ ಮಾಡುವುದು. ಬಿ ಪ್ಯಾಕೇಜ್‌ನಲ್ಲಿ ಭಾರತದಲ್ಲಿ ಡಿಜಿಟಲ್‌ ನೇರ ಪ್ರಸಾರದ ಹಕ್ಕು. ಸಿ ಪ್ಯಾಕೇಜ್‌ನಲ್ಲಿ ಡಿಜಿಟಲ್ ಸ್ಪೇಸ್‌ನಲ್ಲಿ ಪ್ರತಿ ಋತುವಿನಲ್ಲಿ ಆಯ್ದ 18 ಪಂದ್ಯಗಳನ್ನು ಮಾತ್ರ ಪ್ರಸಾರ ಮಾಡುವ ಹಕ್ಕು ಹಾಗೂ ಡಿ ಪ್ಯಾಕೇಜ್‌ನಲ್ಲಿ ಟಿವಿ ಮತ್ತು ಡಿಜಿಟಲ್ ಎರಡರ ಸಾಗರೋತ್ತರ ನೇರಪ್ರಸಾರದ ಹಕ್ಕು. ಹೀಗೆ ಬಿಸಿಸಿಐ ಮುಂದಿನ 5 ವರ್ಷಗಳ ಅವಧಿಯ ಮಾಧ್ಯಮ ಪ್ರಸಾರದ ಹಕ್ಕನ್ನು 4 ವಿಭಾಗಗಳಾಗಿ ವಿಂಗಡಿಸಿ ಹರಾಜು ನಡೆಸಿದೆ.

ಹರಾಜಿನಲ್ಲಿದ್ದ ಸಂಸ್ಥೆಗಳು

ಹರಾಜಿನಲ್ಲಿದ್ದ ಸಂಸ್ಥೆಗಳು

ವಿಶ್ವದ ಶ್ರೀಮಂತ ಲೀಗ್‌ನ ಖರೀದಿಸುವ ಮುನ್ನ ಹಕ್ಕಿಗಾಗಿ ಬಿಡ್‌ ಸಲ್ಲಿಕೆ ಮಾಡುವುದಕ್ಕೆ ಬಿಸಿಸಿಐ ನಿಯಾಮವಳಿ ರೂಪಿಸಿದೆ. ಎ ವಿಭಾಗದ ಬಿಡ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕಂಪನಿಗಳು 1000 ಕೋಟಿ ರೂ ನಿವ್ವಳ ಆದಾಯವನ್ನು ಹೊಂದಿರಬೇಕು. ಉಳಿದ ಮೂರು ಪ್ಯಾಕೇಜ್‌ಗಳಿಗೆ ಬಿಡ್‌ ಸಲ್ಲಿಸಲು 500 ಕೋಟಿ ರೂ. ಆದಾಯ ಹೊಂದಿರಬೇಕೆಂದು ಬಿಡ್‌ ದಾಖಲೆಯಲ್ಲೆ ಬಿಸಿಸಿಐ ತಿಳಿಸಿತ್ತು. ಐಪಿಎಲ್ ಪ್ರಸಾರದ ಹಕ್ಕು ದುಬಾರಿ ಎಂದು ತಿಳಿದರೂ, ದೈತ್ಯ ಕಂಪನಿಗಳಾದ ಡಿಸ್ನಿಸ್ಟಾರ್, ರಿಲಯನ್ಸ್ ವಯಾಕಾಮ್ 18, ಸೋನಿ ನೆಟ್‌ವರ್ಕ್, ಜೀ ಎಂಟರ್‌ಟೈನ್‌ಮೆಂಟ್‌ನಂತಹ ದೊಡ್ಡ ಕಂಪನಿಗಳು ಬಿಡ್ಡಿಂಗ್ ನಲ್ಲಿ ಭಾಗಿಯಾಗಿವೆ. ಅವುಗಳ ಜೊತೆಗೆ ಟೈಮ್ಸ್ ಇಂಟರ್‌ನೆಟ್ ಮತ್ತು ರಿಲಯನ್ಸ್ ಜಿಯೋ ಕೂಡ ಕಣದಲ್ಲಿವೆ. ಟೈಮ್ಸ್ ಇಂಟರ್ನೆಟ್ ಮತ್ತು ರಿಲಯನ್ಸ್ ಜಿಯೋ ಡಿಜಿಟಲ್ ಹಕ್ಕುಗಳಿಗಾಗಿ ಮಾತ್ರ ಬಿಡ್ ಮಾಡಿದ್ದವು.

ಮತ್ತೆ ಸ್ಟಾರ್ ಪಾಲಾದ ಟಿವಿ ರೈಟ್ಸ್

ಮತ್ತೆ ಸ್ಟಾರ್ ಪಾಲಾದ ಟಿವಿ ರೈಟ್ಸ್

ಮೂಲಗಳ ಪ್ರಕಾರ ಸ್ಟಾರ್ ಇಂಡಿಯಾ ಐಪಿಎಲ್‌ನ ಎ ಪ್ಯಾಕೇಜ್, ಅಂದರೆ ಭಾರತದಲ್ಲಿ ಟಿವಿ ನೇರಪ್ರಸಾರದ ಹಕ್ಕನ್ನು ಖರೀದಿಸಿದೆ ಎಂದು ತಿಳಿದಯಬಂದಿದೆ. ರಿಲಯನ್ಸ್ ಮಾಲೀಕತ್ವದ ವಯಾಕಾಮ್‌ 18 ಭಾರತದ ಡಿಜಿಟಲ್‌ ನೇರಪ್ರಸಾರದ ಹಕ್ಕನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿದುಬಂದಿದೆ. ಆದರೆ ಬಿಸಿಸಿಐ ಅಥವಾ ಐಪಿಎಲ್ ಆಡಳಿತ ಮಂಡಳಿ ಇದರ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನು ಸಿ ಮತ್ತು ಡಿ ವಿಭಾಗದ ಬಿಡ್ಡಿಂಗ್ ಮಂಗಳವಾರ ನಡೆಯಲಿದೆ. ಈಗಾಗಲೆ ಸಿ ಪ್ಯಾಕೇಜ್ ಕೂಡ 1700 ಕೋಟಿ. ರೂ ದಾಟಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಇ-ಹರಾಜಿನಲ್ಲಿ ಬಿಸಿಸಿಐ ಈಗಾಗಲೆ 45,775 ಕೋಟಿ ರೂ.ಗೆ ಬಂದು ನಿಂತಿದೆ ಎಂದು ತಿಳಿದುಬಂದಿದೆ.

English summary
According to sources IPL 2023-2027 media rights goes to 44,075 crore for two separate brodcasters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X