ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ 2021: 125+ ದೇಶಗಳಲ್ಲಿ ಲೈವ್ ಪ್ರಸಾರ, ಇನ್ನಿತರ ಮಾಹಿತಿ

|
Google Oneindia Kannada News

ದುಬೈ, ಸೆಪ್ಟೆಂಬರ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಮತ್ತೊಮ್ಮೆ ಆರಂಭವಾಗುತ್ತಿದೆ. 125ಪ್ಲಸ್ ದೇಶಗಳಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದ್ದು, ಕನ್ನಡ ಸೇರಿದಂತೆ 8 ಭಾರತೀಯ ಭಾಷೆಗಳಲ್ಲಿ ಲೈವ್ ಕಾಮೆಂಟ್ರಿ ವೀಕ್ಷಿಸಬಹುದಾಗಿದೆ.

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಐಪಿಎಲ್ 2021ರ ಮೊದಲ ಪಂದ್ಯ ನಡೆಯಿತು. ಕೊರೊನಾ ಸಾಂಕ್ರಾಮಿಕದ ನಡುವೆ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ 29 ಪಂದ್ಯಗಳು ಯಾವುದೇ ಅಡಚಣೆಗಳಿಲ್ಲದೆ ಆಯೋಜಿಸಲಾಗಿತ್ತು. ಮೊದಲ ಹಂತದಲ್ಲಿ ಮುಂಬೈ, ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳು ನಡೆಸಲಾಗಿತ್ತು. ನಂತರ ದೆಹಲಿ, ಅಹಮದಾಬಾದ್ ಕ್ರೀಡಾಂಗಣಗಳಲ್ಲಿ ನಿಗದಿಯಾಗಿತ್ತು.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಆದರೆ, ನಂತರ ಕೊವಿಡ್ 19 ಭೀತಿಯಿಂದ ಎರಡನೇ ಹಂತದ ಪಂದ್ಯಾವಳಿಗಳನ್ನು ರದ್ದುಪಡಿಸುವುದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಅನಿವಾರ್ಯವಾಯಿತು.

IPL 2021 Matches Phase 2 Live streaming Timings in IST Where to Watch

ಬಯೋ ಬಬಲ್ ಸುರಕ್ಷತೆ ಮೀರಿ ಸೋಂಕು ಕಾಣಿಸಿಕೊಂಡಿದ್ದರಿಂದ ಮೇ 3ರಂದು ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮುಂದೂಡಲಾಗಿತ್ತು.

ಈಗ ಮತ್ತೊಮ್ಮೆ ಐಪಿಎಲ್ ಪಂದ್ಯಗಳು ಆರಂಭವಾಗುತ್ತಿದ್ದು, ಯುಎಇಯಲ್ಲಿ ಇಂದು ಸಂಜೆ ಮುಂಬೈ ಹಾಗೂ ಚೆನ್ನೈ ನಡುವೆ ಮೊದಲ ಪಂದ್ಯ ನಡೆಯಲಿದೆ.

ಐಪಿಎಲ್ ಅರ್ಧಕ್ಕೆ ಮೊಟಕು, ಬಿಸಿಸಿಐಗೆ 2,500 ಕೋಟಿ ರು ನಷ್ಟಐಪಿಎಲ್ ಅರ್ಧಕ್ಕೆ ಮೊಟಕು, ಬಿಸಿಸಿಐಗೆ 2,500 ಕೋಟಿ ರು ನಷ್ಟ

ಸ್ಟಾರ್ ಇಂಡಿಯಾ ಐಪಿಎಲ್ ಅಧಿಕೃತ ಪ್ರಸಾರದ ಹಕ್ಕು ಪಡೆದುಕೊಂಡಿದ್ದು, ಸ್ಟಾರ್ ನೆಟ್ವರ್ಕ್ ವಿವಿಧ ವಾಹಿನಿಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಸ್ಟಾರ್ ನೆಟ್ವರ್ಕ್ ಹಾಗೂ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ ಕಾಮೆಂಟರಿ, ವಿಶ್ಲೇಷಣೆ ಪಡೆದುಕೊಳ್ಳಬಹುದು.
ಐಪಿಎಲ್ ಕಾಮೆಂಟ್ರಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಅಲ್ಲದೆ ಮರಾಠಿ ಭಾಷೆಗಳಲ್ಲಿ ಲಭ್ಯವಿರಲಿದೆ.

ಇದಲ್ಲದೆ, ಭಾನುವಾರದಂದು ಸ್ಟಾರ್ ಸುವರ್ಣ ಎಸ್ ಡಿ ಹಾಗೂ ಎಚ್ ಡಿ (ಕನ್ನಡದಲ್ಲಿ) ವಿಜಯ್ ಸೂಪರ್ (ತಮಿಳು), ಮಾ ಮೂವೀಸ್ (ತೆಲುಗು), ಜಲ್ಸಾ ಮೂವೀಸ್ (ಬೆಂಗಾಲಿ), ಸ್ಟಾರ್ ಪರ್ವಾ( ಮರಾಠಿ) , ಏಷ್ಯಾನೆಟ್ ಪ್ಲಸ್ ಎಸ್ ಡಿ (ಮಲಯಾಳಂ) ವಾಹಿನಿಗಳಲ್ಲಿ ಪಂದ್ಯ ಲಭ್ಯವಿರಲಿದೆ.

ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15, 2021ರ ತನಕ ಐಪಿಎಲ್ 2021 ನಡೆಯಲಿದ್ದು, ಪಂದ್ಯಗಳು 3:30 PM ಹಾಗೂ 7:30 PM ಗೆ ಆರಂಭವಾಗಲಿದೆ.

ಯುಕೆ: ಸ್ಕೈ ಸ್ಪೋರ್ಟ್ಸ್, ಡಿಸ್ನಿ ಹಾಟ್ ಸ್ಟಾರ್
ಯುಎಸ್ : ವಿಲ್ಲೋ ಟಿವಿ
ದಕ್ಷಿಣ ಆಫ್ರಿಕಾ: ಸೂಪರ್ ಸ್ಪೋರ್ಟ್ ಟಿವಿ
ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ: BeIN ಸ್ಪೋರ್ಟ್ಸ್
ನ್ಯೂಜಿಲೆಂಡ್, ಆಸ್ಟ್ರೇಲಿಯಾ: ಫಾಕ್ಸ್ ಸ್ಪೋರ್ಟ್ಸ್, ಕಾಯೊ ಸ್ಫೋರ್ಟ್ಸ್

ಇದಲ್ಲದೆ, YuppTV, ಒಟಿಟಿ ವೇದಿಕೆ ಮೂಲಕವೂ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಕ್ರೇಜಿ ಪೋಸ್ಟರ್: ಕೆಜಿಎಫ್ ಕೊಹ್ಲಿ, ಯಜಮಾನ ಎಬಿಡಿ, ಪೊಗರು ಪಡಿಕ್ಕಲ್!ಕ್ರೇಜಿ ಪೋಸ್ಟರ್: ಕೆಜಿಎಫ್ ಕೊಹ್ಲಿ, ಯಜಮಾನ ಎಬಿಡಿ, ಪೊಗರು ಪಡಿಕ್ಕಲ್!

ಸ್ಟಾರ್ ವಾಹಿನಿ ನಿರೂಪಕರು: ಜತಿನ್ ಸಪ್ರು, ನೆರೋಲಿ ಮೆಡೋವ್ಸ್, ಸಂಜನಾ ಗಣೇಶನ್, ತಾನ್ಯಾ ಪುರೋಹಿತ್, ಅನಂತ್ ತ್ಯಾಗಿ, ಸುರೆನ್ ಸುರೇಂದ್ರನ್, ಧೀರಜ್ ಜುನೇಜ, ಭಾವನಾ ಬಾಲಕೃಷ್ಣನ್ ನಶ್ ಪ್ರೀತ್ ಕೌರ್, ಅನುಭವ್ ಜೈನ್, ರಾಧಾಕೃಷ್ಣನ್ ಶ್ರೀನಿವಾಸನ್, ಮುತ್ತುರಾಮನ್ ಆರ್, ಎಂ ಆನಂದ್ ಶ್ರೀಕೃಷ್ಣ, ವಿಂಧ್ಯ ಮೆದಪಟ್ಟಿ, ನೇಹಾ ಚೌಧರಿ, ರೀನಾ ಡಿಸೋಜ, ಕಿರಣ್ ಶ್ರೀನಿವಾಸ್, ಮಧು ಎಂ.

ಡಗ್ ಔಟ್: ಸ್ಕಾಟ್ ಸ್ಟೈರಿಸ್, ಬ್ರೆಟ್ ಲೀ, ಡೊಮಿನಿಕ್ ಕಾರ್ಕ್, ಬ್ರಿಯಾನ್ ಲಾರಾ, ಗ್ರಹಾಂ ಸ್ವಾನ್ ಜೊತೆಗೆ ಕೆವಿನ್ ಪೀಟರ್ಸನ್, ಶೇನ್ ವಾಟ್ಸನ್, ರಾಸ್ ಟೇಲರ್, ಡೇಲ್ ಸ್ಟೈನ್, ನಾಸರ್ ಹುಸೇನ್.

ಕನ್ನಡ ವೀಕ್ಷಕ ವಿವರಣೆ: ವೆಂಕಟೇಶ್ ಪ್ರಸಾದ್, ಜಿಕೆ ಅನಿಲ್ ಕುಮಾರ್, ಅಖಿಲ್ ಬಾಲಚಂದ್ರ, ಶ್ರೀನಿವಾಸ ಮೂರ್ತಿ, ಭರತ್ ಚಿಪ್ಲಿ, ವಿಜಯ್ ಭಾರದ್ವಾಜ್, ವಿನಯ್ ಕುಮಾರ್.

English summary
IPL 2021 Matches Phase 2 will begin tonight with Mumbai taking on CSK. Live streaming Timings in IST Where to Watch and other details are here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X