• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೆಲ್ಲಿ ತಂಡ ಸೇರಿದ ನಮ್ಮ ಗದಗದ ಅನಿರುದ್ಧ ಜೋಶಿ ಪರಿಚಯ

|
Google Oneindia Kannada News

ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಬಯಕೆ ಹೊಂದಿ ತಂಡ ಸೇರಿದರೂ ಅವಕಾಶ ವಂಚಿತರಾಗಿದ್ದ ಪ್ರತಿಭಾವಂತ ಆಟಗಾರ ಅನಿರುದ್ಧ ಜೋಶಿಗೆ ಈಗ ಭರ್ಜರಿ ಆಫರ್ ಸಿಕ್ಕಿದೆ. ಗದಗ ಮೂಲದ ಬ್ಯಾಟ್ಸ್ ಮನ್ ಅನಿರುದ್ಧ ಅವರು ಈಗ ಗಾಯಾಳು ಶ್ರೇಯಸ್ ಅಯ್ಯರ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರುತ್ತಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಆಟ ಪ್ರದರ್ಶಿಸುವ ಪ್ರತಿಭೆ 33 ವರ್ಷ ವಯಸ್ಸಿನ ಅನಿರುದ್ಧ ಅವರಿಗೆ ಕರಗತವಾಗಿದೆ. ಆದರೆ, ಐಪಿಎಲ್‌ನಲ್ಲಿ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಈಗ ಅದೃಷ್ಟ ಕೈ ಬೀಸಿ ಕರೆದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಮಧ್ಯಮ ಕ್ರಮಾಂಕದಲ್ಲಿ ಸಮರ್ಥ ಆಟಗಾರನ ಅಗತ್ಯ ಹೆಚ್ಚಾಗಿದೆ. ಕೋಚ್ ರಿಕಿ ಪಾಂಟಿಂಗ್ ಮಾರ್ಗದರ್ಶನದಲ್ಲಿ ಜೋಶಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸದವಕಾಶ ಸಿಕ್ಕಿದೆ ಎನ್ನಬಹುದು.

ಬೆಂಗ್ಳೂರಿನ ಕಂಪನಿ ಸೇರಿದಂತೆ ಧೋನಿ ಹೂಡಿಕೆ ಮಾಡಿರುವ ಟಾಪ್ ಕಂಪನಿಗಳಿವುಬೆಂಗ್ಳೂರಿನ ಕಂಪನಿ ಸೇರಿದಂತೆ ಧೋನಿ ಹೂಡಿಕೆ ಮಾಡಿರುವ ಟಾಪ್ ಕಂಪನಿಗಳಿವು

ಬಲಗೈ ಬ್ಯಾಟ್ಸ್ ಮನ್ ಹಾಗೂ ಆಫ್ ಸ್ಪಿನ್ ಬೌಲರ್ ಆಗಿ ಗುರುತಿಸಿಕೊಂಡಿರುವ ಅನಿರುದ್ಧ ಅವರು 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು ಎಂಬುದು ಆರ್‌ಸಿಬಿ ಫ್ಯಾನ್ಸಿಗೂ ಈಗ ಮರೆತು ಹೋಗಿದೆ. 2020ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೇರಿದರೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ನೆಟ್ ಪ್ರಾಕ್ಟೀಸ್ ವೇಳೆ ಭರ್ಜರಿ ಸಿಕ್ಸರ್ ಸಿಡಿಸಿದರೂ ಬೆಂಚು ಕಾಯುವುದು ತಪ್ಪಲಿಲ್ಲ.

ಕ್ರಿಕೆಟ್ ಪ್ರೀತಿಸುವ ಕುಟುಂಬ

ಕ್ರಿಕೆಟ್ ಪ್ರೀತಿಸುವ ಕುಟುಂಬ

ಟೀಂ ಇಂಡಿಯಾ ಪರ ಆಡಿರುವ ಸ್ಪಿನ್ ದಿಗ್ಗಜ ಸುನಿಲ್ ಜೋಶಿ ಅವರು ಅನಿರುದ್ಧ ಜೋಶಿ ಚಿಕ್ಕಪ್ಪ, ಅನಿರುದ್ಧ ಅವರ ತಂದೆ ಅಶೋಕ್ ಜೋಶಿ ಕೂಡಾ ಲೀಗ್ ಹಂತದಲ್ಲಿ ಕ್ರಿಕೆಟ್ ಆಡಿದವರು.
ಸಿಕ್ಸ್ ಬಾರಿಸುವುದರಲ್ಲಿ ಅನಿರುದ್ಧ ಎತ್ತಿದ ಕೈ, ಅವಕಾಶ ಸಿಕ್ಕರೆ ಎಲ್ಲರೂ ನೆನಪಲ್ಲಿ ಉಳಿಯೋ ಅಂತಾ ಆಟ ಆಡ್ತಾನಾ ಎಂದು ಮತ್ತೊಬ್ಬ ಚಿಕ್ಕಪ್ಪ ಅನಿಲ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಅಣ್ಣ ಐಪಿಎಲ್ ಆಡಲು ಆಯ್ಕೆಯಾಗಿದ್ದು ಭಾಳಾ ಖುಷಿ ಕೊಟ್ಟಿದೆ, ಪ್ಲೇಯಿಂಗ್ ಎಲೆವನ್‌ನಲ್ಲಿ ಸ್ಥಾನ ಪಡೆಯಲಿ ಎಂದು ಸೋದರಿ ಅನಗಾ ಜೋಶಿ ಪ್ರತಿಕ್ರಿಯಿಸಿದ್ದಾರೆ. ದಿವಂಗತ ಅಶೋಕ್ ಜೋಶಿ ಅವರ ಕನಸು ನನಸು ಮಾಡುವತ್ತ ಗದಗದ ಹುಡ್ಗ ಹೆಜ್ಜೆ ಇರಿಸಿದ್ದಾನೆ.

ಅನಿರುದ್ಧ ಆಡಿರುವ ತಂಡಗಳು

ಅನಿರುದ್ಧ ಆಡಿರುವ ತಂಡಗಳು

ಗದಗದ ಜಾನೋಪಂಥರ ಕ್ಲಬ್‌ನ ವೀರಣ್ಣ ಅವರಿಂದ ಮೊದಲ ಪಾಠ ಕಲಿತ ಅನಿರುದ್ಧ ನಂತರ ಗದಗ ಸಿಟಿ ಕ್ರಿಕೆಟರ್ಸ್ ಕ್ಲಬ್ ಪರ ಆಡಿದ ನಂತರ ವಲ್ಚರ್ಸ್ ಕ್ರಿಕೆಟ್ ಕ್ಲಬ್, ಕರ್ನಾಟಕ ಪ್ರೀಮಿಯರ್ ಲೀಗ್‌ನ ಬೆಂಗಳೂರು ಪ್ರಾವಿಡೆಂಟ್(ಗ್ರಾಮೀಣ), ಬಳ್ಳಾರಿ ಟಸ್ಕರ್ಸ್, ನಮ್ಮ ಶಿವಮೊಗ್ಗ, ಮೈಸೂರು ವಾರಿಯರ್ಸ್,ಮಂಗಳೂರು ಯುನೈಟೆಡ್ ಪರ ಆಡಿದ್ದಾರೆ. ಕರ್ನಾಟಕದ ಅಂಡರ್ 19, ಹಿರಿಯ ತಂಡ, ಅಧ್ಯಕ್ಷರ ಎಲೆವನ್ ಪರ ಆಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ನಂತರ ಈಗ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದಾರೆ.

ತಂದೆ ಕನಸು ನನಸು ಮಾಡಿದ ಚೇತನ್‌ಗೆ ಸೆಹ್ವಾಗ್ ಸೆಲ್ಯೂಟ್ತಂದೆ ಕನಸು ನನಸು ಮಾಡಿದ ಚೇತನ್‌ಗೆ ಸೆಹ್ವಾಗ್ ಸೆಲ್ಯೂಟ್

ಅನಿರುದ್ಧ ವೃತ್ತಿ ಬದುಕಿನ ಅಂಕಿ ಅಂಶ

ಅನಿರುದ್ಧ ವೃತ್ತಿ ಬದುಕಿನ ಅಂಕಿ ಅಂಶ

ಲಿಸ್ಟ್ ಎ: 17 ಪಂದ್ಯಗಳಲ್ಲಿ 211ರನ್, 2 ಅರ್ಧಶತಕ, ಗರಿಷ್ಠ 68ರನ್, 6 ವಿಕೆಟ್ ಗಳಿಕೆ
ಟಿ20: 22 ಪಂದ್ಯಗಳಲ್ಲಿ 420 ರನ್,2 ಅರ್ಧಶತಕ, ಗರಿಷ್ಠ ಅಜೇಯ 73ರನ್, 6 ವಿಕೆಟ್ ಗಳಿಕೆ.

2015ರಲ್ಲಿ ರೈಲ್ವೆಸ್ ವಿರುದ್ಧ ಮೊದಲ ಲಿಸ್ಟ್ ಎ ಪಂದ್ಯವಾಡಿದ್ದು, 2011ರಲ್ಲಿ ಕೇರಳ ವಿರುದ್ಧ ಮೊದಲ ಟಿ20 ಪಂದ್ಯವಾಡಿದ್ದಾರೆ.

2018ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಬಾರಿಸಿದ್ದ 73ರನ್ ಐಪಿಎಲ್ ತಂಡ ಆರ್‌ಸಿಬಿ ಸೇರುವಂತೆ ಮಾಡಿತ್ತು. 2019ರಲ್ಲಿ ಆರ್‌ಸಿಬಿ ಕೈಬಿಟ್ಟಿದ್ದರಿಂದ ಹರಾಜಿನಲ್ಲಿ 20 ಲಕ್ಷ ರುಗಳಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದರು.

ಅನಿರುದ್ಧ ಡಬ್ಬಲ್ ಸೆಂಚುರಿ ಕಿಕ್

ಅನಿರುದ್ಧ ಡಬ್ಬಲ್ ಸೆಂಚುರಿ ಕಿಕ್

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ನ ಡಿವಿಷನ್ 1 ಲೀಗ್ ಪಂದ್ಯವೊಂದರಲ್ಲಿ ಪವನ್ ದೇಶಪಾಂಡೆ ಹಾಗೂ ಅನಿರುದ್ಧ್ ಜೋಶಿ ಅವರು ಡಬ್ಬಲ್ ಸೆಂಚುರಿ ಹೊಡೆದು, 403ರನ್ ಗಳ ದಾಖಲೆ ಜೊತೆಯಾಟ ಸಾಧಿಸಿದಾಗ ಇಡೀ ದೇಶದ ಕ್ರಿಕೆಟ್ ಪ್ರೇಮಿಗಳು ತಿರುಗಿ ನೋಡುವಂತಾಯಿತು.

ಸೋಷಿಯಲ್ ಕ್ರಿಕೆಟರ್ಸ್ ವಿರುದ್ಧದ ಪಂದ್ಯದಲ್ಲಿ ವಲ್ಚರ್ಸ್ ಕ್ರಿಕೆಟ್ ಕ್ಲಬ್ ಪರ ಆಡುತ್ತಾ ಅನಿರುದ್ಧ ಜೋಶಿ ಅಂದು 199 ಎಸೆತಗಳಲ್ಲಿ 8 ಸಿಕ್ಸರ್, 23 ಬೌಂಡರಿ ಬಾರಿಸಿ ಅಜೇಯ 212 ರನ್ ಚೆಚ್ಚಿದ್ದರು. ಪವನ್ ಅವರು ಅಜೇಯ 204 ರನ್ (258 ಎಸೆತ, 3X6, 24X4) ಬಾರಿಸಿದ್ದರು. ಇದೇ ಕ್ಲಬ್ ಪರ ಆಡುವ ತ್ರಿಶತಕ ವೀರ ಕರುಣ್ ನಾಯರ್ ಅವರು ಅಂದು 4ರನ್ ಮಾತ್ರ ಗಳಿಸಿದ್ದರು. ಐದಾರು ವರ್ಷಗಳ ಬಳಿಕವೂ ಈ ಆಟವನ್ನು ಇಂದಿಗೂ ಸ್ಮರಿಸುವ ಅಭಿಮಾನಿಗಳಿದ್ದಾರೆ.

ಸ್ಥಳೀಯ ಆಟಗಾರರಿಗೆ ಅವಕಾಶ

ಸ್ಥಳೀಯ ಆಟಗಾರರಿಗೆ ಅವಕಾಶ

ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಳೀಯ ಆಟಗಾರರೇ ಇಲ್ಲ ಎಂಬ ಕೂಗು ಎದ್ದಿದೆ. ಈ ಬಗ್ಗೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಮಂಡಳಿ ಅಧ್ಯಕ್ಷ ಮಾಜಿ ನಾಯಕ ಅಜರುದ್ದೀನ್ ಕೂಡಾ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.

ಅದೇ ರೀತಿ ಹಲವು ಬಾರಿ ಅನಿರುದ್ಧ ಜೋಶಿ ಹಾಗೂ ಪವನ್ ದೇಶಪಾಂಡೆ ಅವರಿಗೆ ಆರ್ ಸಿ ಬಿ ಸೂಕ್ತ ಅವಕಾಶ ನೀಡಬೇಕಿತ್ತು ಎಂಬ ಕ್ರಿಕೆಟ್ ಪ್ರೇಮಿಗಳ ಆಸೆ ಈಡೇರಲೇ ಇಲ್ಲ. ಫಾಸ್ಟ್ ಇಸ್ ಫಾಸ್ಟ್.. ಈಗ ಐಪಿಎಲ್‌ನಲ್ಲಿ ಕನ್ನಡಿಗನೊಬ್ಬ ಮಿಂಚುವುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.

English summary
IPL 2021: Who is Aniruddha Joshi replacing injured Shreyas Iyeri in Delhi Capitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X