• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಸ್ಕ್ ಹಾಕದೆ ಗಮನ ಸೆಳೆದ ಯುವತಿ, ಆಕೆ ಆರೆಂಜ್ ಆರ್ಮಿ ಒಡತಿ!

|

ಚೆನ್ನೈ, ಏಪ್ರಿಲ್ 12: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ಪ್ರತಿ ಬಾರಿ ಫ್ಯಾನ್ ಗರ್ಲ್ ಟ್ರೆಂಡ್ ಆಗುವುದು ಮಾಮೂಲಿಯಾಗಿದೆ. ಆರ್‌ಸಿಬಿ ಫ್ಯಾನ್ ಗರ್ಲ್ ನಂತರ ಆ ರೀತಿ ಯಾರೂ ಟ್ರೆಂಡ್ ಆಗಿರಲಿಲ್ಲ. ಪ್ರೇಕ್ಷಕರೇ ಇಲ್ಲದೆ ಆಡುವಂಥ ಪರಿಸ್ಥಿತಿಯನ್ನು ಕೊವಿಡ್ 19 ಸಾಂಕ್ರಾಮಿಕ ತಂದೊಡ್ಡಿದೆ. ಹೀಗಾಗಿ, ಮೈದಾನದಲ್ಲಿ ಯಾರಾದರೂ ಗಮನ ಸೆಳೆಯುವ ಯುವತಿ, ಫ್ಯಾನ್ ಗರ್ಲ್ ಕಾಣಿಸಿಕೊಂಡರೆ ಫ್ರಾಂಚೈಸಿಗೆ ಸಂಬಂಧಿಸಿದವರೇ ಆಗಿರಬೇಕಾಗುತ್ತದೆ.

ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಭರ್ಜರಿಯಾಗಿ ಆರಂಭವಾಗಿದೆ. ಕ್ರಿಕೆಟರ್‌ಗಳ ಆಟದ ಜೊತೆಗೆ ಕ್ರೀಡಾ ನಿರೂಪಕ/ಕಿಯರ ಬಗ್ಗೆ, ಫ್ಯಾನ್ ಗರ್ಲ್ ಬಗ್ಗೆ ಕೂಡಾ ಹೆಚ್ಚು ಚರ್ಚೆಯಾಗುತ್ತದೆ. ಯುಎಇಯಲ್ಲಿ ನಡೆದ ಕಳೆದ ಸೀಸನ್ ಸಂದರ್ಭದಲ್ಲೂ ಟ್ರೆಂಡ್‌ನಲ್ಲಿದ್ದ ಯುವತಿ ಮತ್ತೆ ಟ್ರೆಂಡ್ ಹುಟ್ಟುಹಾಕಿದ್ದಾರೆ.

ಭಾನುವಾರದ ನಡೆದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲೂ ಆರೆಂಜ್ ಆರ್ಮಿಯ ಜೊತೆ ಇದ್ದ ಯುವತಿ ಗಮನ ಸೆಳೆದಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ ಯಾರೀಕೆ ಎಂದು ಚರ್ಚೆ ಆರಂಭವಾಯಿತು. ಜೊತೆಗೆ ಮಾಸ್ಕ್ ಹಾಕಿಲ್ಲವೇಕೆ ಎಂಬ ಪ್ರಶ್ನೆಯೂ ಎದ್ದಿತು.

ಐಪಿಎಲ್: ಪತಿ ಬೂಮ್ರಾ ಬೆಂಬಲಿಸಲು ನೀಲಿ ಡ್ರೆಸ್ ಧರಿಸಿದ ನಿರೂಪಕಿ ಸಂಜನಾ! ಐಪಿಎಲ್: ಪತಿ ಬೂಮ್ರಾ ಬೆಂಬಲಿಸಲು ನೀಲಿ ಡ್ರೆಸ್ ಧರಿಸಿದ ನಿರೂಪಕಿ ಸಂಜನಾ!

ಪಂದ್ಯದ ವೇಳೆ ಆಗಾಗ ಆಕೆ ಮೇಲೆ ಫೋಕಸ್

ಪಂದ್ಯದ ವೇಳೆ ಆಗಾಗ ಆಕೆ ಮೇಲೆ ಫೋಕಸ್

ಕೋಲ್ಕತಾ ಹಾಗೂ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಪಂದ್ಯದ ವೇಳೆ ಆಗಾಗ ಆಕೆ ಮೇಲೆ ಕ್ಯಾಮೆರಾ ಫೋಕಸ್ ಮಾಡಲಾಗಿತ್ತು. ಹೀಗಾಗಿ, ಸಾಮಾಜಿಕ ಜಾಲ ತಾಣಗಳಲ್ಲಿ ಯಾರೀಕೆ ಎಂಬ ಕುತೂಹಲ ಹೆಚ್ಚಾಗಿದೆ. ಕೊನೆಗೆ ಈಕೆ ಫ್ಯಾನ್ ಗರ್ಲ್ ಅಲ್ಲ ಬದಲಿಗೆ ತಂಡದ ಒಡತಿ, ಸನ್ ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯ ಮಾರನ್ ಎಂದು ತಿಳಿದು ಬಂದಿದೆ. ಹೈದರಾಬಾದ್ ತಂಡದ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯ ಅವರು ಸನ್ ಮ್ಯೂಸಿಕ್, ಸನ್ ಟಿವಿ, ಎಫ್ಎಂ ಚಾನೆಲ್ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.

ಈ ಹಿಂದೆಯೂ ಲೈವ್ ಪಂದ್ಯ ವೀಕ್ಷಣೆ

ಈ ಹಿಂದೆಯೂ ಲೈವ್ ಪಂದ್ಯ ವೀಕ್ಷಣೆ

ಕಾವ್ಯ ಮೈದಾನದಲ್ಲಿ ಲೈವ್ ಪಂದ್ಯ ವೀಕ್ಷಿಸುತ್ತಿರುವುದು ಇದೇ ಮೊದಲಲ್ಲ. 2018ರ ಐಪಿಎಲ್ ಸೀಸನ್ ಇದ್ದಾಗಲೂ ಹೈದರಾಬಾದ್ ತಂಡವನ್ನು ಬೆಂಬಲಿಸಲು ಪೆವಿಲಿಯನ್ ನಲ್ಲಿರುತ್ತಿದ್ದರು. ಈಗಲೂ ಪಂದ್ಯದುದ್ದಕ್ಕೂ ಆರೆಂಜ್ ಆರ್ಮಿಗೆ ಬೆಂಬಲ ನೀಡಿದರು. ಕಳೆದ ಐಪಿಎಲ್ ಹರಾಜು ಪ್ರಕ್ರಿಯೆ ಸಂದರ್ಭದಲ್ಲೂ ಭಾಗವಹಿಸಿದ್ದು, ತಮ್ಮ ಫ್ರಾಂಚೈಸಿಯ ಪರ ಬೆಂಬಲ ವ್ಯಕ್ತಪಡಿಸಲು ಕವಿಯಾ ಸದಾ ಸಕ್ರಿಯರಾಗಿ ಬರುತ್ತಾರೆ.

ಧೋನಿ ಮೇಲೆ ದ್ರಾವಿಡ್ ಕೋಪಗೊಂಡ ಪ್ರಸಂಗ ಸ್ಮರಿಸಿದ ಸೆಹ್ವಾಗ್ಧೋನಿ ಮೇಲೆ ದ್ರಾವಿಡ್ ಕೋಪಗೊಂಡ ಪ್ರಸಂಗ ಸ್ಮರಿಸಿದ ಸೆಹ್ವಾಗ್

ನಿಯಮ ಏನು ಹೇಳುತ್ತದೆ

ನಿಯಮ ಏನು ಹೇಳುತ್ತದೆ

ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನಿರ್ದೇಶನದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಮೈದಾನದಲ್ಲಿ ಐಪಿಎಲ್ ಪಂದ್ಯ ವೀಕ್ಷಿಸುವವರು ಕೊವಿಡ್ 19 ನೆಗಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮುಂತಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ನಿಯಮ ಉಲ್ಲಂಘಿಸಿದರೆ ಯಾರು ಹೊಣೆ

ನಿಯಮ ಉಲ್ಲಂಘಿಸಿದರೆ ಯಾರು ಹೊಣೆ

ಒಂದು ವೇಳೆ ಈ ರೀತಿ ನಿಯಮ ಉಲ್ಲಂಘಿಸಿದರೆ, ಆ ಮೈದಾನವನ್ನು ನಿಯಂತ್ರಿಸುವ ರಾಜ್ಯ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐನ ಐಪಿಎಲ್ ಆಯೋಜನಾ ಸಮಿತಿ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಕೊವಿಡ್ 19 ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಆಯೋಜಕರಿಗೆ ರಾಜ್ಯ ಸರ್ಕಾರ ದಂಡ ವಿಧಿಸಬಹುದು. ಮುಂಬೈ ಮೈದಾನಕ್ಕೆ ತೆರಳಿ ಮರಳುವ ವ್ಯಕ್ತಿಗಳಿಗೂ ನೆಗಟಿವ್ ವರದಿ ಕಡ್ಡಾಯವಾಗಿದೆ.

ಪಂದ್ಯದ ಫಲಿತಾಂಶ

ಪಂದ್ಯದ ಫಲಿತಾಂಶ

ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 187/6 ಸ್ಕೋರ್ ಮಾಡಿತ್ತು. ಚೇಸ್ ಮಾಡಿದ ಹೈದರಾಬಾದ್ 177/5 ಮಾತ್ರ ಗಳಿಸಿ ಸೋಲೋಪ್ಪಿಕೊಂಡಿತು. ಕೆಕೆಆರ್ ಪರ ನಿತೀಶ್ ರಾಣಾ 80 ರನ್, ರಾಹುಲ್ ತ್ರಿಪಾಠಿ 53 ರನ್ ಗಳಿಸಿದರೆ, ಹೈದರಾಬಾದ್ ಪರ ಮನೀಶ್ ಪಾಂಡೆ ಅಜೇಯ 61, ಜಾನಿ ಬೈರ್ಸ್ಟೋ 55ರನ್ ಗಳಿಸಿ ಗಮನ ಸೆಳೆದರು.

English summary
IPL 2021: SRH Mystery Girl Fan found Without a Mask out to be CEO of Sunrisers Hyderabad as Video Goes Viral During vs KKR at Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X