ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ 2021: ಜಿಯೋ ಬಳಕೆದಾರರಿಗೆ ಭರ್ಜರಿ ಆಫರ್‌ಗಳು

|
Google Oneindia Kannada News

ಬೆಂಗಳೂರು, ಏಪ್ರಿಲ್ 9: ಅತ್ಯಂತ ಜನಪ್ರಿಯ ಟ್ವೆಂಟಿ-20 ಪಂದ್ಯಾವಳಿ ಆರಂಭದ ಜೊತೆಗೆ ತಮ್ಮ ಜಿಯೋಫೋನ್ ಬಳಕೆದಾರರಿಗಾಗಿ JIO ಕ್ರಿಕೆಟ್ ಅಪ್ಲಿಕೇಶನ್ ಹೊರ ತಂದಿದೆ.

ಈ ಬಾರಿ ಪಂದ್ಯಾವಳಿ ಏಪ್ರಿಲ್ 9 ರಂದು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. 1 ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ, ಲೈವ್ ಪಂದ್ಯಗಳನ್ನು ವೀಕ್ಷಣೆ ಈಗಾಗಲೇ ಜಿಯೋ ಬಳಕೆದಾರರಿಗೆ ಲಭ್ಯವಿದೆ.

ಈ ಐಪಿಎಲ್‌ನಲ್ಲಿ ಎಲ್ಲಾ 8 ತಂಡಗಳೊಂದಿಗೆ ಕಾಣಿಸಿಕೊಳ್ಳುವ ಏಕೈಕ ಬ್ರಾಂಡ್ ಆಗಿ ಜಿಯೋ ಮುಂದುವರಿಯುತ್ತದೆ: ಐಪಿಎಲ್ 2021 ರಲ್ಲಿ ಜಿಯೋ ಎಲ್ಲಾ ಎಂಟು ಫ್ರಾಂಚೈಸಿಗಳ ಹೆಮ್ಮೆಯ ಪ್ರಾಯೋಜಕರಾಗಿದ್ದಾರೆ. ಜಿಯೋ ಭಾರತೀಯರಿಗಾಗಿ, ಭಾರತೀಯರೇ ನಿರ್ಮಿಸಿರುವುದು ಮತ್ತು ಆದ್ದರಿಂದ ಜಿಯೋ ಬ್ರಾಂಡ್ ಸ್ಟ್ರಾಟಜಿ ಪ್ರತಿ ನಗರ ಮತ್ತು ರಾಜ್ಯದಾದ್ಯಂತ ಹಬ್ಬಿಕೊಂಡಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಡಿಸ್ನಿ + ಹಾಟ್‌ಸ್ಟಾರ್‌ನೊಂದಿಗೆ ಪಾಲುದಾರಿಕೆಯಲ್ಲಿ ಜಿಯೋ ಕ್ರಿಕೆಟ್ ಯೋಜನೆಗಳು ಬಳಕೆದಾರರಿಗೆ 100% ಲಾಭವನ್ನು ನೀಡಲಿದೆ: ಐಪಿಎಲ್ ವಿಷಯಕ್ಕೆ ಸಂಬಂಧಿಸಿದಂತೆ, ಜಿಯೋ ಭಾರತದ ಬೇರೆ ಎಲ್ಲಾ ಆಪರೇಟರ್‌ಗಳಿಗಿಂತ ಉತ್ತಮ ಪ್ರಯೋಜನಗಳನ್ನು ನೀಡುತ್ತಲೇ ಇದೆ. ಎಲ್ಲಾ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳು ಐಪಿಎಲ್ ಎಂಬೆಡೆಡ್ ಅವಕಾಶದೊಂದಿಗೆ ಬರುತ್ತವೆ.

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್

ಈ ಐಪಿಎಲ್ ಸೀಸನ್‌ನಲ್ಲಿ ಹೊಸ ಅವತಾರ ಮತ್ತು ಅಟ್ರಾಕ್ಟಿವ್ ರಿವಾರ್ಡ್‌ಗಳಲ್ಲಿ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್: ಕ್ರಿಕೆಟಿಂಗ್ ಉತ್ಸಾಹವನ್ನು ಮತ್ತಷ್ಟು ಆಚರಿಸಲು, ಜಿಯೋನ ಲೈವ್ ಗೇಮಿಂಗ್ ಉಪಕ್ರಮ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಸ್ಪರ್ಧಿಸುವಾಗ ಮನರಂಜನೆಯ ಹೊಸ ಭಾಗವನ್ನು ತನ್ನ ಅಭಿಮಾನಿಗಳಿಗೆ ಪ್ರಸ್ತುತಪಡಿಸುತ್ತದೆ. ಸಂವಾದಾತ್ಮಕ ಆಟವು ಎಲ್ಲಾ ಬಳಕೆದಾರರಿಗೆ (ಜಿಯೋ ಅಥವಾ ಜಿಯೋ ಅಲ್ಲದ) ಉಚಿತವಾಗಿ ಲಭ್ಯವಿದೆ ಮತ್ತು ದೊಡ್ಡದನ್ನು ಗೆಲ್ಲುವ ಅವಕಾಶವನ್ನು ಒದಗಿಸುತ್ತದೆ. ಕ್ರಿಕೆಟ್ ಉತ್ಸಾಹಿಗಳು ಆಟದ ವಿಶೇಷ ಚಾಟ್ ಬಾರ್‌ನಲ್ಲಿ ಎಮೋಜಿ ಸ್ಟಿಕ್ಕರ್‌ಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಕ್ರಿಕೆಟ್ ಆಧಾರಿತ ರಸಪ್ರಶ್ನೆಗಳೊಂದಿಗೆ ಕೆರಳಿಸಬಹುದು. ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಟವನ್ನು ಮೈಜಿಯೊ ಆ್ಯಪ್ ಮೂಲಕ ಪ್ರವೇಶಿಸಬಹುದು.

JIO ಕ್ರಿಕೆಟ್ ಅಪ್ಲಿಕೇಶನ್

JIO ಕ್ರಿಕೆಟ್ ಅಪ್ಲಿಕೇಶನ್

ಜಿಯೋಫೋನ್ ಬಳಕೆದಾರರಿಗಾಗಿ JIO ಕ್ರಿಕೆಟ್ ಅಪ್ಲಿಕೇಶನ್ ಪ್ರಾರಂಭಿಸಲಾಗಿದೆ: ಜಿಯೋಫೋನ್ ಬಳಕೆದಾರರು ಹೊಸ ಜಿಯೋ ಕ್ರಿಕೆಟ್ ಅಪ್ಲಿಕೇಶನ್‌ನೊಂದಿಗೆ ಆಚರಣೆಗೆ ಸೇರಬಹುದು. ಎಲ್ಲಾ ಜಿಯೋಫೋನ್ ಬಳಕೆದಾರರಿಗೆ ಅಪ್ಲಿಕೇಶನ್ ಉಚಿತವಾಗಿ ಲಭ್ಯವಿದೆ. ಬಳಕೆದಾರರು ಸ್ಕೋರ್ ನವೀಕರಣಗಳನ್ನು ವೀಕ್ಷಿಸಬಹುದು, ರಸಪ್ರಶ್ನೆಗಳಲ್ಲಿ ಭಾಗವಹಿಸಬಹುದು ಮತ್ತು ಬಹುಮಾನಗಳನ್ನು ಗೆಲ್ಲಬಹುದು.

ಇತರೆ ಆಪರೇಟರ್ಸ್ ತಮ್ಮ ಫೀಚರ್ ಫೋನ್‌ಗಳನ್ನು ಕೇವಲ ಸ್ಕೋರ್‌ಗಳನ್ನು ಒದಗಿಸುವುದಕ್ಕಾಗಿ ದಿನಕ್ಕೆ 5 ರೂ. ವಿಧಿಸುತ್ತಾರೆ.

ಐಪಿಎಲ್ ಮರ್ಚಂಡೈಜ್ ಗೆಲ್ಲುವ ಅವಕಾಶ

ಐಪಿಎಲ್ ಮರ್ಚಂಡೈಜ್ ಗೆಲ್ಲುವ ಅವಕಾಶ

ಪ್ರತಿ ದಿನ ಜಿಯೋ ಬಳಕೆದಾರರಿಗೆ ಸ್ಪರ್ಧೆಗಳು ಮತ್ತು ಐಪಿಎಲ್ ಮರ್ಚಂಡೈಜ್ ಗೆಲ್ಲುವ ಅವಕಾಶ: ಜಿಯೋ ಬಳಕೆದಾರರು ಅತ್ಯಾಕರ್ಷಕ ವಿಷಯಗಳಲ್ಲಿ ಗವಹಿಸಬಹುದು ಮತ್ತು ಪ್ರತಿದಿನ ಮರ್ಚಂಡೈಜ್‌ ಗಳನ್ನು ಗೆಲ್ಲಬಹುದು. ಪ್ರತ್ಯೇಕವಾಗಿ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಮತ್ತು ಚೆಂಡುಗಳು, ತಂಡದ ಜರ್ಸಿ ಸೇರಿದಂತೆ ಹಲವು ವಸ್ತುಗಳು ಜಿಯೋ ಬಳಕೆದಾರರಿಗೆ ಲಭ್ಯವಾಗಲಿದೆ.

ಎಲ್ಲಾ ತಂಡಗಳೊಂದಿಗೆ ಭೇಟಿ

ಎಲ್ಲಾ ತಂಡಗಳೊಂದಿಗೆ ಭೇಟಿ

ಜಿಯೋ ಬಳಕೆದಾರರಿಗಾಗಿ ಎಲ್ಲಾ ತಂಡಗಳೊಂದಿಗೆ ಭೇಟಿ ಮತ್ತು ಶುಭಾಶಯ ಕೋರುವ ಅವಾಕಶ : ಜಿಯೋ ಬಳಕೆದಾರರಿಗೆ ಎಲ್ಲಾ 8 ತಂಡಗಳ ಆಟಗಾರರನ್ನು ಭೇಟಿ ಮಾಡಲು ಮತ್ತು ಕಾಫಿ ಸೆಷನ್‌ನಲ್ಲಿ ಶುಭಾಶಯ ಕೋರಲು ಅವಕಾಶ ಸಿಗಲಿದೆ. ಅಂತಹ ವಿಶೇಷ ಪ್ರಯೋಜನವು ಬಳಕೆದಾರರಿಗೆ ಬಲು ಸನಿಹಕೆ ಬರಲು ಮತ್ತು ತಮ್ಮ ನೆಚ್ಚಿನ ಕ್ರಿಕೆಟಿಗರೊಂದಿಗೆ ಹತ್ತಿರವಾಗಲು ಅನುವು ಮಾಡಿಕೊಡುತ್ತದೆ.

English summary
IPL 2021: Jio celebrating this cricket season with multiple initiatives for fans and Jio users.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X