ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಕೋಟಿ ಐಪಿಎಲ್ ಬಿಡ್ಡಿಂಗ್ ರೇಸ್: ಅಮೆಜಾನ್, ರಿಲಯನ್ಸ್, ಸೋನಿ ಪೈಪೋಟಿ

|
Google Oneindia Kannada News

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತೊಂದು ಸುತ್ತಿನ ಹರಾಜಿಗೆ ಸಜ್ಜಾಗುತ್ತಿದೆ. ಮುಂಬರುವ ಸೀಸನ್ ಗಾಗಿ ಐಪಿಎಲ್ ಮಾಧ್ಯಮ ಹಕ್ಕು ಮಾರಾಟ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಾಗಿದೆ. ಈ ಬಹುಕೋಟಿ ಹರಾಜು ಪ್ರಕ್ರಿಯೆಯಲ್ಲಿ ವಿಶ್ವದ ಅತಿ ಶ್ರೀಮಂತ ಟೆಕ್ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಬಿಡ್ ಮಾಡಲು ಅರ್ಜಿ ಹಾಕಿರುವ ದೊಡ್ಡ ಸಂಸ್ಥೆಗಳ ಪಟ್ಟಿ ಬಹಿರಂಗವಾಗಿದೆ.

ಅಮೆಜಾನ್, ಫೇಸ್ ಬುಕ್, ಆಪಲ್, ನೆಟ್ ಫ್ಲಿಕ್ ಸದ್ಯ ಬಿಡ್ಡಿಂಗ್ ರೇಸಿನಲ್ಲಿವೆ ಎಂದು ಜನಪ್ರಿಯ ದೈನಿಕ ವರದಿ ಮಾಡಿದೆ. ಟೆಕ್ ಲೋಕದ ದಿಗ್ಗಜ ಸಂಸ್ಥೆಗಳಲ್ಲದೆ, ಮಾಧ್ಯಮ ಸಂಸ್ಥೆಗಳಾದ ಡಿಸ್ನಿ, ಜೀ-ಸೋನಿ, ಅಮೆಜಾನ್ ಪ್ರೈಂ, ಟಿವಿ 18 ವಯಾಕಾಂ ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಅಗತ್ಯ ದಾಖಲೆಗಳನ್ನು ಬಿಸಿಸಿಐನಿಂದ ಪಡೆದುಕೊಂಡಿವೆ.

ಇವುಗಳ ಹೊರತಾಗಿ, ಫ್ಯಾಂಟಸಿ-ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ ಡ್ರೀಮ್ 11 ಸಹ ಬಿಡ್-ಸಂಬಂಧಿತ ದಾಖಲೆಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಥವಾ ಬಿಸಿಸಿಐನಿಂದ ಖರೀದಿಸಿದೆ, ಆದರೆ, ಈ ಬಗ್ಗೆ ಇನ್ನೂ ಸಾರ್ವಜನಿಕವಾಗಿಲ್ಲ. ಬಿಸಿಸಿಐ ಕ್ರೀಡೆಯ ಸ್ಥಳೀಯ ಆಡಳಿತ ಮಂಡಳಿಯಾಗಿದ್ದು, ಜೂನ್ 12 ರಿಂದ ಆನ್‌ಲೈನ್ ಹರಾಜನ್ನು ನಡೆಸಲಿದೆ.

ಸಂಸ್ಥೆಗಳು ತಮ್ಮ ಜಾಹೀರಾತು ಆದಾಯವನ್ನು ಹೆಚ್ಚಿಸಲು ಮತ್ತು ಪ್ರಸಾರ ವಲಯದಲ್ಲಿ ತಮ್ಮ ವರ್ಚಸ್ಸನ್ನು ಭದ್ರಪಡಿಸಿಕೊಳ್ಳಲು ಸ್ಪರ್ಧಿಸುತ್ತಿವೆ. ಮುಂಬರುವ ಹರಾಜುಗಳು ಟಿವಿ ಪಂದ್ಯಗಳನ್ನು ಪ್ರಸಾರ ಮಾಡಲು ಮತ್ತು ಅವುಗಳನ್ನು ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡುವ ಹಕ್ಕುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತವೆ, ಅಮೆಜಾನ್ ಮತ್ತು ಅದರ ಪ್ರಧಾನ ವಿಡಿಯೊ ಸೇವೆಗೆ ಬಾಗಿಲು ತೆರೆಯುತ್ತದೆ ಮತ್ತು ಅದನ್ನು ವಿಸ್ತರಿಸಲು ಬಯಸುತ್ತಿರುವ ಅಂಬಾನಿಯ ಸಂಘಟಿತರೊಂದಿಗೆ ಪೈಪೋಟಿ ನಡೆಸಬೇಕಿದೆ.

50, 000 ಕೋಟಿ ರುಗೆ ಏರಿಕೆಯಾಗುವ ಸಾಧ್ಯತೆ

50, 000 ಕೋಟಿ ರುಗೆ ಏರಿಕೆಯಾಗುವ ಸಾಧ್ಯತೆ

ಕಳೆದ 14 ಆವೃತ್ತಿಗೆ ಹೋಲಿಸಿದರೆ ಮುಂದಿನ ಬಾರಿ ಐಪಿಎಲ್ ಮಾಧ್ಯಮ ಹಕ್ಕು ಭರ್ಜರಿ ಬೆಲೆ ಪಡೆದುಕೊಳ್ಳಲಿದೆ. 10 ತಂಡಗಳು ಐಪಿಎಲ್ 2022ರಲ್ಲಿ ಸೆಣಸುತ್ತಿದ್ದು, ಸದ್ಯ ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರದ ಹಕ್ಕು ಹೊಂದಿದೆ. ಲೈವ್ ಪ್ರಸಾರಕ್ಕಾಗಿ 16, 347 ಕೋಟಿ ರು ನೀಡಿದ್ದು, ಮುಂದಿನ ಐದು ವರ್ಷಗಳ ಕಾಲ ಸ್ಟಾರ್ ನೆಟ್ವರ್ಕ್ ಬಳಿ ಪ್ರಸಾರದ ಹಕ್ಕು ಇರಲಿದೆ. ಆದರೆ, ಮುಂದಿನ ಹರಾಜಿನಲ್ಲಿ ಈ ಬೆಲೆ ಸುಮಾರು 45,000 ಕೋಟಿ ರು ನಿಂದ 50, 000 ಕೋಟಿ ರುಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಐಪಿಎಲ್ ಅನ್ನು ಕ್ರಿಕೆಟ್‌ನ ಸೂಪರ್ ಬೌಲ್

ಐಪಿಎಲ್ ಅನ್ನು ಕ್ರಿಕೆಟ್‌ನ ಸೂಪರ್ ಬೌಲ್

2023 ಮತ್ತು 2027 ರ ನಡುವಿನ ಭಾರತದ ಅಗ್ರ ಕ್ರಿಕೆಟ್ ಲೀಗ್‌ನ ಪಂದ್ಯಗಳನ್ನು ಲೈವ್ ಸ್ಟ್ರೀಮಿಂಗ್ ಮತ್ತು ಟಿವಿ ಪ್ರಸಾರದ ಮೂಲಕ ಜಾಗತಿಕವಾಗಿ ಪ್ರಸಾರ ಮಾಡಲು ಹರಾಜು ವಿಜೇತ ಅಥವಾ ವಿಜೇತರಿಗೆ -- ಬಿಡ್ ಮಾಡಲು ನಾಲ್ಕು ವಿಭಾಗಗಳಲ್ಲಿ ಬಿಡ್ಡಿಂಗ್ ಅವಕಾಶಗಳಿವೆ. ವೀಕ್ಷಕರ ಸಂಖ್ಯೆಯಿಂದ ವಿಶ್ವದ ಮೂರನೇ ಅತಿದೊಡ್ಡ ಕ್ರೀಡಾಕೂಟದ ಹಕ್ಕುಗಳನ್ನು ಪಡೆದುಕೊಳ್ಳುವುದು -- ಐಪಿಎಲ್ ಅನ್ನು ಕ್ರಿಕೆಟ್‌ನ ಸೂಪರ್ ಬೌಲ್ ಎಂದು ಪರಿಗಣಿಸಲಾಗುತ್ತದೆ -- ಅಂದರೆ ನೂರಾರು ಮಿಲಿಯನ್ ವೀಕ್ಷಣೆಗೆ ಸಾಕ್ಷಿಯಾಗಲಿದೆ.

ಟಿವಿ ಪ್ರಸಾರ ಬಿಡ್

ಟಿವಿ ಪ್ರಸಾರ ಬಿಡ್

2023-2027ನೇ ಸಾಲಿನಲ್ಲಿ ಟಿವಿಯಲ್ಲಿ ಐಪಿಎಲ್ ಪಂದ್ಯ ಪ್ರಸಾರದ ಹಕ್ಕು ಮಾರಾಟಕ್ಕೆ ಹರಾಜು ನಡೆಸಲಾಗುತ್ತದೆ. ಬಿಸಿಸಿಐ ಇದಕ್ಕಾಗಿ ಮೂಲಬೆಲೆ 18,130 ಕೋಟಿ ರು ಎಂದು ನಿಗದಿ ಪಡಿಸಿದೆ. ಹಾಲಿ ಮೂಲ ಬೆಲೆಗೆ ಹೋಲಿಸಿದರೆ ಶೇ 300ರಷ್ಟು ದರ ಏರಿಕೆಯಾಗಲಿದೆ. ಪ್ರತಿ ಸೀಸನ್ ಪಂದ್ಯ ಸೇರಿದಂತೆ 74 ಪಂದ್ಯಗಳಿಗೆ 90 ಕೋಟಿ ರು ಎಂದು ನಿಗದಿ ಪಡಿಸಲಾಗಿದ್ದು, ಪಂದ್ಯಗಳ ಸಂಖ್ಯೆ ಹೆಚ್ಚಾದರೆ ಪ್ರೊರೇಟಾ ಆಧಾರದ ಮೇಲೆ ಮೌಲ್ಯ ಇನ್ನಷ್ಟು ಹೆಚ್ಚಾಗಲಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಐಪಿಎಲ್ ಡಿಜಿಟಲ್ ಹಕ್ಕು
ಟಿವಿ ಪ್ರಸಾರದ ಹಕ್ಕು ಮೂಲ ಬೆಲೆ ನಂತರ ಬಿಸಿಸಿಐ ಡಿಜಿಟಲ್ ಹಕ್ಕು ಮೌಲ್ಯವನ್ನು ನಿಗದಿಪಡಿಸಿದೆ. ಮೂಲ ಬೆಲೆ 12,200 ಕೋಟಿ ರು ಆಗಿದ್ದು, ಈ ಮೌಲ್ಯ ಕೂಡಾ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಪ್ಲೇ ಆಫ್ ಪಂದ್ಯಕ್ಕೂ ಪ್ರತ್ಯೇಕ ಬಿಡ್

ಪ್ಲೇ ಆಫ್ ಪಂದ್ಯಕ್ಕೂ ಪ್ರತ್ಯೇಕ ಬಿಡ್

ಪ್ಲೇ ಆಫ್ ಪಂದ್ಯಕ್ಕೂ ಪ್ರತ್ಯೇಕ ಬಿಡ್
ಮೂರನೇ ಪ್ಯಾಕೇಜಿನಲ್ಲಿ 18 ಪಂದ್ಯಗಳು, ಆರಂಭಿಕ ಪಂದ್ಯ, 4 ಪ್ಲೇ ಆಫ್ ಪಂದ್ಯಗಳ ಪ್ರಸಾರದ ಹಕ್ಕು ಮಾರಾಟಕ್ಕಿದ್ದು, ಮೂಲ ಬೆಲೆ 1,440 ಕೋಟಿ ರು ಎಂದು ನಿಗದಿಪಡಿಸಲಾಗಿದೆ. ಇವೆಲ್ಲವೂ ಒಂದೇ ವೇದಿಕೆಯಲ್ಲಿ ಪ್ರಸಾರವಾಗಲಿದೆ.

ವಿದೇಶಗಳಲ್ಲಿ ಪ್ರಸಾರ ಹಕ್ಕು:
ವಿದೇಶಗಳಲ್ಲಿ ಐಪಿಎಲ್ ಟಿವಿ ಹಾಗೂ ಡಿಜಿಟಲ್ ಹಕ್ಕು ಪ್ರಸಾರಕ್ಕಾಗಿ 1,100 ಕೋಟಿ ರು ಎಂದು ಮೂಲ ಬೆಲೆ ನಿಗದಿಪಡಿಸಲಾಗಿದೆ.

English summary
Amazon.com Inc., The Walt Disney Co. and billionaire Mukesh Ambani-led Reliance Industries Ltd. are among those that have signaled an intention to bid for the broadcast rights of the Indian Premier League, or IPL, according to people familiar with the matter, setting the stage for an epic showdown for the prized asset in cricket-crazy India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X