ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IPL Auction 2022 ಮೆಗಾ ಹರಾಜು: ಕ್ರಿಕೆಟ್ ಪ್ರೇಮಿಗಳು ತಿಳಿಯಬೇಕಾದ್ದೇನು?

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 2022 ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಗೆ ಉದ್ಯಾನ ನಗರಿ ಮತ್ತೊಮ್ಮೆ ವೇದಿಕೆ ಒದಗಿಸುತ್ತಿದೆ. ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಹರಾಜು ಎಲ್ಲಿ, ಯಾವಾಗ ಮತ್ತು ಹೇಗೆ ವೀಕ್ಷಿಸಬಹುದು? ಇನ್ನಿತರ ವಿಷಯಗಳನ್ನು ತಪ್ಪದೇ ಇಲ್ಲಿ ಓದಿ...

ವಿಶ್ವದ ಅತಿದೊಡ್ಡ ಟಿ 20 ಲೀಗ್ 10 ಆರಂಭಕ್ಕೂ ಮುನ್ನ ಯಾವ ತಂಡಕ್ಕೆ ಯಾವ ಆಟಗಾರರು ಸೇರ್ಪಡೆಯಾಗಲಿದ್ದಾರೆ ಎಂಬುದು ಮುಂದಿನ ಎರಡು ದಿನಗಳ ಅತಿದೊಡ್ಡ ಹರಾಜಿನ ನಂತರ ತಿಳಿಯಲಿದೆ. ಈ ಬಾರಿ ಎರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಂಡಿವೆ.


ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್‌ ತಂಡಗಳು ಹೆಚ್ಚಿನ ಕುತೂಹಲ ಮೂಡಿಸಿವೆ. ಎರಡು ದಿನಗಳ ಹರಾಜಿನ ನಂತರ ಎರಡು ತಿಂಗಳು ಕ್ರಿಕೆಟ್ ಹವಾ ಎಲ್ಲರನ್ನು ಆವರಿಸಲಿದೆ. ಐದು ರಾಜ್ಯಗಳ ಚುನಾವಣೆ ನಡುವೆ ಐಷಾರಾಮಿ ಲೀಗ್ ಭಾರತದಲ್ಲೇ ಆಯೋಜನೆಗೊಳ್ಳುತ್ತಿರುವುದು ವಿಶೇಷ.

IPL 2022 ರ ಮೆಗಾ ಹರಾಜಿನಲ್ಲಿ ಒಟ್ಟು 10 ಫ್ರಾಂಚೈಸಿಗಳು 590 ಆಟಗಾರರನ್ನು ಖರೀದಿಸಲು ಬಿಡ್ ಸಲ್ಲಿಸಲಿವೆ. ಹರಾಜಿಗಿರುವ ಆಟಗಾರರ ಪೈಕಿ 370 ಭಾರತೀಯರು ಮತ್ತು 220 ವಿದೇಶಿಯರಿದ್ದಾರೆ.

ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್, ಶಿಖರ್ ಧವನ್, ರವಿಚಂದ್ರನ್ ಅಶ್ವಿನ್, ಕ್ವಿಂಟನ್ ಡಿ ಕಾಕ್ , ಇಶಾನ್ ಕಿಶನ್ ಯಾವ ತಂಡಕ್ಕೆ ಸೇರಬಹುದು ಎಂಬ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ.

IPL 2022 ಮೆಗಾ ಹರಾಜು ಯಾವಾಗ ನಡೆಯುತ್ತದೆ?

ಐಪಿಎಲ್ 2022 ರ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು (ಶನಿವಾರ ಮತ್ತು ಭಾನುವಾರ) ನಡೆಯಲಿದೆ.

IPL 2022 mega auction in Bengaluru: When and where to watch, Things you need to know


IPL 2022 ಮೆಗಾ ಹರಾಜು ಎಲ್ಲಿ ನಡೆಯುತ್ತದೆ?

ಐಪಿಎಲ್ 2022 ರ ಮೆಗಾ ಹರಾಜು ಬೆಂಗಳೂರಿನಲ್ಲಿ ನಡೆಯಲಿದೆ.


IPL 2022 ಮೆಗಾ ಹರಾಜನ್ನು ಅಭಿಮಾನಿಗಳು ಲೈವ್ ಆಗಿ ಎಲ್ಲಿ ವೀಕ್ಷಿಸಬಹುದು?

IPL 2022 ಮೆಗಾ ಹರಾಜಿನ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗುತ್ತದೆ. ಮೈಖೇಲ್ ಕನ್ನಡದಲ್ಲಿ ಲೈವ್ ಅಪ್ಡೇಟ್ ಪಡೆಯಬಹುದು.


IPL 2022 ಮೆಗಾ ಹರಾಜು ಯಾವ ಸಮಯ( IST ನಲ್ಲಿ )ಕ್ಕೆ ಪ್ರಾರಂಭವಾಗುತ್ತದೆ?

ವರದಿಗಳ ಪ್ರಕಾರ, ಐಪಿಎಲ್ 2022 ರ ಮೆಗಾ ಹರಾಜು ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದೆ.


IPL 2022 ರ ಮೆಗಾ ಹರಾಜಿನಲ್ಲಿ ಎಷ್ಟು ಆಟಗಾರರಿದ್ದಾರೆ?

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಒಟ್ಟು 590 ಆಟಗಾರರು ಹರಾಜಾಗಲಿದ್ದಾರೆ, ಅದರಲ್ಲಿ 370 ಭಾರತೀಯರು ಮತ್ತು 220 ವಿದೇಶಗಳಲ್ಲಿದ್ದಾರೆ.


ಪ್ರತಿ 10 ಐಪಿಎಲ್ ತಂಡಗಳಿಗೆ ಎಷ್ಟು ಪರ್ಸ್ ಮೌಲ್ಯ ಉಳಿದಿದೆ?

  • ಚೆನ್ನೈ ಸೂಪರ್ ಕಿಂಗ್ಸ್: 42 ಕೋಟಿ ರೂ
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: 57 ಕೋಟಿ ರೂ
  • ಮುಂಬೈ ಇಂಡಿಯನ್ಸ್: 48 ಕೋಟಿ ರೂ
  • ಪಂಜಾಬ್ ಕಿಂಗ್ಸ್: 72 ಕೋಟಿ ರೂ
  • ದೆಹಲಿ ಕ್ಯಾಪಿಟಲ್ಸ್: 47.5 ಕೋಟಿ ರೂ
  • ಕೋಲ್ಕತ್ತಾ ನೈಟ್ ರೈಡರ್ಸ್: 48 ಕೋಟಿ ರೂ
  • ರಾಜಸ್ಥಾನ್ ರಾಯಲ್ಸ್: 62 ಕೋಟಿ ರೂ
  • ಸನ್ ರೈಸರ್ಸ್ ಹೈದರಾಬಾದ್: 68 ಕೋಟಿ ರೂ
  • ಲಕ್ನೋ ಸೂಪರ್ ಜೈಂಟ್ಸ್: 58 ಕೋಟಿ ರೂ
  • ಗುಜರಾತ್ ಟೈಟಾನ್ಸ್: 52 ಕೋಟಿ ರೂ

ಮೆಗಾ ಹರಾಜಿನ ಮೊದಲು ಎಲ್ಲಾ 10 ಐಪಿಎಲ್ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ:

ಚೆನ್ನೈ ಸೂಪರ್ ಕಿಂಗ್ಸ್ (CSK):

  • ರವೀಂದ್ರ ಜಡೇಜಾ (16 ಕೋಟಿ)
  • ಎಂಎಸ್ ಧೋನಿ (12 ಕೋಟಿ)
  • ಮೊಯಿನ್ ಅಲಿ (8 ಕೋಟಿ)
  • ರುತುರಾಜ್ ಗಾಯಕ್ವಾಡ್ (6 ಕೋಟಿ)

***

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)

  • ಆಂಡ್ರೆ ರಸೆಲ್ (12 ಕೋಟಿ, 16 ಕೋಟಿ ಪರ್ಸ್‌ನಿಂದ ಕಡಿತಗೊಳಿಸಬೇಕು)
  • ವರುಣ್ ಚಕ್ರವರ್ತಿ (8 ಕೋಟಿ, ಪರ್ಸ್‌ನಿಂದ 12 ಕೋಟಿ ಕಡಿತಗೊಳಿಸಬೇಕು)
  • ವೆಂಕಟೇಶ್ ಅಯ್ಯರ್ (8 ಕೋಟಿ)
  • ಸುನಿಲ್ ನಾರಾಯಣ್ (6 ಕೋಟಿ)

****

ಸನ್‌ರೈಸರ್ಸ್ ಹೈದರಾಬಾದ್ (SRH)

  • ಕೇನ್ ವಿಲಿಯಮ್ಸನ್ (14 ಕೋಟಿ)
  • ಅಬ್ದುಲ್ ಸಮದ್ (4 ಕೋಟಿ)
  • ಉಮ್ರಾನ್ ಮಲಿಕ್ (4 ಕೋಟಿ)

***

ಮುಂಬೈ ಇಂಡಿಯನ್ಸ್ (MI)

  • ರೋಹಿತ್ ಶರ್ಮಾ (16 ಕೋಟಿ)
  • ಜಸ್ಪ್ರೀತ್ ಬುಮ್ರಾ (12 ಕೋಟಿ)
  • ಸೂರ್ಯಕುಮಾರ್ ಯಾದವ್ (8 ಕೋಟಿ)
  • ಕೀರಾನ್ ಪೊಲಾರ್ಡ್ (6 ಕೋಟಿ)

***

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

  • ವಿರಾಟ್ ಕೊಹ್ಲಿ (15 ಕೋಟಿ)
  • ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ)
  • ಮೊಹಮ್ಮದ್ ಸಿರಾಜ್ (7 ಕೋಟಿ)

***

ದೆಹಲಿ ಕ್ಯಾಪಿಟಲ್ಸ್ (DC)

  • ರಿಷಬ್ ಪಂತ್ (16 ಕೋಟಿ)
  • ಅಕ್ಷರ್ ಪಟೇಲ್ (9 ಕೋಟಿ, ಪರ್ಸ್‌ನಿಂದ 12 ಕೋಟಿ ಕಡಿತಗೊಳಿಸಬೇಕು)
  • ಪೃಥ್ವಿ ಶಾ (7.5 ಕೋಟಿ, ಪರ್ಸ್‌ನಿಂದ 8 ಕೋಟಿ ಕಡಿತಗೊಳಿಸಬೇಕು)
  • ಅನ್ರಿಚ್ ನೋಕಿಯಾ (6.5 ಕೋಟಿ)

**

ರಾಜಸ್ಥಾನ್ ರಾಯಲ್ಸ್ (RR)

  • ಸಂಜು ಸ್ಯಾಮ್ಸನ್ (14 ಕೋಟಿ)
  • ಜೋಸ್ ಬಟ್ಲರ್ (10 ಕೋಟಿ)
  • ಯಶಸ್ವಿ ಜೈಸ್ವಾಲ್ (4 ಕೋಟಿ)

**

ಪಂಜಾಬ್ ಕಿಂಗ್ಸ್ (PBKS)

  • ಮಯಾಂಕ್ ಅಗರ್ವಾಲ್ (12 ಕೋಟಿ, ಪರ್ಸ್‌ನಿಂದ 14 ಕೋಟಿ ಕಡಿತಗೊಳಿಸಬೇಕು)
  • ಅರ್ಷದೀಪ್ ಸಿಂಗ್ (4 ಕೋಟಿ)

**

ಲಕ್ನೋ ಸೂಪರ್ ಜೈಂಟ್ಸ್ (LSG)

  • ಕೆಎಲ್ ರಾಹುಲ್ (17 ಕೋಟಿ ರೂ.)
  • ಮಾರ್ಕಸ್ ಸ್ಟೊಯಿನಿಸ್ (9.2 ಕೋಟಿ ರೂ.)
  • ರವಿ ಬಿಷ್ಣೋಯ್ (ರೂ. 4 ಕೋಟಿ)

***
ಗುಜರಾತ್ ಟೈಟಾನ್ಸ್ (GT)

  • ಹಾರ್ದಿಕ್ ಪಾಂಡ್ಯ (15 ಕೋಟಿ ರೂ.)
  • ರಶೀದ್ ಖಾನ್ (ರೂ 15 ಕೋಟಿ)
  • ಶುಭಮನ್ ಗಿಲ್ (8 ಕೋಟಿ ರೂ.)

    IPL ಹರಾಜಿನ ಮೊದಲ ನೇ ದಿನದಂದು ಎಷ್ಟು ಆಟಗಾರರು ಬಿಡ್ಡಿಂಗ್‌ನ ಭಾಗವಾಗುತ್ತಾರೆ?
    ಹರಾಜಿನ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 161 ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.

    Recommended Video

    ತಕ್ಷಣವೇ Ukraine ತೊರೆಯುವಂತೆ ಅಮೆರಿಕನ್ನರಿಗೆ ಎಚ್ಚರಿಕೆ ಕೊಟ್ಟ Joe Biden | Oneindia Kannada

    IPL ಹರಾಜು 2022: ಹಿರಿಯ ಮತ್ತು ಕಿರಿಯ ಆಟಗಾರರು ಯಾರು?

    ಅಫ್ಘಾನಿಸ್ತಾನದ 17 ವರ್ಷದ ನೂರ್ ಅಹ್ಮದ್ 2022 ರ ಐಪಿಎಲ್ ಹರಾಜಿನ ಭಾಗವಾಗಿರುವ ಅತ್ಯಂತ ಕಿರಿಯ ಆಟಗಾರನಾಗಿದ್ದರೆ, ಟಿ 20 ಅನುಭವಿ ಇಮ್ರಾನ್ ತಾಹಿರ್ ಅತ್ಯಂತ ಹಳೆಯ ಆಟಗಾರ.

English summary
IPL 2022 mega auction in Bengaluru: When and where to watch, Things you need to know as world will witness 10 teams, going hammer and tongs in the biggest Indian Premier League (IPL) auction till date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X