• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಪಿಎಲ್ 2021: ಆರ್‌ಸಿಬಿಯೊಂದಿಗೆ ಜೈನ್ ವಿಶ್ವವಿದ್ಯಾಲಯದ ಶೈಕ್ಷಣಿಕ ಸಹಭಾಗಿತ್ವ

|

ಬೆಂಗಳೂರು, ಏಪ್ರಿಲ್ 12: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು, ಹಾಗೂ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಆರ್‌ಸಿಬಿಯೊಂದಿಗೆ ಜೈನ್ ವಿಶ್ವವಿದ್ಯಾಲಯ ಶೈಕ್ಷಣಿಕ ಸಹಭಾಗಿತ್ವವನ್ನು(ಎಜುಕೇಷನ್ ಪಾರ್ಟ್ನರ್) ಘೋಷಿಸಿದೆ.

ಜೈನ್ ವಿಶ್ವವಿದ್ಯಾಲಯ ಚಾನ್ಸೆಲರ್ ಚೆನ್‌ರಾಜ್ ರಾಯ್‌ಚಂದ್ ಮಾತನಾಡಿ, ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆ ಪಾರ್ಟ್ನರ್ ಆಗಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಕ್ರೀಡೆಗಳ ಮೂಲಕ ನಾಯಕತ್ವವನ್ನು ಬೆಳೆಸುವ ನಮ್ಮ ಬದ್ಧತೆಯ ಭಾಗವಾಗಿ, ನಾವು ಎಂದಿಗೂ ಕರ್ನಾಟಕ, ದೇಶದ ಯುವಕರನ್ನು ಪ್ರೋತ್ಸಾಹಿಸುತ್ತೇವೆ.

ಈ ಸಹಭಾಗಿತ್ವವು ನಮ್ಮ ವಿದ್ಯಾರ್ಥಿಗಳು ಹಾಗೂ ಕರ್ನಾಟಕದ ಯುವಕರ ಜೀವನವನ್ನು ಉತ್ಕೃಷ್ಟಗೊಳಿಸಲು ಹಾಗೂ ನಾಯಕತ್ವ ಗುಣವನ್ನು ಬೆಳೆಸಲು ಪ್ರೇರೇಪಿಸುತ್ತದೆ.

ಇನ್ನು ವೈಸ್ ಚಾನ್ಸೆಲರ್ ಡಾ. ರಾಜ್ ಸಿಂಗ್ ಮಾತನಾಡಿ, ಈ ಸಹಭಾಗಿತ್ವವು, ಮುಂದಿನ ದಿನಗಳಲ್ಲಿ ಜೈನ್ ವಿಶ್ವವಿದ್ಯಾಲಯ ಆಯೋಜಿಸಲಿರುವ ಖೇಲೋಇಂಡಿಯಾ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಡಲು ಹಾಗೂ ಇಂತಹ ಕ್ರೀಡೆಗಳಲ್ಲಿ ಅವರು ತೊಡಗಿಸಿಕೊಳ್ಳಲು ನೆರವಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.

English summary
JAIN (Deemed-to-be University) has partnered with Royal Challengers Bangalore team as their official education partner, 2021 (the 14th version), a 60-match T20 cricket tournament starting on April 9, 2021 and to be played at six venues across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X