ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್‌: ಈ ಕಂಪನಿಗಿದೆ 6 ಬಿಲಿಯನ್ USD ಗಳಿಕೆ ಗುರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದೆಸೆಯಿಂದ ಕಂಪನಿಯೊಂದು ಮುಂಬರುವ ವರ್ಷಗಳಲ್ಲಿ ಯುಎಸ್ ಷೇರುಪೇಟೆ ಲಿಸ್ಟಿಂಗ್ ಸೇರುವ ಸಾಧ್ಯತೆ ಹೆಚ್ಚಿಸಿಕೊಂಡಿದೆ. ಐಪಿಎಲ್ ಜೊತೆ ಜೊತೆಗೆ ಬೆಳೆದಿರುವ ಆನ್‌ಲೈನ್ ಗೇಮ್ ಡ್ರೀಮ್11 ಹೊರ ತಂದಿರುವ ಡ್ರೀಮ್ ಸ್ಪೋರ್ಟ್ಸ್ ಭರ್ಜರಿ ಲಾಭ ನಿರೀಕ್ಷೆಯಲ್ಲಿದೆ.

ಸಂಸ್ಥೆಯ ಐಪಿಒ ಬಿಡುಗಡೆಗೆ ಸಿದ್ಧತೆ ನಡೆದಿದೆ, ಮುಂದೊಂದು ವರ್ಷದಲ್ಲೇ 1.5 ಬಿಲಿಯನ್ ಯುಎಸ್ ಡಾಲರ್ ಗಳಿಕೆಯ ಗುರಿ ಹೊಂದಿದೆ. ಒಟ್ಟಾರೆ, ಕಂಪನಿ ಲಿಸ್ಟಿಂಗ್ ಮೌಲ್ಯ 6 ಬಿಲಿಯನ್ ಯುಎಸ್ ಡಾಲರ್‌ಗೇರುವ ಸಾಧ್ಯತೆಯಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

10 ಬಿಲಿಯನ್ ನಿಮಿಷಗಳ ವೀಕ್ಷಣೆ ಪಡೆದ ಐಪಿಎಲ್ ಮೊದಲ ಪಂದ್ಯ10 ಬಿಲಿಯನ್ ನಿಮಿಷಗಳ ವೀಕ್ಷಣೆ ಪಡೆದ ಐಪಿಎಲ್ ಮೊದಲ ಪಂದ್ಯ

ಮಾರ್ಚ್ ತಿಂಗಳಲ್ಲಿ 400 ಮಿಲಿಯನ್ ಯುಎಸ್ ಡಾಲರ್ ಮೌಲ್ಯ ಹೆಚ್ಚಿಸಿಕೊಂಡು ಒಟ್ಟಾರೆ 5 ಬಿಲಿಯನ್ ಯುಎಸ್ ಡಾಲರ್ ಗಳಿಕೆ ಹೊಂದಿದೆ.

IPL 2021: Dream11 parent company eye on US listing, value raise to $6 billion

ಆದರೆ, ಈ ಬಗ್ಗೆ ಸಂಸ್ಥೆ ಸಹ ಸ್ಥಾಪಕ ಹರ್ಷ್ ಜೈನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಯುಎಸ್ ಷೇರುಪೇಟೆಯಲ್ಲಿ ಲಿಸ್ಟಿಂಗ್, initial public offering(ಐಪಿಒ) ಹೊರ ತರಲು 2022 ತನಕ ಕಾಯಬೇಕಾಗುತ್ತದೆ. ಮಾರ್ಗನ್ ಸ್ಟ್ಯಾನಿ,ಜೆಪಿ ಮಾರ್ಗನ್ ಹಾಗೂ ಸಿಟಿ ಗ್ರೂಪ್ ಹೂಡಿಕೆದಾರ ಬ್ಯಾಂಕುಗಳಾಗಿ ಗುರುತಿಸಿಕೊಂಡಿವೆ.

2008ರಲ್ಲಿ ಕ್ರೀಡೆ ತಂತಜ್ಞಾನ ಅಧಾರಿತ ಮೊಟ್ಟ ಮೊದಲ ಸ್ಟಾರ್ ಅಪ್ ಕಂಪನಿಯಾಗಿ ಸ್ಥಾಪನೆಯಾದ ಡ್ರೀಮ್ ಸ್ಪೋರ್ಟ್ಸ್ ನಂತರ ಯೂನಿಕಾರ್ನ್ ಕ್ಲಬ್ ಸೇರಿದ್ದು ಇತಿಹಾಸ. 2018ರಲ್ಲಿ 224 ಕೋಟಿ ರು ಗಳಿಕೆ ಹೊಂದಿದ್ದ ಡ್ರೀಮ್ಸ್ 11 2019ರಲ್ಲಿ 775 ಕೋಟಿ ರು ಗಳಿಸಿ ಭರ್ಜರಿ ಲಾಭವನ್ನು ದಾಖಲಿಸಿದೆ.

ಬೆಂಗ್ಳೂರಿನ ಕಂಪನಿ ಸೇರಿದಂತೆ ಧೋನಿ ಹೂಡಿಕೆ ಮಾಡಿರುವ ಟಾಪ್ ಕಂಪನಿಗಳಿವುಬೆಂಗ್ಳೂರಿನ ಕಂಪನಿ ಸೇರಿದಂತೆ ಧೋನಿ ಹೂಡಿಕೆ ಮಾಡಿರುವ ಟಾಪ್ ಕಂಪನಿಗಳಿವು

2017ರಲ್ಲಿ ಆನ್‌ಲೈನ್ ಫ್ಯಾಂಟಸಿ ಗೇಮ್ ಆಡಲು ಇದ್ದ ಅಡೆತಡೆಯನ್ನು ಸುಪ್ರೀಂಕೋರ್ಟ್ ತೆಗೆದು ಹಾಕಿದ್ದರಿಂದ ಡ್ರೀಮ್ 11 ಬಳಕೆ ಹೆಚ್ಚಾಗತೊಡಗಿತು. ಗೂಗಲ್ ಪ್ಲೇಸ್ಟೋರ್‌ನಲ್ಲಿ 100 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

2020ರ ಐಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು 222 ಕೋಟಿ ರು ಮೂಲಕ ಗೆದ್ದು ಅಧಿಕೃತ ಪಾಲುದಾರಿಕೆಯನ್ನು ಡ್ರೀಮ್ 11 ಘೋಷಿಸಿತು. ಐಸಿಸಿ, ಇಂಡಿಯನ್ ಸೂಪರ್ ಲೀಗ್, ಬಿಗ್ ಬ್ಯಾಷ್ ಲೀಗ್, ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್ ಹಾಗೂ ಪ್ರೋ ಕಬಡ್ಡಿ ಲೀಗ್ ಜೊತೆಗೂ ಡ್ರೀಮ್ 11 ಪಾಲುದಾರಿಕೆ ಹೊಂದಿದೆ.

English summary
Dream Sports, eye on US listing, proposed initial public offering (IPO), value raise to $6 billion The Economic Times reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X