ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಅಭಿಮಾನಿಗಳಿಗೆ ನೆಮ್ಮದಿಯ ಸುದ್ದಿ ಕೊಟ್ಟ ಗಂಗೂಲಿ

|
Google Oneindia Kannada News

ಮುಂಬೈ, ಏಪ್ರಿಲ್ 14: ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬೈನಲ್ಲಿ ಇಂದಿನಿಂದ ಕೊರೊನಾ ನಿಯಂತ್ರಿಸಲು ಕಠಿಣ ನಿಯಮಾವಳಿಗಳು ಜಾರಿಗೆ ಬಂದಿವೆ. ಆದರೆ, ಕೊವಿಡ್ 19 ಮಾರ್ಗಸೂಚಿ ನಡುವೆ ಮುಂಬೈನಲ್ಲಿ ಎಂದಿನಂತೆ ಪಂದ್ಯಗಳು ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಮೂಲಕ ವೇಳಾಪಟ್ಟಿ ಹಾಗೂ ಕ್ರೀಡಾಂಗಣದಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಭೀತಿಯ ನಡುವೆ ಎರಡನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಯೋಜನೆ ಮಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಫ್ಯಾನ್ಸ್ ಬಹುಪರಾಕ್ ಎಂದಿದ್ದಾರೆ. ಯುಎಇಯಲ್ಲಿ ಯಶಸ್ವಿ ಐಪಿಎಲ್ ಆಯೋಜನೆ ನಂತರ ಭಾರತದಲ್ಲಿ ಆಯೋಜನೆಗೆ ಮುಂದಾಗುತ್ತಿದ್ದಂತೆ ಮೈದಾನಗಳ ಕೊರತೆ ಎದುರಾಯಿತು. ಬಿಸಿಸಿಐ ಆಯ್ಕೆ ಮಾಡಿದ್ದ ಅನೇಕ ಕ್ರೀಡಾಂಗಣಗಳಿದ್ದ ನಗರಗಳಲ್ಲಿ ಕೊವಿಡ್ 19 ಸೋಂಕು ಹೆಚ್ಚಾಗಿತ್ತು.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಆದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವೇಳಾಪಟ್ಟಿಯಲ್ಲಿ ಹೆಚ್ಚಿನ ಬದಲಾವಣೆಗೆ ಮುಂದಾಗಲಿಲ್ಲ. ಹೈದರಾಬಾದ್, ಈಶಾನ್ಯ ರಾಜ್ಯಗಳಿಂದ ಐಪಿಎಲ್ ಆಯೋಜನೆಗೆ ಬೇಡಿಕೆ ಬಂದರೂ, ಚೆನ್ನೈ, ಬೆಂಗಳೂರು, ಮುಂಬೈ, ಅಹಮದಾಬಾದ್ ಮೈದಾನವನ್ನು ಉಳಿಸಿಕೊಳ್ಳಲಾಯಿತು. ಆದರೆ, ಮುಂಬೈನಲ್ಲಿ ಈ ತಿಂಗಳ ಅಂತ್ಯದ ತನಕ ಕೊವಿಡ್ 19 ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಇದರಿಂದ ಪಂದ್ಯಗಳು ನಿಗದಿಯಂತೆ ನಡೆಯುವುದೇ ಇಲ್ಲವೇ? ಎಂಬ ಪ್ರಶ್ನೆ ಎದ್ದಿತ್ತು, ಇದಕ್ಕೆ ಉತ್ತರ ಸಿಕ್ಕಿದೆ...

ಮುಂಬೈನಲ್ಲಿ ಕೊರೊನಾ ಭೀತಿ

ಮುಂಬೈನಲ್ಲಿ ಕೊರೊನಾ ಭೀತಿ

ಲಾಕ್ ಡೌನ್ ಮಾದರಿಯಲ್ಲಿ ಅನೇಕ ನಿಯಮಗಳನ್ನು ಜಾರಿಗೆ ತಂದು ಕೊರೊನಾ ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ ಯತ್ನಿಸುತ್ತಿದೆ. ಸಭೆ, ಸಮಾರಂಭಕ್ಕೆ ನಿಯಂತ್ರಣ ಹಾಕಲಾಗಿದೆ, ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಕೊವಿಡ್ ಕಠಿಣ ನಿಯಮಗಳನ್ನು ಪಾಲಿಸಿಕೊಂಡು, ಬಯೋ ಬಬಲ್ ಮುಂತಾದ ವ್ಯವಸ್ಥೆಯಡಿಯಲ್ಲೇ ಐಪಿಎಲ್ ನಡೆಸಲಾಗುತ್ತಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಮುಂಬೈನಲ್ಲಿ 87,443 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.ಕಳೆದ 24 ಗಂಟೆಗಳಲ್ಲಿ 9,925 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದೆ, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 5,44,942ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 54 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ.

ಮುಂಬೈನಲ್ಲಿ 10 ಪಂದ್ಯಗಳು

ಮುಂಬೈನಲ್ಲಿ 10 ಪಂದ್ಯಗಳು

ಮುಂಬೈನಲ್ಲಿ 10 ಪಂದ್ಯಗಳು ನಿಗದಿಯಾಗಿವೆ. ಗುರುವಾರದಂದು ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಲಿವೆ. ಕೊವಿಡ್ 19 ಕಠಿಣ ನಿಯಮಗಳು ಜಾರಿಗೆ ಬಂದಿರುವುದು ಒಂದು ರೀತಿ ಐಪಿಎಲ್‌ಗೆ ವರವಾಗಿ ಪರಿಣಮಿಸಲಿದೆ.

ಇದರಿಂದ ಪಂದ್ಯದ ವೇಳೆ ವಾಂಖೆಡೆ ಸ್ಟೇಡಿಯಂ ಸುತ್ತಾ ಮುತ್ತಾ ಅನಗತ್ಯ ಓಡಾಟ ತಪ್ಪಲಿದೆ. ಕೊವಿಡ್ 19 ಮಾರ್ಗಸೂಚಿಯಂತೆ ಮೈದಾನದ ಒಳಗೆ ಸುರಕ್ಷಿತವಾಗಿ ಪಂದ್ಯ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇನ್ ಸೈಡ್ ಸ್ಫೋರ್ಟ್‌ಗೆ ಹೇಳಿದ್ದಾರೆ.

ಸೋಂಕಿತರನ್ನು ಪ್ರತ್ಯೇಕಿಸಲಾಗಿದೆ

ಸೋಂಕಿತರನ್ನು ಪ್ರತ್ಯೇಕಿಸಲಾಗಿದೆ

ದುರದೃಷ್ಟವಶಾತ್ ಕೆಲವು ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಸೋಂಕು ತಗುಲಿದೆ. ಮಾರ್ಗಸೂಚಿಯಂತೆ ಐಸೋಲೇಷನ್‌ನಲ್ಲಿರಿಸಲಾಗಿದೆ ಹಾಗೂ ಸೂಕ್ತ ನಿಗಾ ವಹಿಸಲಾಗಿದೆ. ಮೈದಾನದ ಸಿಬ್ಬಂದಿಗಳಿಗೂ ನಿಯಮ ಅನ್ವಯವಾಗಿದ್ದು, ಸೂಕ್ತ ಕ್ರಮ ಜರುಗಿಸಲಾಗಿದೆ. ಕ್ರಿಕೆಟರ್ಸ್, ಕೋಚ್, ಸಹಾಯಕ ಸಿಬ್ಬಂದಿ, ಅಂಪೈರ್, ಕಾಮೆಂಟೆಟರ್ಸ್ ಸೇರಿದಂತೆ ಎಲ್ಲರೂ ನಿಯಮಕ್ಕನುಸಾರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಚಿತ್ರದಲ್ಲಿ: ಚೆನ್ನೈನ ಚೆಪಾಕ್ ಮೈದಾನದಲ್ಲಿ ಆಟಗಾರರು.

Recommended Video

Corona ನಿಯಂತ್ರಣ ಕುರಿತು, ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಪಾಲರುಗಳ ಜೊತೆ ಮೋದಿ ಸಭೆ.. | Oneindia Kannada
ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್

ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್

ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಈ ಬಗ್ಗೆ ಸ್ಪಷ್ಟನೆ ನೀಡಿ, ಮುಂಬೈನಲ್ಲೇ ಉಳಿದ ಪಂದ್ಯಗಳು ನಡೆಯಲಿವೆ. ಬಯೋ ಬಬಲ್ ಸೌಲಭ್ಯದ ಮಿತಿಯನ್ನು ಯಾರೂ ಮೀರಿಲ್ಲ, ಹಾಗೂ ಹೊರಗಿನವರಿಗೆ ಪ್ರವೇಶ ನೀಡಿಲ್ಲ, ಯುಎಇಯಲ್ಲಿ ಆಯೋಜನೆ ಮಾಡಿದ್ದು, ನಮಗೆ ಇಲ್ಲಿ ಎಲ್ಲ ವ್ಯವಸ್ಥಿತವಾಗಿ ರೂಪಿಸಲು ಸುಲಭವಾಯಿತು. ಸರ್ಕಾರದ ಯಾವುದೇ ನಿರ್ಧಾರಕ್ಕೆ ಬದ್ಧವಾಗಿದ್ದು, ಸದ್ಯ ನಮಗೆ ನೀಡಿರುವ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತಿದ್ದೇವೆ. ಏಪ್ರಿಲ್ 10 ರಿಂದ ಏಪ್ರಿಲ್ 25ರ ತನಕ ಮುಂಬೈನಲ್ಲಿ ಪಂದ್ಯಗಳು ನಿಗದಿಯಾಗಿವೆ. ಈ ಬಗ್ಗೆ ಎಲ್ಲಾ ಫ್ರಾಂಚೈಸಿಗಳಿಗೆ ಮೌಖಿಕವಾಗಿ ತಿಳಿಸಲಾಗಿದೆ ಎಂದರು.

English summary
BCCI President has declared that the restrictions will not impact IPL Matches in Mumbai and matches will go ahead as per schedule in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X