ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IPL 2022 Final Prize Money : ಚಾಂಪಿಯನ್‌ ತಂಡಕ್ಕೆ 20 ಕೋಟಿ ರೂ.... ಉಳಿದ ಪ್ರಶಸ್ತಿಗಳ ವಿವರ ಇಲ್ಲಿದೆ

|
Google Oneindia Kannada News

ಅಹ್ಮದಾಬಾದ್‌, ಮೇ 29: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ ಭಾನುವಾರ ನಡೆಯಲಿದೆ. ವಿಶ್ವಪ್ರಸಿದ್ಧ ಲೀಗ್‌ನಲ್ಲಿ ಈ ಬಾರಿ ಬಾರಿ 10 ತಂಡಗಳು ಕಣಕ್ಕಿಳಿದಿದ್ದವು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಹೊಸ ತಂಡವಾದ ಗುಜರಾತ್ ಟೈಟನ್ಸ್ ತಂಡಗಳು ಚಾಂಪಿಯನ್‌ ಪಟ್ಟಕ್ಕೇರಲು ಸೆಣಸಾಡಲಿವೆ.

73 ಪಂದ್ಯಗಳಲ್ಲಿ ಯಶಸ್ವಿಯಾಗಿ ಮುಗಿದಿದ್ದು 15ನೇ ಆವೃತ್ತಿಯ ಕೊನೆಯ ಪಂದ್ಯದಲ್ಲಿ ಅಗ್ರ 2 ತಂಡಗಳಾದ 2008ರಲ್ಲಿ ಮೊದಲ ಆವೃತ್ತಿಯಲ್ಲಿ ಜಯ ಸಾಧಿಸಿದ್ದ ರಾಜಸ್ಥಾನ್‌ ರಾಯಲ್ಸ್ ಮತ್ತು ಗುಜರಾತ್‌ ಟೈಟನ್ಸ್ ಚೊಚ್ಚಲ ಟೈಟಲ್ ಎತ್ತಿ ಹಿಡಿಯುವ ಪ್ರಯತ್ನದಲ್ಲಿದೆ.

ಈಗಾಗಲೆ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ 190+ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ತನ್ನ ಮೊದಲ ಲೀಗ್‌ನಲ್ಲೇ ಫೈನಲ್ ಪ್ರವೇಶಿಸಿದೆ. ಇತ್ತ ರಾಜಸ್ಥಾನ್‌ ಶುಕ್ರವಾರ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಗ್ಗುಬಡಿದೆ ಫೈನಲ್‌ ಪ್ರವೇಶಿಸಿದೆ.

IPL 2022 Winner to Get Rs 20 Crore Amount, Check Here Full List of Awards

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಅದ್ದೂರಿ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಐಪಿಎಲ್‌ 15ನೇ ಆವೃತ್ತಿಯನ್ನು ಗೆದ್ದರೆ ಚಾಂಪಿಯನ್‌ ತಂಡ , ರನ್ನರ್‌ ಅಪ್ ಹಾಗೂ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡ ಎಷ್ಟು ಮೊತ್ತವನ್ನು ಪಡೆಯಲಿದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

ತಂಡಗಳ ಬಹುಮಾನ ಮೊತ್ತ
ಚಾಂಪಿಯನ್ ತಂಡ : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ತಂಡ ಬಿಸಿಸಿಐನಿಂದ 20 ಕೋಟಿ ರೂ.ಗಳನ್ನು ಪಡೆದುಕೊಳ್ಳಲಿದೆ.

ರನ್ನರ್ಸ್ ಅಪ್ : ಟೂರ್ನಿಯ ಫೈನಲ್‌ನಲ್ಲಿ ಸೋತು 2ನೇ ಸ್ಥಾನ ಪಡೆಯುವ ತಂಡ ಬಿಸಿಸಿಐನಿಂದ 13 ಕೋಟಿ ರೂಗಳನ್ನು ಪಡೆಯಲಿದೆ.

3ನೇ ಸ್ಥಾನ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಕೋಟಿ ಮತ್ತು 4ನೇ ಸ್ಥಾನ ಪಡೆದಿರುವ ಲಕ್ನೋ ಸೂಪರ್ ಜೈಂಟ್ಸ್ 6.5 ಕೋಟಿ ರೂಗಳನ್ನು ಬಿಸಿಸಿಐನಿಂದ ಪಡೆಯಲಿದೆ.

ವೈಯಕ್ತಿಕ ಪ್ರಶಸ್ತಿಗಳ ಬಹುಮಾನ ಮೊತ್ತ

ಆರೆಂಜ್ ಕ್ಯಾಪ್‌ : ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸುವ ಬ್ಯಾಟರ್‌ಗೆ ಆರೆಂಜ್ ಕ್ಯಾಪ್‌ ಮತ್ತು ಗರಿಷ್ಠ ವಿಕೆಟ್ ಪಡೆದ ಬೌಲರ್‌ ಪರ್ಪಲ್ ಕ್ಯಾಪ್‌ ನೀಡುವುವು ಮೊದಲ ಐಪಿಎಲ್‌ನಿಂದಲೂ ರೂಢಿಯಲ್ಲಿದೆ. 2022ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜಾಸ್ ಬಟ್ಲರ್‌ ಈಗಾಗಲೆ 824 ರನ್‌ಗಳಿಸಿ ಗರಿಷ್ಠ ರನ್‌ ಸರದಾರರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ವಿಫಲರಾದರೂ ಅವರಿಗೆ ಈ ಟ್ರೋಫಿ ಲಭ್ಯವಾಗಲಿದ್ದು, ಟ್ರೋಫಿ ಜೊತೆಗೆ 15 ಲಕ್ಷ ರೂ ಜೇಬಿಗಿಳಿಸಿಕೊಳ್ಳಲಿದ್ದಾರೆ.

ಪರ್ಪಲ್ ಕ್ಯಾಪ್ : ಹೆಚ್ಚು ವಿಕೆಟ್‌ ಪಡೆದ ಪಟ್ಟಿಯಲ್ಲಿ ರಾಯಲ್ಸ್ ತಂಡ ಯುಜ್ವೇಂದ್ರ ಚಾಹಲ್ ಮತ್ತು ಆರ್‌ಸಿಬಿ ತಂಡದ ವನಿಂಡು ಹಸರಂಗ ತಲಾ 26 ವಿಕೆಟ್ ಪಡೆದಿದ್ದಾರೆ. ಇಂದಿನ ಪಂದ್ಯದಲ್ಲಿ ಚಾಹಲ್ ವಿಕೆಟ್ ಪಡೆದರೆ ಈ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲಿದ್ದಾರೆ. ಒಂದು ವೇಳೆ ವಿಫಲರಾದರೆ ಹಸರಂಗ ಪರ್ಪಲ್ ಕ್ಯಾಪ್‌ ಮತ್ತು 15 ಲಕ್ಷ ರೂ. ಪಡೆದುಕೊಳ್ಳಲಿದ್ದಾರೆ.

Recommended Video

ಇಡೀ ವೃತ್ತಿಜೀವನದಲ್ಲಿ ಮಾಡದೇ ಇರೋ ತಪ್ಪನ್ನ‌ಎಲ್ಲ ವಿರಾಟ್ ಈ ಸೀಸನ್ ನಲ್ಲಿ ಮಾಡಿದ್ದಾರೆ | OneIndia Kannada

ಉದಯೋನ್ಮಖ ಆಟಗಾರ ಪ್ರಶಸ್ತಿ: 20 ಲಕ್ಷ ರೂ. ಆವೃತ್ತಿಯ ಅತ್ಯಮೂಲ್ಯ ಆಟಗಾರ, ಗರಿಷ್ಠ ಸಿಕ್ಸರ್‌ ಸಿಡಿಸಿದ ಬ್ಯಾಟರ್, 'ಗೇಮ್ ಚೇಂಜರ್‌ ಆಫ್‌ ದಿ ಸೀಸನ್‌' ಪ್ರಶಸ್ತಿಗಳನ್ನು ಪಡೆಯಲಿರುವ ಆಟಗಾರ ತಲಾ 12 ಲಕ್ಷ ರೂ ಪಡೆಯಲಿದ್ದಾರೆ. 'ಸೂಪರ್ ಸ್ಟ್ರೈಕರ್‌ ಆಫ್‌ ದ ಸೀಸನ್‌ 'ಪ್ರಶಸ್ತಿ ಪಡೆಯುವ ತಂಡ 15 ಲಕ್ಷ ರೂ ಪಡೆಯಲಿದ್ದಾರೆ.

English summary
the final of IPL 2022 will be played between Rajasthan Royal and Gujarat Titans on Sunday. Check hear how much prize money the winners and runners-up will receive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X