• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ನನ್ನ 2ನೇ ತವರು, ಬಿಟ್ ಕಾಯಿನ್ ದಾನ ಮಾಡಿದ ಬ್ರೆಟ್ ಲೀ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಆಸ್ಟ್ರೇಲಿಯಾದ ಹಲವಾರು ಕ್ರಿಕೆಟರ್ಸ್ ಭಾರತದೊಡನೆ ಗಾಢ ಸಂಬಂಧ, ಅನುಬಂಧ ಹೊಂದಿದ್ದಾರೆ. ಸ್ಟೀವ್ ವಾ, ಹೇಡನ್, ಮ್ಯಾಕ್ಸ್ ವೆಲ್ ಸಾಲಿನಲ್ಲಿ ಬ್ರೆಟ್ ಲೀ ವಿಶಿಷ್ಟವಾದ ಬೆಸುಗೆ ಹೊಂದಿದ್ದಾರೆ. ಸಂಗೀತ ಹಾಗೂ ಕ್ರಿಕೆಟ್ ಎರಡು ಕ್ಷೇತ್ರಗಳ ಮೂಲಕ ಭಾರತದೊಟ್ಟಿಗೆ ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ತಮ್ಮ ಬೌನ್ಸರ್ ಮೂಲಕ ಬ್ಯಾಟ್ಸ್ ಮನ್ ಗಳನ್ನು ಕಾಡುತ್ತಿದ್ದ ಬ್ರೆಟ್ ಲೀ ಈಗ ಕೋವಿಡ್ 2ನೇ ಅಲೆಗೆ ತತ್ತರಿಸಿರುವ ಭಾರತದ ನೆರವಿಗೆ ನಿಂತಿದ್ದಾರೆ. ಭಾರತ ನನ್ನ 2ನೇ ತವರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಭಾರತದ ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಉಂಟಾಗಿರುವ ಬಗ್ಗೆ ತಿಳಿದುಕೊಂಡ ಬ್ರೆಟ್ ಲೀ ತಮ್ಮ ಕ್ರಿಪ್ಟೋ ಕರೆನ್ಸಿ ದೇಣಿಗೆ ಮೂಲಕ 1 ಬಿಟ್ ಕಾಯಿನ್ ತಕ್ಷಣವೆ ನೀಡಿದ್ದಾರೆ. ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಈಗಾಗಲೇ 50,000 ಯುಎಸ್ ಡಾಲರ್ ರು ಪಿಎಂ ಪರಿಹಾರ ನಿಧಿಗೆ ದಾನ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಕೋವಿಡ್ 19 ನಡುವೆ ಐಪಿಎಲ್ 14ನೇ ಆವೃತ್ತಿ ಸಾಗುತ್ತಿದೆ. ಆಟಗಾರರು, ಕೋಚ್ ಎಲ್ಲರೂ ಬಯೋ ಬಬ್ಬಲ್ ನಲ್ಲಿರುವುದರಿಂದ ಸೋಂಕಿನ ಭೀತಿಯಿಂದ ಬಚಾವಾಗಿದ್ದಾರೆ. ಪ್ರೇಕ್ಷಕರಿಲ್ಲದೆ ಚೆನ್ನೈ, ಮುಂಬೈ ನಂತರ ಈಗ ಅಹಮದಾಬಾದಿನ ಅತಿದೊಡ್ಡ ಮೈದಾನದಲ್ಲಿ ಆಟ ಸಾಗಿದೆ. ಐಪಿಎಲ್ ಕಾಮೆಂಟೆಟರ್ ಆಗಿ ಬ್ರೆಟ್ ಲೀ ಕೂಡಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ನಡುವೆ ಬ್ರೆಟ್ ಲೀ ಟ್ವೀಟ್ ಮಾಡಿ

ಈಗ ಎಲ್ಲರೂ ಒಗ್ಗೂಡಿ ಒಬ್ಬರಿಗೊಬ್ಬರು ನೆರವಾಗುವ ಸಮಯ ಬಂದಿದೆ. ಕೋವಿಡ್ ನಡುವೆ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ನನ್ನ ಧನ್ಯವಾದಗಳು, ದಿನವಿಡಿ ಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರ ಕಾಳಜಿ ವಹಿಸುತ್ತಿದ್ದೀರಿ. ನಾನು ಜನರಲ್ಲಿ ಮನವಿ ಮಾಡುವುದು ಇಷ್ಟೇ, ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಳ್ಳಿ, ಅತಿ ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಗೆ ಬನ್ನಿ, ಪ್ಯಾಟ್ ಕಮಿನ್ಸ್ ನೆರವಿಗೆ ಅಭಿನಂದನೆಗಳು ಎಂದಿದ್ದಾರೆ.

ಏಪ್ರಿಲ್ 27ರಂದು 1 ಬಿಟ್ ಕಾಯಿನ್ 54,795.74 ಯುಎಸ್ ಡಾಲರ್ ನಷ್ಟಿದೆ. 1.10% ದಿನದ ಏರಿಕೆ ಕಂಡಿದೆ. 1,022,241,742,575 ಯುಎಸ್ ಡಾಲರ್ ಒಟ್ಟಾರೆ ಮೌಲ್ಯ ಹೊಂದಿದೆ. (1 ಬಿಟ್ ಕಾಯಿನ್= 40,89,229.61 ರು)

English summary
Former Australia pacer Brett Lee, who is part of the broadcast crew at IPL 2021, followed his compatriot Pat Cummins and donated 1 Bitcoin to Crypto Relief to help purchase oxygen in hospitals across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X