ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ್ಳೂರಿನ ಕಂಪನಿ ಸೇರಿದಂತೆ ಧೋನಿ ಹೂಡಿಕೆ ಮಾಡಿರುವ ಟಾಪ್ ಕಂಪನಿಗಳಿವು

|
Google Oneindia Kannada News

ಚೆನ್ನೈ, ಏಪ್ರಿಲ್ 15: ಚೆನ್ನೈ ಸೂಪರ್ ಕಿಂಗ್ಸ್ ನಾಯಕ, ಟೀಂ ಇಂಡಿಯಾದ ಯಶಸ್ವಿ ನಾಯಕರಾಗಿದ್ದ ಎಂಎಸ್ ಧೋನಿ ಅವರು ಮೈದಾನದ ಒಳಗೂ ಹೊರಗೂ ತಮ್ಮ ಯಶಸ್ಸಿನ ಜೈತಯಾತ್ರೆ ಮುಂದುವರೆಸುತ್ತಲೇ ಇದ್ದಾರೆ. ಹತ್ತು ಹಲವು ಬ್ರ್ಯಾಂಡ್‌ಗಳ ರಾಯಭಾರಿಯಾಗಿರುವುದಲ್ಲದೆ, ಹಲವು ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುಕೊಂಡು ಬರುತ್ತಿದ್ದಾರೆ.

ಬೆಂಗಳೂರು ಮೂಲದ ಖಾತಾಬುಕ್ ಸಂಸ್ಥೆಯಲ್ಲೂ ಧೋನಿ ಹೂಡಿಕೆ ಮಾಡಿದ್ದಾರೆ. ಜಿಮ್, ಜೀವನಶೈಲಿ ಬ್ರ್ಯಾಂಡ್, ಕೃಷಿ, ಆಟೋಮೊಬೈಲ್ ಹೀಗೆ ಹಲವು ವೈವಿಧ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ತಕ್ಕಮಟ್ಟಿನ ಸಾಧನೆ ಮಾಡಿದ್ದಾರೆ.

ಧೋನಿ ಮೇಲೆ ದ್ರಾವಿಡ್ ಕೋಪಗೊಂಡ ಪ್ರಸಂಗ ಸ್ಮರಿಸಿದ ಸೆಹ್ವಾಗ್ಧೋನಿ ಮೇಲೆ ದ್ರಾವಿಡ್ ಕೋಪಗೊಂಡ ಪ್ರಸಂಗ ಸ್ಮರಿಸಿದ ಸೆಹ್ವಾಗ್

ಕೊರೊನಾ ಸಂಕಷ್ಟ ಕಾಲದಲ್ಲಿ ಕಳೆದ ಐಪಿಎಲ್ ನಂತರ ಸಿಕ್ಕ ಆರು ತಿಂಗಳಲ್ಲಿ ಧೋನಿ ಕೃಷಿಕನಾಗಿ ರಾಸಾಯನಿಕ ಬಳಸದೆ ಹಣ್ಣು, ತರಕಾರಿ ಬೆಳೆದು ವಿದೇಶಕ್ಕೆ ರಫ್ತು ಮಾಡಿದ್ದಾರೆ. ಮೈದಾನದಲ್ಲಿ ಅತ್ಯಂತ ಚುರುಕಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ,ಸಮಯಕ್ಕೆ ತಕ್ಕ ಆಟವಾಡಿ, ತಂಡವನ್ನು ದಡ ಮುಟ್ಟಿಸುವ ಆಟಗಾರ ಎನಿಸಿಕೊಂಡಿರುವ ಧೋನಿ ಅವರು ಲಭ್ಯ ಸಂಪನ್ಮೂಲ ಬಳಸಿಕೊಂಡು ಉದ್ದಿಮೆದಾರನಾಗಿ ಬೆಳೆದಿದ್ದಾರೆ. ಧೋನಿ ಹೂಡಿಕೆಯ ಪ್ರಮುಖ 6 ಸಂಸ್ಥೆಗಳು ಇಲ್ಲಿವೆ...

ಕ್ರೀಡಾ ಫ್ರಾಂಚೈಸಿಗಳು

ಕ್ರೀಡಾ ಫ್ರಾಂಚೈಸಿಗಳು

ಧೋನಿ ಅವರಿಗೆ ಕ್ರಿಕೆಟ್ ಅಲ್ಲದೆ ಫುಟ್ಬಾಲ್ ಕೂಡಾ ತುಂಬಾ ಇಷ್ಟ. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪ್ರಮುಖ ತಂಡ ಚೆನ್ನೈಯಿನ್ ಎಫ್ ಸಿ ತಂಡದಲ್ಲಿ ಹೂಡಿಕೆ ಮಾಡಿದ್ದಾರೆ. ನಟ ಅಭಿಷೇಕ್ ಬಚ್ಚನ್ ಅವರು ಸಹ ಮಾಲೀಕತ್ವ ಹೊಂದಿದ್ದಾರೆ.

ಇದಲ್ಲದೆ ಇಂಡಿಯನ್ ಹಾಕಿ ಲೀಗ್ ತಂಡ ರಾಂಚಿ ರೇಯ್ಸ್ ಸಹ ಮಾಲೀಕರಾಗಿದ್ದಾರೆ. ಈ ಮುಂಚೆ ರಾಂಚಿ ರೈನೋಸ್ ಹೆಸರಿನಲ್ಲಿ 2015ರಲ್ಲಿ ಲೀಗ್ ಕೂಡಾ ಗೆದ್ದಿದೆ. ಫುಟ್ಬಾಲ್ ಹಾಗೂ ಹಾಕಿ ಅಲ್ಲದೆ, ಮಾಹಿ ರೇಸಿಂಗ್ ಟೀಂ ಇಂಡಿಯಾ ಹೆಸರಿನಲ್ಲಿ ಸೂಪರ್ ಸ್ಫೋರ್ಟ್ ವರ್ಲ್ಡ್ ಚಾಂಪಿಯನ್ ಶಿಪ್ ತಂಡ ಹೊಂದಿದ್ದಾರೆ.

ಲೈಫ್ ಸ್ಟೈಲ್ ಬ್ರ್ಯಾಂಡ್

ಲೈಫ್ ಸ್ಟೈಲ್ ಬ್ರ್ಯಾಂಡ್

ಎಂಎಸ್ ಧೋನಿ ಅವರು ಯೂಥ್ ಐಕಾನ್ ಆಗಿ ಹಲವು ಬ್ರ್ಯಾಂಡ್ ಗಳ ರಾಯಭಾರಿಯಾಗಿ ಮಿಂಚಿದ್ದಾರೆ. 2016ರಲ್ಲಿ SEVEN ಹೆಸರಿನಲ್ಲಿ ಲೈಫ್ ಸ್ಟೈಲ್ ಬ್ರ್ಯಾಂಡ್ ಶುರು ಮಾಡಿದರು. ಜವಳಿ ಹಾಗೂ ಫುಟ್ ವೇರ್ ಕ್ಷೇತ್ರದಲ್ಲಿ ಹೊಸ ವಿನ್ಯಾಸವುಳ್ಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಧೋನಿ ಅವರ ಜರ್ಸಿ ಸಂಖ್ಯೆ 7ನ್ನೇ ಬ್ರ್ಯಾಂಡ್ ನೇಮ್ ಆಗಿ ಪರಿವರ್ತಿಸಿದ್ದಾರೆ. ಇತರೆ ದೊಡ್ಡ ಕಂಪನಿಗಳ ಜೊತೆ ಪಾಲುದಾರಿಕೆ ಹೊಂದಿದ್ದಾರೆ.

ರಿತಿ ಗ್ರೂಪ್

ರಿತಿ ಗ್ರೂಪ್

ಸೆವೆನ್ ಬ್ರ್ಯಾಂಡ್ ವಿಸ್ತರಣೆಗೆ ರಿತಿ ಗ್ರೂಪ್ ಸಹಕರಿಸಿದ್ದು, ಕ್ರೀಡಾ ಮಾರ್ಕೆಟಿಂಗ್ ಹಾಗೂ ನಿರ್ವಹಣೆ ಸಂಸ್ಥೆ ರಿತಿ ಸ್ಫೋರ್ಟ್ಸ್ ಜೊತೆ ಧೋನಿ ಪಾಲುದಾರಿಕೆ ಹೊಂದಿದ್ದಾರೆ. ಫಾಫ್ ಡುಪ್ಲೆಸಿಸ್, ಭುವನೇಶ್ವರ್ ಕುಮಾರ್, ಮೋಹಿತ್ ಶರ್ಮ ಮುಂತಾದ ಬ್ರ್ಯಾಂಡ್ ಪ್ರಚಾರವನ್ನು ರಿತಿ ಸ್ಪೋರ್ಟ್ಸ್ ನಿರ್ವಹಿಸುತ್ತಿದೆ.

ಖಾತಾ ಬುಕ್

ಖಾತಾ ಬುಕ್

ಬೆಂಗಳೂರು ಮೂಲದ ನವೋದ್ಯಮ(startup) ಸಂಸ್ಥೆಯಲ್ಲಿ ಧೋನಿ ಹೂಡಿಕೆ ಮಾಡಿದ್ದಾರೆ. ಆಪ್ಲಿಕೇಷನ್ ರಾಯಭಾರಿಯಾಗಿ ಧೋನಿ ಪ್ರಚಾರ ಮಾಡಿದ್ದಾರೆ, 29 ಮಿಲಿಯನ್ ಯುಎಸ್ ಡಾಲರ್ ಮೌಲ್ಯಕ್ಕೇರಿ ದಿನದಿಂದ ದಿನಕ್ಕೆ ಸಂಸ್ಥೆ ಬೆಳೆಯುತ್ತಿದೆ. ಜನ ಸಾಮಾನ್ಯರಿಂದ ದೊಡ್ಡ ಸಂಸ್ಥೆ ತನಕ ಅಕೌಂಟ್ಸ್ ಹಾಗೂ ಲೆಡ್ಜರ್ ನಿರ್ವಹಣೆಯನ್ನು ಖಾತಾ ಬುಕ್ ಸುಲಭವಾಗಿಸಿದೆ.

ಸ್ಫೋಟ್ಸ್ ಫಿಟ್ ವರ್ಲ್ಡ್

ಸ್ಫೋಟ್ಸ್ ಫಿಟ್ ವರ್ಲ್ಡ್

ಸ್ಫೋಟ್ಸ್ ಫಿಟ್ ವರ್ಲ್ಡ್ ಪ್ರೈ ಲಿಮಿಟೆಡ್ ಸಂಸ್ಥೆಯು ವಾಣಿಜ್ಯ ಫಿಟ್ನೆಸ್ ಮಾರ್ಕೆಟಿಂಗ್‌ನಲ್ಲಿ ಹೆಸರು ಮಾಡಿದೆ. ದೆಹಲಿ, ಮುಂಬೈ, ಗಾಜಿಯಾಬಾದ್, ಗುರುಗ್ರಾಮ ಮುಂತಾದೆಡೆ ಫಿಟ್ನೆಸ್ ಸ್ಟುಡಿಯೋಗಳನ್ನು ಹೊಂದಿದೆ. ಧೋನಿ ಅವರ ಫಿಟ್ನೆಸ್ ಟಿಪ್ಸ್ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

Recommended Video

#BengaluruCorona ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಹೆಚ್ಚಳ. ..10497ಕೊರೊನಾ ಪ್ರಕರಣ ಪತ್ತೆ | Oneindia Kannada
ಸಾವಯವ ಕೃಷಿ

ಸಾವಯವ ಕೃಷಿ

ಮೊದಲೇ ಹೇಳಿದಂತೆ ಕೊರೊನಾ ಕಾಲದಲ್ಲಿ ಹೆಚ್ಚು ಸುತ್ತಾಡಲು ಅವಕಾಶ ಸಿಗದಿದ್ದಾಗ ಊರಿಗೆ ತೆರಳಿದ ಧೋನಿ, ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದರು. ತಮ್ಮ ಕುಟುಂಬಸ್ಥರ ಬಳಿ ಇದ್ದ 43 ಎಕರೆಯಲ್ಲಿ 10 ಎಕರೆಯಲ್ಲಿ ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡರು. ಸ್ಟಾಬೆರಿ, ಬಟಾಟೆ, ಟೋಮ್ಯಾಟೋ, ಹೂಕೋಸು ಇನ್ನಿತರ ತರಕಾರಿ ಬೆಳೆದು ಯಶಸ್ವಿಯಾಗಿದ್ದಲ್ಲದೆ, ದುಬೈಗೆ ರಫ್ತು ಮಾಡಿ ಲಾಭ ಗಳಿಸಿದರು.

English summary
IPL 2021: Chennai Super King Captain MS Dhoni's ventures Organic farming, Khatabook, lifestyle brand SEVEN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X