• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಪಿಎಲ್ ಜೊತೆಗೆ ರಂಜಾನ್ ಉಪವಾಸ, ಅಮ್ಮ ಐ ಮಿಸ್ ಯೂ

|

ಹೈದರಾಬಾದ್, ಏಪ್ರಿಲ್ 18: ಇಂಡಿಯನ್ ಪ್ರೀಮಿಯರ್ ಲೀಗ್ 2021 ರ 14 ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆರಂಭ ಉತ್ತಮವಾಗಿಲ್ಲ, ಆಡಿರುವ ಎಲ್ಲಾ ಪಂದ್ಯಗಳನ್ನು ಕಳೆದುಕೊಂಡಿದೆ. ಚೆನ್ನೈನ ಚೆಪಾಕ್‌ನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಇಲ್ಲಿ ತನಕ ಹೈದರಾಬಾದ್ ಗೆಲುವು ದಾಖಲಿಸಿಲ್ಲ ಎಂಬುದು ಗಮನಾರ್ಹ.

ಈ ನಡುವೆ ಹೈದರಾಬಾದ್‌ ತಂಡದ ಪ್ರಮುಖ ಆಟಗಾರ ಅಫ್ಘಾನಿಸ್ತಾನ ಮೂಲದ ರಶೀದ್ ಖಾನ್ ಅವರು ತಮ್ಮ ದುಃಖ ತೋಡಿಕೊಂಡಿದ್ದಾರೆ.

ತಂಡದ ಸೋಲಿನ ದುಃಖ ಜೊತೆಗೆ ರಂಜಾನ್ ಉಪವಾಸದ ಸಂದರ್ಭದಲ್ಲಿ ಆತ್ಮೀಯರ ಅಗಲಿಕೆಯ ನೋವಿನ ಬಗ್ಗೆ ಬರೆದುಕೊಂಡಿದ್ದಾರೆ.

ತಾಯಿ ಇಲ್ಲದೆ ಮೊದಲ ರಂಜಾನ್(Ramadan) ಆಚರಣೆಯಲ್ಲಿ ತೊಡಗಿದ್ದೇನೆ. ಆಕೆ ನನಗೆ ಎಲ್ಲವನ್ನು ಹೇಳಿಕೊಟ್ಟಿದ್ದಾಳೆ, ಆದರೆ, ಅವಳನ್ನು ಬಿಟ್ಟು ಬದುಕುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿಲ್ಲ. ನನ್ನ ಮನಸ್ಸು ಇಂದಿಗೂ ಆಕೆ ಜೊತೆ ಮಾತನಾಡುತ್ತಿರುತ್ತದೆ. ನನ್ನ ಹೃದಯ ಸದಾ ಆಕೆಗಾಗಿ ಹುಡುಕಾಟ ನಡೆಸುತ್ತದೆ. ಆದರೆ, ಆಕೆ ಈ ಲೋಕದಲ್ಲಿಲ್ಲ ಎಂಬ ಸತ್ಯ ಅರಗಿಸಿಕೊಳ್ಳುವುದು ಕಷ್ಟ. ವಿಶ್ವದ ಯಾವುದೇ ಅತಿಹೆಚ್ಚು ಮೌಲ್ಯಕ್ಕಿಂತ ಅಧಿಕ ಮೌಲ್ಯವೆಂದರೆ ನನ್ನ ತಾಯಿ. ಅಮ್ಮ ಐ ಲವ್ ಯೂ, ಮಿಸ್ ಯೂ ಎಂದು ಭಾವುಕರಾಗಿ ರಶೀದ್ ಖಾನ್ ಬರೆದುಕೊಂಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇತ್ತೀಚೆಗೆ ಸಮಾಧಿಯಲ್ಲಿ ಪ್ರಾರ್ಥನೆ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಇನ್ನೂ ಕಾಮೆಂಟ್ ಬರುತ್ತಿವೆ.

English summary
IPL 2021: Rashid Khan is missing his mother during Ramadan, first time fasting withour my mother tweeted Rashid khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X