ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IPL media rights : 50 ಸಾವಿರ ಕೋಟಿ IPL ಬಿಡ್ಡಿಂಗ್ ರೇಸ್‌ನಲ್ಲಿ Apple, FB, Amazon, Netflix?

|
Google Oneindia Kannada News

ಬೆಂಗಳೂರು, ಏಪ್ರಿಲ್ 07: ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಟೂರ್ನಮೆಂಟ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತೊಂದು ಸುತ್ತಿನ ಹರಾಜಿಗೆ ಸಜ್ಜಾಗುತ್ತಿದೆ. ಆಟಗಾರರ ಬಿಡ್ಡಿಂಗ್, ಹರಾಜು ಪ್ರಕ್ರಿಯೆ ಬಳಿಕ ಆರಂಭವಾಗಿರುವ ಐಪಿಎಲ್ 15ನೇ ಆವೃತ್ತಿ ಪಂದ್ಯಾವಳಿ ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಗಿದೆ. ಈ ನಡುವೆ ಮುಂಬರುವ ಸೀಸನ್ ಗಾಗಿ ಐಪಿಎಲ್ ಮಾಧ್ಯಮ ಹಕ್ಕು ಮಾರಾಟ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಾಗಿದೆ. ಈ ಬಹುಕೋಟಿ ಹರಾಜು ಪ್ರಕ್ರಿಯೆಯಲ್ಲಿ ವಿಶ್ವದ ಅತಿ ಶ್ರೀಮಂತ ಟೆಕ್ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಬಿಡ್ ಮಾಡಲು ಮುಂದಾಗಿರುವ ವರದಿ ಬಂದಿದೆ.

ಅಮೆಜಾನ್, ಫೇಸ್ ಬುಕ್, ಆಪಲ್, ನೆಟ್ ಫ್ಲಿಕ್ ಸದ್ಯ ಬಿಡ್ಡಿಂಗ್ ರೇಸಿನಲ್ಲಿವೆ ಎಂದು ಜನಪ್ರಿಯ ದೈನಿಕ ವರದಿ ಮಾಡಿದೆ. ಟೆಕ್ ಲೋಕದ ದಿಗ್ಗಜ ಸಂಸ್ಥೆಗಳಲ್ಲದೆ, ಮಾಧ್ಯಮ ಸಂಸ್ಥೆಗಳಾದ ಡಿಸ್ನಿ, ಜೀ-ಸೋನಿ, ಅಮೆಜಾನ್ ಪ್ರೈಂ, ಟಿವಿ 18 ವಯಾಕಾಂ ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಅಗತ್ಯ ದಾಖಲೆಗಳನ್ನು ಬಿಸಿಸಿಐನಿಂದ ಪಡೆದುಕೊಂಡಿವೆ.

ಕಳೆದ 14 ಆವೃತ್ತಿಗೆ ಹೋಲಿಸಿದರೆ ಮುಂದಿನ ಬಾರಿ ಐಪಿಎಲ್ ಮಾಧ್ಯಮ ಹಕ್ಕು ಭರ್ಜರಿ ಬೆಲೆ ಪಡೆದುಕೊಳ್ಳಲಿದೆ. 10 ತಂಡಗಳು ಐಪಿಎಲ್ 2022ರಲ್ಲಿ ಸೆಣಸುತ್ತಿದ್ದು, ಸದ್ಯ ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರದ ಹಕ್ಕು ಹೊಂದಿದೆ. ಲೈವ್ ಪ್ರಸಾರಕ್ಕಾಗಿ 16, 347 ಕೋಟಿ ರು ನೀಡಿದ್ದು, ಮುಂದಿನ ಐದು ವರ್ಷಗಳ ಕಾಲ ಸ್ಟಾರ್ ನೆಟ್ವರ್ಕ್ ಬಳಿ ಪ್ರಸಾರದ ಹಕ್ಕು ಇರಲಿದೆ. ಆದರೆ, ಮುಂದಿನ ಹರಾಜಿನಲ್ಲಿ ಈ ಬೆಲೆ ಸುಮಾರು 45,000 ಕೋಟಿ ರು ನಿಂದ 50, 000 ಕೋಟಿ ರುಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

IPL Media Rights Auction: Apple, Netflix, Amazon, Disney, Zee-Sony And Facebook in race for Rs 50,000 Crore Bid

ಪ್ರತ್ಯೇಕ ಬಿಡ್ಡಿಂಗ್
ಟಿವಿ ಪ್ರಸಾರ, ಡಿಜಿಟಲ್, ಉದ್ಘಾಟನಾ ಪಂದ್ಯ, ಪ್ಲೇ ಆಫ್, ಉದ್ಘಾಟನಾ ಸಮಾರಂಭ, ವಿದೇಶದಲ್ಲಿನ ಪ್ರಸಾರ ಹಕ್ಕು ಹೀಗೆ ಪ್ರತ್ಯೇಕ ವಿಭಾಗ ಮಾಡಲಾಗಿದ್ದು, ಎಲ್ಲದ್ದಕ್ಕೂ ಪ್ರತ್ಯೇಕ ಬಿಡ್ಡಿಂಗ್ ಮೊತ್ತ ನಿಗದಿಯಾಗಿದ್ದು, ಸಂಸ್ಥೆಗಳು ಪ್ರತ್ಯೇಕವಾಗಿ ಬಿಡ್ ಸಲ್ಲಿಸಬೇಕಾಗುತ್ತದೆ.

ಟಿವಿ ಪ್ರಸಾರ ಬಿಡ್
2023-2027ನೇ ಸಾಲಿನಲ್ಲಿ ಟಿವಿಯಲ್ಲಿ ಐಪಿಎಲ್ ಪಂದ್ಯ ಪ್ರಸಾರದ ಹಕ್ಕು ಮಾರಾಟಕ್ಕೆ ಹರಾಜು ನಡೆಸಲಾಗುತ್ತದೆ. ಬಿಸಿಸಿಐ ಇದಕ್ಕಾಗಿ ಮೂಲಬೆಲೆ 18,130 ಕೋಟಿ ರು ಎಂದು ನಿಗದಿ ಪಡಿಸಿದೆ. ಹಾಲಿ ಮೂಲ ಬೆಲೆಗೆ ಹೋಲಿಸಿದರೆ ಶೇ 300ರಷ್ಟು ದರ ಏರಿಕೆಯಾಗಲಿದೆ. ಪ್ರತಿ ಸೀಸನ್ ಪಂದ್ಯ ಸೇರಿದಂತೆ 74 ಪಂದ್ಯಗಳಿಗೆ 90 ಕೋಟಿ ರು ಎಂದು ನಿಗದಿ ಪಡಿಸಲಾಗಿದ್ದು, ಪಂದ್ಯಗಳ ಸಂಖ್ಯೆ ಹೆಚ್ಚಾದರೆ ಪ್ರೊರೇಟಾ ಆಧಾರದ ಮೇಲೆ ಮೌಲ್ಯ ಇನ್ನಷ್ಟು ಹೆಚ್ಚಾಗಲಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಐಪಿಎಲ್ ಡಿಜಿಟಲ್ ಹಕ್ಕು
ಟಿವಿ ಪ್ರಸಾರದ ಹಕ್ಕು ಮೂಲ ಬೆಲೆ ನಂತರ ಬಿಸಿಸಿಐ ಡಿಜಿಟಲ್ ಹಕ್ಕು ಮೌಲ್ಯವನ್ನು ನಿಗದಿಪಡಿಸಿದೆ. ಮೂಲ ಬೆಲೆ 12,200 ಕೋಟಿ ರು ಆಗಿದ್ದು, ಈ ಮೌಲ್ಯ ಕೂಡಾ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.

ಪ್ಲೇ ಆಫ್ ಪಂದ್ಯಕ್ಕೂ ಪ್ರತ್ಯೇಕ ಬಿಡ್
ಮೂರನೇ ಪ್ಯಾಕೇಜಿನಲ್ಲಿ 18 ಪಂದ್ಯಗಳು, ಆರಂಭಿಕ ಪಂದ್ಯ, 4 ಪ್ಲೇ ಆಫ್ ಪಂದ್ಯಗಳ ಪ್ರಸಾರದ ಹಕ್ಕು ಮಾರಾಟಕ್ಕಿದ್ದು, ಮೂಲ ಬೆಲೆ 1,440 ಕೋಟಿ ರು ಎಂದು ನಿಗದಿಪಡಿಸಲಾಗಿದೆ. ಇವೆಲ್ಲವೂ ಒಂದೇ ವೇದಿಕೆಯಲ್ಲಿ ಪ್ರಸಾರವಾಗಲಿದೆ.

ವಿದೇಶಗಳಲ್ಲಿ ಪ್ರಸಾರ ಹಕ್ಕು:
ವಿದೇಶಗಳಲ್ಲಿ ಐಪಿಎಲ್ ಟಿವಿ ಹಾಗೂ ಡಿಜಿಟಲ್ ಹಕ್ಕು ಪ್ರಸಾರಕ್ಕಾಗಿ 1,100 ಕೋಟಿ ರು ಎಂದು ಮೂಲ ಬೆಲೆ ನಿಗದಿಪಡಿಸಲಾಗಿದೆ.

English summary
IPL Media Rights Auction: Apple, Netflix, Amazon, Disney, Zee-Sony And Facebook in race for Rs 50,000 Crore Bid according to media reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X